ಆಕಾಶದಾವರೆ
ಕವಿತೆ ಆಕಾಶದಾವರೆ ಲಕ್ಷ್ಮೀದೇವಿ ಪತ್ತಾರ ಆಕಾಶಗಂಗೆಯಲ್ಲಿಪ್ರತಿದಿನ ಬೆಳಗಿನ ಜಾವದಲ್ಲಿಅರಳುವದೊಂದು ಅಸದಳದ ತಾವರೆ ಹೂವು ಮುಂಜಾವಿನಲ್ಲಿ ಕೆಂದಾವರೆಮಧ್ಯಾಹ್ನ ನೀಲ್ದಾವರೆಮತ್ತೆ ಸಂಜೆ ಹೊನ್ನದಾವರೆಅಪರಿಮಿತ ಚೆಲುವಿನಅಪರೂಪದ ಹೂವು ಬಗೆ ಬಗೆ ಬಣ್ಣ ಧರಿಸುತಾಮುದಗೊಳಿಸುವ ತಾವರೆಹೊಂಗಿರಣದ ಸುಗಂಧವಎಲ್ಲೆಡೆ ಚೆಲ್ಲಿ ಚೈತನ್ಯ ಉಕ್ಕಿಸುವ ತಾವರೆ ಹೂವು ಯಾರು ಮುಟ್ಟದ ತಾವರೆಯಾರು ಮುಡಿಯದ ತಾವರೆಅರಳಿದರೆ ಭೂರಮೆಗೆ ಬೆಳಗು ಸೊಬಗು ಗೆಲುವು ತರುವ ತಾವರೆ ಹೂ ಜೀವಿಗಳ ಜೀವ ಜೀವನಬಾನಿಗೆ ಶೋಭೆ ಈ ಭಾನುನಮಗಾಗಿ ಹೂವಾಗಿ ಅರಳಿದ ದೇವರುಆದಿತ್ಯನೆಂಬೊ ಅವಿನಾಶಿ ತಾವರೆ ಹೂವು









