ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕವಿತೆ ಕಾರ್ನರ್

ಕವಿತೆ ಕಾರ್ನರ್

ಕಣ್ನೀರಾಗುತ್ತೇನೆ! ಕಗ್ಗತ್ತಲ ಇರುಳೊಳಗೆ ಬೀದಿ ದೀಪಗಳ ನೆರಳುಗಳಾಟದೊಳಗೆ ಮುಸುಕೊದ್ದು ಮಲಗಿದ ನಿನ್ನ ಶಹರದೊಳಗೆ ಅಡ್ಡಾಡುತ್ತೇನೆ ನಿಶಾಚರನಂತೆ ಹಗಲು ಕಂಡ ಬೀದಿಯ ಹುಡುಕಿ ಇರುಳು ಅಲೆಯುತ್ತೇನೆ ಎತ್ತರದ ನಿನ್ನ ಮನೆಯ ಮಹಡಿಯಮೇಲೆ ಕವಿದ ಕಪ್ಪು ಮೋಡಗಳಾಚೆ ಇಣುಕುತ್ತಿರುವ ಚಂದ್ರನ ನಿದ್ದೆಗಣ್ಣಿನ ನಗುವಿಗೆ ಹೋಲಿಸಿ ನಿನ್ನ ಮಂದಹಾಸವ ನಾಚುತ್ತೇನೆ! ಮೂಡಿದ ಸೂರ್ಯನ ಎಳೆ ಕಿರಣಗಳು ನಿನ್ನಂಗಳದಲ್ಲಿ ಚಿತ್ತಾರ ಬಿಡಿಸುವ ದಿವ್ಯ ಮುಂಜಾವದಲ್ಲಿ ಮೈಮುರಿಯುತ್ತ ಹೊರಬಂದ ನಿನ್ನ ಮುದುಡಿದ ಸೀರೆಯ ನಿರಿಗೆಗಳಲ್ಲಿ ಅಡಗಿರಬಹದಾದ ಹಿಂದಿನ ರಾತ್ರಿಯ ಕನಸುಗಳಲ್ಲಿ ನನ್ನ  ಹುಡುಕುತ್ತೇನೆ! ಕಾಣದ ಕನಸುಗಳ ನೆನೆದು ಕಣ್ನೀರಾಗುತ್ತೇನೆ ************ ಕು.ಸ.ಮಧುಸೂದನ

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಆಡಿದ ಮಾತುಗಳೆಲ್ಲ ವಚನಗಳೇನಲ್ಲ.. ಸ್ವರ್ಗದ ಕುರುಹಿಲ್ಲವಿಲ್ಲಿ! ಆಡಿದ ಮಾತುಗಳೆಲ್ಲ ವಚನಗಳೇನಲ್ಲ ತಿರುಕನಿಗೊ ಆಯ್ಕೆಯ ಅವಕಾಶವಿರುವುದಿಲ್ಲ ರಕ್ತ ಒಸರುವ ಗತದ ಗಾಯ ಮುಲಾಮುಗಳಿಗೆಲ್ಲ ಮಾಯುವುದಿಲ್ಲ ಬಾಂಡಲಿಯ ಕುದಿಯುವ ಎಣ್ಣೆಯೊಳಗೆ ಬೇಯಿಸುವ ನರಕದ ಭಯ ಯಾರಿಗಿದೆ ಇಲ್ಲೀಗ? ಸ್ವರ್ಗದ ಕುರುಹು ತೋರಿದರೆ ಮಾತ್ರ ನಂಬುವವರುಂಟಿಲ್ಲಿ ನರಕವ ದೇಹವೇ ದೇಗುಲವೆಂಬುದು ನೆನಪಾದೊಡನೆ ದೂರವಾಗಿ ಮೈಥುನದಾಸೆ ಮುಷ್ಠಿಮೈಥುನದ ಹೊರದಾರಿ ಕಂಡುಕೊಂಡ ತರುಣರ ಗುಂಪುಗಳಿಂದ ದೂರನಿಂತ ತರುಣಿಯರ ತೊಡೆಗಳಿಂದೊಸರುವ ರಕ್ತದಲಿ ಅದೆಷ್ಟು ಜೀವಮೂಲಗಳು ವ್ಯರ್ಥವಾದವೆಂಬುದನ್ನು ಲೆಕ್ಕವಿಡುವ ವಿಜ್ಞಾನದ ಪುಸ್ತಕಗಳ ಮಸ್ತಕಕ್ಕಿಳಿಸದೆ ಸುಮ್ಮನೆ ನಡೆದು ಬಿಡು ಅಲೆಮಾರಿಯಂತೆ ಇಲ್ಲಿ ಸಿಗಲಾರದ್ದು ನಿನಗಿನ್ನೆಲ್ಲಯೂ ಸಿಗಲಾರದು ********* ಕು.ಸ.ಮದುಸೂದನ್

