ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಣ್ಣು ,ಅನ್ನ ಮತ್ತು ಪ್ರಭು

ಕವಿತೆ ಮಣ್ಣು ,ಅನ್ನ ಮತ್ತು ಪ್ರಭು ಬಿ.ಶ್ರೀನಿವಾಸ ನೆಲಕೆ ಬಿದ್ದರೆ ಅನ್ನದಾತದಂಗೆಯೇಳುತ್ತದೆ ಅನ್ನ * ಮಕ್ಕಳ ಮುಂದೆ ಅಪ್ಪ ಅಳಬಾರದು ಅಪ್ಪನ ಮುಂದೆ ಮಕ್ಕಳು ಸಾಯಬಾರದು ಪ್ರಭುಗಳ ಮುಂದೆ ಪ್ರಜೆಗಳು ನರಳಬಾರದು ಸುಳ್ಳಾಯಿತುಲೋಕರೂಢಿಯ ಮಾತು. * ಮಣ್ಣಿನೆದೆಯ ಮೇಲೆಯೆ ಇದ್ದವು ಪಾದಗಳುನೆಲದ ಮೇಲಿರುವ ತನಕ ಅದೇ ಮಣ್ಣಿನ ಮೃದು ಪಾದಗಳುನೆಲದಡಿಗೆ ಸೇರಿದವನ ಎದೆಯ ಮೇಲೆ * ಮಣ್ಣಿಗೂಅಪ್ಪನಿಗೂ ಸಂಬಂಧ ಕೇಳುವಿರಿ ನೀವು ಇದೆಅಜ್ಜ-ಮೊಮ್ಮಗನ ಸಂಬಂಧ! * ಉಣ್ಣುವ ಅನ್ನದ ಕಣ್ಣುಎದುರಿಸಲಾಗದ ಕೊಲೆಗಾರ ಹೇಡಿಹೇಡಿಯೆಂದು ಕಿರುಚಾಡುತ್ತಾನೆ * ಕಳಚಿ ಬಿದ್ದಿವೆಪದವಿಗಳು,ಪುರಸ್ಕಾರಗಳುಅಕ್ಷರಗಳು….ಬೀದಿಯ ತುಂಬಾ ನಾನೀಗಲೋಕದ ಸಾಲಿಯ ಪಾಲಿನ ಬೆತ್ತಲೆ ಅಪರಾಧಿ * ಮಾತುಮಾತು…ಬರೀ ಮಾತೂಮಾತಾಡುತ್ತಲೇ ಇದ್ದಾನೆ ಪ್ರಭು ದಯವಿಟ್ಟು ಯಾರಾದರೂ ಸುಮ್ಮನಿರಿಸಿನಾವು ಉಸಿರಾಡಬೇಕಿದೆ. *********************

ಮಣ್ಣು ,ಅನ್ನ ಮತ್ತು ಪ್ರಭು Read Post »

