ಸಿ.ಎಚ್.ಮಧುಕುಮಾರ ಕವಿತೆ,”ಕವಿಪತ್ನಿಯ ಅಳಲು”
ಕಾವ್ಯ ಸಂಗಾತಿ ಸಿ.ಎಚ್.ಮಧುಕುಮಾರ “ಕವಿಪತ್ನಿಯ ಅಳಲು” ಸಂಸಾರದ ನೊಗಭಾರವ ನನ್ನೊಬ್ಬಳಿಗೇ ಹೊರಿಸಿಅಕ್ಷರ ಜಾತ್ರೆಗಳಲಿ ಜೋಳಿಗೆ ಹಿಡಿದುಊರೂರು ಸುತ್ತುವ ಅರೆಜೋಗಿಯೇಬೆಚ್ಚಿಬೀಳಿಸುವ ನಿನ್ನ ಕವಿತೆಯ ಕೊನೆಯ ಸಾಲುಗಳನೆನೆನೆನೆದು ಹಣ್ಣಾಗಿರುವೆಈ ಹೆಣ್ಣಿಗಾಗಿ ಚೂರು ಸಮಯವಿದೆಯೆ? ನೀನಿತ್ತ ಆ ಎರಡು ಮಕ್ಕಳೋನಿನ್ನದೇ ಅಪರಾವತಾರ ಎಂಬಂತೆಅರ್ಥವಾಗದ ಭಾಷೆಯಲ್ಲಿ ವ್ಯವಹರಿಸುತ್ತಿವೆ!ನಿಭಾಯಿಸಲು ಹೊಸ ಭಾಷ್ಯ ಬರೆಯಬೇಕಿದೆ ಚೂರು ಸಮಯವಿದೆಯೆ? ನನ್ನ ದಾರಿ ಸುಗಮಗೊಳಿಸಲು? ಕವಿಯ ಸ್ಪೂರ್ತಿಯ ಮೂಲ ‘ಕವಿಪತ್ನಿಯೇ ಇರಬೇಕೆಂದು’ಹಾಲು,ತರಕಾರಿ.ದಿನಸಿ ತರಲೆಂದು ಹೊರಹೋದಾಗಲೆಲ್ಲನಿಮ್ಮದೆ ಓದುಗರು ಕಣ್ಣಭಾಷೆಯಲಿ ಪ್ರತಿಕ್ರಿಯಿಸುತ್ತಿದ್ದಾರೆ!ಅರ್ಥೈಸಿಕೊಳ್ಳಲಾಗುತ್ತಿಲ್ಲ ಚೂರೇ ಚೂರು ಸಮಯವಿದ್ದರೆಬಂದು ಬಿಡಿ ಒಂದು ಬಾರಿ ನನ್ನೊಂದಿಗೆ. ಅರಿಸಿನ ಕುಂಕುಮ ತೆಗೆದುಕೊಳ್ಳಲುಮನೆಗೆ ಬರುವ ಮುತ್ತೈದೆಯರು ಕೇಳುತಿಹರು ನಿಮ್ಮನ್ನುನಿಮ್ಮ ನಗು, ಹರಟೆಯ ಗಂಟು ಮೂಟೆ ಕಟ್ಟಿಹೊರಟು ಬನ್ನಿ ಮನೆಗೆನಿಮ್ಮೆಲ್ಲ ಕವಿತೆಯ ಪ್ರಸವಗಳು ಇಲ್ಲಿಯೇ ಆಗಲಿ! – ಸಿ.ಎಚ್.ಮಧುಕುಮಾರ
ಸಿ.ಎಚ್.ಮಧುಕುಮಾರ ಕವಿತೆ,”ಕವಿಪತ್ನಿಯ ಅಳಲು” Read Post »









