ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಕಾಫಿಯಾನಾ

ಕಾವ್ಯ ಸಂಗಾತಿ ಕಾಫಿಯಾನಾ ಎ. ಹೇಮಗಂಗಾ ಮೈ ಮರೆತು ಹಗಲುಗನಸು ಕಾಣುತ್ತಾ ಸಮಯ ಕಳೆಯದಿರು‘ ಕೈ ಕೆಸರಾದರೆ ಬಾಯಿ ಮೊಸರೆಂ’ಬ ಸತ್ಯವ ಮರೆಯದಿರು ಗಮ್ಯ ತಲುಪುವ ಹಾದಿಯಲ್ಲಿ ನೂರಾರು ಕಲ್ಲು, ಮುಳ್ಳುಗಳುಪಲಾಯನ ಮಾಡಲು ಹೊಣೆಗಳ ಪರರ ಹೆಗಲಿಗೆ ಏರಿಸದಿರು ಕಷ್ಟಗಳೇ ಇಲ್ಲದ ಬಾಳು ಯಾರಿಗೂ ಲಭ್ಯವಿಲ್ಲ ಬುವಿಯಲ್ಲಿಬರಿಯ ಸುಖದ ಪಾಲೇ ಸದಾ ನಿನಗಿರಲೆಂದು ಬಯಸದಿರು ಉಪದೇಶ ಮಾಡುವುದರಲ್ಲೇ ಕಾಲಹರಣವಾದರೆ ಹೇಗೆ ?ಶ್ರಮಜೀವಿಯಾಗದೇ ಮಾದರಿ ನೀನೆಂದು ಭ್ರಮಿಸದಿರು ಸತ್ತ ನಂತರ ಗೋರಿಯಲ್ಲಿ ಮಲಗುವುದು ಇದ್ದೇ ಇದೆ ಹೇಮಕ್ಷಣಿಕ ಬಾಳಲ್ಲಿ ಅಲ್ಪವಾದರೂ ಸಾಧಿಸದೇ ಇಲ್ಲಿಂದ ತೆರಳದಿರು

ಕಾಫಿಯಾನಾ Read Post »

ಕಾವ್ಯಯಾನ, ಗಝಲ್

ತೀನ್ ಕಾಫಿಯಾ ಗಜಲ್

ಕಾವ್ಯ ಸಂಗಾತಿ ತೀನ್ ಕಾಫಿಯಾ ಗಜಲ್ ನಯನ. ಜಿ. ಎಸ್ ಟಿಸಿಲೊಡೆಯುತಿಹ ಸಂಚಿನೊಳು ಭಾವಗಳ ಹರಣಕಂದಳಿಸುತಿಹ ಸ್ವಾರ್ಥತೆಯೊಳು ಜೀವಗಳ ಹರಣ ಮಬ್ಬಿನ ಸೋಗಿನಲಿ ಅಖಾಡಕ್ಕಿಳಿದಿವೆ ಚೋದ್ಯಗಳುಸವೆಸುತಿಹ ಹೆಜ್ಜೆಗೆಜ್ಜೆಗಳೊಳು ಭವ್ಯಅಸುಗಳ ಹರಣ ಪಾಪ ಭೀತಿಯನು ಮೀರಿತಲಿ ವಿಜೃಂಭಿಸುತಿದೆ ಕೃತ್ಯಎಣಿಕೆಯಾಗುತಿಹ ಸಾಲಂಕಿಗಳೊಳು ಸ್ವಪ್ನಗಳ ಹರಣ ಬಾಷ್ಪಗರೆಯುವ ಮುಗ್ಧತೆಗೆ ಜೀವಂತಿಕೆಯಲಿ ಸಮರಮೆರೆದಾಡುತಿಹ ಹೃದಯದೊಳು ಹಾರೈಕೆಗಳ ಹರಣ ‘ನಯನ’ಗಳಿಗೆ ಪಾಶವಿಕ್ಕುತ್ತಲಿವೆ ಲೋಭಿಗಳ ಹೀನತ್ವಅಬ್ಬರಿಸುತಿಹ ಅಸ್ಮಿತೆಯೊಳು ಚಿಗುರಾಸೆಗಳ ಹರಣ ನಯನ. ಜಿ. ಎಸ್

ತೀನ್ ಕಾಫಿಯಾ ಗಜಲ್ Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿಯವರ ಗಜಲ್ ಗಳು

