ಯಾತನೆ
ಕವಿತೆ ಯಾತನೆ ಲಕ್ಷ್ಮೀ ಮಾನಸ ಚಿತಾಗಾರದ ಚಿತ್ರಣ,ಮನದಲ್ಲಿ ಮರುಕಳಿಸಲು,ಎದೆಯಲ್ಲಿ ಬಿರುಗಾಳಿಬೀಸಿ,ತಾರೆಗಳ ಕಾಣುತಲಿವೆ ,ಬಣ್ಣ ಮಾಸಿದ ಪಕ್ಷಿಗಳು,ಕಿಟಕಿಗಳ ಚಿಕ್ಕ ಸಂದಿನಲ್ಲಿ.., ಲೋಕದ ತುಂಬೆಲ್ಲಾಪರದೆಗಳು,ಮಾಸಿದ ಚಿತ್ತಾರಗಳು,ಮುಗಿಲು ಮುಟ್ಟುತ್ತಲಿವೆ ,ಚೀತ್ಕಾರಗಳು,ಮಂಜಿನ ಮಹಲುಗಳಲ್ಲಿ,ಕಾಂಚಾಣದ ಮಡಿಲಲ್ಲಿನ,ನಂಜಿಲ್ಲದ ವಾಯುವಿಗಾಗಿ.., ಸುಟ್ಟ ವಾಸನೆಬೀರುತಲಿವೆ,ಚಿತೆಯೇರಿದ ಮನಗಳು,ಬೂದಿಯ ಸ್ಪರ್ಶಿಸಲುಚಡಪಡಿಸುತಿವೆ,ಕಾಲವಾದ ನೆನಪುಗಳಲ್ಲಿ,ಮುಳುಗಿ ಮೇಲೇಳುವುದಕ್ಕೋ …?ಮೇಲೇಳದೆ ಮುಳುಗುವುದಕ್ಕೋ….? ಚಿ0ತೆಯಲ್ಲಿ ದಹಿಸುತಿವೆ,ಬಾಳಿನ ನಾಳೆಗಳು ,ಬಿರುಗಾಳಿಯಲ್ಲಿಹಾರಬಯಸುತಿರೆ..,ಬೆಚ್ಚನೆಯ ಮನೆಯಲ್ಲೂ,ಮುಳ್ಳಾಗಿ ಚುಚ್ಚುತ್ತಿವೆ,ಮೆತ್ತನೆಯ ಗಾದಿಗಳು ,ಅರುಣೋದಯದ ಹಂಬಲದಲ್ಲಿ…….. ******************************************************* , ….. *******************









