ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಂಗಳಕೆ ಇಟ್ಟ ಕಾಲು ಅಂಗಳಕೆ ಇಡಲು ಹಿಂಜರಿಯುತಿದೆಒಲವ ಕೊಟ್ಟ ಹೆಗಲಿಗೆ ಇಂದು ಹೆಗಲು ಕೊಡಲು ಹಿಂಜರಿಯುತಿದೆ ಅನುರಾಗದಲಿ ಹೆತ್ತು ಹೊತ್ತ ಉಸಿರುಗಳು ಅನಾಥವಾಗಿವೆಒಡಲಲಿ ಹೊರಳಾಡಿದ ಜೀವ ಮಣ್ಣು ಹಾಕಲು ಹಿಂಜರಿಯುತಿದೆ ಮುದ್ದಾಡಿ ಚಂದಿರ ತೋರಿಸಿದ ಲಾಲಿ ಹಾಡು ಮೂಕವಾಗಿದೆಕೈತುತ್ತು ಉಣಿಸಿದ ಕೈಗೆ ಮುತ್ತು ನೀಡಲು ಹಿಂಜರಿಯುತಿದೆ ಕುಸುಮಗಳು ನಲಿಯುತಿದ್ದವು ಸೋದರ ಜೊತೆ ಈಗ ಮಂಕಾಗಿವೆದುಂಬಿಯು ಬಿರಿದ ಸುಮದ ಮಕರಂದ ಹೀರಲು ಹಿಂಜರಿಯುತಿದೆ ವಿಶ್ವವೇ ಮೌನವಾಗಿದೆ ಇದೆಂತಹ ದುರಿತಕಾಲ “ಪ್ರಭೆ”ಬೌದ್ಧ ಪೌರ್ಣಮಿ ಕಿರಣಕೆ ಸಾಗರ ಉಕ್ಕಲು ಹಿಂಜರಿಯುತಿದೆ **********************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಬಾನಲಿ ಹಾರುವ ಪತಂಗದ ನೂಲು ಕೆಳಗಿಟ್ಟಿರುವೆ ಶಿವಾತೊಗಲು ಗೊಂಬೆಗಳ ಆಡಿಸುವ ಸೂತ್ರ ಮೇಲಿಟ್ಟಿರುವೆ ಶಿವಾ ಕುರುಡು ಕಾಂಚಾಣವು ತಿಪ್ಪೆಯಲಿ ಬಿದ್ದು ಒದ್ದಾಡುತಿದೆಹಸಿವು ಇಂಗಿಸುವ ಆ ಶಕ್ತಿ ನೇಗಿಲಿಗೆ ಕೊಟ್ಟಿರುವೆ ಶಿವಾ ಸಂತೆಯಲಿ ಜೀವಾನಿಲ ಸಿಗದೆ ಪ್ರಾಣಪಕ್ಷಿ ಬಿಕ್ಕುತಿದೆಪ್ರಕೃತಿಯ ಒಡಲಲಿ ಪ್ರಾಣವಾಯು ಮುಚ್ಚಿಟ್ಟಿರುವೆ ಶಿವಾ ಅವನಿಯ ಹುಳು ಹೆಮ್ಮೆಯಲಿ ಶಶಿ ಅಂಗಳದಲಿ ತೆವಳುತಿದೆಇಳೆಯ ನಂದನವನ ನಾಶ ಮಾಡಿ ಮಸಣ ಕಟ್ಟಿರುವೆ ಶಿವಾ ಜಗದ ಸೃಷ್ಟಿಯ ಸೊಬಗು ಕಾಣದೆ “ಪ್ರಭೆ” ಯ ಮನ ನರಳುತಿದೆಮುಗ್ಧ ಜೀವಿಗಳ ಬದುಕಿಗೆ ಕಿಚ್ಚನ್ನು ಇಟ್ಟಿರುವೆ ಶಿವಾ *********************

ಗಜಲ್ Read Post »

You cannot copy content of this page

Scroll to Top