ಗಜಲ್ ಜುಗಲ್ ಬಂದಿ
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್-18
ಗಜಲ್ ಅರುಣಾ ನರೇಂದ್ರ ನಿನ್ನ ಕಿರು ನಗೆ ನನ್ನೊಂದಿಗೆ ಮುನಿಸಿಕೊಂಡಾಗ ನಾ ಯಾರಿಗೆ ಹೇಳಲಿತೋಳ ತಲೆದಿಂಬು ಸರಿಸಿ ಹೊರಳಿ ಮಲಗಿಕೊಂಡಾಗ ನಾ ಯಾರಿಗೆ ಹೇಳಲಿ ಮುತ್ತಿನಲಿ ಸಿಂಗರಿಸಿ ಮುಖ ನೋಡಿ ಹಿಗ್ಗುತ್ತಿದ್ದವನು ನೀನುಪ್ರೀತಿಯ ಕರೆ ಧ್ವನಿ ಕಳೆದುಕೊಂಡಾಗ ನಾ ಯಾರಿಗೆ ಹೇಳಲಿ ಹೂವಾಗುವ ಮೊಗ್ಗಿನ ನಿದ್ರೆಯಲಿ ಬರಿ ಚಿಟ್ಟೆಯದೇ ಕನಸುಸತ್ಯ ಮುಸುಕು ಹಾಕಿಕೊಂಡಾಗ ನಾ ಯಾರಿಗೆ ಹೇಳಲಿ ನದಿಯಾಗಿ ನಿನ್ನೆದೆಯೊಳಗೆ ಹರಿದ ಧನ್ಯತೆ ಇದೆ ಸಾಜನ್ಬೆಳಕನೆ ಕುಡಿದು ಮತ್ತೇರಿಸಿಕೊಂಡಾಗ ನಾ ಯಾರಿಗೆ ಹೇಳಲಿ ಮತ್ತೆ ಮತ್ತೆ ಸೋಲುತ್ತಾಳೆ ಅರುಣಾ ಸಹನೆ ಪರಕಿಸುವ ನಿನ್ನ ಸಾಹಸಕ್ಕೆಒಲವು ಮಿಡಿವ ಹೃದಯದಿ ಸೂತಕ ಆವರಿಸಿಕೊಂಡಾಗ ಯಾರಿಗೆ ಹೇಳಲಿ
ಗಜಲ್ ಡಾ.ಯ.ಮಾ.ಯಾಕೊಳ್ಳಿ ನನ್ನ ಮಾತುಗಳು ಇಲ್ಲಿ ಅರಿಯದೆ ಹೊಗುತ್ತಿರುವದಕ್ಕೆ ವಿಷಾದವಿದೆಪದದೊಳಗಿನ ಅರ್ಥವೇ ಅಪಾರ್ಥವಾಗಿ ತಿರುಗಿ ಬೀಳುತ್ತಿರುವದಕ್ಕೆ ವಿಷಾದವಿದೆ ಪುಸ್ತಕದ ಸಾಲುಗಳು ವೇದಿಕೆಯ ತುಣುಕುಗಳು ವ್ಯರ್ಥ ಹರಡುತ್ತಿವೆಯಾರ ಎದೆಗೂ ತಟ್ಟದೆ ಅಂತರವುಂಟಾದುದಕ್ಕೆ ವಿಷಾದವಿದೆ ಕಾಲಕಾಲಕ್ಕೂ ಜನಿಸಿದ ಸಂತ ಮಹಂತರ ಜೀವ ತತ್ವಗಾಳಿಗೆ ತೂರಿವೆತೋರಿಕೆಯ ಆಚರಣೆಗಳು ಅವರವರ ಪ್ರತಿಷ್ಟೆಯೆನಿಸಿದ್ದಕ್ಕೆ ವಿಷಾದವಿದೆ ಎದೆಯ ದನಿ ಯಾರಿಗೂ ಕೇಳದೆ ಗಡಚಿಕ್ಕುವ ಅಬ್ಬರದಲ್ಲಿ ಅನಾಥವಾಗಿದೆಕೋಗಿಲೆಯ ಮಧುರ ಹಾಡು ಮೆರವಣಿಗೆಯಲ್ಲಿ ಮೌನವಾದುದಕ್ಕೆ ವಿಷಾದವಿದೆ ಸಾವಿರ ಸಾವಿರ ಪುಸ್ತಕಗಳು ನಾಗೊಂದಿಯ ಮೇಲೆ ಮೌನವಾಗಿ ಅಳುತ್ತಿವೆಯಯಾ ನಿನ್ನ ಲಾಲಿಹಾಡು ನೊಂದ ಎದೆಗೆ ಸಾಂತ್ವನ ನೀಡ ದುದಕ್ಕೆ ವಿಷಾದವಿದೆ
ಗಝಲ್ ಶಂಕರಾನಂದ ಹೆಬ್ಬಾಳ ಗುಡಿಯೊಳಗೆ ಕಲ್ಲಾಗಿರುವೆ ದೇವಬತ್ತಳಿಕೆಯಲಿ ಬಿಲ್ಲಾಗಿರುವೆ ದೇವ ಅರಿವಿರದ ಜನ್ಮಕ್ಕೆ ಅನುಭವ ತಂದೆಹಸಿರ ಸೂಸುವ ಹುಲ್ಲಾಗಿರುವೆ ದೇವ ಆತ್ಮಸ್ತೈರ್ಯವ ತುಂಬುತಿರುವೆಯಲ್ಲಅಳುವ ಕಂದನ ಜೊಲ್ಲಾಗಿರುವೆ ದೇವ ಮಡುವಿನ ಮಂಡೂಕವ ಸಲಹಿರುವೆಹಸಿದ ಉದರಕೆ ನೆಲ್ಲಾಗಿರುವೆ ದೇವ ಕಷ್ಟಕಾಲದಿ ಕೈಹಿಡಿಯುವ ಮೃಡಹರನೇಅಭಿನವ ಕವಿಗೆ ಸೊಲ್ಲಾಗಿರುವೆ ದೇವ
ಕಾಮನೆಯ ಕಡಲಿನ ಭೋರ್ಗರೆತ ನಿಲ್ಲಿಸಲಾಗದು ಎಂಬುದೇನೋ ಸರಿ
ಒಂಟಿಯಾಗಿ ಮನವ ಭಾವದಲೆಯಲೇ ತೇಲಾಡಿಸಿ ನೀ ತಪ್ಪುಮಾಡಿದೆ ಮಿತ್ರ
You cannot copy content of this page