ಕಾವ್ಯಯಾನ

ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ

ಕವಿತೆ ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ ನಾಗರಾಜ್ ಹರಪನಹಳ್ಳಿ. ಆಗೋ ನೋಡುಈ ಉರಿಬಿಸಿಲಲ್ಲಿ ಸಮುದ್ರ ನಿದ್ದೆ ಹೋಗಿದೆ ||ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ|| ತಂಗಾಳಿ ನಿನ್ನ ಪ್ರೀತಿಯ ಮಿಂದು ಬಂದಿದೆ ||ಈ ಕಾರಣಮರಗಿಡಗಳು ಹೂ ಬಟ್ಟೆ ತೊಟ್ಟಿದೆ ||ಮೈತುಂಬಿದ ಮಾವುಬಯಲಲಿ ನಿಂತು ನಕ್ಕಿದೆ || ನೀನಲ್ಲಿ ಕೈ ತುಂಬಾ ಬಳೆ ತೊಟ್ಟು ||ತೆಳು ನೀಲಿ ಮಿಶ್ರಿತ ಹಳದಿ ಬಣ್ಣದ ರೇಶಿಮೆ‌ ಸೀರೆಯುಟ್ಟು ||ಹೊಸದಾಗಿ ತಂದ ಬಂಗಾರದ ಓಲೆ ತೊಟ್ಟು ||ನಿನ್ನ ನೀನೇ ಕನ್ನಡಿಯಲ್ಲಿ ದೃಷ್ಟಿ ನೆಟ್ಟು ||ಹಣೆಗಿದೆ ‌ನೋಡು ನನ್ನದೇ ಕುಂಕುಮ ಬೊಟ್ಟು || ಮಗಳ ಮದುವೆಯ ಸಂತಸವ ತೊಟ್ಟು ||ದೂರದೂರಲಿ ನಾ ನಿನ್ನ ಸಂಭ್ರಮವ ಎದೆಯಲಿಟ್ಟು || ಶಬ್ದಮಿಂದ ಹಕ್ಕಿ ಹಾಡು ಪ್ರೇಮವ ಹೊತ್ತು ಭೂಮಿ‌ ಸುತ್ತ ತಿರುಗಿದೆ ||ನದಿಯೊಳಗಿನ ಮೀನು ಗಗನದಿ ಹಕ್ಕಿಯ ಕಂಡು ನಲಿದಿದೆ || ಹಾಡು ಹಬ್ಬ ಪ್ರೇಮ ಪ್ರೀತಿಇಡಿ ಜಗವ ತುಂಬಲಿ ||ನನ್ನ ನಿನ್ನ ಭೇಟಿಗಾಗಿ ಇಡೀ ಪ್ರಕೃತಿ ಎದೆತುಂಬಿ ಹರಸಲಿ || **********************************************

ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ Read Post »

ಕಾವ್ಯಯಾನ

ಆತ್ಮ ಚೈತನ್ಯ

ಕವಿತೆ ಆತ್ಮ ಚೈತನ್ಯ ವಸುಂಧರಾ ಕದಲೂರು ಹೌದು,ಸದಾ ಚೈತನ್ಯಶೀಲರಾಗಿರುವನಾವು ಆಗಾಗ್ಗೆ ಮಂಕಾಗುತ್ತೇವೆ. ಚೈತನ್ಯವು ಬೇರುಬಿಟ್ಟ ಆಲದಮರದ ಬಿಳಲುಗಳೇನಲ್ಲ! ಆಗಸದ ವಿಸ್ತಾರದ ಕ್ಯಾನ್ವಸ್ಸಿನಹಿನ್ನೆಲೆಯಲಿ ರಂಗು ರಂಗಿನೋಕುಳಿಆಡುವ ಚಿತ್ತಾರದ ಮೇಘಮಾಲೆ;ಕ್ಷಣ ಕ್ಷಣವೂ ಬದಲಾಗುವಗಡಿಯಾರದ ಮುಳ್ಳಿನ ಚಲನೆ; ಹಕ್ಕಿ ಗೂಡೊಳಗಿನ ಜೀವಂತಿಕೆಯಕಾವಿಗೆ ಕಾದು ಕೂತ ಪುಟ್ಟ ಮೊಟ್ಟೆ.ರೆಕ್ಕೆ ಬಲಿತ ಮೇಲೆ ಗಗನ ಗಾಮಿ. ಚೈತನ್ಯವು ನಿತ್ಯ ನೂತನವೂ ನಿರಂತರತಾರುಣ್ಯಪೂರ್ಣವೂ ಆಗಿರಲುಸಾಧ್ಯವಿಲ್ಲ. ಸತ್ಯದ ಒಳ ಹೂರಣದಮೇಲೆ ಹುಸಿ ಸುಳ್ಳಿನ ಹೊರಕವಚ. ಚೈತನ್ಯದ ವಾಸ್ತವತೆ ಸಾವಿನಂತೆ.ಮರುಹುಟ್ಟಿನ ನಿರೀಕ್ಷಣೆಯಲ್ಲಿಅಲೆವ ಆತ್ಮಜ್ಯೋತಿ! ಜನ್ಮಾಂತರಗರ್ಭದೊಳಗಿನ ಭ್ರೂಣ ಪ್ರಣತಿ! ******************************************

ಆತ್ಮ ಚೈತನ್ಯ Read Post »

