ತೇಲುವ ವಲಸೆ ಚಿತ್ರಗಳು
ತೇಲುವ ವಲಸೆ ಚಿತ್ರಗಳು
ಬಿ.ಶ್ರೀನಿವಾಸ್ ಕವಿತೆ
ತೇಲುವ ವಲಸೆ ಚಿತ್ರಗಳು Read Post »
ಅರಳು ಹೂವ್ವಿಗೆ ಗರ್ವವಿಲ್ಲ ;
ನಮಗೇಕೆ ?
ಮಧು ಕಾರಗಿಯವರ ಕವಿತೆ
ಅರಳು ಹೂವ್ವಿಗೆ ಗರ್ವವಿಲ್ಲ ;ನಮಗೇಕೆ Read Post »
ಕಾವ್ಯ ಸಂಗಾತಿ ಸಂಕ್ರಾಂತಿ ಗಜಲ್ ಬರುವ ಕಷ್ಟಗಳು ಸ್ವೀಕರಿಸು ಬದುಕು ಸಂಕ್ರಾಂತಿ |ಕನಸುಗಳಿಗೆ ಬಣ್ಣ ತುಂಬಿಸು ಬದುಕು ಸಂಕ್ರಾಂತಿ || ನಿನ್ನಿಷ್ಟಕ್ಕೆ ಆಗಾಗ ಖುಷಿಪಡು ಕಾಯಕ ಪ್ರೀತಿಸು |ಕಳೆದ ದಿನಗಳಲಿ ಸಂಚರಿಸು ಬದುಕು ಸಂಕ್ರಾಂತಿ || ಸಿಹಿ ಕಹಿ ಬಾಳಿನಲ್ಲಿ ಎಳ್ಳು ಹಂಚಿದ ರೊಟ್ಟಿ ಹಂಗ |ಹೊಳಿಗೆ ಹೂರಣ ಸುಖಿಸು ಬದುಕು ಸಂಕ್ರಾಂತಿ || ನಲ್ಲೆಯ ಮಾತು ಜೀವ ಭಾವ ಬೆರತ ಬೇವು ಬೆಲ್ಲ |ಕಲ್ಲರಳಿ ಹೂವಾಗಿ ಪ್ರೇಮಿಸು ಬದುಕು ಸಂಕ್ರಾಂತಿ || ‘ಮುತ್ತು’ ಜಗದ ನೆಲಕ್ಕೂ ನಿನ್ನಾಳುವ ಹಕ್ಕಿದೆ |ಈ ಮಣ್ಣ ಋಣ ತೀರಿಸು ಬದುಕು ಸಂಕ್ರಾಂತಿ || ಮುತ್ತು ಬಳ್ಳಾ ಕಮತಪುರ
ಕಾವ್ಯ ಸಂಗಾತಿ ಕೆಟ್ಟವಳು ಪ್ರೊ ರಾಜನಂದಾ ಘಾರ್ಗಿ ಅರಳುತ್ತಿರುವ ಮೊಗ್ಗನ್ನುಹಿಸುಕಿ ಹೂವಾಗಿಸಿಮೂಸಿ ನೊಡುವವರಿದ್ದಾಗಕೆಟ್ಟವರಾರು ! ಒತ್ತಾಯದ ಮಡಿಲನ್ನು ಹೊತ್ತರೂಮಾನವತೆಯ ಮಿಡಿದು ಬೆಳೆಸಿದವಳಿಗೆಕಿಚ್ಚನ್ನು ಇಡುವವರಿದ್ದಾಗಕೆಟ್ಟವರಾರು ! ಒಬ್ಬ ಮುಟ್ಟಿದನೆಂದು ಕಲ್ಲಾಗಿಸಿಇನ್ನೊಬ್ಬ ಮುಟ್ಟಿದನೆಂದುಹೆಣ್ಣಾಗಿಸುವ ಪರಂಪರೆಯಲ್ಲಿಕೆಟ್ಟವರಾರು ! ಕಟ್ಟಳೆಗಳ ಅಡಿಯಲ್ಲಿ ಉಸಿರುಗಟ್ಟಿ ಸಾಯದೇತಲೆ ಎತ್ತಿದವರ ಮೆಟ್ಟುವಸಮಾಜದ ಗುತ್ತಿಗೆದಾರರಿರುವಾಗಕೆಟ್ಟವರಾರು ! ಅರಳುತ್ತಿರುವ ಮೊಗ್ಗನ್ನುಹಿಸುಕಿ ಹೂವಾಗಿಸಿಮೂಸಿ ನೊಡುವವರಿದ್ದಾಗಕೆಟ್ಟವರಾರು ! ಒತ್ತಾಯದ ಮಡಿಲನ್ನು ಹೊತ್ತರೂಮಾನವತೆಯ ಮಿಡಿದು ಬೆಳೆಸಿದವಳಿಗೆಕಿಚ್ಚನ್ನು ಇಡುವವರಿದ್ದಾಗಕೆಟ್ಟವರಾರು ! ಒಬ್ಬ ಮುಟ್ಟಿದನೆಂದು ಕಲ್ಲಾಗಿಸಿಇನ್ನೊಬ್ಬ ಮುಟ್ಟಿದನೆಂದುಹೆಣ್ಣಾಗಿಸುವ ಪರಂಪರೆಯಲ್ಲಿಕೆಟ್ಟವರಾರು ! ಕಟ್ಟಳೆಗಳ ಅಡಿಯಲ್ಲಿ ಉಸಿರುಗಟ್ಟಿ ಸಾಯದೇತಲೆ ಎತ್ತಿದವರ ಮೆಟ್ಟುವಸಮಾಜದ ಗುತ್ತಿಗೆದಾರರಿರುವಾಗಕೆಟ್ಟವರಾರು !
ಕಾವ್ಯ ಸಂಗಾತಿ ಉತ್ತರಾಯಣ ಡಾ. ನಿರ್ಮಲ ಬಟ್ಟಲ ಎಳ್ಳಷ್ಟು ಬಿಸಿ ತಾಪಏರಿಸಿನಿಂತರೂ ನೇಸರಈ ನಡು ಮಧ್ಯಾನದಲ್ಲಿಕೊರೆವ ಚಳಿಗೆನಿನ್ನ ಅಪ್ಪುಗೆಬೇಕೆನಿಸುತ್ತದೆ….! ಮರಕೆ ಹೊಸೆದುಕೊಂಡುಬಳ್ಳಿಯಂತೆ ಹೊಸೆದಬಿಸಿಯೂಸಿರಿನ ಬಿಸಿತಾಪವನೂ ಸೂರ್ಯನಿಗೂತಾಗಿಸಬೇಕೆನಿಸುತ್ತಿದೆ…..! ತುಟಿಗೆ ನೀನಿತ್ತ ಕುಸುರಿನಮುತ್ತುಗಳ ಸಿಹಿಯನುಎಳ್ಳುಬೆಲ್ಲದ ಜೊತೆಗೆ ಬೇರೆಸಿಸವಿಯಬೇಕೆನಿಸುತ್ತಿದೆ….! ಕಬ್ಬು ಕಡಲೆಯ ಬೀರಿಒಲವಿನ ನುಡಿಯಾಡಿಮುನಿಸ ಹೊರದೂಡಿತೆರೆದ ಬಾಹುಬಂಧದಿ ಸಂಬಂಧಗಳು ಅಪ್ಪಬೇಕೆನಿಸುತ್ತದೆ….! ಉತ್ತರಾಯಣಕೆ ಕಾಲಿಟ್ಟುಸೂರ್ಯ ನಮ್ಮಿಬ್ಬರನೂದೂರಮಾಡುವ ಮುನ್ನಚಳಿಯ ಸುಖವನುಕಂಬಳಿ ಹೊದ್ದುಅನುಭವಿಸಬೇಕಿದೆ…!