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಸರಳುಗಳು ಸರಳುಗಳು ನನ್ನತ್ತ ತೂರಿಬಂದ ಕಲ್ಲುಗಳನ್ನುಹೂ ಮಾಡಿಕೊಳ್ಳುವ ಕಲೆ ಸಿದ್ದಿಸಿರಲಿಲ್ಲ ನನಗೆ ಹಲವು ಹಣೆಗೆ ಬಡಿದವು ಕೆಲವು ಎದೆಗೆ ಬಡಿದವುಒಟ್ಟಿನಲ್ಲಿ ರಕ್ತಸಿಕ್ತವಾಯಿತು ಮೈ ತಂದು ಕೂಡಿ ಹಾಕಿದ ದವಾಖಾನೆಯೇಕಾರಾಗೃಹವಾಗಿಬಿಸಿಲಿಗೆ ಸರಳುಗಳು ಹೆದರಿಸುವ ಕಪ್ಪು ನೆರಳುಗಳಾಗಿನನ್ನ ಹಗಲುಗಳು ನರಕಸದೃಶವಾದವು ಇರುಳುಗಳು ಬಂದವೊ ಹೋದವೊ ಅರಿವಾಗದೆಸುಮ್ಮನೇ ಕೂರುತ್ತೇನೆ ದ್ಯಾನಸ್ಥನಾಗಿ ಪದ್ಮಾಸನ ಹಾಕಿ ಯಾವತ್ತಾದರೂ ಒಂದು ದಿನ ಸರಳುಗಳು ಇಲ್ಲವಾಗಬಹುದುಸೆರೆಮನೆಯಂತಹ ದವಾಖಾನೆ ಬಯಲೂ ಅಗಬಹುದು ಅಂತಹದೊಂದು ದಿನನಾನು ಮತ್ತೆ ಬರುತ್ತೆನೆ ನಿನ್ನ ಕಾಣಲುಹಳೆಯ ಕನಸುಗಳನು ನನಸಾಗಿಸಲುಕಾಯುವೆಯಾದರೆ ಅಲ್ಲಿಯವರೆಗೂಸಹಿಸಬಲ್ಲೆ ಸರಳುಗಳ ಹಿಂದಿನ ಯಾತನೆಗಳ ಅಷ್ಟೂ ಕ್ಷಣಗಳನ್ನುಹಲ್ಲು ಕಚ್ಚಿ!ನಿನಗಾಗಿ ಮಾತ್ರ—- ******** ಕು.ಸ.ಮದುಸೂದನ್

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಬದುಕುವೆ…… ಆ ಮುಂಜಾನೆ ನನಗಿನ್ನೂ ನೆನಪಿದೆಎಳೆ ಗರಿಕೆಯ ಮೇಲೆ ಕೂತ ಇಬ್ಬನಿಯಂತೆ ನೀನಿದ್ದೆ ನನ್ನೆದುರು! ಆ ಮದ್ಯಾಹ್ನ ನನಗಿನ್ನೂ ನೆನಪಿದೆಊರಾಚೆಯ ಚಿತಾಗಾರದಲ್ಲಿ ಬೇಯುತ್ತಿದ್ದ ಹೆಣದಂತೆ ನೆನಪಾಗಿದ್ದೆ ನನ್ನೊಳಗೆ! ಆ ಸಂಜೆ ನನಗಿನ್ನೂ ನೆನಪಿದೆದೂಳು ಬಿದ್ದ ಕಣ್ಣೊಳಗೆ ಬಾಣಂತಿ ಎದೆಹಾಲ ಹನಿಸಿದಂತಿದ್ದೆ ನನ್ನುಸಿರೊಳಗೆ! ಈಗೆಲ್ಲ ಮರೆತು ಹೋಗಿದೆನೀನಿದ್ದದ್ದುನೀ ಹೋದದ್ದು! ನಿಜ ಬಿಡು ಸುಳ್ಳು ಹೇಳಲೂ ಮಿತಿಯಿರಬೇಕುಎನ್ನುವ ಮಾತೇ ಮರೆತು ಹೋಗಿದೆ——! ನೀನಿರುವೆ ನೀನಿಲ್ಲಗಳ ನಡುವೆಬದುಕಿದೆ ಬದುಕಿರುವೆ ಮುಂದೆಯೂ ಬದುಕವೆ! ***** ಕು.ಸ.ಮಧುಸೂದನ್

