ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ನಿಯತ್ತು

ಕಥೆ ನಿಯತ್ತು ಎಂ. ಆರ್.ಅನಸೂಯ ಹೊರಗಡೆ ಯಾರೋ ಬೆಲ್ ಮಾಡಿದರು,ಆಗ  ಅಡುಗೆ ಮನೆಯಲ್ಲಿದ್ದ ಜಾನಕಿ ಅಲ್ಲಿಂದಲೇ ಮಗಳಿಗೆ” ನೋಡೇ ಸುಧಾ ಅದ್ಯಾರು”. ಬಾಗಿಲು ತೆಗೆಯದೆ ಕಿಟಕಿಯಿಂದಲೇ ಹೊರಗಡೆ ನಿಂತಿದ್ದವರನ್ನು ಸುಧಾ “ಯಾರು ಬೇಕಿತ್ತು”  ಎಂದು ಕೇಳಿದಳು. ಸುಮಾರು ಐವತ್ತು ವರ್ಷದ  ಅವರು “ನನ್ನ ಹೆಸರು ಇಸ್ಮಾಯಿಲ್. ನಿಮ್ಮ ತಾಯಿಯವರ ಹತ್ರ ಮಾತಾಡ ಬೇಕಿತ್ತು . ಸ್ವಲ್ಪ ಕರೆಯಮ್ಮ’ ಎಂದರು.  ಒಳಗೆ  ಬಂದು ” ಅಮ್ಮ, ಅದ್ಯಾರೊ  ಇಸ್ಮಾಯಿಲ್ ಅಂತೆ ನಿನ್ನತ್ರ ಮಾತಾಡಬೇಕಂತೆ” ಎಂದಾಗ ಯಾರಪ್ಪ ಅವ್ರು ಎನ್ನುತ್ತಾ ಬಂದು ಅವರನ್ನು  ನೋಡುತ್ತಿದ್ದಂತೆಯೇ ” ಓ ನೀವಾ” ಎಂದರು. ಆ ವ್ಯಕ್ತಿ ಕೈ ಮುಗಿದು ನಮಸ್ಕರಿಸುತ್ತ ” ಒಳಗೆ ಬರಬಹುದೇನ್ರಮ್ಮ” ಎಂದು ಕೇಳುತ್ತ ಅಲ್ಲೇ ನಿಂತಿದ್ದರು. ಆಗ ಜಾನಕಿ ಇಷ್ಟವಿಲ್ಲದಿದ್ದರೂ “ಬನ್ರಿ”ಎನ್ನ ಬೇಕಾಯ್ತು. ಜಾನಕಿ ಕುಳಿತುಕೊಳ್ಳಿ ಎಂದು ಕುರ್ಚಿ ಕಡೆ ತೋರಿಸಿದರು  ಕುಳಿತ ಮೇಲೆ “ನಿಮಗೆ ನನ್ನ ಮೇಲೆ ಸಿಟ್ಟೈತೆ. ಬೇಜಾರ್ ಮಾಡ್ಕಬೇಡ್ರಿ. ನಿಮಗೆ ಸಿಟ್ಟು ಬರಂಗೆ ನಡ್ಕಂಡಿದೀನಮ್ಮ ಏನೋ ಕೆಟ್ಟ ಕಾಲ. ಇವತ್ತು ನಿಮ್ಮ ಋಣ ತೀರಿಸೊ ಕಾಲ ಬಂತ್ರಮ್ಮ. ತಗೊಳ್ರಿ ನೀವು ಕೊಟ್ಟ ಐವತ್ತು ಸಾವಿರವನ್ನ ಅಸಲಷ್ಟೆ ಕೊಡ್ತಿರೋದು. ನನ್ನ ಕೈಲಾಗದು ಇಷ್ಟೇನಮ್ಮ ಮುಂದೆ ಆ ಅಲ್ಲಾ ಶಕ್ತಿ ಕೊಟ್ರೆ ಬಡ್ಡೀನು ತೀರಿಸಿ ಬಿಡ್ತೀನಿ”  ಎನ್ನುತ್ತಾ ಟೇಬಲ್ ಮೇಲೆ ನೋಟುಗಳ ಕಂತೆಯಿಟ್ಟರು. ಆಗ ಜಾನಕಿ ದುಡ್ಡನ್ನು ತೆಗೆದುಕೊಳ್ಳುತ್ತ “ಈ ದುಡ್ಡು ಮತ್ತೆ     ವಾಪಸ್ ಬರುತ್ತೆ ಅನ್ಕೊಂಡೇ ಇರಲಿಲ್ಲ. ಅದರ  ಆಸೇನ ನಾವು ಯಾವತ್ತೋ ಕೈ ಬಿಟ್ಟು ಸುಮ್ಮನಾಗಿದ್ವಿ. ಏನೋ ನಿಮಗೆ  ಆ ದೇವರು ಒಳ್ಳೆ ಬುದ್ದಿ ಕೊಟ್ನಲ್ಲ. ನಾವು ನಿಮ್ಮ ಸ್ಥಿತಿ ಅರ್ಥ ಮಾಡ್ಕಂಡು ವಿಧಿಯಿಲ್ಲದೆ ಸುಮ್ಮನಾಗಿ ಬಿಟ್ವಿ  ಆ ದುಡ್ಡು ನಮ್ಮದಾಗಿದ್ದರೆ ನಮಗೆ ಸಿಗುತ್ತೆ ಇಲ್ಲದಿದ್ದರೆ ಇಲ್ಲಾ ಅಂತ” ಎಂದು ಹೇಳಿ ಸುಧಾಳಿಗೆ ಟೀ ಮಾಡಲು ಹೇಳಿದರು.ಟೀ ಕುಡಿಯುವಾಗ ” ನೀವು ಎಲ್ಲಿದೀರಿ ಈಗ” ಎಂದು ಜಾನಕಿ ಕೇಳಿದರು”ನಾನು ಬೆಂಗ್ಳೂರಲ್ಲೆ ಇದೀನಿ ನಾನವತ್ತು ನಿಮ್ಮನೆಗೆ ಬಂದಿದ್ನಲ್ಲ ಅದರ  ಮಾರನೆಯ ದಿನವೇ ಬೆಂಗ್ಳೂರಿಗೆ  ಹೋಗ್ಬಿಟ್ಟೆ. ಸಾಲ ಕೊಟ್ಟವರು  ಸುಮ್ಮನೆ ಬಿಡ್ತಾರಾ. ಸಾಲಗಾರರ ಕಾಟ  ತಡೀಲಾರದೆ ಅಂಗಡಿಯಲ್ಲಿದ್ದ ಸಾಮಾನು ಮಾರಿ ಅಂಗಡಿ ಮನೇನ ಅಡವಿಟ್ಟು ಸಾಲ ತೀರ್ಸಿದೆ ಬಾಡಿಗೆಯನ್ನು  ಮತ್ತೊಬ್ಬ ಸಾಲಗಾರನಿಗೆ ಬರೆದು ಕೊಟ್ಟುಬಿಟ್ಟೆ. ಮಗ ಓದ್ತಿದ್ದ. ಮನೆ ನಡಿಬೇಕಲ್ಲ. ಬೆಂಗಳೂರಲ್ಲಿದ್ದ ನನ್ನ ಹೆಂಡ್ತಿ ಅಣ್ಣನೆ ನಿಮ್ಮಂಥಾ ದೊಡ್ಡ ವ್ಯಾಪಾರಸ್ಥರ ಹತ್ರ ಸ್ಟೋರ್ ಕೀಪರ್  ಕೆಲ್ಸ ಕೊಡಿಸಿದ. ನನ್ನ ಕೆಲಸ ಅವ್ರಿಗೆ ಇಷ್ಟ ಆಯ್ತು. ಅವ್ರೇ ರಾತ್ರಿ ವಾಚ್ಮನ್ ಕೆಲಸನೂ ನನಗೆ ಕೊಟ್ರು.