ಡಾ ಅನ್ನಪೂರ್ಣ ಹಿರೇಮಠರವರ ಗಜಲ್
ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠರವರ ಗಜಲ್ ಭಾವಸಿರಿ ಕೆದ ಕೆದಕಿ ಆಸೆಯಂಗಳ ಬೆದಕಿ ಮರೆಯಾದೆಯಾಎದೆಗೆ ಇರಿ ಇರಿದು ಮನದಂಗಳ ಹೊಸಕಿ ದೂರಾದೆಯಾ ಅರಿಯದೆ ಜೀವ ತಂತಿಯ ರಾಗದೆ ನುಡಿ ನುಡಿಸಿ ಮೇಳೈಸಿದೆಬಯಕೆ ಬಾಂದಳದಲಿ ಒಡಲಿನಂಗಳ ಹಿಸುಕಿ ಮರೆಯಾದೆಯಾ ಮಿಡಿತಗಳ ಹೆಕ್ಕುತ ಹೆಕ್ಕುತ ಒಲವಧಾರೆ ಉಕ್ಕಿಸಿ ಹರಿಸಿದೆಸ್ಪರ್ಶ ಸುಖದ ಹರ್ಷದಂಗಳ ಕುಟುಕಿ ಮರೆಯಾದೆಯಾ ನೋಟದಲೇ ಸಿಹಿಗನಸುಗಳ ಬಿತ್ತಿ ಬಿತ್ತಿ ಹಸಿರು ಚಿಗುರಿಸಿದೆಮೌನ ತಂತಿಯ ನುಡಿಸಿ ರಾಗದಂಗಳ ಮಿಟುಕಿ ಮರೆಯಾದೆಯಾ ಮೋಹ ಪಾಶದ ಸರಳುಗಳಿಂದ ಬಿಗಿಯಾಗಿ ಬಂದಿಸೆನ್ನೆ ಸೆಳೆದೆಹುಸಿ ಭರವಸೆಯಲಿ ಪ್ರೀತಿಯಂಗಳ ತದಿಕಿ ಮರೆಯಾದೆಯಾ ಮಾತ ಹೊನಲಲಿ ತೇಲಿಸಿ ತೇಲಿಸಿ ಮೈ ಮರೆಸಿ ಮರುಳಾಗಿಸಿದೆಉಸಿರ ಬಗೆದು ಪ್ರೇಮದಂಗಳ ಮುಸುಕಿ ಮರೆಯಾದೆಯಾ ಬಂಧ ಸಂಬಂಧವ ಹೊಸೆ ಹೊಸೆದು ಅನುಳಲಿ ಒಂದಾದೆಹೃದಯ ಜೋಳಿಗೆಯ ಒಲವಿನಂಗಳ ಕಲಕಿ ಮರೆಯಾದೆಯಾ ಡಾ ಅನ್ನಪೂರ್ಣ ಹಿರೇಮಠ
ಡಾ ಅನ್ನಪೂರ್ಣ ಹಿರೇಮಠರವರ ಗಜಲ್ Read Post »