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಇರುಳ ಹೊಕ್ಕುಳ ಸೀಳಿ ಸುಡುಕೆಂಡದ ಪಾದಗಳ ಮೆಲ್ಲನೂರಿ ಅಂಬೆಗಾಲಿಟ್ಟವನ ಸ್ವಾಗತಕೆ ಊರಕೇರಿಯ ಕೋಳಿಗಳು ಕೂಗು ನಿಲ್ಲಿಸಿ ಹಸಿದ ನಾಯಿಗಳು ಊಳಿಟ್ಟು ಮಲಗಿದ್ದ ಕಂದಮ್ಮಗಳು ಕಿಟಾರನೆ ಕಿರುಚಿದಂತೆ ಅಳತೊಡಗಿ ಊರೂರೇ ತೆರೆದ ಮಶಾಣದಂತೆ ಬಾಸವಾಗಲು ಮಾರ್ಚುರಿಯೊಳಗೆ ಕೊಯಿಸಿಕೊಂಡ ಹೆಣಗಳು ವಾರಸುದಾರರಿರದೆ ಪೋಲಿಸರ ಕಾವಲಲಿ ಬೇಯುತ್ತ ಹೆರಿಗೆ ವಾರ್ಡಿನ ನರ್ಸಮ್ಮಗಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ತರಾತುರಿಯಲ್ಲಿ ಎಂತ ಮಗು ಕಣ್ಣರಳಿಸುವ ಗಂಡಸಿನ ಕಣ್ಣೊಳಗೆ ಬೆಳಕೊಂದು ಮೂಡಿದಂತಾಗಿ ಗುಳೆಹೊರಟ ಪರದೇಸಿ ಗುಂಪಿನಲ್ಲಿನ ಹರಯದ ಹೆಣ್ಣುಗಳ ಬೇಟೆಯಾಡಲು ಹವಣಿಸುವ ತಲೆಹಿಡುಕರ ಹಿಂದೆ ಸಾಲುಗಟ್ಟಿನಿಂತ ದುಡ್ಡಿದ್ದ ವಿಟಪುರುಷರು ಇವರುಗಳ ಕಾಯಲು ನೇಮಿಸಿದ ಮೇಸ್ತ್ರಿಗಳ ಕಣ್ಣಲ್ಲೂ ಕಮೀಷನ್ನಿನ ದುರಾಸೆಯ ಚಿತ್ರ ಇದೀಗ ಉರುಳುತ್ತಿರುವುದು ದಿನಗಳಷ್ಟೆ ಒಳ್ಳೆಯವೊ ಕೆಟ್ಟವೊ? ಹೇಳಬೇಕಾದ ಬಲ್ಲವರೆಲ್ಲ ಸೆಮಿನಾರುಗಳ ಕೊಠಡಿಯೊಳಗೆ ಮಾತುಕತೆಯೊಳಗೆ ಮುಳುಗಿ ಆಳುವ ಪ್ರಭುಗಳ ಪರವಿರೋಧಿಗಳೆಲ್ಲ ರಸ್ತೆಯ ನಟ್ಟನಡೂವೆ ಮದ್ಯೆ ಪ್ರತಿಕೃತಿಗಳ ಸುಡುತ್ತ ಮದ್ಯಾಹದೂಟಕ್ಕೆ ಕಾಯುತ್ತ ಇಳಿ ಮದ್ಯಾಹ್ನ ಸಣ್ಣ ನಿದ್ದೆ ಮಗಿಸೆದ್ದ ಗೃಹಿಣಿ ಮಕ್ಕಳಿಗಾಗಿ ಕಾಯುತ್ತ ಗೇಟಿನಂಚಲ್ಲಿ ನಿಂತಾಗ ದಿನದ ಚಕ್ರದ ಕೊನೆಯ ಸುತ್ತು ಉರಿಯುತ್ತಿದ್ದ ಕೆಂಡದವನು ಕೊಂಡದೊಳಗೆ ಹಾದಂತೆ ಕತ್ತಲೊಳಗೆ ಸರಿದು ನಡೆಯುತ್ತಾನೆ ಕು.ಸ.ಮಧುಸೂದನ