ಇರಕ್ಕೆ ಒಂದು ರೂಂ  ಕೊಟ್ರು. ಎರಡೂ  ಕೆಲ್ಸಕ್ಕೂ ಸೇರಿ  ಮೂವತ್ತು ಸಾವಿರ ಕೊಡ್ರಿದ್ರು. ಮನೆಗೆ ಹದಿನೈದು ಸಾವಿರ ಕೊಟ್ಟರೆ. ಸಾಲಕ್ಕಂತ ಹತ್ತು ಸಾವ್ರ ಹೋಗಿ ನನ್ನ ಖರ್ಚಿಗೆ  ಐದು ಸಾವಿರ ಇಟ್ಕಂತಿದ್ದೆ. ನಮ್ಮಮ್ಮನೂ ನನ್ನ ಹೆಂಡ್ತಿ ಮನೇಲಿ ಸುಮ್ನೆ ಇರದೆ ಹೂ ಕಟ್ಟಿ ಸಂಪಾದನೆ ಮಾಡಿದ್ರು. ಈಗ ಮಗನಿಗೆ ಕೆ.ಇ.ಬಿ. ನಲ್ಲಿ ಕೆಲಸ ಸಿಕ್ಕಿತು ಶಿವಮೊಗ್ಗದಲ್ಲಿ ಮನೆ ಮಾಡಿ ವರ್ಷ ಆಯ್ತು. ಎಲ್ಲರೂ ಅಲ್ಲೆ ಇದ್ದಾರೆ.ಮಗನು ದುಡಿದು ಸಾಲ ತೀರಿಸ್ತಿದಾನೆ.ಮನೆನೂ ಬಾಡಿಗೆ ಕೊಟ್ಟು ಅದರ ದುಡ್ಡನ್ನು ಸಾಲಕ್ಕೆ ಕಟ್ತಾ ಇದೀವಿ. ಸಾಲ ತೀರಿದ  ಮೇಲೆ ಮಗನಿಗೆ ಮದ್ವೆ ಮಾಡಿ ನಾನು ಕೆಲ್ಸ ಬಿಟ್ಬಿಟ್ಟು ಬಂದು ಎಲ್ಲಾರೂ ಒಂದತ್ರ ಇರ್ತಿವಿ. ಈ ಐವತ್ತು ಸಾವಿರ ನಾನು ದುಡಿದಿರ  ದುಡ್ಡು. ನಾನು ಊರು ಬಿಟ್ಟೋಗಿ ಎಂಟು ವರ್ಷ ಆಯ್ತು ವನವಾಸ ಆದಂಗಾಯ್ತು ಮಗನಿಗೆ ಕೆಲಸ ಸಿಕ್ಕಿದ ಮೇಲೆ ನೆಮ್ಮದಿಯಾಗಿ ನಿರಾಳವಾಯ್ತು”ಎಂದು ಹೇಳಿ ಮುಗ್ಸಿದ.  ಸುಧಾಳನ್ನು ನೋಡಿ “ಎಲ್ಲಾ ಅವರಜ್ಜಿ ಇದ್ದಂಗೆ” ಎಂದು ಹೇಳಿ ಜಾನಕಿಯವರ ಅತ್ತೆ ಕಮಲಮ್ಮನವರನ್ನು ಕೇಳಿದ  ಅವರು ತಮ್ಮ ಮಗಳ ಮನೇಲೀ ನಾಲ್ಕೈದು ದಿನ ಇದ್ದು ಬರಲು ಹೋಗಿದ್ದಾರೆ ಎಂದಾಗ ಅವರ ಕೈ ರುಚಿಯನ್ನು ಕೊಡುತ್ತಿದ್ದ ಊಟತಿಂಡಿಯನ್ನು ನೆನೆದು ಹೊಗಳಿದರು ಜಾನಕಿಯ ಗಂಡ ಪ್ರಕಾಶಣ್ಣನು ಬೆಂಗಳೂರಿಗೆ ಹೋದ ವಿಚಾರ ತಿಳಿದು ಮತ್ತೊಮ್ಮೆ ಬಂದಾಗ ಮಾತಾಡಿಸ್ತೀನಿ ಎನ್ನುತ್ತ ಹೊರಡುವಾಗ ಮತ್ತೆ ನಡೆದ ವಿಷಯಗಳಿಗೆಲ್ಲ ಬೇಸರ ಮಾಡಿ ಕೊಳ್ಳಬಾರದೆಂದುಹೇಳಿದರು. ಅವರು ಹೋದ ಮೇಲೆ ಸುಧಾ ” ಯಾರಮ್ಮ ಇವ್ರು ನನಗೀಗ ಇವರನ್ನು ನೋಡಿದ ನೆನಪಾಯ್ತು” ಎಂದು  ಕೇಳಿದಾಗ ಜಾನಕಿ “ಅದೊಂದು ದೊಡ್ಡ ಕತೆ” ಎನ್ನುತ್ತಲೇ ಅಡುಗೆ ಮನೆಯತ್ತ ನಡೆದರೆ ಸುಧಾ ಸಹಾ ಅವರ ಹಿಂದೆಯೇ ಹೊರಟಳು. ಜಾನಕಿ ಕಥೆಯ ಪೀಠಿಕೆ ಶುರು ಮಾಡಿದಳು “ಈಗ ಬಂದಿದ್ದಲ್ಲ ಇಸ್ಮಾಯಿಲ್ ಅವ್ರ ತಂದೆ ಇಬ್ರಾಹಿಂ ಹಾಗು ನಿಮ್ಮ ತಾತ ಚಿಕ್ಕಂದಿನಿಂದ್ಲೂ ಒಳ್ಳೆಯ ಸ್ನೇಹಿತರು ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು. ಅದು ನಂಬಿಕೆ ಹಾಗೂ ನಿಯತ್ತಿನಿಂದ ಕೂಡಿತ್ತು. ಆ ಸ್ರೇಹ ಹಾಗೆ ಮುಂದುವರಿಯುತ್ತ ಅವರ ಮಕ್ಕಳ ಕಾಲಕ್ಕೂ ಬಂದಿತ್ತು ಎರಡು ಕುಟುಂಬಗಳ ನಡುವಿನ ವಿಶ್ವಾಸಕ್ಕೆ ಯಾವುದೇ  ಭಂಗ ಬರದೆ ಎಲ್ಲವು ಚೆನ್ನಾಗೆ ಇತ್ತು. ಇಬ್ರಾಹಿಂರವರು ಸಣ್ಣಕಿರಾಣಿ ಅಂಗಡಿ ಇಟ್ಟಿದ್ದರು. ಅವರಪ್ನ ತೀರಿಕೊಂಡ ಮೇಲೆ ಇಸ್ಮಾಯಿಲ್ ನಡೆಸಿಕೊಂಡು ಹೋಗುತ್ತಿದ್ದರು. ಅಂಗಡಿಯ ಜೊತೆಗೆ ತೆಂಗಿನಕಾಯಿಯ ಹೋಲ್ ಸೇಲ್ ವ್ಯಾಪಾರ ಮಾಡುವ ಉತ್ಸಾಹದಿಂದ ಶುರುಮಾಡಿದರು.  ತಾವು ಕೂಡಿಟ್ಟ ಹಣದೊಂದಿಗೆ ಸ್ಟಲ್ಪ ಸಾಲವನ್ನು ಮಾಡಿ ಹಣ ಹೊಂದಿಸಿಕೊಂಡು ಹೊಸ ವ್ಯವಹಾರಕ್ಕೆ ಹಾಕಿದ್ದರು ಯಾಕೋ ಏನೋ ಹೊಸ ವ್ಯವಹಾರದಲ್ಲಿ ಏಳ್ಗೆಯಾಗದೆ  ನಷ್ಟವಾಗ ತೊಡಗಿತು. ಹೊಸ ವ್ಯವಹಾರದ ಆಸಕ್ತಿಯ ಫಲವಾಗಿ ಕಿರಾಣಿ ಅಂಗಡಿಯೂ ಸರಿಯಾಗಿ ನಡೆಯದೆ  ಅದರಲ್ಲೂ ಆದಾಯ ಕಡಿಮೆಯಾಯಿತು.