ಅಮ್ಮನಿಗೊಂದು ಗಜಲ್
ಅಮ್ಮನಿಗೊಂದು ಗಜಲ್ ಸುಜಾತಾ ರವೀಶ್ ಅಣುರೂಪದಲಿಂದ ಅಸುವ ತುಂಬಿ ಪೊರೆದ ಚೈತನ್ಯಧಾಯಿ ಅಮ್ಮ ಭ್ರೂಣವಾದಾಗಿನಿಂದ ಕಸುವ ನೀಡಿ ಸಾಕಿದ ಜೀವನಧಾಯಿ ಅಮ್ಮ ನವಮಾಸಗಳು ಒಡಲಲ್ಲಿ ಕಂದನ ಭಾರ ಹೊತ್ತು ಸಲಹಿದೆಯಲ್ಲಮ್ಮ ತನ್ನ ಜೀವವನೆ ಒತ್ತೆಯಿಟ್ಟು ಭುವಿಗೆ ತಂದ ಮಮತಾಮಯಿ ಅಮ್ಮ ಅಮೃತಸದೃಶ ಎದೆ ಹಾಲೂಡಿಸಿ ಶಕ್ತಿ ತುಂಬಿಸಿದೆಯಲ್ಲಮ್ಮ ಅನೃತವಾಡದೆ ಬದುಕು ನಡೆಸ ಕಲಿಸಿದ ವಾತ್ಸಲ್ಯಮಯಿ ಅಮ್ಮ ಕೆಟ್ಟ ಮಕ್ಕಳಿರಬಹುದು ಎಂದೂ ಕುಮಾತೆಯರು ಲೋಕದಲ್ಲುಂಟೇನಮ್ಮ? ಸಿಟ್ಟು ಮಾಡಿಕೊಳ್ಳದೇ ಯಶಸ್ಸಿನ ದಾರಿ ತೋರಿದ ಸಹನಾಮಯಿ ಅಮ್ಮ ವಿಜಯ ಪಥದಿ ಸಾಧನೆಯ ಕಾಣಲು ದಾರಿದೀಪ ನೀನೇನಮ್ಮ ಸುಜಿಯ ರಥದ ಸಾರಥಿಯಾಗಿ ಸದಾ ಮುಂದಿರುವ ಆದರ್ಶಮಯಿ ಅಮ್ಮ *********************************