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಬಾ ಮಗುವೆ! ಬಾ ಮಗುವೆ ಬಾ ನನ್ನ ಹತ್ತಿರಕೆ! ನಾನೇನೂ ಅಲ್ಲ ಮೊನ್ನೆ ಮೂರುವರ್ಷದ ಮಗುವೊಂದು ನೀನ್ಯಾರೆಂದು ಕೇಳಿದಾಗ ಹೇಳಲಾಗದೆ ಏನನ್ನೂ ತಡವರಿಸಿದಾಗ ಮೊದಲಬಾರಿ ಯೋಚಿಸಿದೆ ನಾನ್ಯಾರು ಮತ್ತು ನಾನೇನು? ಯಾವ ದಾರಿಯೂ ನನ್ನದಾಗಲಿಲ್ಲ ಅಥವಾ ನನ್ನದಾಗಿ ಮಾಡಿಕೊಳ್ಳಲಾಗಲಿಲ್ಲ. ಸೋತಿದ್ದೇನೊ ಗೊತ್ತಾಯಿತಾದರು ಆಟ ಆಡಿದ್ದೆನಾ ಇಲ್ಲ ಆಡಿದಂತೆ ನಟಿಸಿದ್ದೆನಾ ಗೊತ್ತಿಲ್ಲ. ಎಲ್ಲರೂ ಇತಿಹಾಸದ ಭಾಗವಾಗಲು ಸಾದ್ಯವಿಲ್ಲವಾದರು ಅದರದೊಂದು ಅದ್ಯಾಯದ ಅಂಚಿನಲ್ಲಿಯಾದರು ಏನಾದರು ಆಗಿರುತ್ತಾರೆ. ಕನಸುಗಳು ನನಗೂ ಇದ್ದವು ಸಾಕಾರಗೊಳಿಸಿಕೊಳ್ಳುವ ಅನೇಕ ಅಡ್ಡ ದಾರಿಗಳೂ ನನಗೆ ಗೊತ್ತಿದ್ದವು ಆದರಾ ಎಲ್ಲ ದಾರಿಗಳು ನನ್ನ ಆತ್ಮಸಾಕ್ಷಿಯ ವಿರುದ್ದವಾಗಿದ್ದವು. ಆತ್ಮದ ಮಾತಿಗಿಂತ ಸುಖವೇ ಮುಖ್ಯ ಎಂದು ನಾನಂದುಕೊಂಡಿದ್ದರೆ ಇವತ್ತು ಮದ್ಯದಂಗಡಿಯ ಹೊಸಿಲಲಿ ಇಳಿಸಂಜೆಗಳ ನೀಳ ರಾತ್ರಿಗಳ ಕಳೆಯಬೇಕಿರಲಿಲ್ಲ. ದೇವರೆಂದೂ ನನಗೆ ಸಹಾಯ ಮಾಡುವನೆಂದು ನಾನೆಂದೂ ನಂಬಲಿಲ್ಲ ನಂಬಿದ್ದರೂ ಪಾಪ ಅವನಿಗೆಷ್ಟು ಜನ ಗ್ರಾಹಕರೋ ಸಮಯವಾದರೂ ಹೇಗೆ ಸಿಕ್ಕೀತು ನನ್ನಂತ ಪಾಪಿಯ ಬಗ್ಗೆ ಯೋಚಿಸಲು. ನನ್ನ ಸುತ್ತ ತೀರಾ ದೇವರಂತ ಮನುಷ್ಯರಾರು ಇರಲಿಲ್ಲ. ನನ್ನ ಸರಿದಾರಿಯಲ್ಲಿ ನಡೆಸಲು. ನಾನು ಶಾಲೆಗೆ ಹೋಗಿದ್ದು ಒಂದಷ್ಟು ಅಕ್ಷರಗಳನ್ನು ಕಲಿಯಲು ಮಾತ್ರ ಅವರು ನೀತಿಪಾಠ ಹೇಳಲು ಶುರು ಮಾಡಿದೊಡನೆ ನಾನು ನಿದ್ದೆಗೆ ಜಾರುತ್ತಿದ್ದೆ. ಅನೀತಿಯಲ್ಲೇ ಮುಳುಗಿದವರು ನೀತಿಯ ಬಗ್ಗೆ ಮಾತಾಡುವುದು ತಪ್ಪೆಂದು ಅವರಿಗೂ ಗೊತ್ತಿತ್ತು. ಹಾಗಂತ ನಾನು ಕಡುಪಾಪಿಯೇನು ಆಗಿರಲಿಲ್ಲ ಹಸಿದು ಬಂದವರಿಗೆ ನನ್ನ ತಟ್ಟೆಯಲಿದ್ದ ಅನ್ನದಲ್ಲೆ ಒಂದಿಷ್ಟು ತೆಗೆದು ನೀಡಿದ್ದೇನೆ. ಬಾರವಾದ ಮೂಟೆ ಹೊತ್ತು ಹೋಗುತ್ತಿದ್ದ ವಯಸ್ಸಾದ ಹಮಾಲಿಯೊಬ್ಬನಿಗೆ ಅವನ ಬಾರ ಹೊತ್ತು ಸಹಾಯ ಮಾಡಿದ್ದೇನೆ ಹಾಗೆಯೇ ಅಕ್ಕಪಕ್ಕದವರಿಗೆ ಕಿರಿಕಿರಿಯಾಗದಂತೆ ರಾತ್ರಿಗಳಲ್ಲಿ ಕಂಠಮಟ್ಟ ಕುಡಿದರೂ ಗದ್ದಲಮಾಡದೆ ತೆಪ್ಪಗೆ ಮಲಗಿ ಉಪಕಾರವನ್ನೂ ಮಾಡಿದ್ದೇನೆ! ಇವತ್ತಿಗೂ ನನಗೆ ಆಶ್ಚರ್ಯ ಅನಿಸುವುದು ಕಾನ್ವೆಂಟಿಗೆ ಹೋಗುವ ಆ ಎಳೆಯ ಕಂದಮ್ಮಗಳನ್ನು ಕಂಡಾಗ ತಮ್ಮ ಪೂರ್ವೀಕರೆಲ್ಲ ಸೇರಿ ಮಾಡಿದಷ್ಟೂ ಪಾಪಗಳ ಮೂಟೆಯನ್ನು ಬೆನ್ನಿನ ಚೀಲಕ್ಕೇರಿಸಿಕೊಂಡು ನಡುಬಾಗಿಸಿ ನಡೆಯುವ ಮಕ್ಕಳನ್ನು ನೋಡಿದಾಗೆಲ್ಲ ಗಾಣದ ಎತ್ತುಗಳು ನೆನಪಾಗಿ ಕಣ್ಣಲ್ಲಿ ನೀರು ಸುರಿಸುತ್ತೇನೆ. ತಮಗೆ ವಯಸ್ಸಾದ ಮೇಲೆ ಅನ್ನ ಹಾಕಲೆಂದು ಅವರ ಬಾಲ್ಯವನ್ನು ಕಿತ್ತುಕೊಂಡು ಶಾಲೆಯೆಂಬ ನರಕಕ್ಕೆ ಕಳಿಸುವ ಅಪ್ಪಅಮ್ಮಂದಿರನ್ನು ಹಿಡಿದು ಒದೆಯಬೇಕೆಂದು ಸಾವಿರ ಸಾರಿ ಅನಿಸಿದರೂ ಸುಮ್ಮನಾಗಿದ್ದೇನೆ! ಬಾ ಮಗುವೆ ಇಲ್ಲಿ ಬಾ ನಿನ್ನ ಹೆಗಲ ಮೇಲಿನ ಬ್ಯಾಗನ್ನು ಇಲ್ಲಿ ಇಳಿಸಿ ಇಡು ಬಾ ನನ್ನ ಜೊತೆ ಊರಂಚಿನ ಕಾಡಿಗೆ ಹೋಗೋಣ. ಅಲ್ಲಿ ನಿನ್ನಂತೆಯೇ ಮುದ್ದಾಗಿರುವ ಚಿಟ್ಟೆಗಳಿವೆ ಹೂ ಹುಡುಕಿ ಹಾರುವ ಅವನ್ನು ಹಿಡಿಯೋಣ ಪಕ್ಕದಲ್ಲಿ ಹರಿಯುವ ನದಿಯ ದಂಡೆಯಲ್ಲಿ ಕೂತು ಮರಿಮೀನುಗಳಿಗೆ ಗಾಳ ಹಾಕಿ ಕಾಯೋಣ. ಮದ್ಯಾಹ್ನ ಹೊಟ್ಟೆ ಹಸಿದಾಗ ಅಲ್ಲೇ ಸಿಗುವ ಕಾಡಿನ ಹಣ್ಣುಗಳ ಕಚ್ಚಿ ತಿನ್ನೋಣ ಒಂದು ಹೇಳುತ್ತೇನೆ ಕೇಳು ಮಗು ನಿಸರ್ಗ ಕಲಿಸುವುದಕ್ಕಿಂತ ಹೆಚ್ಚಾದ ಪಾಠವನ್ನು ಯಾವ ಶಾಲೆಗಳು ಯಾವ ಶಿಕ್ಷಕರುಗಳೂ ಕಲಿಸಲಾರರು. ನಾಗರೀಕತೆಯ ಮುಖವಾಡ ಹೊತ್ತ ಜಗತ್ತಿನಲ್ಲಿ ಯಾರೂಕಲಿಸದೆ ಕಲಿಯಬಹುದಾದದ್ದು ವಂಚನೆ ದ್ರೋಹಗಳು ಮಾತ್ರ ಬಾ ಮಗುವೆ ಬಂದುಬಿಡು ನಾನು ಸಾಯುವುದರೊಳಗಾಗಿ ನಿನಗೆ ಮೀನು ಹಿಡಿಯುವುದ ನದಿಯೊಳಗ ಈಜುವುದ ಬೆಣಚುಕಲ್ಲು ಗೀಚಿ ಬೆಂಕಿ ಹೊತ್ತಿಸಿ ಮೀನು ಬೇಯಿಸುವುದ ಕಲಿಸುವೆ. ಬಾ ಮಗುವೆ ನಾನು ನಿನ್ನ ಅಪ್ಪನಾಗಲಾರದ ಅಪ್ಪ! ******* ಕು.ಸ.ಮದುಸೂದನ

