ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ,”ಜನವರಿ ಒಂದರ ಬೆಳಿಗ್ಗೆ”
ಕಾವ್ಯ ಸಂಗಾತಿ ಶಾಲಿನಿ ರುದ್ರಮುನಿ ಹುಬ್ಬಳ್ಳಿ “ಜನವರಿ ಒಂದರ ಬೆಳಿಗ್ಗೆ” ಜನವರಿ ಒಂದರ ಬೆಳಗ್ಗೆಕನ್ನಡಿಯೇ ಮೊದಲು ಪ್ರಶ್ನಿಸಿತು“ಈ ವರ್ಷ ಏನು ಬದಲಾವಣೆ?”ನಾನು ಉತ್ತರಿಸಿದೆ,“ಮೊದಲು ನಗು, ಉಳಿದದ್ದು ನೋಡೋಣ ಬಿಡು!” ಕ್ಯಾಲೆಂಡರ್ ಹೊಸದು,ಪೆನ್ನು ಹಳೆಯದು,ಸಂಕಲ್ಪಗಳು ಮಾತ್ರಪ್ರತಿವರ್ಷದಂತೆಫ್ರೆಶ್ ಪ್ಯಾಕೆಟ್! ನಿನ್ನೆ ತನಕಸೋಮಾರಿತನಕ್ಕೆ ಬೈದವರುಇಂದು ಅದನ್ನೇ ಹೇಳ್ತಾರೆ,“ರಿಲ್ಯಾಕ್ಸ್, ವರ್ಷ ಇನ್ನೂ ಚಿಕ್ಕದುಈಗಷ್ಟೇ ಹುಟ್ಟಿದೆ!” ಧ್ಯಾನ, ಯೋಗ, ಆರೋಗ್ಯಎಲ್ಲವೂ ಲಿಸ್ಟ್‌ನಲ್ಲಿ ಇದೆ,ಆದ್ರೆ ಈಗ ಕೈಲಿರುವಒಂದು ಚಹಾನೇ,ಜೀವನದ ತತ್ವ ಅನ್ಸತಿದೆ , ಜೀವನ ಅಂದ್ರೆಎಲ್ಲವನ್ನೂ ಸರಿಪಡಿಸೋ ಪ್ರಯತ್ನವಲ್ಲ,ಸ್ವಲ್ಪ ತಪ್ಪು, ಸ್ವಲ್ಪ ತತ್ವ,ಮಧ್ಯೆ ಮಧ್ಯೆ ಜೋರಾದ ನಗು ಅಷ್ಟೇಕ್ಷಣದ ಬದುಕ ಅನುಭವಿಸಲು, ಜನವರಿ ಒಂದೆಂದರೆಪರಿಪೂರ್ಣ ಆರಂಭವಲ್ಲ,ಅಪೂರ್ಣ ಬದುಕಿನೊಂದಿಗೆಸ್ನೇಹ ಮಾಡಿಕೊಂಡ ದಿನ, ಈ ಹೊಸ ಕ್ಯಾಲೆಂಡರ್ ವರ್ಷದಲ್ಲಿಖುಷಿ ಜಾಸ್ತಿ ಸಂಭ್ರಮಿಸೋಣಗಂಬೀರವಾಗಿರೋದನ್ನ ಕಡಿಮೆ ಮಾಡಿ,ಬದುಕುಸ್ವಲ್ಪ ಇನ್ನೂ ಚೆಂದವಾಗಿಸೋಣ…, ಶಾಲಿನಿ ರುದ್ರಮುನಿ ಹುಬ್ಬಳ್ಳಿ
ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ,”ಜನವರಿ ಒಂದರ ಬೆಳಿಗ್ಗೆ” Read Post »









