ರೈತ ಗಜಲ್ ಸಾವು ಸೋಯಿ ಯಾಗಿದೆ ಮನೆಯ ಹೊರಗೆ ಬಂದ ನೋಡುನಭದಿ ತೂತು ಆಗಿದೆ ನೀ ಬೀದಿಗಿಳಿದು ನೋಡು ಕೋಣೆ ಯಲ್ಲಿ ಕುಳಿತರೆ ರೈತ ಅರೆಯ ಬಹುದಾ ಮಳ್ಳಿಬೆವರಿನಿಂದ ತನ ತನು ನೀ ಝಳಕ್ ಮಾಡಿ ನೋಡು ಸುದ್ದಿಯ ನೀನು ಸಾಲು ಬರಿ ಸಾಲು ನಿನ್ನ ಪಾಲುಬೆಲೆ ಎಲ್ಲಿ ರೈತನಿಗೆ ನೀ ಮಾತ ನಾಡಿ ನೋಡು ಬೆನ್ನೆಲಬು ನಮ್ಮ ದೇಶದ ನೇಣಿಗೆ ಇನ್ನು ಶರಣ್ಆ ದೇವರಿಗೆ ನಿನ್ನ ಶರಣಾರ್ಥಿ ಯಾಗಿ ನೋಡು ಬಂಧಿಸ್ಥ ಗರ್ಭಗುಡಿಯ ಭಗವಂತನಿಗೆ ಉಳಿಸುತೆರಿ ಬೀಗ ಪಟದ ಎಲ್ಲ ಮನ ಗುಡಿಯೇ ಮಾಡಿ ನೋಡು ಭಯಭೀತ ರೋಗಗ್ರಸ್ತ ಈ ಜಗದ ಪ್ರತಿನಿಧಿ ನೀನೀ ಸ್ವಸ್ಥ ಉಸಿರಿಗಾಗಿ ಜಗ ಹಸಿರು ಮಾಡಿ ನೋಡು ಓ ಪ್ರಕಾಶ್”ನಿನ್ನ ಯತ್ನ ನಿನ ರೈತ ಮಾಡ ಬಹುದುಬೆಳೆ ಮೂಲ್ಯವಾನ ರತ್ನಾ ನೀ ಕಾಪಾಡಿ ನೋಡು ************************************* ಪ್ರಕಾಶಸಿಂಗ್ ರಜಪೂತ
ಎಂತಹ ಸಮಯವಿದು!!
ಕವಿತೆ ಎಂತಹ ಸಮಯವಿದು!! ಸಂಮ್ಮೋದ ವಾಡಪ್ಪಿ ಪ್ರೀತಿ ವಿಶ್ವಾಸ ಕೂಡಿಟ್ಟವರುಯಾವುದೋ ವಾರ್ಡಿನಲ್ಲಿ ಏಕಾಂಗಿಶ್ವಾಸಕ್ಕಾಗಿ ಎಲ್ಲ ಕಳೆದುಕೊಂಡರುಉಸಿರಿಗಾಗಿ ಕಳೆದು ಹೋದರು ಚೈತ್ರದ ಚಿಲುಮೆಯ ಕಾಲಎಲ್ಲವೂ ಚಿಗುರತಿರಲಿಂದುಬಾಡುತಿವೆ ಸಾವಿರ ಲಕ್ಷಮನೆಗಳಲಿ ರೋದನಗಳಿಂದು ಅವ ಹೋದ ಇವ ಬಂದಏನಾಯಿತು ಕೋವಿಡ್ಡಾ?ಅದೇ ಪ್ರಶ್ನೆ.. ಭಯಂಕರ ಉತ್ತರಸಮರವಿದು ಜಗವೆಲ್ಲ ತತ್ತರ ಹಣ ತೆತ್ತರು ಸಿಗದಲ್ಲಅಂದು ಗಿಡ ನೆಡದವಆಮ್ಲಜನಕ ಬೇಡುತಿಹಧಗಧಗಿಸುವ ಸೂರ್ಯ ನಗುತಿಹ ಸಮಯವಿದು ಕಳೆದು ಹೋಗಲಿಕಳೆದು ಹೋದ ನಗು ಮರಳಲಿಮರಳಿನಲಿ ಓಯಾಸಿಸ್ ಸಿಗಲಿವೈರಾಣುವಿನ ಸಂಹಾರವಾಗಲಿ *************************************************
ಆಕಾಶದಾವರೆ
ಕವಿತೆ ಆಕಾಶದಾವರೆ ಲಕ್ಷ್ಮೀದೇವಿ ಪತ್ತಾರ ಆಕಾಶಗಂಗೆಯಲ್ಲಿಪ್ರತಿದಿನ ಬೆಳಗಿನ ಜಾವದಲ್ಲಿಅರಳುವದೊಂದು ಅಸದಳದ ತಾವರೆ ಹೂವು ಮುಂಜಾವಿನಲ್ಲಿ ಕೆಂದಾವರೆಮಧ್ಯಾಹ್ನ ನೀಲ್ದಾವರೆಮತ್ತೆ ಸಂಜೆ ಹೊನ್ನದಾವರೆಅಪರಿಮಿತ ಚೆಲುವಿನಅಪರೂಪದ ಹೂವು ಬಗೆ ಬಗೆ ಬಣ್ಣ ಧರಿಸುತಾಮುದಗೊಳಿಸುವ ತಾವರೆಹೊಂಗಿರಣದ ಸುಗಂಧವಎಲ್ಲೆಡೆ ಚೆಲ್ಲಿ ಚೈತನ್ಯ ಉಕ್ಕಿಸುವ ತಾವರೆ ಹೂವು ಯಾರು ಮುಟ್ಟದ ತಾವರೆಯಾರು ಮುಡಿಯದ ತಾವರೆಅರಳಿದರೆ ಭೂರಮೆಗೆ ಬೆಳಗು ಸೊಬಗು ಗೆಲುವು ತರುವ ತಾವರೆ ಹೂ ಜೀವಿಗಳ ಜೀವ ಜೀವನಬಾನಿಗೆ ಶೋಭೆ ಈ ಭಾನುನಮಗಾಗಿ ಹೂವಾಗಿ ಅರಳಿದ ದೇವರುಆದಿತ್ಯನೆಂಬೊ ಅವಿನಾಶಿ ತಾವರೆ ಹೂವು









