ಗಜಲ್
ಲಕ್ಷ್ಮೀ ನಾರಾಯಣ ಕೆ ವಾಣಿಗರಹಳ್ಳಿರವರ ಹೊಸ ಗಜಲ್
ಕಾವ್ಯ ಸಂಗಾತಿ ಸಂಕ್ರಾಂತಿ ಗಜಲ್ ಬರುವ ಕಷ್ಟಗಳು ಸ್ವೀಕರಿಸು ಬದುಕು ಸಂಕ್ರಾಂತಿ |ಕನಸುಗಳಿಗೆ ಬಣ್ಣ ತುಂಬಿಸು ಬದುಕು ಸಂಕ್ರಾಂತಿ || ನಿನ್ನಿಷ್ಟಕ್ಕೆ ಆಗಾಗ ಖುಷಿಪಡು ಕಾಯಕ ಪ್ರೀತಿಸು |ಕಳೆದ ದಿನಗಳಲಿ ಸಂಚರಿಸು ಬದುಕು ಸಂಕ್ರಾಂತಿ || ಸಿಹಿ ಕಹಿ ಬಾಳಿನಲ್ಲಿ ಎಳ್ಳು ಹಂಚಿದ ರೊಟ್ಟಿ ಹಂಗ |ಹೊಳಿಗೆ ಹೂರಣ ಸುಖಿಸು ಬದುಕು ಸಂಕ್ರಾಂತಿ || ನಲ್ಲೆಯ ಮಾತು ಜೀವ ಭಾವ ಬೆರತ ಬೇವು ಬೆಲ್ಲ |ಕಲ್ಲರಳಿ ಹೂವಾಗಿ ಪ್ರೇಮಿಸು ಬದುಕು ಸಂಕ್ರಾಂತಿ || ‘ಮುತ್ತು’ ಜಗದ ನೆಲಕ್ಕೂ ನಿನ್ನಾಳುವ ಹಕ್ಕಿದೆ |ಈ ಮಣ್ಣ ಋಣ ತೀರಿಸು ಬದುಕು ಸಂಕ್ರಾಂತಿ || ಮುತ್ತು ಬಳ್ಳಾ ಕಮತಪುರ
ಗಜಲ್ ನೂರಅಹ್ಮದ ನಾಗನೂರ ಬೆಳ್ಳಿಯ ಮಂಜಿಗೆ ಚಿನ್ನದ ಜ್ವಾಲೆಗಳಿಂದ ವಿದಾಯ ಹೇಳುತ್ತೇನೆಗೋದಿಯ ಕಿವಿಯೋಲೆಗಳಿಂದ ಗದ್ದೆಯಲ್ಲಿ ಸಿಂಗರಿಸಿಕೊಳ್ಳುತ್ತೇನೆ ಮನದಲಿ ಶಾಂತಿ ನೆಲೆಸಿದೆ ಆಕಾಶದಲಿ ಸಂಕ್ರಾತಿ ಸಂಭ್ರಮಿಸಿದೆಮೂಡಗಾಳಿ ಹೊರಟಿದೆ ಗಾಳಿಪಟದೊಂದಿಗೆ ಹಕ್ಕಿ ಹಾರಿಸುತ್ತೇನೆ ಸೂರ್ಯನು ಉತ್ತರರಾಣಿ ಪೊಂಗಲ್ ಕಿಚಡಿ ದಕ್ಷಿಣಾದಿ ಭರಣಿನೆಲ ಜಲದಲಿ ಹರಿದು ಎಳ್ಳುಬೆಲ್ಲ ಹಸಿರಿನ ಕಾಂತಿ ತಿನಿಸುತ್ತೇನೆ ಹೂವುಗಳೊಂದಿಗಿನ ಗೆಳೆತನವು ಮುಳ್ಳುಗಳಿಗೆ ಶಿಕ್ಷೆಯಾಗಿಸಿದೆಭರವಸೆಯ ದೀಪವು ಬರುತಿರುವುದನ್ನು ನಾನು ನೋಡುತ್ತೇನೆ ದುಃಖದ ಹೃದಯಕೆ ಸುಖದೌಷಧ ಹೇಗಾದರೂ ತರಿಸಬಹುದುಬಿಸಿಲ ಹವೆಯಲ್ಲಿಯೂ ತಂಪ ಹವಾಗುಣದ ಸುಗ್ಗಿ ತರಿಸುತ್ತೇನೆ ನೂರ್ ಹೊಸಉತ್ಸಾಹ ತಂದಿತು ದೀಪೋತ್ಸವದ ಬೆಳಕು ಬೆಳಗಲಿಮೋಡವು ಹಾರಾಡುತಿವೆ ಸೌಂದರ್ಯದ ರಶ್ಮಿಗಳನು ತರುತ್ತೇನೆ
You cannot copy content of this page