ಡಾ.ತಾರಾ ಬಿ ಎನ್ ಅವರ ಕವಿತೆ “ಆದರ್ಶ”
ಕಾವ್ಯ ಸಂಗಾತಿ ಡಾ.ತಾರಾ ಬಿ ಎನ್ “ಆದರ್ಶ” ಅಂಧಕಾರದ ಮಧ್ಯೆ ದೀಪದಂತೆ ಬೆಳಗುವ,ಜೀವನದ ದಾರಿಗೆ ದಿಕ್ಕು ತೋರಿಸುವ ಬೆಳಕುಆದರ್ಶ, ಮನಸ್ಸಿನ ಮೌನದಲ್ಲಿಮೂಡುವ ನಿಶ್ಶಬ್ದ ಶಕ್ತಿಯ ಸಂಕೇತ.ಲಾಭದ ಲೆಕ್ಕವಿಲ್ಲದೆನಡೆಯುವ ಪಥ,ಭಯದ ನೆರಳನ್ನೂ ಮೀರಿ ನಿಲ್ಲುವ ಧೈರ್ಯ,ಆದರ್ಶ. ಸತ್ಯದ ಮಾತಿಗೆ ಸೋಲುವಬೆಲೆ ಕೊಡುವ ಅನರ್ಘ್ಯಹೃದಯಕ್ಜೆ ದೃಢ ನಿರ್ಣಯಹೋರಾಟಕ್ಕೆ ಎದೆಗೊಟ್ತುನಿಲ್ಲುವ ಅಸೀಮ ಬಲಆದರ್ಶ. ಕಷ್ಟದ ಕಲ್ಲುಬಂಡೆಗಳಮೇಲೆ ನಡೆದು,ನೋವಿನ ಮುಳ್ಳುಗಳಸಹಿಸಿಕೊಂಡು, ಉಂಡುನ್ಯಾಯದ ದಾರಿಗೆ ತಡೆಗೋಡೆಮಾನವತೆಯಜೀವಂತ ರೂಪ.ಆದರ್ಶ ಖರೀದಿಯಾಗದು, ಹುದ್ದೆಗೂ ಸೀಮಿತವಲ್ಲ,ಪ್ರತಿ ಸಣ್ಣ ಕಾರ್ಯದಲ್ಲೂನೈತಿಕತೆಯ ಸುವಾಸನೆಹರಡುವ ಗುಣ.ಬಿದ್ದಾಗ ಎತ್ತಿಕೊಳ್ಳುವಸೋತಾಗ ಧೈರ್ಯ ತುಂಬುವನೋಟದಲ್ಲಿ,ಅನ್ಯಾಯದ ಎದುರುಮೌನ ಮುರಿಯುವ ಅಸ್ತಿತ್ವ ತೋರುತ ನಿಲುವುದು.ಆದರ್ಶ ಸಾವಿರ ಜ ನಕೆ ಪ್ರೇರಣೆ,ಸತ್ಯ ಶುದ್ಧ ಚಿಂತನೆಸಮಾಜದ ಭವಿಷ್ಯನಿರ್ಮಾಣ.ಸುಳ್ಳಿನ ಸೌಲಭ್ಯವಲ್ಲ,ಸತ್ಯದ ಕಠಿಣತೆಉಸಿರಾಗಿಸಿಕೊಳ್ಳುವುದೇಆದರ್ಶ ಡಾ ತಾರಾ ಬಿ ಎನ್
ಡಾ.ತಾರಾ ಬಿ ಎನ್ ಅವರ ಕವಿತೆ “ಆದರ್ಶ” Read Post »









