ನಾನು ನಾನೆಂದು ಬೀಗಿ
ಕವಿತೆ ನಾನು ನಾನೆಂದು ಬೀಗಿ ಅಭಿಜ್ಞಾ ಪಿ ಎಮ್ ಗೌಡ ಎಲ್ಲೆಲ್ಲೂ ಚಿತಾಗಾರಸ್ಮಶಾನಗಳ ದರ್ಬಾರುಬಲುಜೋರು ಜೋರು.!ಬೀದಿ ಬೀದಿಗಳಲ್ಲಿಸಾಲುಸಾಲು ಶವಗಳ ದಿಬ್ಬಣಚಿತಾಭಸ್ಮದ ಕಾಯಕಲ್ಪಕೆಮುಖಮಾಡಿ ನಿಂತಿವೆ…. ವಿಧಿಯಿಲ್ಲದೆಮುಷ್ಕರ ಹೂಡಲುಹೆಣಗಳ ರಾಶಿಗಳುಸ್ಮಶಾನದವಿಳಾಸಕಾಗಿ ಅರ್ಜಿ ಹಾಕುತಿವೆ…ಅಹಿಂಸೆಯ ಅಹವಾಲುದೇವರ ಅವಗಾಹನೆಗೆಕೊಡಲು ತಾ ಮುಂದು ನಾ ಮುಂದೆಂದು… ಅವಕ್ಕಾದಭಂಡಗೇಡಿ ರಣಹದ್ದುಗಳುಬಾಯ್ಬಿಡದ ಗಿಡುಗಗಳ ಮಾಂತ್ರಿಕತೆಚಾಟಿ ಏಟಿನ ಮಾತಿಗೆಪುದುರುಗುಟ್ಟಿವಿಲವಿಲಗುಟ್ಟಿರಲು… ಒಡ್ದೋಲಗದಮಾರ್ಯಾದೆ ಹರಾಜಾಗುತಿದೆಸಣ್ಬುದ್ಧಿ ಸ್ವಾರ್ಥದೊಳುರಕ್ತ ಬೀಜಾಸುರರ ಸಾಮ್ರಾಜ್ಯಕಂಪಿಸುತಿದೆಎಂಟದೆಯ ಭಂಟನಂತಿರುವಭೂಪನಿಂದ… ರುಜುವಾತು ಮಾಡುತಿದೆಉಚ್ಛಿಷ್ಠಕಾಗಿ ಕೈಚಾಚಿದಪುಂಡತನದ ವಕೌಸಗಳ!ಆಸೆಬುರುಕಕೀಚಕಗಳನು ಚಂಡಾಡಿಹುರುಳಿಸಲು ಸಜ್ಞಾಗುತಿದೆ…. ನಾನು ನಾನೆಂದು ಮರೆದದುಷ್ಟ ನೀಚನಹಂಕಾರಮಣ್ಣುಮುಕ್ಕುತಿದೆ….ಗಹಗಹಿಸುತಿವೆ ಕಾಷ್ಠಗಳುಶಪಿಸುತಿದೆ ಧರಣಿ.!ವಹ್ನಿಯೊಂದಿಗೆ ಸಲಿಲವುಸಾಥು ಕೊಟ್ಟು ನಗುತಿರಲುಅವನಳಿವಿನಂಚು ಅವನಿಂದಲೆ……! ****************************************









