ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸ್ವಾರ್ಥ

ಕವಿತೆ ಸ್ವಾರ್ಥ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಗದ್ದುಗೆಯೇರಲುಹಣವನು ಎಸೆಯಿತುಗಳಿಕೆಯ ತೃಷೆಯಲಿನಶೆಯ ನೀಡಿತುಸ್ವಾರ್ಥದ ಮತವನು ಮುತ್ತಿ ಸಲಿಗೆಯ ಸುಲಿಗೆ ಮಾಡುತಒಸರುವ ಬೆವರಿನಬುತ್ತಿಯ ಕಟ್ಟಿತುನೆತ್ತರು ಹಿಚುಕಿ,ನೆಕ್ಕಿ ಕಾಡಿತುಕತ್ತಲು ಮುಕ್ಕಿ ಅನುದಿನ ಮತ್ತಿನಲಿಅಮೃತ ತುತ್ತಿನಲಿಕಡಲಾದರೂ ಕುಡಿದು,ಗತ್ತಿನಲಿ-ವಿಗತಿಯೆಡೆಗೆಒಂದನ್ಹತ್ತು ಸೇರಿಸಿತು ಸುಖದ ತಿರುಳ ಸವಿಯುತಸೇವಕನೆಂಬುದ ಮರೆಯಿತುಅಡಿಗೊಮ್ಮೆ ಜೊಳ್ಳ ನುಡಿದು,ಪರರ ಬಾದೆಯನರಿಯದೆನ್ಯಾಯ ನೀತಿ ಮಾತಾಡಿತು ಕೃತಕ ಕೀರ್ತಿಯ ಪಡೆಯಿತುವಿಕೃತ ಸೊಗದಲಿ ಹಾಡಿತುಸುಕೃತ ಭಾವವಿರದೆಅಂಬರವೇರಿಕೈ ಬೀಸಿ ಕರಗಿತು ಯಾರೋ ಬಿತ್ತಿದ ಬೀಜಹೂ-ಕಾಯಿಗಳ ಬಿಡದೆ ತಿಂದು,ಒಳಗು ಹೊರಗೂಗಿಡದ ಬುಡದನೆರಳೂ ಬಿಡದೆ,ದೈತ್ಯ ಹುಳುವಾಗಿ ಮೆರೆಯಿತು.……************************

ಸ್ವಾರ್ಥ Read Post »

ಕಾವ್ಯಯಾನ

ಗಜಲ್

ಗಜಲ್ ಸಿದ್ಧರಾಮ ಹೊನ್ಕಲ್ ದಿನಾರಾತ್ರಿ ನೆನಪುಗಳ ಕಾಡಾಟ ಅತಿಯಾಗಿ ನಾಳೆಯಿಂದವಳ ಮರೆಯಬೇಕು ಅನ್ಕೋತೇನೆಇವಳಿಂದೆನಾಗಬೇಕಿದೆ ಈ ಮನಸಿಗರಾಯಳ ಸಹವಾಸವೇ ಬಿಟ್ಟು ಬಿಡಬೇಕು ಅನ್ಕೋತೇನೆ ಸಿಟ್ಟು ಸೆಡವು ದು:ಖ ಸೊಕ್ಕು ಸ್ವಾಭಿಮಾನ ನೆನಪಾಗಿ ಕ್ಷಣ ಹೀಗಂದುಕೊಂಡಿರುತ್ತೇನೆಅವಳು ಕೊಟ್ಟ ಕಂಫರ್ಟಲಿ ಶುಭರಾತ್ರಿ ಹೇಳಿ ಮನಸಾರೆ ಮರೆಯದಿರಬೇಕು ಅನ್ಕೋತೇನೆ ಬೆಳಿಗ್ಗೆ ಎದ್ದೊಡನೆ ಹಿಂದಿನದೇನು ನೆನಪಿಡದೆ ಹೃದಯದಿ ಶುಭೋದಯ ಹೇಳಿರುತ್ತೇನೆಮಾತು ಕಥೆ ಯಥಾ ರೀತಿ ಪ್ರೀತಿ ಮೂಗಿನ ತುದಿಯ ಕೋಪವಿರಬೇಕು ಅನ್ಕೋತೇನೆ ಅನುನಯದ ಮಾತಿಗಿಂತ ಕೋಪತಾಪದ ಮಾತು ತುಸು ಜಾಸ್ತಿ ಆಗಿದೆಯೇನೋಆದರೇಕೋ ಬಿಟ್ಟೆನೆಂದರೂ ಬಿಡದೀ ಮೋಹ ಸದಾ ಸಂಗದಲ್ಲಿರಬೇಕು ಅನ್ಕೋತೇನೆ ಅವಳಿಗೆ ಏನಿವೆಯೋ ಸಂಕಟ ಹೇಳಲಾರಳು ಕೇಳಿ ಇರಲೆಂದು ಸಂತೈಸುವ ಹೃದಯವಂತೆಹೊನ್ನಸಿರಿ’ಬದುಕಿರಲಾರ ಅನುರಾಗದಿ ಸದಾ ನೀನು ಜೊತೆಗಿರಲೇಬೇಕು ಅನ್ಕೋತೇನೆ *********************************

ಗಜಲ್ Read Post »

ಕಾವ್ಯಯಾನ

ಕಲ್ಪನೆಗೂ ಜೀವ ಬರುವಂತಿದ್ದರೆ

ಮುಗಿಯದ ಕನವರಿಕೆಗಳ ನಡುವೆ
ಜೀವ ಬಾರದ ಕಲ್ಪಿನೆಗಳಿಗೆ ಕಡಿವಾಣ ಹಾಕಲಾಗದೆ ಮುನಿಸಿಕೊಂಡ ರಾತ್ರಿಗಳು
ಆಗೆಲ್ಲಾ ಒದ್ದೆಯಾಗುತ್ತಿದ್ದದ್ದು ಅಮ್ಮನ ಮಡಿಲು.

