ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರಾಹುಲ್ ಸರೋದೆ “ಕಾಲ ಬದಲಾಯಿತು”

ಕಾವ್ಯ ಸಂಗಾತಿ ರಾಹುಲ್‌ ಸರೋದೆ ಕಾಲ ಬದಲಾಯಿತು ಚಿಕ್ಕವರಿದ್ದಾಗ ಅಪ್ಪ ಜಾತ್ರ್ಯಾಗಹೆಗಲು ಮೇಲೆ ಕೂಡಿಸಿಕೊಂಡುಊರು ಸುತ್ತುತ್ತಿದ್ದರು, ಮಗಕೇಳಿದಾಕ್ಷಣ ಬೇಕಾದ್ದು ಕೊಡಿಸುತ್ತಿದ್ದರುಕಾಲ ಬದಲಾಯಿತು. ಈಗ ಮಗ ದೂರದ ಊರಾಗಕೆಲಸಕ್ಕೆಂದು ಊರು ಬಿಟ್ಟಾನ,ಕಾಲಕ್ಕೆ ತಕ್ಕಂತೆ ಅಪಡೇಟ್ ಆಗ್ಯಾನಕೈಬೆರಳಲ್ಲಿ ಆಟೋ ಗಾಡಿ ಬುಕ್ ಮಾಡ್ತಾನಕಾಲ ಬದಲಾಯಿತು. ಬಾಳ ದಿನದ ಮೇಲೆ ನೋಡಾಕಹೋದ್ರಾ ಸ್ವಿಗಿ, ಜೋಮ್ಯಾಟೋದಾಗಬೇಕಾದ ಊಟ ಆರ್ಡರ್ ಮಾಡ್ತಾನಊರಿಗೆ ಬಂದ ತಂದೆಯನ್ನು ಬಿಟ್ಟುಕಾಲ್ ಮೇಲೆ ಕಾಲ್ ಮಾತಾಡ್ತಾ ಬಹಳ ಬ್ಯೂಸಿ ಆಗ್ಯಾನಕಾಲ ಬದಲಾಯಿತು. ನಮಗಾಗಿ ಸಮಯ ಕೊಟ್ಟವರಿಗೆನಾವೇನು ಕೊಟ್ಟೆವೂ ಕೆಲಸ, ಫೋನ್ ಕಾಲು,ಮೀಟಿಂಗು, ಡೇಟಿಂಗು, ಎಲ್ಲಾ ಬರ್ತಾವುನಮ್ಮನ್ನು ಹೆತ್ತು ಹೊತ್ತು ಸಲುಹಿದವರಿಗೆಎರಡೊತ್ತು ಮಾತು, ಒಂಚೂರು ಪ್ರೀತಿನೀಡುವುದಕ್ಕಾಗುವಲ್ದು ————- ರಾಹುಲ್ ಸರೋದೆ

ರಾಹುಲ್ ಸರೋದೆ “ಕಾಲ ಬದಲಾಯಿತು” Read Post »

ಕಾವ್ಯಯಾನ

ನಿಶ್ಚಿತ ಎಸ್ ಅವರ ಕವಿತೆ-ಅವನೆಂದರೆ “ನಿನಗೇನು”

ಕಾವ್ಯ ಸಂಗಾತಿ ನಿಶ್ಚಿತ ಎಸ್ “ನಿನಗೇನು“ ಬಂದಾಕೆ ಕೇಳಿದಳು ನನ್ನ…ಅವನೆಂದರೆ ನಿನಗೇನು…? ಕೋಪಗೊಂಡಾಗ ಕಂಗೊಳಿಸುವ ಮುಂಜಾನೆಯ ಸೂರ್ಯನು ಅವನೇ…ತಾಳ್ಮೆಯಿಂದ ನನ್ನ ಸಂತೈಸುವ ಮುಸ್ಸಂಜೆಯ ಚಂದ್ರನು ಅವನೇ…ತಂಪಾದ ಮಾತುಗಳನ್ನಾಡಿ ತಣ್ಣನೆ ಬೀಸುವ ಗಾಳಿಯು ಅವನೇ…. ಜಗಳವಾದಾಗ ಪಟಪಟನೆ ಬಯ್ಯುವ ಮಳೆಹನಿಯೂ ಅವನೇ…ಒಮ್ಮೊಮ್ಮೆ ಗುಡುಗು ಸಿಡಿಲಿನಂತೆ ಅಬ್ಬರಿಸುವ ಕೋಪಿಷ್ಟನು ಅವನೇ…ಪ್ರೀತಿಯ ಚಿಲುಮೆಯಲಿ ನನ್ನ ತೇಲಿಸುವ ಅಲೆಯು ಅವನೇ… ಹೂವಿಗೆ ದುಂಬಿ ಹೇಗೋ ಹಾಗೆ ನನ್ನ ಪೀಡಿಸುವ ಗೆಳೆಯನು ಅವನೇ…ಸದಾ ನನ್ನ ಕಾಡಿಸುವ ನನ್ನ ಹೃದಯ ಕದ್ದ ಚೋರನು ಅವನೇ…ನನ್ನೆಲ್ಲ ನಗು ಅಳುವಿನ ಒಡೆಯನುಅವನೇ… ಪ್ರತಿದಿನ ನನ್ನನ್ನು ಜೋಪಾನಿಸುವ ತಾಯಿಯು ಅವನೇ…ಬೇಕು ಬೇಡವಾದದ್ದನ್ನು ಕೊಡಿಸುವ ಜವಾಬ್ದಾರಿಯುತ ತಂದೆಯು ಅವನೇ…ನನ್ನೆಲ್ಲ ತುಂಟಾಟಗಳಿಗೆ ಆಸರೆಯಾಗಿರುವ ಮಗುವು ಅವನೇ… ಒಟ್ಟಾರೆಯಾಗಿ ಈ ಬದುಕಿನ ಭರವಸೆಯೂ ಅವನೇ..ಹುರುಪು ಅವನೇ…ಗೆಲುವು ಅವನೇ..ನಂಬಿಕೆಯು ಅವನೇ..ನನ್ನೆಲ್ಲ ನಾಳೆಗಳು ಅವನೇ… ಈಗ ನನ್ನಲ್ಲಿ ಮೂಡಿಬಂದ ಪ್ರಶ್ನೆ ಅವನಿಗೇನು ನಾನು….? ನಿಶ್ಚಿತ ಎಸ್

ನಿಶ್ಚಿತ ಎಸ್ ಅವರ ಕವಿತೆ-ಅವನೆಂದರೆ “ನಿನಗೇನು” Read Post »

ಕಾವ್ಯಯಾನ, ಗಝಲ್

ಕಾವ್ಯ ಸಂಗಾತಿ ಆಸೀಫಾ ಗಜಲ್ ಸುರಿವ ಮಳೆ ಹನಿಗೆ ಅರಳಿದ ಭುವಿ ನಗುತಿದೆ ಮಣ್ಣಿನ ಘಮಲಿನಲಿಪುಳಕಿತ ತನುಮನ ಆನಂದದಿ ತೂಗುತಿದೆ ಒಲವಿನ ಅಮಲಿನಲಿ ಮಿಂದೆದ್ದ ತರುಲತೆಗಳು ನಳನಳಿಸಿ ಬಾಗುತಿವೆ ತಂಪಿನ ತವರಿನಲಿಚೆದುರಿದ ಚೆಂದುಳ್ಳಿ ಚೆಂಡುಮಲ್ಲಿ ನಿಂತಿದೆ ಚೆಲುವನ ನೆನಪಿನಲಿ ಮೆಚ್ಚಿದ ಇನಿಯನ ಕಾಣದೆ ಮಂಕಾಗಿದೆ ಮನ ಅವನ ಕೊರಗಿನಲಿನೈದಿಲೆಯು  ಬಿರಿದು ನಲಿದಾಡುತಿದೆ ನಟ್ಟಿರುಳಿನ ಶಾಂತಿಯಲಿ ಬಯಕೆ ಬಾಯಿಲ್ಲದೆ ಬಳಲುತಿದೆ ಬಯಸಿ ಚಂದಿರನ ನಾಚಿಕೆಯಲಿಮನಸು ಕನಸು ಪೋಣಿಸಿ ಮುದದಿ ಕಾದಿದೆ ಕಣ್ಣಿನ ಕಾವಲಿನಲಿ ಇರುಳ ಹರಡಿದ ಕೇಶರಾಶಿ ಹೊಂಚು ಹಾಕಿದೆ ಮುತ್ತಿನ  ಆಸೆಯಲಿತುಟಿಯಂಚಲಿ ತಡೆದ ಪದಗಳು ಇಣುಕುತಿವೆ ಆಸೀಭರವಸೆಯಲಿ ಆಸೀಫಾ

Read Post »

You cannot copy content of this page

Scroll to Top