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಚಹರೆ ನನ್ನ ಅವಳ ಸಂಬಂದಮುರಿದುಬಿದ್ದುಮುವತ್ತು ವರುಷಗಳಾದರೂ ನಮ್ಮ ವಿದಾಯದ ಕ್ಷಣಗಳ ಕ್ಷಣಗಳ ಸಾಕ್ಷಿಗಳಿನ್ನೂಹಾಗೇ ಉಳಿದಿವೆ ರಪ್ಪನೆ ಬಾಗಿಲು ತೆಗೆದು ಸದ್ದು ಮಾಡುತ್ತಾ ಹೋದವಳುಎಸೆದು ಹೋದ ಮುಖ ಕನ್ನಡಿಯ ಚೂರುಗಳಲ್ಲಿನ್ನುಅವಳ ಚಹರೆಗಳು ಕಾಣುತ್ತಿವೆ! ಮತ್ತೆಂದೂ ನೋಡಲಾರೆ ನಿನ್ನ ಮುಖವ ಎಂದು ಕೂಗಿ ಹೇಳಿ ಹೋದವಳಮಾತುಗಳಿನ್ನೂ ಹಳೆಯ ಮಣ್ಣಿನ ಗೋಡೆಗಪ್ಪಳಿಸಿಮತ್ತೆ ಮತ್ತೆ ಕೇಳುತ್ತಲೇ ಇವೆ! ನನ್ನ ಅವಳ ಸಂಬಂದಮುರಿದುಬಿದ್ದುಮುವತ್ತು ವರುಷಗಳಾದರೂ ಕೇಳಿಸುತ್ತಲೇ ಇವೆ ಶಬ್ದಗಳುಕಾಣಿಸುತ್ತಲೇ ಇವೆ ಚಿತ್ರಗಳು ಒದ್ದೆಯಾಗುತ್ತಲೇ ಇವೆ ಕಣ್ಣುಗಳು!ಕಾರಣವಿರದೇ? ********* ಕು.ಸ.ಮದುಸೂದನ

