ತಿಮಿರ
ಕವಿತೆ ತಿಮಿರ ಡಾ. ಅಜಿತ್ ಹರೀಶಿ ಸೂಡಿ ಹಿಡಿದು ಓಡಾಡುವ ಕಾಲದಲ್ಲಿಕೊಳ್ಳಿ ದೆವ್ವಗಳು ಕಾಲಿಗೊಂದು ತಲೆಗೊಂದುಹರದಾರಿ ನಡೆದು ಸಾಗುವ ದಿನಗಳಲ್ಲಿಅವುಗಳ ಜಾತ್ರೆ ರಸ್ತೆ ಪಕ್ಕದಲ್ಲಿ ಕಳೆದ ಬಾಯಿ ಮುಚ್ಚದಂತೆ ಲಾಟೀನು-ಬೆಳಕಿನಲ್ಲಿ ಕೇಳಿ ಸುದ್ದಿ ಹೆದರಿಕೆ ಬೇಜಾನುತಿರುಚಿದ ಪಾದ ಗುರುತರವಾದ ಗುರುತುದೆವ್ವ ಕಂಡವನಿಂದ ಇತರರಿಗೆ ತರಬೇತು! ಕತ್ತಲಿನಲ್ಲಿ ಇಣುಕುವ ಬೆಳಕು, ಬರುವ ಶಬ್ದಎಂತಹವರನ್ನೂ ಮಾಡುವುದು ಸ್ತಬ್ಧಎಲ್ಲರೊಳಗೊಬ್ಬ ಕವಿ, ಆಗ ರವಿಯಿಲ್ಲಕಲ್ಪನೆಗೆ ಕಾಲು ಬಾಲ ಗಲ್ ಗಲ್, ಸರ ಪರಚಿತ್ತದಲ್ಲಿ ಮೂಡುವ ಚಿತ್ರಗುಂಡಿಗೆಯಲ್ಲಿ ನಡುಕಆಕ್ರಮಿಸುವ ಆತಂಕ ಅಕ್ರಮಕ್ಕೆ ಸೂಕ್ತ ಅಮಾವಾಸ್ಯೆವಿದ್ಯುತ್ ಕಡಿತಗೊಳಿಸಿಯೂಹುಟ್ಟಿಸುವರು ಅಮಾಸೆಯ ಸಮಸ್ಯೆಚುನಾವಣೆಯ ಹಿಂದಿನ ದಿನಗಂಧದ ಮರ ನಾಪತ್ತೆಯಾದ ಕ್ಷಣ ಕತ್ತಲು ಬಗ್ಗೆ ಅಜ್ಜಿ ಹೆದರಿಸಿದ್ದುಹುಳ ಹುಪ್ಪಟೆ ತುಳಿಯದಿರಲೆಂದುಕೂರುತ್ತದೆ ಮಗುವಿನ ಮಿದುಳೆಂಬಹಸಿ ಗೋಡೆಯಲ್ಲಿ ಮಣ್ಣಾಗಿಕತ್ತಲು ಭಯಾನಕ ಕಪ್ಪಾದಾಗ ನೆರಳು ಮಂದಬೆಳಕಿನಾಟಆಕೃತಿಗಳಿಗೆ ಜೀವ, ಪಿಶಾಚಿ ಕಾಟಆತ್ಮಸ್ಥೈರ್ಯದ ಅಗ್ನಿಪರೀಕ್ಷೆಪಾಪ ಪ್ರಜ್ಞೆ ಭೂತವಾಗಿ ಶಿಕ್ಷೆ ರಕ್ತ ಕಾರಿ, ಬೆನ್ನಮೇಲೆ ಮೂಡಿ ಬೆರಳುಮುರಿದು ಗೋಣು, ಧ್ವನಿಯಡಗಿಸತ್ತವರ ಕತೆಯೆಲ್ಲ ಎದ್ದು ಬಂದುಅಂತರ್ಪಿಶಾಚಿಯಾಗಿ ಅಲೆದಾಡಿ ಮುಗಿಯದ ಕತೆ; ಹೆದರಿಮೂತ್ರ ವಿಸರ್ಜನೆ ಮಾಡಿದವರದುಅದನ್ನೇ ದಿಗ್ಬಂಧನದ ವೃತ್ತವಾಗಿಸಿದವರದು ಕತ್ತಲು ಮಾತ್ರ ದಿಗಿಲು ಸೃಷ್ಟಿಸುವುದಾದರೆಕುರುಡನ ಜೀವನ ಹೇಗೆ? ಬೆಳಕ ಕಂಡವಗೆ ಕತ್ತಲ ಭಯಬಾಳ ಅನುಭವಿಸಿದವಗೆ ಸಾವ ಭಯಹಗ್ಗ ಹಾವಾಗಿ ಹತನಾಗುವ ಉಪಮೆಅರಿವ ಹಣತೆ ಆರದಿರೆ ನಿತ್ಯ ಹುಣ್ಣಿಮೆ.**************************************************************