ಕಲ್ಪನೆಗೂ ಜೀವ ಬರುವಂತಿದ್ದರೆ Read Post »

ಕಾವ್ಯಯಾನ

ಒಂದು ಕವಿತೆ

ಕವಿತೆ ಒಂದು ಕವಿತೆ ಡಾ.ಶಿವಕುಮಾರ ಮಾಲಿಪಾಟೀಲ ದ್ವೇಷದಿಂದ ಭೂಮಿ ಮೇಲೆಗೆದ್ದೋರು ಯಾರಿಲ್ಲಆದರೂ ಒಬ್ಬರನೊಬ್ಬರುಪ್ರೀತಿಸೋದು ಕಲಿತಿಲ್ಲ ಯುದ್ದದಿಂದ ಗೆದ್ದ ಕೋಟೆಒಂದು ಉಳಿದಿಲ್ಲಆದರೂ ಒಗ್ಗಟ್ಟಾಗಿಬಾಳೋದು ಕಲಿತಿಲ್ಲ ಎಲ್ಲ ಉಟ್ಟು ಇಲ್ಲೆ ಬಿಟ್ಟುಹೋಗುವುದು ಅರಿತಿಲ್ಲಎಲ್ಲ ಮಾಯೆಯ ಬೆನ್ನುಬಿದ್ದು ಹೊರಗೆ ಬರುತಿಲ್ಲ ಜಾತಿ ಮತದ ಗಡಿ ಮೀರಿಮನುಜರಾಗತಿಲ್ಲಶತ ಶತಮಾನ ಕಳೆದರೂಮಾನವೀಯತೆ ಒಪ್ಪಲಿಲ್ಲ ಶರಣ ಸಂತರ ಶರೀಫರ ಮಾತು ಮನಸಿಗೆ ನಾಟಲಿಲ್ಲಅಜ್ಞಾನದ ಸಂತೆಯಲ್ಲಿಬಿದ್ದು ಒದ್ಯಾಡೋದು ತಪ್ಪಲಿಲ್ಲ ಮಾಡಿದ ಪಾಪ ಬೆನ್ನಿನ ಹಿಂದೆ ಅನುಭವಿಸಲೇ ಬೇಕಲ್ಲಹೇಗೋ ಬದುಕಿ ಪಾರಾಗಲೂಆ ದೇವರು ಬಿಡೊದಿಲ್ಲ ಜೀವ ದೇವರ ಕೊಟ್ಟ ಪ್ರಸಾದಅರಿಯಬೇಕಲ್ಲಅರಿಷ್ಡ್ವರ್ಗಗಳಗೆಲ್ಲೋದು ಕಲಿಯಬೇಕಲ್ಲ ಶ್ರೇಷ್ಠ ಮಾನವನ ಜನ್ಮಹಾಳಾಗಿ ಹೋಗಬಾರದಲ್ಲಪ್ರೀತಿಯಿಂದ ಭೂಮಿನೇಸ್ವರ್ಗ ಮಾಡಬಹುದಲ್ಲ? ಮತ್ತೊಂದು ಜನ್ಮ ನಮಗೆಯಾರಿಗೂ ಬೇಕಿಲ್ಲಈ ಜನ್ಮವನ್ನೆ ಸಾರ್ಥಕಮಾಡಿಕೊಂಡರೆ ಸಾಕಲ್ಲ? ********************************

ಒಂದು ಕವಿತೆ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ಹುಡುಗ ಯಾಕ ನೀ ಹಿಂಗ ಮುಸುಮುಸು ನಗತೀದಿನೀ ಸುಮ್ಮನಿದ್ರೂ ನನಗ್ಯಾಕೋ ನಕ್ಕಂಗ ಕಾಣತೀದಿ ನೀ ಬಿಳಿ ಬಟ್ಟಿ ಉಟಗೊಂಡ್ರ ಬೆಳ್ಳಕ್ಕಿ ಬೆದರತಾವುಗಾಂಧಿ ಟೊಪ್ಪಿಗಿ ಹಾಕ್ಕೊಂಡು ಮದುಮಗನಾಗೀದಿ ಸೋದರ ಮಾವನೆಂದು ಸಲಿಗೀಲಿ ಮಾತಾಡೀನಿಕಣ್ಣ ಕಾಡಿಗಿ ಕದ್ದು ನೀ ಕೊಳ್ಳೆ ಹೊಡದೀದಿ ಬಗಲಿಗೆ ಬಿಂದಿಗೆ ಇಟ್ಟು ಬಳುಕಾಡಿ ಬರುತ್ತಿದ್ದೆಬಾಯಾರಿ ಬಂದು ನೀ ಬೊಗಸೆ ಒಡ್ಡಿ ಕಾಡೀದಿ ಉರಿಬಿಸಿಲ ಬೇಗೆಯಲಿ ಹರದಾರಿ ನಡೆದೀನಿಅರುಣಾ ಎಂತೆಂದ್ಯಾಕ ಕೂಗಿ ಕೂಗಿ ಕರೆದೀದಿ.. *************************************

ಗಜಲ್ Read Post »

You cannot copy content of this page

Scroll to Top