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ರಣಹಸಿವಿನಿಂದ ಮೊನ್ನೆ ಇವರೂ ಹಲವು ಯುದ್ದಗಳ ಗೆದ್ದಿದ್ದರು ಗೆದ್ದ ರಾಜ್ಯದ ಹೆಣ್ನುಗಳ ಬೇಟೆಯಾಡಿದ್ದರು ಇದೀಗ ಸಾಂತ್ವಾನ ಕೇಂದ್ರಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಊರೂರುಗಳಿಗೆ ಬೆಂಕಿ ಹಚ್ಚಿದ್ದರು ಉರಿದ ಮನೆಗಳಲ್ಲಿ ಹೆಂಗಸರು ಮಕ್ಕಳೆನ್ನದೆ ತಲೆ ತರೆದಿದ್ದರು ಇದೀಗ ಆನಾಥಾಶ್ರಮಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಕೋವಿ ಖಡ್ಘಗಳ ಹಿಡಿದಿದ್ದರು ಇದೀಗ ಧರ್ಮ ಗ್ರಂಥಗಳ ಪಾರಾಯಣ ಮಾಡುತ್ತಿದ್ದಾರೆ! ಮೊನ್ನೆಮೊನ್ನೆಯವರೆಗೂ ನಡೆದ ಅಕಾರಣ ಯುದ್ದಗಳಿಗೀಗ ಸಕಾರಣಗಳ ಪಟ್ಟಿ ಮಾಡುತ್ತ ಕೂತಿದ್ದಾರೆ ತರಿದ ತಲೆಗಳ ಭೋಗಿಸಿದ ಯೋನಿಗಳ ಕಚ್ಚಿದ ಮೊಲೆಗಳ ಕಲಸಿಹಾಕಿದ ಭ್ರೂಣಗಳ ನಿಖರ ಅಂಕಿಅಂಶಗಳಿಗಾಗಿ ತಲೆ ಕೆರೆದುಕೊಳ್ಳುತ್ತಿದ್ದಾರೆ ಪ್ರತಿ ಮನುಷ್ಯನಿಗೂ ಇರಬಹುದಾದ ಮೃಗದ ಮುಖವಾಡವ ಕಳಚಲೆತ್ನಿಸಿದಷ್ಟೂ ಗೊಂದಲವಾಗುವುದು ಖಚಿತ ನೋಡು ಬರೆಯುವಾಗಲೂ ಇದನು ಕೆಕ್ಕರಿಸಿ ನೋಡುತಿದೆ ಮೃಗವೊಂದು ರಣಹಸಿವಿನಿಂದ! ******** ಕು.ಸ.ಮಧುಸೂದನ