ಕಾವ್ಯಯಾನ

ಬೀಜವೊಂದನು ಊರಬೇಕು

ಕವಿತೆ ಬೀಜವೊಂದನು ಊರಬೇಕು ವಿಜಯಶ್ರೀ ಹಾಲಾಡಿ ಕಣ್ಣೀರಿಗೆ ದಂಡೆ ಕಟ್ಟಿಬೀಜವೊಂದನ್ನು ಊರಬೇಕುಬೇರೂರಿ ಮಳೆ ಗಾಳಿ ಬಿಸಿಲಿಗೆಮೈಯ್ಯೊಡ್ಡಿ ಚಿಗುರುವುದಕಾಣುತ್ತ ಮೆಲು ನಗಬೇಕು ಬಿಕ್ಕುಗಳ ಬದಿಗೊತ್ತಿಹಕ್ಕಿ ನಾಯಿ ಬೆಕ್ಕುಗಳಿಗೆತುತ್ತುಣಿಸಿ ಮುದ್ದಿಸಬೇಕುತಿಂದು ತೇಗಿ ಆಕಳಿಸಿನಿದ್ದೆ ತೆಗೆವಾಗ ನೇವರಿಸಿಎದೆಗವಚಿಕೊಳಬೇಕು ನೋವುಂಡ ಜೀವಗಳಕೈ ಹಿಡಿದು ನಡೆಯಬೇಕುಹೆಗಲಿಗೆ ಹೆಗಲಾಗಿ ಕರುಳಾಗಿಮಮತೆ ತೇಯುತ್ತಗಂಧ ಚಂದನವಾಗಬೇಕು ಕಡು ಇರುಳುಗಳ ತೆರೆದಿಡುವಹಿತ ಬೆಳಗುಗಳ ನೇಯುವಬುವಿಗೆ ಮಂಡಿಯೂರಿಹಸಿರಾಗಿ ತರಗೆಲೆಯಾಗಿಮಣ್ಣಾಗಿ ಕೆಸರಾಗಿ ಕರಗಬೇಕುಕೊನೆ ಉಸಿರೆಳೆದ ದೇಹಗೊಬ್ಬರವಾಗಿ ಹೂ ಅರಳಬೇಕು!*********************************************************

ಬೀಜವೊಂದನು ಊರಬೇಕು Read Post »

ಕಾವ್ಯಯಾನ

ಸಾವಿನ ಆರ್ಭಟ

ಕವಿತೆ ಸಾವಿನ ಆರ್ಭಟ ಡಾ.ಜಿ.ಪಿ.ಕುಸುಮ ನಮ್ಮಮುಂಬಯಿ ಆಸ್ಪತ್ರೆಗಳುಮತ್ತೆ ಮತ್ತೆಸಾವಿನ ಮಾರಕ ತುಳಿತಗಳನ್ನುಸದ್ದು ಗದ್ದಲವಿಲ್ಲದೆಸ್ವೀಕರಿಸುತ್ತಿವೆ.ಅಂಬುಲೆನ್ಸ್ ಗಳ ಚೀತ್ಕಾರಕ್ಕೆನಡುಗುತಿಹ ನಗರದೊಳಗೆನಿಗಿನಿಗಿ ಕೆಂಡದೊಳು ಬೇಯುವಸ್ಮಶಾನಗಳುಮೂಕವಾಗಿವೆ. ಬೆಡ್ಡುಗಳ ತೆರೆದೊಡಲಲಿಉಸಿರಿಲ್ಲದವರಲ್ಲಲ್ಲಿಹೂಡಿದ್ದಾರೆ ಡೇರೆ.ಗೋಡೆಗಳನ್ನು ಕಟ್ಟಿದವರೆಲ್ಲಕೆಡವುವ ಮುನ್ನವೇಮಣ್ಣಲ್ಲಿ ಮಣ್ಣಾಗಲೂಸಾಲಲಿ ಸರಿಯುತ ತೆರಳುತಿಹರುಸುಟ್ಟು ಸುಟ್ಟುಬೆಂಕಿಯೂ ಸೋತಿದೆ.ಸಾಲು ಕೊನೆಯಿಲ್ಲದೆ ಕೊರಗಿದೆ. ಜೀವಿತದ ಕೊನೆಯ ಕ್ರಿಯೆಕ್ರಿಯೆಯಾಗದೆಮನುಷ್ಯನು ಮನುಷ್ಯನ ಕೆಲಸಕ್ಕೆಬಾರದೆಸಂಸ್ಕೃತಿ, ಸಂಸ್ಕಾರಗಳ ಕೈ ಹಿಡಿಯಲೂಆಗದೆಹೊರಡುತ್ತವೆ ಹೃದಯಗಳುಮಾತೂ ಆಡದೆ.ಚಕಾರವೆತ್ತದೆ ಸಾಗಿದೆಆಸ್ಪತ್ರೆಯ ಹೊರಗೆ ಕಂಬನಿಯ ನದಿಒಳಗೆ ಹೆಣಗಣತಿಯ ತರಾತುರಿ. *******************************

ಸಾವಿನ ಆರ್ಭಟ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸುಜಾತ ಲಕ್ಷ್ಮೀಪುರ. ಕಳಚಿಕೊಂಡು ಸೋಗು ಅಹಂಕಾರ ಮಗುವಾಗಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರುಮನದಲಿ ಭಯ ಆತಂಕ ನೋವು ಪರಿತಾಪವಿದ್ದರೂನನ್ನ ಬಳಿ ಬರಲಿಲ್ಲ ನನ್ನ ದೇವರು ಮಂಜಾನೆ ನೇಸರ ಇರುಳು ಚುಕ್ಕಿ ಚಂದ್ರಮ ನಡುವೆ ಬೀಸುವಗಾಳಿಯೂ ಅವನ ನೆನಪಿಸಿದೆಹಸಿವು ನಿದಿರೆ ಸನಿಹ ಸುಳಿಯದೆ ಧ್ಯಾನದಲ್ಲಿದ್ದರೂ ನನ್ನ ಬಳಿ ಬರಲಿಲ್ಲ‌ ನನ್ನ ದೇವರು ಋತುಮಾನಗಳು ಉರುಳುತ್ತಿವೆ ಚಳಿಗೆ ಚಳಿ ಕಾಣದೆ ಬೇಸಿಗೆ ಸುಡುದೆ ಕೊರಡಾಗಿದೆ ಬದುಕುಕಾಯ ಕರಗಿ ಚಿತ್ತ ಮಾಗಿ ತಾನಳಿದು ಶೂನ್ಯವಾದರೂನನ್ನ ಬಳಿ ಬರಲಿಲ್ಲ ನನ್ನ ದೇವರು ಅವನ ಕಾಣುವುದು ಆಸೆಯೋ ಪಾಶವೋ ಬಾಳಿನ ಗುರಿಯೋ ಅರಿಯದಾಗಿದೆ ಮನಕೆಕಣ್ಣಿನಲಿ ದೀಪ ಉರಿಸಿ,ಮೌನದ ವ್ರತ ತೊಟ್ಟಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರು ಶಿವೆ,ಒಮ್ಮೆ ದರುಶನವಾದರೆ ಸಾಕುಕಣ್ತುಂಬಿಕೊಂಡುನಿನ್ನನ್ನುಸಂತಸದಿಎವೆಮುಚ್ಚಿಬಿಡುವೆಕ್ಷಣ ಕ್ಷಣವು ಕಣಕಣವು ಆರಾಧಿಸಿ ಪೂಜಿಸುತ್ತಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರು.……….

ಗಜಲ್ Read Post »

