ಅರ್ಪಣಾ ಅವರ ಕವಿತೆ-ಮಾತಿನ ಕಸೂತಿ
ಅದೆಷ್ಟು ಜಂಭ ಹುಡುಗ ನಿನಗೆ
ನನ್ನ ಕಂಡು ಕಾಣದಂತಿರುವೇ…
ಕಾಯುವೆನು ನಾ ಶಬರಿಯಂತೆ
ನಿನ್ನ ಆ ಒಂದು ಕುಡಿನೋಟಕೆ
ಸಾಕು ಕರಗುವೆನು
ನಗಿಸು ಒಮ್ಮೆ
ಮನ ಮೌನದಲೇ ಮಾತಿನ ಕಸೂತಿ ಹೆಣೆಯುತಿದೆ
ಅರಳಿದ ಒಲವಿನ
ಹೂವೊಮ್ಮೆ ಮುಡಿಗೆ
ಮುಡಿಸು ಬಾ..
ನಿನ್ನ ಇನಿದನಿಗಾಗಿ
ಕಾದು..ಕಾದು…
ಮನವೀಗ ಜಡಗೊಂಡಿದೆ
ಕೂಗಿಬಿಡೊಮ್ಮೆ ನವಿರಾಗಿ
ನಿನ್ನೆಲ್ಲಾ ಜಂಜಡಗಳ ಬೇಲಿ ದಾಟಿ!
ನಿನ್ನ ದನಿಯಿಂದಾಗಿ
ಮುನಿಸು ತೊರೆದು
ಸುರಿಯಲಿ ಈ ಮನ
ಹರುಷದ ವರ್ಷಧಾರೆಯಾಗಿ!
ಇಂತಿ ನಿನ್ನೊಲವು.
——————-
ಅರ್ಪಣಾ
ಅರ್ಪಣಾ ಅವರ ಕವಿತೆ-ಮಾತಿನ ಕಸೂತಿ Read Post »









