ಈರಪ್ಪ ಬಿಜಲಿ-ರೈತರ ಜೀವನಾಡಿ..
ಕಾವ್ಯ ಸಂಗಾತಿ ಈರಪ್ಪ ಬಿಜಲಿ ಜೀವನಾಡಿ.. ದಣಿದು ಬರುವ ದಾರಿ ಹೋಕರದಾಹ ತೀರಿಸು ನಮ್ಮಮ್ಮಮಣಿಯಬೇಕು ಸರ್ವಜೀವಿನಿನ್ನ ಮುಂದೆ ಕೇಳಮ್ಮ ||೧|| ಮನದ ದಂಗೆ ನೀಗು ಗಂಗೆಕರವ ಮುಗಿವೆ ತಾಯಿಯೇದಾಹ ತಣಿಸಿ ಮನಸ ಕುಣಿಸುಪಾದ ಕಮಲಕೆರಗುವೇ ||೨|| ನೀಲಿ ಗಗನ ಪ್ರತಿಫಲನಕಿರಣ ನಿನ್ನಲಿ ಸಮ್ಮಿಲನಗಾಳಿಗಲೆಯು ತೇಲಿ ಬರಲುಶುದ್ಧ ಜಲದ ಸಂಕಲನ ||೩|| ಭೂಮಿಪುತ್ರನೊಲಕೆ ಹರಿದುಜಗದ ಹಸಿವು ದೂಡಮ್ಮಕಾಮಿ ಮನುಜನೆದೆಯ ಕೊಳೆಯತೊಳೆದು ಹರಸು ದೊಡ್ಡಮ್ಮ ||೪|| ಪಾಪ ಕರ್ಮ ಕಳೆಯೊ ಗಂಗೆಪಾನಯೋಗ್ಯ ತುಂಗೆಯೇಶಕ್ತಿ ನೀನೇ ಮುಕ್ತಿ ನೀನೇಕಾವೇರಿ ಜೀವನಾಡಿಯೇ ||೫|| ————————- ಈರಪ್ಪ ಬಿಜಲಿ ಕೊಪ್ಪಳ
ಈರಪ್ಪ ಬಿಜಲಿ-ರೈತರ ಜೀವನಾಡಿ.. Read Post »









