ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗೊಂಬೆಯಾಗಿಸಿ ಬಿಡು ನನ್ನ

ಕಾವ್ಯ ಸಂಗಾತಿ ಹನಿಬಿಂದು ಗೊಂಬೆಯಾಗಿಸಿ ಬಿಡು ನನ್ನ ಕೆಟ್ಟದಾಗಿ ಆಡುವವರ ಜೊತೆಯಲಿಪರರ ದೂಷಿಸುವ ಜನರ ನಡುವಲಿಇತರರಿಗೆ ಬೇಡದ ಬಯಸುವವರ ಸಂಗದಲಿಗೊಂಬೆಯಾಗಿಸಿ ಬಿಡು ನನ್ನ ಗುರುವೇ… ಅಳುತಿಹ ಬಾಳಲಿ ಅಸಹಾಯಕ ಪರಿಸ್ಥಿತಿಯಲಿನಗುವನು ತರಲು ಆಗದ ಸಮಯದಲಿಹಲವರ ನೋವಿಗೆ ಸ್ಪಂದಿಸಲು ಅವಕಾಶ ಇಲ್ಲದ ಸ್ಥಳದಿಗೊಂಬೆಯಾಗಿಸಿ ಬಿಡು ನನ್ನ ಗುರುವೇ… ನೋವಿನ ಕ್ಷಣದಲಿ ನೋವನು ಹಂಚುವಲಿನಲಿವೇ ಕಾಣದ ಬಾಳಿನ ಎದುರಲಿಕಣ್ಣೀರ ಧಾರೆ ಇಳಿಯುವ ಕ್ಷಣದಲಿಗೊಂಬೆಯಾಗಿಸಿ ಬಿಡು ನನ್ನ ಗುರುವೇ… ಮೋಸ ವಂಚನೆಗಳ ನೋಡಿ ಸಹಿಸುವಲಿಲಂಪಟರ ಧನಿಕರ ಸುಳ್ಳಿನ ಎದುರಾಳಿಕಾಮುಕರ ನೇರ ದೃಷ್ಟಿಯ ಸಹಿಸುವಲಿಗೊಂಬೆಯಾಗಿಸಿ ಬಿಡು ನನ್ನ ಗುರುವೇ… ಜಾತಿ ಮತಗಳ ದೊಂಬಿ ಗಲಾಟೆಯಲಿಹಣವ ಗಳಿಸುತ ಮಾನವತೆ ಮರೆವಲ್ಲಿದುಡ್ಡೇ ದೊಡ್ಡಪ್ಪ ಎನ್ನುವ ಲೋಕದಲಿಗೊಂಬೆಯಾಗಿಸಿ ಬಿಡು ನನ್ನ ಗುರುವೇ… ನ್ಯಾಯ ನೀತಿಗೆ ಬೆಲೆ ಇರದಿರುವೆಡೆಯಲಿಕಾಯಕದ ಕಷ್ಟ  ದುಡಿಮೆಯು ಸಾಲದಿರುವಲ್ಲಿಸಾಲದ ಬಲೆಯಲಿ ಬೀಳುವ ಬದುಕಿನಲಿಗೊಂಬೆಯಾಗಿಸಿ ಬಿಡು ನನ್ನ ಗುರುವೇ…——————

ಗೊಂಬೆಯಾಗಿಸಿ ಬಿಡು ನನ್ನ Read Post »

ಕಾವ್ಯಯಾನ

ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ-ದೀಪಾವಳಿಯ ದಿನ…

ಕಾವ್ಯ ಸಂಗಾತಿ ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ-ದೀಪಾವಳಿಯ ದಿನ… ಪುಟ್ಟ ಹುಡುಗ ಕಾಯುತ್ತಾನೆನೆಲಚಕ್ರ, ಸುರುಸುರು ಬತ್ತಿ,ರಾಕೆಟ್, ಬಾಂಬ್ ಕೈಯ್ಯಲ್ಲಿ ಹಿಡಿದುಕತ್ತಲು ಕವಿಯುವ ಸಮಯಕ್ಕಾಗಿಸಿಡಿಯುವ ಪಟಾಕಿಗಳದ್ದೇ ಕನಸುಅವನ ಕಣ್ಣತುಂಬಾ ಏರಿದ ಬೆಲೆಏರದ ಜೇಬಿನ ತೂಕದ್ದೇ ಚಿಂತೆಈಸೀಚೇರಿನಲ್ಲಿ ಕುಳಿತ ಅಪ್ಪನಿಗೆ ಅಮ್ಮ ಅಡುಗೆಕೋಣೆಯಲ್ಲಿರುತ್ತಾಳೆಮನೆಯವರ ಬಾಯಿರುಚಿ ತೀರಿಸುವಹೊಣೆಯನ್ನು ಹೆಗಲಲ್ಲಿ ಹೊತ್ತುಕೊಂಡು ಪುರಾಣಗ್ರಂಥಗಳನ್ನು ಓದುತ್ತಾಎಂಜಲು ಬೆರಳಲ್ಲಿಯೇನರಕಾಸುರ- ಬಲೀಂದ್ರರನ್ನುಕೊಲ್ಲುತ್ತಾರೆ ಅಜ್ಜ ಕಣ್ಣು ಹಣ್ಣಾದ ಅಜ್ಜಿಗೆ‘ಬಾಯಾರಿದ’ ಬತ್ತಿಮುಗಿಯುತ್ತಾ ಬಂದ ಜೀವತೈಲನಂದುವುದಕ್ಕೆ ಸಿದ್ಧವಾದಬೆಳಕೇ ಕಾಣುತ್ತದೆ

ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ-ದೀಪಾವಳಿಯ ದಿನ… Read Post »

You cannot copy content of this page

Scroll to Top