ಕಾವ್ಯ ಸಂಗಾತಿ ಮಾಜಾನ್ ಮಸ್ಕಿಯವರ ಗಜಲ್ ಗಳು ಗಜಲ್-ಒಂದು ಅಂತರಂಗ ಸ್ತಬ್ದವಾಯಿತು ಲೇಖನಿ ಮೌನವಾದ ಹೊತ್ತುಭಾವನೆ ಶೂನ್ಯವಾಯಿತು ಲೇಖನಿ ಮೌನವಾದ ಹೊತ್ತು ಉಸಿರು ಉಸಿರಾಡುವುದನ್ನು ಮರೆತು ಜಡವಾಯಿತು ದೇಹಕಣ್ಣ ಹನಿ ಹೆಪ್ಪಾಯಿತು ಲೇಖನಿ ಮೌನವಾದ ಹೊತ್ತು ಸಂಬಂಧಗಳಿಗೆ ಜೋತು ಬಿದ್ದ ಮನ ಸೋಲುವುದು ಏಕೆಮಂಡಿಯೂರಿ ಶರಣಾಯಿತು ಲೇಖನಿ ಮೌನವಾದ ಹೊತ್ತು ಸೋತ ಕನಸುಗಳು ಮಲಗಿ ಗೋರಿ ಶೃಂಗಾರಗೊಂಡಿತುಪೈಶಾಚಿಕ ಕುಣಿತ ಜೋರಾಯಿತು ಲೇಖನಿ ಮೌನವಾದ ಹೊತ್ತು “ಮಾಜಾ” ಬೆಳೆಯುವ ಮೊಳಕೆಯನ್ನು ಚಿವುಟಿ ನಂಜೇರಿಸುವರುಆರೈಕೆಯ ಕೊರತೆಯಾಯಿತು ಲೇಖನಿ ಮೌನವಾದ ಹೊತ್ತು *** ಗಜಲ್-2 ಕನ್ನಡಿಯ ಬಿಂಬ ನೋಡಿ ನಂಬಬೇಡ ಹೋಗಲಿ ಬಿಡುಬಾಹ್ಯ ಸೌಂದರ್ಯ ನೋಡಿ ಹಿಗ್ಗಬೇಡ ಹೋಗಲಿ ಬಿಡು ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸಿ ಬದುಕುತ್ತಿರುವರು ಜನಆಸೆಯಿಂದ ನಂಬಿ ಮೋಸ ಹೋಗಬೇಡ ಹೋಗಲಿ ಬಿಡು ನಿಬಿಡ ಜಾತ್ರೆಯಲ್ಲೂ ಒಂಟಿತನ ಕಾಡುತ್ತಿದೆ ಅದೇಕೋಕೊನೆಯೇ ಇಲ್ಲದೆ ಜೊತೆ ಆಗುವರೆಂದು ಭ್ರಮಿಸಬೇಡ ಹೋಗಲಿ ಬಿಡು ಅವಶ್ಯಕತೆಗೆ ಅಂಟುವರು ಸ್ವಾರ್ಥಿಗಳೆ ಇರುವರು ಎಚ್ಚರಎಲ್ಲರಿಗೂ ನೀ ಮೆಚ್ಚುಗೆ ಎಂದು ಬೀಗಬೇಡ ಹೋಗಲಿ ಬಿಡು ಅರಿತು ಅರಿಯದಂತೆ ಸಾಗಬೇಕಾಗಿದೆ ಬಾಳಯಾನದಲ್ಲಿ “ಮಾಜಾ”ಮೋಸದ ಜಾಲ ಹಬ್ಬಿದೆ ಬೀಳಬೇಡ ಹೋಗಲಿ ಬಿಡು *** ಗಜಲ್-3 ಬಿರು ಬಿಸಿಲಿನಲ್ಲಿ ತಂಗಾಳಿ ಬೀಸಿದೆ ಇನಿಯನ ಸನಿಹಆ ಮಧುರತೆಯು ಮರು ಕಳಿಸದೆ ಇನಿಯನ ಸನಿಹ ಬೆಂಕಿಯ ಉಂಡೆಯ ತಾಪವ ಸಹಿಸುವೆನು ಗಾಲಿಬ್ವಿರಹ ವೇದನೆ ಸಹಿಸಲಾರೆನು ಇಲ್ಲದೆ ಇನಿಯನ ಸನಿಹ ತಿರುಗಿಯೂ ನೋಡದೆ ಖದಮ್ ಅಳಿಸುತ್ತಿವೆಭ್ರಮೆಯ ಇಂತಜಾರಲ್ಲಿ ಬಾರದೆ ಇನಿಯನ ಸನಿಹ ಹೇಳಲೂ ನುಂಗಲು ಆಗದ ಈ ತಡಪಲ್ಲಿ ಸೋಲುತ್ತಿರುವೆಮನ – ದೇಹದ ರಸಿಕತೆಯೇ ಮರೆಸಿದೆ ಇನಿಯನ ಸನಿಹ ದಿಲ್ ಮಿಡಿಯುತ್ತಿದೆ “ಮಾಜಾ” ಳ ಭಾವನೆಗಳಲ್ಲಿಖುದಾನ ಬಕಷ್ ಗೆ ಕಾಯುತ್ತಿದೆ ಇನಿಯನ ಸನಿಹ ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿಯವರ ಗಜಲ್ ಗಳು Read Post »