ಸಂಕ್ರಾಂತಿಗೊಂದು ಪ್ರಶ್ನೆ ದುಗುಡದ ಛಾಯೆ ಆವರಿಸಿದ ಚಿಂತೆಯ ಕಾವಳ ಹೊದ್ದ ಮನಕೆ ತರಬಹುದೇ ಸಂಕ್ರಾಂತಿ ನಿನ್ನಾಗಮನ ಹೊಸ ಚೈತನ್ಯದ ಶಾಖದ ಕಾವನು? ಜಡ್ಡು ಕಟ್ಟಿರುವ ಜೀವನ ಜಾಡ್ಯಕೆಋತು ಪರಿವರ್ತನೆಯ ಔಷಧಿಯೇ? ಹೇಮಂತನ ಮಬ್ಬು ಆಲಸ್ಯಕೆ ಮಾಗಿಯ ರೋಗಕೆ ನೀ ಮದ್ದೇ? ಪ್ರಕೃತಿಗಂತೂ ಈ ಭೂಮಿ ಪರಿಭ್ರಮಣೆನಿತ್ಯ ನೂತನ ಸಂಭ್ರಮ ತರುವ ಆವರ್ತನೆ ಏಕತಾನತೆಯ ಬೇಸರದ ಬದುಕಿಗೆ ನೀ ತರಬಹುದೇನು ಹೊಸ ಬದಲಾವಣೆ? ಬದುಕಿನಿಡೀ ನಡೆಯುತಿದೆ ಬವಣೆ ಕೃಷಿ ಬರಬಹುದೆ ಈಗ ಸಫಲತೆಯ ಸುಗ್ಗಿ? ಸಿಗುವುದೇ ಪರಿಶ್ರಮಕ್ಕೊಂದು ಬೆಲೆ ಬಾಳಪಯಣಕೊಂದು ಗಮ್ಯ ನೆಲೆ? ಕಾಯುತಲಿದೆ ಹೃದಯ ನೊಂದು ನಲುಗಿ ಮುದುಡಿ ಸೊರಗಿ ಬಳಲಿ ಬೆಂಡಾಗಿ ಮೊಗ್ಗಾದ ಭಾವಗಳ ಅರಳಿಸಬಹುದೇ ಎಂದು ಜರುಗಿ ನಿರೀಕ್ಷಿಸುತಲಿರುವ some ಕ್ರಾಂತಿ? ಸುಜಾತಾ ರವೀಶ್
ಸಂಕ್ರಾಂತಿಗೊಂದು ಪ್ರಶ್ನೆ Read Post »
ಗಜಲ್ ನೂರಅಹ್ಮದ ನಾಗನೂರ ಬೆಳ್ಳಿಯ ಮಂಜಿಗೆ ಚಿನ್ನದ ಜ್ವಾಲೆಗಳಿಂದ ವಿದಾಯ ಹೇಳುತ್ತೇನೆಗೋದಿಯ ಕಿವಿಯೋಲೆಗಳಿಂದ ಗದ್ದೆಯಲ್ಲಿ ಸಿಂಗರಿಸಿಕೊಳ್ಳುತ್ತೇನೆ ಮನದಲಿ ಶಾಂತಿ ನೆಲೆಸಿದೆ ಆಕಾಶದಲಿ ಸಂಕ್ರಾತಿ ಸಂಭ್ರಮಿಸಿದೆಮೂಡಗಾಳಿ ಹೊರಟಿದೆ ಗಾಳಿಪಟದೊಂದಿಗೆ ಹಕ್ಕಿ ಹಾರಿಸುತ್ತೇನೆ ಸೂರ್ಯನು ಉತ್ತರರಾಣಿ ಪೊಂಗಲ್ ಕಿಚಡಿ ದಕ್ಷಿಣಾದಿ ಭರಣಿನೆಲ ಜಲದಲಿ ಹರಿದು ಎಳ್ಳುಬೆಲ್ಲ ಹಸಿರಿನ ಕಾಂತಿ ತಿನಿಸುತ್ತೇನೆ ಹೂವುಗಳೊಂದಿಗಿನ ಗೆಳೆತನವು ಮುಳ್ಳುಗಳಿಗೆ ಶಿಕ್ಷೆಯಾಗಿಸಿದೆಭರವಸೆಯ ದೀಪವು ಬರುತಿರುವುದನ್ನು ನಾನು ನೋಡುತ್ತೇನೆ ದುಃಖದ ಹೃದಯಕೆ ಸುಖದೌಷಧ ಹೇಗಾದರೂ ತರಿಸಬಹುದುಬಿಸಿಲ ಹವೆಯಲ್ಲಿಯೂ ತಂಪ ಹವಾಗುಣದ ಸುಗ್ಗಿ ತರಿಸುತ್ತೇನೆ ನೂರ್ ಹೊಸಉತ್ಸಾಹ ತಂದಿತು ದೀಪೋತ್ಸವದ ಬೆಳಕು ಬೆಳಗಲಿಮೋಡವು ಹಾರಾಡುತಿವೆ ಸೌಂದರ್ಯದ ರಶ್ಮಿಗಳನು ತರುತ್ತೇನೆ
You cannot copy content of this page