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ನಾವೇನು ವ್ಯಬಿಚಾರಿಗಳಾಗಿರಲಿಲ್ಲ! ಅವಳನ್ನು ಪ್ರೀತಿಸಿದ್ದು ನಿಜಹೆಸರಲ್ಲೇನಿದೆ ಹೇಳಿಸುಶೀಲಾ, ಶಕೀಲಾ, ಶೈನಿ!ಏನಾದರು ಒಂದಂತು ಆಗಿರಲೇ ಬೇಕೆಂಬ ಹಟ ನನಗಂತು ಇರಲಿಲ್ಲ! ಹಾಗೇನೆ ನನ್ನ ಹೆಸರುಮಹೇಶ, ಮುಬಾರಕ್, ಮ್ಯಾಕ್ಹೀಗೇನೆ ಯಾವುದಾದರೊಂದು ಆಗಿರಲೇ ಬೇಕೆಂಬ ಹಟಅವಳಿಗೂ ಇದ್ದಂತೆ ಕಾಣಲಿಲ್ಲ… ನಮ್ಮ ಮಿಲನದ ಉನ್ಮತ್ತ ಕ್ಷಣದೊಳಗೂಅವಳಾಗಲಿ ನಾನಾಗಲಿ ಅಪ್ಪಿ ತಪ್ಪಿಯೂನಮ್ಮಹೆಸರುಗಳ ಪಿಸುಗುಡಲಿಲ್ಲ!ಅಷ್ಟು ಅನಾಮಧೇಯರಾಗಿ ಪ್ರೇಮಿಸಿದೆವು. ಹೊರಗಿನವರಿಗೆ ನಾವು ಗೊತ್ತಿದ್ದುದು ನಮ್ಮ ಹೆಸರುಗಳಿಂದ ಮಾತ್ರಆದರೆ ಆ ಹೆಸರುಗಳಾಚೆಯಲ್ಲಿಯೂಇರುವ ನಮ್ಮ ಐಡೆಂಟಿಟಿಯನ್ನುಹುಡುಕಿಕೊಳ್ಳುವುದು ನಮಗೆ ಅನಿವಾರ್ಯವಾಗಿತ್ತು. ಹಾಗಂತ ನಾನು ವಿಟನಾಗಿರಲಿಲ್ಲಅವಳೇನು ಜಾರಿಣಿಯಾಗಿರಲಿಲ್ಲ!************* ಕು.ಸ.ಮದುಸೂದನ