ಕಾವ್ಯಯಾನ

ಕನಸುಗಳ ಕಮರಿಸುವವರಿಗೆ

ಕವಿತೆ ಕನಸುಗಳ ಕಮರಿಸುವವರಿಗೆ ಡಾ.ಸುರೇಖಾ ರಾಠೋಡ ಕೊಡಬೇಡಿ ಮಗಳಹಣವ ಕೇಳುವಹಣವಂತರಿಗೆ… ಕೊಡಬೇಡಿಬಂಗಾರದಂತಹ ಮಗಳಬಂಗಾರವ ಕೇಳುವವರಿಗೆ… ಕೊಡಬೇಡಿಅಧಿಕಾರಿಯಾಗುವ ಮಗಳ ;ಅಧಿಕಾರಿಗಳಾದವರಿಗೆ ಕೊಟ್ಟು ,ಅವಳು ಅಧಿಕಾರಿಯಾಗುವಅವಕಾಶವನ್ನೆಕಿತ್ತುಕೊಳ್ಳುವವರಿಗೆ…. ಕೊಡಬೇಡಿಶಿಕ್ಷಣ ಪಡೆಯುವ ಮಗಳನ್ನು ;ಅವಳಿಗೆ ಶಿಕ್ಷಣವನ್ನು ನೀಡಲುನಿರಾಕರಿಸುವವರಿಗೆ…. ಕೊಡಬೇಡಿಕನಸು ಕಾಣುವ ನಿಮ್ಮ ಮಗಳನ್ನು ;ಅವಳ ಕನಸುಗಳನ್ನೆಕಮರಿಸುವವರಿಗೆ …. ಕೊಡಬೇಡಿಹಕ್ಕಿಯಂತೆ ಹಾರ ಬಯಸುವ ಮಗಳನ್ನು ;ಅವಳ ರಕ್ಕೆಯನ್ನೆಕತ್ತರಿಸುವವರಿಗೆ… ಕೊಡಬೇಡಿಜನ್ಮ ನೀಡುವ ಮಗಳನ್ನು ;ಅವಳ ಜೀವವನ್ನೇತಗೆಯುವವರಿಗೆ…. ಕೊಡಬೇಡಿಜಗವ ರಕ್ಷಿಸುವ ಮಗಳಿಗೆಅವಳ ಜಗತ್ತನ್ನೇಕಸಿದುಕೊಳ್ಳುವವರಿಗೆ… ಕೊಡಬೇಡಿನಿಮ್ಮ ಗೌರವ,ಅಂತಸ್ತಿಗೆದಕ್ಕೆ ತರುವವರಿಗೆಹಾಗೂಅವಳ ಗೌರವವನ್ನೇನಾಶಪಡಿಸುವವರಿಗೆ… ಕೊಡಬೇಡಿ ಮಗಳಿಗೆವಿವಾಹದ ಹೆಸರಿನಲ್ಲಿಬೇರೆಯವರಿಗೆಮಾರುವವರಿಗೆ….*************************************

ಕನಸುಗಳ ಕಮರಿಸುವವರಿಗೆ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಆಸೀಫಾ ಬೇವು ಬೆಲ್ಲದೊಳಿಟ್ಟು ಕಷ್ಟ ಸುಖದ ಸಾಂಗತ್ಯ ಸಾರುತಿದೆ ಯುಗಾದಿಅಭ್ಯಂಜನವ ಮಾಡಿಸಿ ನವಚೈತನ್ಯ ಚೆಲ್ಲುತಿದೆ ಯುಗಾದಿ. ಹೊಸ ಚಿಗುರಿನ ಹೊದಿಕೆಯಲಿ ಕಂಗೊಳಿಸುತಿವೆ ಗಿಡಮರಗಳುಯುಗದ ಆದಿಯ ನೆನಪಿಸಿ ಹರ್ಷ ಹಂಚುತಿದೆ ಯುಗಾದಿ ಮೈಮರೆತ ದುಂಬಿಗಳ ಝೇಂಕಾರ ಹೊಂಗೆ ಬೇವು ಮಾಮರದ ತುಂಬಾಸವಿಜೇನಿನೊಲವು ಮನದ ಗೂಡುಗಳಲಿ ತುಂಬುತಿದೆ ಯುಗಾದಿ ತಳಿರು ತೋರಣ ಚೈತ್ರದಾಗಮನಕೆ ಸೂಚನೆಯನಿತ್ತು ನಗುತಿದೆಬ್ರಹ್ಮ ಸೃಷ್ಟಿಗೆ ಶಿರಬಾಗಿ ಶತಕೋಟಿ ನಮನ ಹೇಳುತಿದೆ ಯುಗಾದಿ ಹಳೆಯ ಹಗೆಯ ಕಳಚಿ ನಿಲ್ಲೋಣ ವಸಂತನಾಗಮನಕೆ ಎಲ್ಲಾಹೊಸ ವರುಷಕೆ ಕೈಬೀಸಿ ಆಸೀಯ ಕರೆಯುತಿದೆ ಯುಗಾದಿ ********************************

ಗಝಲ್ Read Post »

