ಗಜಲ್
ಸತ್ತ ಹೆಣಕ್ಕೆ ಮದುಮಗಳಂತೆ ಶೃಂಗಾರ ಮಾಡಿದಂತೆ
ನೆಲ ಕಚ್ಚಿದ ಸಂಬಂಧ ಉಳಿಸಲಾಗುತ್ತಿಲ್ಲ ಸಾಕಿ
ಗಜಲ್ ರತ್ನರಾಯಮಲ್ಲ ನಿನ್ನಯ ಬಾಹುಗಳಲ್ಲಿ ಇರುಳನ್ನು ಕಳೆಯುತಿರುವೆ ಹಗಲು ಕಾವಲಿಗಿದೆಮಧುಬನದ ರಸಮಂಚವನು ಜೋಡಿಸುತಿರುವೆ ಹಗಲು ಕಾವಲಿಗಿದೆ ಸಂಪ್ರದಾಯದ ಜೋಳಿಗೆಯಲ್ಲಿ ಪ್ರೇಮವನ್ನು ಬಂಧಿಸಿಡಬೇಡ ಚೆಲುವೆನಿನ್ನ ಮಡಿಲಲಿ ಚಂದದ ಚುಕ್ಕಿಗಳನು ಎಣಿಸುತಿರುವೆ ಹಗಲು ಕಾವಲಿಗಿದೆ ಪ್ರೀತಿಯ ರಸಸ್ವಾದ ಮುಗಿಯದ ಪಾಕ ಮಧುಶಾಲೆ ಅಡಗಿದೆ ನಿನ್ನೊಳಗೆನಿನ್ನಯ ಒಲವಿನ ಕೊಳದಲಿ ಈಜು ಕಲಿಯುತಿರುವೆ ಹಗಲು ಕಾವಲಿಗಿದೆ ನಿನ್ನ ಕೈ ಬಳೆಯ ಝೇಂಕಾರಕೆ ಮನದ ಕತ್ತಲ ಕೋಣೆಯು ಹೊಳೆಯುತಿದೆನಿನ್ನಯ ಸಾಂಗತ್ಯದಲಿ ರಸಸವಿ ಅನುಭವಿಸುತಿರುವೆ ಹಗಲು ಕಾವಲಿಗಿದೆ ಅನುರಾಗದ ಕಡಲಲಿ ಮುತ್ತುಗಳನ್ನು ಅರಸುತಿರುವನು ‘ಮಲ್ಲಿ’ ಹುಚ್ಚನಂತೆಮಿದುವಾದ ಶುಚಿ ಗರ್ಭಗುಡಿಯನು ಪ್ರವೇಶಿಸುತಿರುವೆ ಹಗಲು ಕಾವಲಿಗಿದೆ **************************************
ಗಜ಼ಲ್ ಅಮರೇಶ ಎಂಕೆ ಎನ್ನೆದೆಯ ಮರುಭೂಮಿಯಲ್ಲಿ ನಿನ್ನೊಲವಿನ ಓಯಾಸಿಸ್ ಕೇಳುತ್ತಿದ್ದೆನೀ ಮರೆತಿದ್ದರೆ ಮರಳಾಗಿ ಬಿಸಿಲಿಗೆ ಸವೆದು ಹುಡಿಯಾಗಿ ಹೋಗುತ್ತಿದ್ದೆ ಎನ್ನ ಬದುಕಿನಲ್ಲಿ ಎತ್ತರದ ಸ್ಥಾನ ಖಾಲಿ ಇಲ್ಲ ನೀನು ಆವರಿಸಿರುವಾಗನಡೆದ ಹೆಜ್ಜೆ ಗುರುತನು ಅಳಿಸಿ ಹೋಗಿದ್ದರೆ ನೆನಪಾಗಿ ಉಳಿಯುತ್ತಿದ್ದೆ ಬಣ್ಣ ಬಣ್ಣದ ಚಿಟ್ಟೆಯ ಚಿಕ್ಕ ಚಿಕ್ಕ ರೆಕ್ಕೆ ಬಡಿತ ಹೃದಯದ ಬಡಿತವಾಗಿದೆಸಹಿಸದೆ ಕಪ್ಪು ಚುಕ್ಕಿ ಜೀವನದಲ್ಲಿ ಜಾಗ ಕೇಳಿದ್ದರೆ ಕುರೂಪಿ ಆಗುತ್ತಿದ್ದೆ ಆ ಮುಗುಳುನಗುವು ಅಳಿಯದೆ ಉಳಿದುಬಿಟ್ಟಿದೆ ಕಣ್ಣರೆಪ್ಪೆಯ ಒಳಗೆಕನಸಾಗಿ ಕ್ಷಣಮಾತ್ರದಲ್ಲಿ ಕಾಣೆಯಾಗಿದ್ದರೆ ಅಪಜಯ ಹೊಂದುತ್ತಿದ್ದೆ ‘ಅಮರ’ಪ್ರೇಮಕ್ಕೆ ನಿನ್ನೆಸರನ್ನೇ ಮರುನಾಮಕರಣ ಮಾಡಬೇಕೆನಿಸಿದೆನಡೆವ ದಾರಿಗೆ ದೀಪವಾಗದಿದ್ದರೆ ಕತ್ತಲೆಯಲ್ಲಿ ಗುರಿ ಸೇರದೆ ಕೊರಗುತ್ತಿದ್ದೆ ****************************************
ಗಜಲ್ ಪ್ರಭಾವತಿ ಎಸ್ ದೇಸಾಯಿ ಮಾದಕ ಕಣ್ಣ ನೋಟ ಕಂಡು ಚಂದಿರ ಜೋಲಿ ಹೊಡೆಯುತಿದೆಈ ಸೆರಗಿನ ಚೆಲ್ಲಾಟ ನೋಡಿ ಮೋಡವು ತೇಲಾಡುತಿದೆ ಅವಳ ದೇಹ ಮಾಟ ಅರಿತು ಶಿಲ್ಪಿ ಶಿಲೆಯಲಿ ಕಲೆ ಅರಳಿಸಿದಮೈ ತುಂಬಿದ ಮದದ ರಂಗಿಗೆ ಮದರಂಗಿ ಕೆಂಪು ನಾಚಿತಿದೆ ಒಂದಾಗಿ ಬೆಸೆದ ಮಧುರ ಗಳಿಗೆಯು ಜೊತೆಯಾಗಿದೆ ಸದಾವಿಧಿಯ ಆಟ ಬಲ್ಲವರಾರು ಅಳಿಯದ ನೆನಪು ಕಾಡುತಿದೆ ಹರೆಯದ ವಯಸ್ಸು ಅವಳ ಪಡೆಯುವ ಕನಸು ಕಾಣುತ ಕಳೆದೆಆ ಯೌವನದ ದಿನಗಳನ್ನು ಮುಸ್ಸಂಜೆ ಮೆಲುಕು ಹಾಕುತಿದೆ “ಪ್ರಭೆ”ಯನು ಮರೆಯದ ಹೃದಯ ದಹಿಸುತಿದೆ ವಿರಹ ಜ್ವಾಲೆಯಲಿಮನ ಚಕೋರವಾಗಿ ಬೆಳದಿಂಗಳ ಹನಿ ಕುಡಿಯ ಬಯಸುತಿದೆ ******************************
ಕಾಫಿಯಾನ ಗಜಲ್ ಅಮೃತ ಎಂ ಡಿ ಅಪ್ಯಾಯಮಾನ ಒಲವ ಹಂಚುವ ಸರದಿ ನನ್ನದುಅಭೂತಪೂರ್ವ ಸಾನಿಧ್ಯ ನೀಡುವ ಗುಣ ನಿನ್ನದು ತುಸು ತುಂಟಾಟವ ಮರೆಮಾಚು ಲಜ್ಜೆ ಆವರಿಸುತ್ತದೆನಡುವಿನ ಒನಪಿನಲ್ಲಿ ಕಾಡಿಸುವುದ ಯಾರು ಕಲಿಸಿದ್ದು.? ಅಧರದಲ್ಲಿ ಏನು ಮಧು ಬಟ್ಟಲು ಅಡಗಿ ಕುಳಿತಿದ್ಯ..?ಚುಂಬಿಸುವ ಪರಿಗೆ ಮೊಗವೆಲ್ಲ ಕೆಂಪೇರಿ ನಲಿಯುವುದು ಶರಾಬಿನ ರಸವ ಹೀರಿದಂತೆ ಒಷ್ಠದಲ್ಲಿಯೂ ಇರುವುದ..?ಪಾಪ ಮೊಗ್ಗಿನಂತೆ ಮೃದು ಆಕೆ, ಸೊರಗಿ ಬಿಟ್ಟಾದು. ಅಮ್ಮು ಈ ಹೈದನ್ಯಾಕೋ ಬಿಡುಗಡೆ ನೀಡುವಂತಿಲ್ಲಮನವು ಅವನ ಆಲಿಂಗನದಲ್ಲಿ ನಕ್ಕು ಕುಣಿಯುವುದು.. ****************************************************
ಗಜಲ್ ಸಿದ್ಧರಾಮ ಕೂಡ್ಲಿಗಿ ಎದೆಯೊಳಗೆ ನೂರು ಮುಳ್ಳುಗಳಿದ್ದರು ಮೊಗದಲ್ಲಿ ನಗೆಹೂ ಸುರಿದವಳು ನೀನಲ್ಲವೆ ಮನದೊಳಗೆ ನೂರು ಕಂಬನಿಗಳಿದ್ದರೂ ಕಣ್ಣಲ್ಲಿ ಬೆಳದಿಂಗಳ ಚೆಲ್ಲಿದವಳು ನೀನಲ್ಲವೆ ಏನೊಂದನೂ ಬಯಸದೆ ಬಂಡೆಗಲ್ಲಿನಲೂ ಬದುಕುವ ಛಲ ಹೊತ್ತು ಹಬ್ಬುತ್ತ ನಡೆದೆ ನಿಂತ ನೆಲದೊಳಗೆ ಬೇರಿಳಿಸುತ್ತಲೇ ಬೆಳಕಿನ ಪಥದಲ್ಲಿ ಹೆಜ್ಜೆ ಊರಿದವಳು ನೀನಲ್ಲವೆ ಸಾಗರದಷ್ಟು ಪ್ರೀತಿಯಿದ್ದರೂ ಭೋರ್ಗರೆಯುವುದನೇ ಮರೆತು ಹೊಯ್ದಾಡುತಲಿದ್ದೆ ಮುತ್ತು ರತ್ನ ಹವಳಗಳ ಒಡಲಲಿ ಹೊತ್ತು ಜಲಧಿಯ ಮುಸುಕ ಹೊದ್ದವಳು ನೀನಲ್ಲವೆ ಸುಂದರತೆ ಎಂಬುದೂ ಸೋತು ನಿನ್ನೆದುರು ಮಂಡಿಯೂರಿ ತನ್ನಸ್ತಿತ್ವಕೇ ನರಳಾಡಿತು ಆಗಸದಷ್ಟು ಚೆಲುವಿನ ಅರಿತಷ್ಟೂ ಆಳದ ವಿಸ್ಮಯ ಭಾವಗಳ ಪಡೆದವಳು ನೀನಲ್ಲವೆ ಸಿದ್ಧನಿಗೆ ಪ್ರೇಮದ ಹೃದಯವಾದರೂ ಎಲ್ಲಿತ್ತು ಅದು ಖಾಲಿ ಮಧುಬಟ್ಟಲಾಗಿತ್ತು ಒಲವೆಂಬ ಮತ್ತನೇರಿಸಿ ಪ್ರತಿ ಕನಸಿನಲೂ ನೂರು ನವಿಲುಗಳ ಕುಣಿಸಿದವಳು ನೀನಲ್ಲವೆ ***********************************************
ಕಾಫಿಯಾನ ಗಝಲ್ ಜಬೀವುಲ್ಲಾ ಎಂ. ಅಸದ್ ಇರುಳಲ್ಲಿ ಹಚ್ಚಿಟ್ಟ ದೀಪಗಳ ಬೆಳಗು ಹಗಲಲ್ಲಿ ಮಾಯವಾಗಿದೆಹೃದಯದಲ್ಲಿ ಹುದುಗಿದ್ದ ಪ್ರೇಮದ ಬೀಜ ಈಗ ಮೊಳಕೆಯಾಗಿದೆ ಕಾಣದ ಭರವಸೆಯ ಕರಪಿಡಿದು ನಡೆದಿರುವೆ ಸುಮ್ಮನೆ ಎಲ್ಲಿಗೋನೆನಪಿನಾಗಸ ಗುಡುಗಿ ಧೋಗುಟ್ಟಿ ಸುರಿದು ಮನಸ್ಸು ಹಸಿಯಾಗಿದೆ ಹೃದಯದ ಹಾದಿಯಲ್ಲಿದೆ ನಿನ್ನ ಹೆಜ್ಜೆ ಗುರುತುಗಳ ಕಾಡುವ ಸದ್ದುಮದ್ದಿಲ್ಲದ ಮನದ ನೋವಿಗೆ ಕಣ್ಣ ಕಂಬನಿ ಸಾಂತ್ವನವಾಗಿದೆ ನಶ್ವರದ ಬಾಳಿದು ಸಾರ್ಥಕವಾಗಿಸಬೇಕು ಶಾಶ್ವತೆಯ ಅರಸದಿರುಮುಂಜಾವಿಗೆ ಅರಳಿ ಘಮಘಮಿಸಿದ ಸುಮ ಸಂಜೆಗೆ ಸಾವಾಗಿದೆ ಕಾಣದ ಕಿಚ್ಚು ಹುಚ್ಚೆದ್ದು ಹಬ್ಬಿ ಸುಡುತ್ತಿಹುದು ಸಂಬಂಧಗಳನ್ನುಒಡಲ ಕಾವು ಜೀವದ ಹಾಡಾಗಿ ಕಲ್ಲು ಕರಗುವ ಸಮಯವಾಗಿದೆ ಚಿಗುರುವ ಲತೆಗೆ ಬಳಸಿ ಹಬ್ಬಲು ಮರವೊಂದು ಅಸರೆ ಬೇಕಿದೆಯಮುನಲೆಗಳ ಮೇಲೆ ನಾವೆಯೊಂದು ತೇಲುವ ಶವವಾಗಿದೆ ನನ್ನ ನಿನ್ನ ನಡುವಿನ ಮೌನ ಅಲಾಪಗೊಂಡು ಕಡಲಾಗಿ ಮೊರೆಯುತ್ತಿದೆಅಸದ್ ಹೆಪ್ಪುಗಟ್ಟಿದ ನೋವು ತಾಜ್ ಮಹಾಲಿನ ದಟ್ಟ ನೆರಳಾಗಿದೆ
You cannot copy content of this page