ಗಜಲ್
ನಿನ್ನ ಕಣ್ಣಿಗೆ ಹುಚ್ಚನಂತೆ ಕಂಡಿರಬಹುದು ನಾ ನಿನ್ನಾಸೆಗಳ ಬಲ್ಲವನು
ಪ್ರೇಮಿಗಳೆಲ್ಲ ಹುಚ್ಚರಾದರೇ ನಾನಿನ್ನ ಬಹುದೊಡ್ಡ ಹುಚ್ಚನೀಗ
ಮುಗಿಲ ಹಂಗು ಹರಿದುಕೊಂಡು
ನೆಲದ ನಂಟಿಗೆ ಅಂಟಿಕೊಂಡು
ಹಸಿರು ತೋಳ ತೊಟ್ಟಿಲ ತುಂಬ ಅರಳಿ
ತಾರೆಗಳು ನಕ್ಕವು ಹಿತ್ತಲಲಿ
ಗಿಡ ಮರ ಪ್ರಾಣಿ ಪಕ್ಷಿ ಕೂಗಿ ಹೇಳುತ್ತಿವೆ
ನಮಗೂ ಬದುಕಲು ಅವಕಾಶ ಕೊಡಿ
ನಿಜ ಅಲ್ಲವೇ ಇವು
ಪ್ರತಿಫಲ ಬಯಸದ ಫಲಪುಷ್ಪಗಳು
ಕವಿತೆ ಸಾಯಬೇಡಿ…ಜೋಕೆ ಡಾ. ಅರಕಲಗೂಡು ನೀಲಕಂಠ ಮೂರ್ತಿ. ಸಾಯಬೇಡಿ ಜೋಕೆಇದು ಸಾಯಲು ಸೂಕ್ತ ಸಮಯವಲ್ಲ! ಯಾರಿಗೂ ಈ ಸಮಯಸಾವಾಗದಿರಲಿವಯೋಧಿಕ್ಯ ಕಾರಣಕೂ ಕೂಡ! ಸದ್ಯ ಸತ್ತವರ ಮನೆಯ ಸುತ್ತನೆರೆಹೊರೆಯ ಗುಮಾನಿಪಿಸು ಪಿಸು ಗುಮ್ಮದನಿಎಲ್ಲ ಹಾಗಿರಲಿ ಗಾಳಿಯೂ ಸಹ ಬೆದರಿಬೀಸುವುದನೆ ನಿಲ್ಲಿಸೀತುಅಥವಾ ಭಯದಿ ರಭಸ ಸುತ್ತೀತು… ಸತ್ತ ದುರ್ದೈವಿಯ ಹೊರಲುಭುಜಗಳ ಎಣಿಕೆಯ ಮಾತಂತಿರಲಿನರಪೇತಲರೂ ಅನುಮಾನನೀವೇ ಭುಜಗಳಾಗಿಹೊತ್ತೊಯ್ಯಬೇಕು ಬಹುಶಃ ಜೋಪಾನ! ಇನ್ನು ಈ ಇಂಥ ಹೊತ್ತಲೂಸಮಯವೇ ಸಂದರ್ಭವೇಅಥವಾ ಸೂಕ್ತ ತಾಣವೇಸಾವೆಂಬ ಸೈತಾನನ ಆಕ್ರಮಣಕೆ…ಈಗಂತೂ ಕುಣಿವ ಕರೋನಬೀಭತ್ಸ ಕೇಕೆ!ಆಸ್ಪತ್ರೆಯಲೆ ಉಸಿರು ನಿಂತರಂತುಮನೆಗೂ ಶವ ಬರದು ಯಾರದುಮುಗಿಸುವರು ದಫನ್ ಎಂದುಒಟ್ಟೊಟ್ಟಿಗೆ ಕಸಕ್ಕಿಂತ ಕಡೆಯಾಗೆಸೆದುದೂರ ಎಲ್ಲೋ ಊರ ಹೊರಗೆಸಾಮೂಹಿಕ ಗುಂಡಿಯೊಳಗೆ…! ಸೊಳ್ಳೆ ಜಿರಲೆಗಳನೂ ಕೂಡಒಂದೊಂದೆ ತಾಳ್ಮೆಯಲಿಸಂದಿಗೊಂದಿಗಳಲಿಕೆದಕಿ ಬೆದಕಿ ಚಚ್ಚುವವರುಕಸದ ಬುಟ್ಟಿಗೆಸೆವವರು ನಾವು! ಸತ್ತವರೇನೋ ಹೊರಟು ಹೋದರು ನಿಜನೀವು-ನಾವು ಕಳೆದುಕೊಂಡವರು?ದುಃಖದ ಮಡು ತುಂಬಿದವರು?ವರುಷ ವರುಷವೂ ಇನ್ನುವಿಚಿತ್ರ ವಿಚಿಕಿತ್ಸೆಯ ರೀತಿಗೆ ಹೀಗೆನಮ್ಮ ನಿಮ್ಮಮನೆ ಮೈಲಿಗೆ! ಕಾಗೆ ಕೂಗು ಕೂಡಈಗ ಬಹು ದೂರ ನಿಮಗೆ ನಮಗೆಬಹುಷಃ…ಅದಕೂ ಸೂತಕದ ಮರುಳು!ಮತ್ತದೂ ಸಹ ಕೂರದುನಿಮ್ಮ ನಮ್ಮ ಐಬು ಛಾವಣಿ ಮೇಲೆಹಾಗೂ ಹಾರದಿನ್ನು ಸುತ್ತಮುತ್ತ ಗಿರಕಿ ಎಂದೆಂದಿಗೂ… ಆದ್ದರಿಂದಜೋಕೆ ಯಾರೂ ಸಾಯಬೇಡಿದಯಮಾಡಿಯಾರಿಗೂ ಈ ಸಂದಿಗ್ಧ ಸಮಯಸಾವಾಗದಿರಲಿವಯೋಧಿಕ್ಯ ಕಾರಣಕೂ ಕೂಡಇದು ಸೂಕ್ತ ಸಮಯ ಅಲ್ಲವೇ ಅಲ್ಲ…! ********************************
You cannot copy content of this page