ಕಾವ್ಯಯಾನ

ಹಬ್ಬದ ಸಂತೆ

ಕವಿತೆ ಹಬ್ಬದ ಸಂತೆ ಡಾ. ಅರಕಲಗೂಡು ನೀಲಕಂಠ ಮೂರ್ತಿ ಇನ್ನೇನುಹತ್ತಿರ ಹಬ್ಬದ ಕಾಲಸಂತೆಗಳಲಿ ಮಾರಾಟಕೆಪಂಚೆ ಸೀರೆ ಒಂದೆರಡು ಪಿಂಡಿಮುತುವರ್ಜಿ ವಹಿಸಿನೇಯತೊಡಗಿರುವನುನೇಕಾರ ಹಗಲು ರಾತ್ರಿ ಎನ್ನದೆಮುಂದಿನ ನಾಲ್ಕಾರು ತಿಂಗಳಹೊಟ್ಟೆಪಾಡಿಗೆ! ಇನ್ನು ವಾರದಲ್ಲೆಸಂತೆಗಳ ಸುರಿಮಳೆ…ಅಷ್ಟರಲ್ಲಿ ಅದೆಂಥದೋ ಕಾಯೆಲೆಜಗಕೆಲ್ಲ ಸುಂಟರಗಾಳಿಯ ಹಾಗೆಹಬ್ಬಿಅದೇನೋ ಸಂಜೆ ಕರ್ಫ್ಯೂಅಂತ ಹೇರಿದರುಜೊತೆಜೊತೆಗೆ ಘಂಟೆ ಜಾಗಟೆಬಾರಿಸಿರೆಂದರುದೀಪ ಬೆಳಗಿಸಿ ಕುಣಿಸಿದರುಎಲ್ಲರೊಡನೆ ತಾವೂ ಕೂಡಿಕೊಂಡರುಈ ನೇಕಾರರುಅಮಾಯಕರು… ಹಾಗೆ ಕುಣಿಕುಣಿದುದೀಪ ಜಾಗಟೆಗಳಶಬ್ದ ಬೆಳಕಿನಾಟದ ನಡುವೆಯಲಿದಿಢೀರನೆ ಸಿಡಿಲು ಬಡಿದುಮರಗಳು ಬೆಂದು ಉರಿದ ಹಾಗೆಲಾಕ್ ಡೌನ್! ಲಾಕ್ ಡೌನ್!ಎಂದು ಗುಡುಗಿದರುನಾಡೆಲ್ಲ ಒಟ್ಟೊಟ್ಟಿಗೆ ಬಂದ್ ಬಂದ್!ಮತ್ತೆ ಗುಡುಗುಟ್ಟಿದರು… ಮೂಲೆಯಲಿ ಸದ್ದಿಲ್ಲದೆ ಕೂತಿದ್ದಪಿಂಡಿಗಳುಇದ್ದಕ್ಕಿದ್ದಂತೆ ನೆಲಕ್ಕುರುಳಿಅಂಗಾತ ಮಲಗಿಬಿಟ್ಟವುನೇಕಾರನ ಕಣ್ಣುಗಳುಅಸಹಾಯಕವಾಗಿಆ ಪಿಂಡಿಗಳನೇ ನೆಟ್ಟಗೆ ದಿಟ್ಟಿಸಿತಮಗೆ ತಾವೇ ಬಲವಾಗಿ ಒತ್ತಿಮುಚ್ಚಿಮೆಲ್ಲ ಮೆಲ್ಲ ಸುರಿದ ಕಣ್ಣೀರೊಡನೆಉರುಳಿದವು ಒಂದೆರಡುಕೆಂಪು ಹನಿ…! *********

ಹಬ್ಬದ ಸಂತೆ Read Post »

ಕಾವ್ಯಯಾನ

ಹೊಸ ಹಿಗ್ಗು…..!!