ಕಾವ್ಯಯಾನ, ಗಝಲ್

ಗಜಲ್

ಕಾವ್ಯ ಸಂಗಾತಿ ಗಜಲ್ ಆಸೀಫಾ ಮದಿರೆ ಬಟ್ಟಲು ತುಂಬಾ ಸುರಿದುಬಿಡು ಸಾಕಿ ಕುಡಿದುಬಿಡುವೆ ಎಲ್ಲಾನಶೆಯೇರುತಿರಲಿ ತಲೆಗೆ ನೋವುಗಳು ಮರೆತುಬಿಡುವೆ ಎಲ್ಲಾ ಘಾಸಿಯಾದ ಹೃದಯಕೆ ಯಾವ ಮುಲಾಮೂ ಮದ್ದಾಗಲಿಲ್ಲತುಸು ಹೊತ್ತಾದರೂ ಅಮಲಿನಲ್ಲಿದ್ದು ನೆನಪುಗಳು ನೂಕಿಬಿಡುವೆ ಎಲ್ಲಾ ಯಾವ ಚೌಕಟ್ಟಿನಲ್ಲಿ ನೆಲೆಸಲಿ ಹೇಳು ಭಾವ ಬರಿದು ಮಾಡಿಮೋಹವೇ ಮೋಸವಾದಾಗ ಒಲವೇಕೆ ಸುಟ್ಟುಬಿಡುವೆ ಎಲ್ಲಾ ಅಂತ್ಯವೋ ಆದಿಯೋ ಇನ್ನೇಕೆ ಅರಿಯಬೇಕು ಅದರ ಮರ್ಮಲೋಕವೇ ಲೆಕ್ಕವಿಲ್ಲದ ಮೇಲೆ ಬಡಿತಗಳು ಬಿಟ್ಟುಬಿಡುವೆ ಎಲ್ಲಾ ಮಧುಶಾಲೆಯ ಮೆಟ್ಟಿಲೇರಲು ಸ್ವರ್ಗವೇ ಸಮೀಪಿಸಿದಂತೆ ನನಗೆಹನಿಹನಿಗಳು ಹೊಕ್ಕುತಿರಲು ಹೃದಯ ಕನಸುಗಳು ಚೆಲ್ಲಿಬಿಡುವೆ ಎಲ್ಲಾ ಯಾವ ಆಕ್ರೋಶ ಆತಂಕವೂ ಆವರಿಸಲಾರದು ನಿನ್ನ ಮುಂದೆರೆಪ್ಪೆ ಮುಚ್ಚಿ ನಿರಾಳವಾಗಿ , ದಿಗಂತಕೆ ಆಸೆಗಳು ಎಸೆದುಬಿಡುವೆ ಎಲ್ಲಾ ಬಂಡಾಯವೆದ್ದ ಬರುಡು ಜೀವನ ಹೊರೆಯಲಾರೆ ಎದೆಯ ಮೇಲೆ ಆಸೀಆತ್ಮದ ಮೇಲೆಳೆದ ಬರೆಗಳು ಗುರುತಿಲ್ಲದೆ ಅಳಿಸಿಬಿಡುವೆ ಎಲ್ಲಾ

ಗಜಲ್ Read Post »

You cannot copy content of this page

Scroll to Top