ಇಂದಿರಾ ಮೋಟೆಬೆನ್ನೂರ ಕವಿತೆ ನನ್ನವನು
ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ ನನ್ನವನು ಕವಿ ಹೃದಯ ಮೃದುಮಧುರ ಮಗು ಮನಸು…ಚಿಗುರು ಮೊಳಕೆ ಪರಿಮಳಕವನ ದವನ ಕನಸು..ಸ್ನೇಹ ಪ್ರೀತಿ ಬನದಸವಿಗೊರಳ ಹಸುಗೂಸು…ಕವಿ ಮೋಡಿಗಾರ ನನ್ನವನು… ಕಿರು ಬೆರಳನೂ ಸೋಕದೆಇಡೀ ಹೃದಯವನ್ನೇ ಅಪಹರಿಸಿದಕಳ್ಳ..ಮುದ್ದು ಚಂದಿರ…ಆತ್ಮಕೆ ಕನ್ನ ಹಾಕಿದ ಮಹಾಚೋರಪೂರಾ ಎದೆ ಬಳಿದು ಪ್ರೀತಿ ಬೀಜಬಿತ್ತಿದ ಕವಿ ಸೊಗಸುಗಾರ..ಮಾತುಗಾರ ನನ್ನವನು…. ಸೀದಾ ಹೃದಯಕೆ ಲಗ್ಗೆ ಮನಕೆ ಮುತ್ತಿಗೆಸರಳ ನೇರ ನಡೆ ನುಡಿಯ ಸರದಾರ….ಸರಳತೆಯೇ ಆಸ್ತಿ ಯಾವ ಅಲಂಕಾರ..ಪ್ರಾಸಾಧನಗಳ ಲೇಪವಿಲ್ಲ..ಹಂಗಿಲ್ಲಮುಗ್ಧ ಸ್ನಿಗ್ಧ ಮನದ ಮೊಗದಮುಗುದೆಯ ನಗುವರಳಿದಂತೆ…ಚೆಲುವ ಚೆನ್ನಿಗರಾಯ ನನ್ನವನು…. ಮೆಲ್ಲ ಗಾಳಿಯ ಬೀಸಿಗೆಮಲ್ಲಿಗೆ ಅಂಬಿನ ಅರೆ ಬಿರಿದದುಂಡು ಮಲ್ಲೆ ಮೊಗ್ಗೊಂದುನಗು ಸುರಿಸಿದಂತೆ…ಮೆಲ್ಲನೆ ಭುವಿಯನಪ್ಪುವಂತೆ….ಬೇಲಿ ಮೇಲಿನ ಹೂವ ಪರಿಮಳದಂತೆ…ಸೊಗಸುಗಾರ ನನ್ನವನು…. ಸ್ಪರ್ಶ ವಾಸನೆ ರೂಪದ ಗೊಡವೆಯಿಲ್ಲಬಯಕೆ ಆಸೆ ಆಕಾಂಕ್ಷೆಗಳು ಬೇಕಿಲ್ಲದೂರ ಪಯಣದ ಜೊತೆ ಸವಿ ನೆನಪುಭಾವ ಬುತ್ತಿಯ ಸವಿ ತುತ್ತುನೆನಪು ನಕ್ಷತ್ರಗಳ ಮೇನೆಯಲಿಶಶಿಯೊಡನೆ ನಿತ್ಯ ನೀಲಿಯ ದಿಬ್ಬಣಗುಳಿಗಲ್ಲದ ಸುಳಿಯಲಿ ಮುಳುಗಿದಕನಸುಗಾರ ನನ್ನವನು… – ಇಂದಿರಾ ಮೋಟೆಬೆನ್ನೂರ
ಇಂದಿರಾ ಮೋಟೆಬೆನ್ನೂರ ಕವಿತೆ ನನ್ನವನು Read Post »









