ನಾಗರೇಖಾ ಗಾಂವಕರಕವಿತೆ- ಬೇಕಿತ್ತೇ ನಿನಗೆ ಈ ಪ್ರೀತಿ?
ಕಾಡ ಮೂಲೆಮೂಲೆಯಲ್ಲೂ
ಆತುಕೂತು
ಮೋಹಿಸಿದೆವು.
ಮೋಹಮಸೆಯುವ ಲಲ್ಲೆಗರೆದೆವು.
ಕದ್ದುಕೇಳಿಸಿಕೊಂಡ
ಜೀರುಂಡೆಗಳದ್ದು
ಈಗ ಅದೇ ರಾಗ ಅದೇ ಹಾಡು
ಅವನ ಹೊಂದಲಾಗದೇ
ಪರಿತಪಿಸುತ್ತಾ ಅತ್ತೆ,
‘ಆಗಬಾರದಿತ್ತೇ ನಾವಿಬ್ಬರೂ
ಜೊತೆಜೊತೆ’
ನನ್ನ ಮುಂಗುರುಳ ನೇವರಿಸಿ
ಅವನೆಂದ, “ಆಗಿದ್ದರೆ ಜೊತೆ
ಇದೂ ಕೂಡಾ ಆಗುತ್ತಿತ್ತು
ಹಳಸಿದ ಕಥೆ,
ಅದೇ ಸಂತಾನಗಾಥೆ,
ಚುಟುಕ ಬರೆಯಲು
ಹೊರಟೆ
ಕುಟುಕುವ ಅವನ ಕವಿತೆಯ
ನೆನಪಾಗಿ
ಪಟಾಕಿ ಹಾರಿಸಿ
ಹೊರಬಂದೆ.
ಈಗಂತೂ ಅವನು ಚಟಾಕಿ
ಹಾರಿಸುವುದರಲ್ಲೇ ಮಗ್ನ.
ಅಂದು ಅವನ ಎದೆಗೂದಲಲ್ಲಿ
ಬೆರಳಾಡಿಸುತ್ತಾ
ನಾನೆಂದೆ” ನಿಜವೇನೋ ಈ ರೀತಿ?
ಮತ್ತದರ ಪರಿಮಳದ ರೀತಿ?
ಇಂದು ತುರುಬಿಗೆ ಕೈ ಇಟ್ಟು
ಅವನೆಂದ” ಬೇಕಿತ್ತೇ ನಿನಗೆ ಈ ಪ್ರೀತಿ?
ಬದುಕಗೊಡದ, ಸಾಯಬಿಡದ
ಉಸಿರಗಟ್ಪಿಸೋ ರೀತಿ?
ಬಿಟ್ಟು ನಡಿ ನನ್ನ ಏತಿ ಪ್ರೇತಿ?
ನಾಗರೇಖಾ ಗಾಂವಕರ
ನಾಗರೇಖಾ ಗಾಂವಕರಕವಿತೆ- ಬೇಕಿತ್ತೇ ನಿನಗೆ ಈ ಪ್ರೀತಿ? Read Post »







