ವಿಮಲಾರುಣ ಪಡ್ಡoಬೈಲು ಕವಿತೆ-ಜಾರುವ ಮುನ್ನ
ಕಾವ್ಯ ಸಂಗಾತಿ ಜಾರುವ ಮುನ್ನ ಅಂದ ಕಂಗಳು ಹುಡುಕುತ್ತಿವೆಬದುಕಿನ ಬೇಗೆಯ ದಾಟುವುದೆಂತುಬಳಲಿ ಮುದುಡಿವೆ ಮೈ ಮನ ಬೇನೆಯಲಿಮೌನವಾಗಿ ಕಾಣದ ಲೋಕದಪರದೆಯ ದಿಟ್ಟಿಸುತ್ತಾ ಹುಟ್ಟುವ ಆ ಗಳಿಗೆ ಕಣ್ಣೀರೆ ಉಸಿರುನಲಿವಿನ ಸಿಂಚನ ಸುತ್ತಲೂ ಹರಿಸಿಹಸಿರ ನೀವುದು ಹೆತ್ತೊಡಲ ಕನಸುಒಂದಷ್ಟುಪ್ರೀತಿ ಎದೆಯಾಳದಿ ಎದೆಗವಚಿಬಂದು ಬಾಂಧವರ ಕಳಚಿ ಸಾಗುವ ಹೊತ್ತು… ಅಂತ್ಯ ಅರಿಯದ ಖಗ ಮೃಗ ಅಂತ್ಯ ಅರಿಯದ ಖಗ ಮೃಗಹಸಿರಲ್ಲೇ ಉಸಿರ ನೀವ ಮಲೆಕೊನೆ ಕ್ಷಣಕ್ಕೂ ಬದುಕ ಸವಿದುವಿಷವಿಕ್ಕದ ಗಿಡಮರ ಬಳ್ಳಿಯಂತೆತೆರಳು ನೀ ಇಹಲೋಕವ ಬಾಳ ಪಯಣದಿ ಹುಟ್ಟಿಗೇ ಸಾವು ನಿಶ್ಚಿತಅವಿತುಕೊಳ್ಳಲಾಗದು ಈ ಬಂಧದಿನಗ ನಾಣ್ಯ ಹೊನ್ನು ಮಣ್ಣಲಿಪಡೆಯಲಾಗದು ಮರುಜನ್ಮಕರ್ಮದಲಿ ಬೆರೆತು ಧರೆಗೆ ನೀ ಋಣಿಯಾಗು ಸ್ಮಶಾನದಿ ಚಿರನಿದ್ರೆಗೆ ಜಾರುವ ಮುನ್ನರಾಡಿಯಾದ ಮನದಿ ಅನುರಾಗ ಬೆಸೆದುದೀಪ್ತಿಯಾಗು ಆಸರೆಯ ಬದುಕಿಗೆನೂರಾರು ಮನಕೆ ಸ್ಫೂರ್ತಿ ನೀನಾಗು
ವಿಮಲಾರುಣ ಪಡ್ಡoಬೈಲು ಕವಿತೆ-ಜಾರುವ ಮುನ್ನ Read Post »









