ಶಂಕರಾನಂದ ಹೆಬ್ಬಾಳ ಕವಿತೆ-ಮನೋಲ್ಲಾಸಿನಿ…!
ಕಾವ್ಯಸಂಗಾತಿ ಶಂಕರಾನಂದ ಹೆಬ್ಬಾಳ ಮನೋಲ್ಲಾಸಿನಿ…! ಮೃದ್ವಂಗಿಯಂತೆದೇಹ ಬಳುಕಿಸುತಕಣ್ಣೋಟದಲಿ ಸೆಳೆವಮಾಯಾಂಗಿನಿ….!ಹೃದಯದಲ್ಲವಿತುಮನಬೆರೆತ ಮನೋಲ್ಲಾಸಿನಿ…!! ಮೋಹಕ ಮೈಮಾಟನಿದಿರೆಯಲ್ಲೂಅದೆ ತಂಗಾಳಿಯ ಗುಂಗುನಿನ್ನೊಲವಿನ ರಂಗುಕಾರ್ಮೋಡದ ಚಂದ್ರನಾದೆ…!ಕಂಗೆಟ್ಟ ಕುರುಡನಿಗೆಊರುಗೋಲಾದೆಮನದಲ್ಲವಿತು ಕಾಣದಾದೆ…!! ದುಸ್ವಪ್ನ ಸುಸ್ವಪ್ನಗಳಸರಮಾಲೆಯಲ್ಲಿತೇಲುವ ಗಗನಸಖಿಯಾದೆಹಾರುವ ಗಾಳಿಪಟದಂತೆಮನ ಹಿಡಿತಕ್ಕೆ ಸಿಗುತಿಲ್ಲ…! ಅರೆಕ್ಷಣ ಮೌನಅರೆಕ್ಷಣ ಧ್ಯಾನಒಲವ ಬಲೆಯಲ್ಲಿಸಿಲುಕಿದಂತೆ ಭಾಸ…!ವದನದಲ್ಲಿ ಒಮ್ಮೊಮ್ಮೆಕಿರು ಮಂದಹಾಸ…! ಸೆಳೆಯುತ್ತಿರುವೆಅವಳನೊಮ್ಮೆಬಳಿಬಾರೆ ಮೃದ್ವಂಗಿ….ಬಾರೆ ನನ್ನ ಕನಕಾಂಗಿ….!ಇಂದಾದೆ ನಾ ಏಕಾಂಗಿನೀನಾಗಿ ಬಿಡುನನ್ನ ಅರ್ಧಾಂಗಿ….! ಶಂಕರಾನಂದ ಹೆಬ್ಬಾಳ
ಶಂಕರಾನಂದ ಹೆಬ್ಬಾಳ ಕವಿತೆ-ಮನೋಲ್ಲಾಸಿನಿ…! Read Post »









