ಗಜಲ್
ಪರಪಂಚದ ಕಂಬನಿಗೆ ನನ ಹೃದಯವೆ ತಂಗುದಾಣವಾಗಿದೆ
ನೀನೊಮ್ಮೆ ಆಲಂಗಿಸಿ ಬಿಸಿಯುಸಿರಿನಲಿ ಸಂತೈಸಬಾರದೆ..
ಗಝಲ್ ಗಝಲ್ ಕೆ.ಸುನಂದಾ. ಸುಂದರ ವದನಕೆ ಕುಂದಾಗುವ ಬಣ್ಣ ಬಳಿಯಬೇಡ ಗೆಳೆಯಅದೆಷ್ಟೋ ಅಂದದ ಕನಸುಗಳಿಗೆ ಕಲ್ಲು ಹೊಡೆಯಬೇಡ ಗೆಳೆಯ ಸಾಧಿಸಬೇಕೆಂಬ ಹಂಬಲದಿ ಆಸರೆಯ ಎಳೆ ಹಿಡಿದಿರುವೆನುಕಷ್ಟಗಳಮೆಟ್ಟಿ ಕಟ್ಟಿರುವ ಭಾವಗಳ ಭವನಕೆ ಕಿಚ್ಚಾಗಬೇಡ ಗೆಳೆಯ ಹೆಣ್ಮನ ಮೃದುವೆಂದು ಮಧುರವಾಗಿ ನುಡಿದುಮೋಸ ಮಾಡಿದಿರು ಹೃದಯ ಗೆದ್ದೆನೆಂಬ ಹಮ್ಮಿಂದ ಹದವಾದಮೇಲೆ ಒದೆಯಬೇಡ ಗೆಳೆಯ ಮುನಿಯುವ ಮೊದಲು ಒಲಿದು ಬರುವಳು ಹೆಣ್ಣು ಘಾಸಿಗೊಳಿಸದಿರುಕೂಸಿನಂತಾಕೆ ಪೊರೆದಿಹಳು ನಿನ್ನಾಸೆಗಳನು ಮನ ನೋಯಿಸಬೇಡ ಗೆಳೆಯ ತುಸು ಕಣ್ಣಲ್ಲಿ ಕಣ್ಣಾಗಿ ನೋಡು ಮಮತೆ ಹರಿದೀತು ನಿನ್ನೊಡಲೊಳುನಂದೆಯ ಆನಂದಕೆ ಮಂದಸ್ಮಿತ ಸಾಕು ನಕ್ಕು ಹಂಗಿಸಬೇಡ ಗೆಳೆಯ *********************************** ಕೆ.ಸುನಂದಾ
ಗಜಲ್ ರತ್ನರಾಯಮಲ್ಲ ಅಳಬೇಕು ಎಂದಾಗಲೆಲ್ಲ ಕನ್ನಡಿಯ ಮುಂದೆ ನಿಲ್ಲುವೆನಗಬೇಕು ಅನಿಸಿದಾಗಲೆಲ್ಲ ಸಮಾಧಿಯ ಮುಂದೆ ನಿಲ್ಲುವೆ ಎಲ್ಲರೂ ಬೇಕೆನಿಸಿದಾಗಲೆ ಯಾರೂ ಬೇಡವೆನಿಸುತ್ತಾರೆಶಾಂತಿ ಬಯಸಿದಾಗಲೆಲ್ಲ ಮಸಂಟಿಗೆಯ ಮುಂದೆ ನಿಲ್ಲುವೆ ಬದುಕು ಆಟವಾಡುತಿದೆ ಹೆಜ್ಜೆ ಹೆಜ್ಜೆಗೂ ನನ್ನ ಜೊತೆಯಲ್ಲಿಬಾಳು ಬೇಡವೆನಿಸಿದಾಗಲೆಲ್ಲ ಗೋರಿಯ ಮುಂದೆ ನಿಲ್ಲುವೆ ಉಸಿರಾಡಲು ನನ್ನ ಗಾಳಿಗಾಗಿ ನಾನು ಹುಡುಕುತಿರುವೆ ಇಲ್ಲಿಪ್ರೀತಿ ಬೇಕೆನಿಸಿದಾಗಲೆಲ್ಲ ನಿನ್ನ ಮನೆಯ ಮುಂದೆ ನಿಲ್ಲುವೆ ಜೀವನವು ತೂಗುಯ್ಯಾಲೆಯಲ್ಲಿ ಕಣ್ಣಾಮುಚ್ಚಾಲೆ ಆಡುತಿದೆಸಾಯಬೇಕು ಎನಿಸಿದಾಗಲೆಲ್ಲ ‘ಮಲ್ಲಿ’ಯ ಮುಂದೆ ನಿಲ್ಲುವೆ ************************************
You cannot copy content of this page