ಸೀರೆಯ ಸೆರಗು
ಕಾವ್ಯಯಾನ ಸೀರೆಯ ಸೆರಗು ಶಿವಲೀಲಾ ಹುಣಸಗಿ ಸೀರೆಗೊಂದು ಸೆರಗು ಮನಸಿಗೆ ಮೆರಗುಅತ್ತು ಕರೆವಾಗ ಕಣ್ಣೊರೆಸುವ ಸಾಧನವುಕಂಬನಿಯು ಮುತ್ತಾಗಿ ಅರಳಿದ ಸೊಬಗುಆಟಪಾಟಕೆ ಬೆವೆತ ಮೈಮನಕೆ ಬೆರಗುಬೀಸಕೆಯಾಗಿ ಕೈಯಂಚಲಿಹುದು ಸೆರಗುಆಸತ್ತು ಬೆಸತ್ತ ಬೆವರಿಗಿದೋ ಪ್ಯಾನು!ಅಡಿಗೆಮನೆಯ ಸಿದಾಸಾದಾ ಮಸಿಅರಿವೆತಲೆನೆಂದು ಬಂದವಗೆ ಟವಾಲ್ ಯಿದುನೇಸರನ ತಾಪಕೆ ಕೊಡೆಯಂತೆ ಅರಳಿಹುದುನಾಚಿ ನೀರಾಗೋ ಗಳಿಗೆಗೆ ಬಳ್ಳಿಯಾಗಿಹುದುಹೊಸಬರೆದುರು ಅಸ್ತ್ರದಂತೆ ಈ ಸೆರಗುಉಡಿಯಕ್ಕಿ,ಬಾಗಿನ ಪಡೆವ ಸೌಭಾಗ್ಯವಿದುಹೂಗಳ ಸೆಳೆತಕ್ಕೆ ಬುಟ್ಟಿಯಂತಾಗಿಹುದುತಿಂಡಿತಿಸುಗಳ ಬಚ್ಚಿಡಲು ಜೊತೆಗಿಹುದುತಲಿಮ್ಯಾಲೆ ಗೌರವದ ಕಿರೀಟದಂತಿಹುದುಅಮ್ಮನ ಸೆರಗಿನ ಅಂಚಿಡಿದು ಹೊಂಟರೆವಿಶ್ವಪರ್ಯಟನವಾದಂತೆಯೇ..ಸರಿ!ಸೆರಗೊಂದು ಮಾಂತ್ರಿಕ ದಂಡದಂತೆಗಿರಗಿಟ್ಲಿತರ ಸುತ್ತುವ ಅಪ್ಪನೆ ಚಂದಸಿಟ್ಟಿಗೆದ್ದು ಸೊಂಟಕೆ ಸೆರಗ ಕಟ್ಟಿದಳೆಂದರೆಎದುರಿಗಿದ್ದವರು ನಾಪತ್ತೆಯಾದಂತೆಪ್ರೀತಿಯಲಿ ಸೆರಗೊಡ್ಡಿ ಬೇಡಿದಳೆಂದರೆಕಲ್ಲುಕರಗಿ ಹೂವಾಗುವುದೆಲ್ಲ..ಸೆರಗಿನಲ್ಲಿಹುದು ಪ್ರೇಮಾಮೃತವಿಲ್ಲಿ.ಹೆಣ್ಣಿಗೊಂದು ಅಂದ ತರುವುದು ಸೀರೆಸೀರೆಗೊಂದು ಸೆರಗೆ ಜೀವಾಮೃತವಿಲ್ಲಿ *************