ಕವಿತೆ ಹೊಸ ಹಿಗ್ಗು…..!! ಯಮುನಾ.ಕಂಬಾರ ಎಲ್ಲಿಹುದು ಹೊಸಹಿಗ್ಗು – ಕ್ಷಣ ನಾನುಕಣ್ತೆರೆವೆ – ಮೈ ಮನ ಒಂದಾಗಿ ಕಾಯುತಿರುವೆಬೆಳ್ಳಿ ಮೋಡದಕಪ್ಪಿನಲ್ಲೋ …ಇಲ್ಲಾಕರಿಯ ನೆಲದ ಕಣ್ಣಿನಲ್ಲೋ …ಅಂತೂ ರಚ್ಚೆಹಿಡಿದು ಕುಳಿತಿರುವೆ. //ಪ// ನೀಲಿ ಆಗಸದಎದೆ ತುಂಬಿತುಳುಕಿದೆ – ಮೊಗ್ಗಿನೊಲು ಹೊಸ ಕಬ್ಬ ಹೀರಲು ಮುಂದಾಗಿಅದೇ ಆ ಎಂದಿನಕಲುಷಿತ ಹವೆಏರಿ ಬರುತಿದೆ ಮುಗಿಲ ಮಾರಿಗೆ ನಾಚಿಕೆಯ ಸರಿಸಿ //ಪ// ಋಷಿ ಮುನಿಯತಪದಂತೆ ಏಕವೃತಸ್ಥೆಯಾಗಿ ಹಸಿರು ಚಿಮ್ಮಿದ ಚಲುವೆ ದೀನಳಾಗಿಹಳುಹೊಸ ಚಿಗುರುಹಸಿರೆಲೆಯು ಕಳೆಗುಂದಿ ನಲುಗುತಿವೆ ನುಂಗದ ವಿಷ ಜಲವ ಒಕ್ಕಿ //ಪ// ಹೊರಳುತಿವೆ ಹಗಲುಗಳುಸರಿಯುತಿವೆ ರಾತ್ರಿಗಳುಅಂಕೆ ಸಂಕಲೆಗಳಿಲ್ಲದೇ ನವಿರು ನವಿರಾಗಿಗಡಿಯ ದಾಟಿದಲೆಕ್ಕ ವಿಧಿ ಮಿಕ್ಕಿ ಹರಿಯುತಿದೆಮೂಗಿನ ನೇರಕ್ಕೆ ಗುಣಕ ಚಿನ್ಹವ ಹಾಕಿ //ಪ// ಅಧಿಕಾರ ಅಂತಸ್ತುಕೇಕೆ ಹಾಕಿವೆ ಇಲ್ಲಿಭಾತೃತ್ವ ಸಹಕಾರ ಕೊಲೆಯ ಮಾಡಿಸತ್ತ ಶವಗಳಕಬ್ಬವಾಸನೆಯು ಎಲ್ಲೆಲ್ಲೂಹೊಸ ಹಿಗ್ಗು ಎಲ್ಲಿಹುದು ಹುಡುಕುತಿರುವೆ. //ಪ್// ಇದ್ದ ಮೂವರಲ್ಲಿಕದ್ದವರು ಯಾರೆಂದುಹುಡುಕುವುದು ಕಷ್ಟವೇ….!!?? ಅಂತೂ ಒಗಟುಜಾಳಿಗೆ ಬಗರಿಕೈಯಲ್ಲಿ ಇರಲುತಿರಗದೇನು…..??!! ಬುಗುರಿ ತಡವೇತಕೇ……!!!?? //ಪ// ನಾನು ನಾನೇ ಎಂಬನನ್ನ ಸುಖವೇ ಮೊದಲೆಂಬವರ್ತುಳಗಳು ಸುತ್ತಿತ್ತಿರುವ ನಿತ್ಯ ಸಮಯನನ್ನ ವರ್ತುಳ ಫರಿಧಿಮತ್ತೊಂದ ವರ್ತುಳಗಡಿಗೆ ಬದುಕ ಹಂಚಿಕೊಂಡ ಸತ್ಯ ಮರೆತಿಹೆವು ಇಂದು //ಪ// ಅಂಗೈ ಹುಣ್ಣಿಗೆಕನ್ನಡಿ ಏಕೆ..?ಬಲ್ಲೆವಾದರೂ ನಾವು ಕೈ ನೋಡಲಾರೆವುಹೊಸ ಹೊಸ ಶಬ್ದಹೊಸ ಹೊಸ ಕವಿತೆಬರೆದೆವಾದರೂ ನಾವು ಓದಲಾರೆವು. //ಪ// ****************************************

ಹೊಸ ಹಿಗ್ಗು…..!! Read Post »

You cannot copy content of this page

Scroll to Top