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಚಳಿ ಮತ್ತು ಅಗ್ಗಿಷ್ಠಿಕೆ

ಚಳಿ ಮತ್ತು ಅಗ್ಗಿಷ್ಠಿಕೆ ಮಳೆಗಾಲದ ಒಂದು ಸಂಜೆ ಕಪ್ಪುಗಟ್ಟಿದ್ದ ಹಡಗಿನಂತ ಮೋಡಗಳುಸ್ಪೋಟಗೊಂಡು ಸುರಿದ ಜಡಿ ಮಳೆಗೆಸಿಕಿ ತೊಯ್ದು ತೊಪ್ಪೆಯಾದವಳ ಬಟ್ಟೆ ಒಣಗಿಸಲುನನ್ನ ಪುಟ್ಟ ಹಿತ್ತಲಿತ್ತು ಗಡಗಡ ನಡುಗಿಸುವ ಚಳಿಗೆಅಗ್ಗಿಷ್ಠಿಕೆಯಾಗಿ ನಾನಿದ್ದೆ. ಮಳೆ ಸುರಿದು ಸರಿದು ಹೋಯಿತುಹಿಂಬಾಲಿಸಿಕೊಂಡು ಬಂದ ಬಿಸಿಲುಬಂದ ಮಳೆಯ ಮರೆಸಿತು ಮತ್ತೆಂದೂ ಇಲ್ಲಿ ಅಂತ ಘನಮೋಡ ಕಟ್ಟಲಿಲ್ಲಮಳೆಯಾಗಲಿಲ್ಲಬಿಸಿಲ ಝಳಕ್ಕೆ ಬರಬಿದ್ದ ಊರಿಗವಳೆಂದೂ ಬರಲೇ ಇಲ್ಲ ಮತ್ತೀಗ ಅಲ್ಲಿ ಮಳೆಯಾಗುತ್ತಿರ ಬಹುದುಅವಳಲ್ಲಿ ನೆನೆಯುತ್ತಲೂ ಇರಬಹುದು ಆ ಊರಲ್ಲೂ ಹಿತ್ತಲುಗಳಿವೆಜೊತೆಗೆ ಅಗ್ಗಿಷ್ಠಿಕೆಗಳೂ!******** ಕು.ಸ.ಮಧುಸೂದನ ಕು.ಸ.ಮಧುಸೂದನ

ಚಳಿ ಮತ್ತು ಅಗ್ಗಿಷ್ಠಿಕೆ Read Post »

You cannot copy content of this page

Scroll to Top