ಅಂದುಕೊಂಡ ಹಾಗೆ ಏನೂ ನಡೆಯದೆ ಎಲ್ಲವೂ ಏರುಪೇರಾಗಿ ಬಿಟ್ಟಿತು ಒಟ್ನಲ್ಲಿ ಗ್ರಹಚಾರ ಕೆಟ್ಟ ಪರಿಣಾಮವೋ ಏನೋ ಅವರ ಕೆಟ್ಟ ದಿನಗಳು ಪ್ರಾರಂಭವಾದವು. ಅದು ಸಾಲದೆಂಬಂತೆ  ಆಗಲೇ ಅವರ ತಾಯಿಗೆ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಬೇಕಾಯ್ತು. ಹೊಸ ವ್ಯವಹಾರದಲ್ಲಾದ ನಷ್ಟ ಮತ್ತು ಆಸ್ಪತ್ರೆ ಖರ್ಚಿಗಾಗಿ ಮತ್ತೆ ಸಾಲಮಾಡದೆ ಬೇರೆ ದಾರಿಯೆ ಇರಲಿಲ್ಲ ಆಗ ನಮ್ಮ ಹತ್ರ ಒಂದು ಲಕ್ಷ ರೂಪಾಯಿ ಸಾಲ ತೆಗೆದರು. ಅವರ ತಾಯಿ ಆರೋಗ್ಯವಂತರಾಗಿ ಮನೆಗೇ  ಬಂದರೂ ಹಣಕಾಸಿನ ಪರಿಸ್ಥಿತಿ ಮಾತ್ರ ತೀರ ಹದಗೆಟ್ಟು ಹೋಗಿತ್ತು ಸಾಲಗಾರರ ಕಾಟದಿಂದಾಗಿ ಮರ್ಯಾದೆಗೆ ಹೆದರಿ ಅವರದೆ ಸ್ವಂತ ಅಂಗಡಿ ಮನೆಯನ್ನು ಭೋಗ್ಯಕ್ಕೆ ಹಾಕಿ ಅರ್ಧ ಸಾಲ ತೀರಿಸಿ ಹೆಂಡತಿಯ ಒಡವೆಗಳನ್ನೂ ಮಾರಿದರು. ಆಗ ನಿಮ್ಮಪ್ಪ ಸಾಲದ ದುಡ್ಡು ಕೇಳಿದರು. ಆಗ ಅವನಲ್ಲಿದ್ದ ಐವತ್ತು ಸಾವಿರ ಕೊಟ್ಟು “ಉಳಿದ ಹಣ ಈಗಲೇ ಕೊಡಕ್ಕೆ ಆಗಲ್ಲ. ಬೇರೆ ಕಡೆ ಇನ್ನೂ ಸಾಲ ಐತೆ ನೀವು ಈಗಲೇ ಕೊಡಬೇಕು ಅಂದ್ರೆ ನೇಣು ಹಾಕ್ಕಂಡು ಸಾಯದು ಬಿಟ್ರೆ ಇನ್ನೇನೂ ಮಾಡಕ್ಕಾಗಲ್ಲ. ನನಗೆ ಸ್ಟಲ್ಪ ಟೈಂ ಕೊಡ್ರಿ ನಿಮ್ಮ ಋಣ ಇಟ್ಕೊಂಡು ಸಾಯಲ್ಲ” ಎಂದು ಕೈ ಮುಗಿದು ಕೇಳ್ಕಂಡಿದ್ದರು. ಆಗ ನಿಮ್ಮಅಜ್ಜಿ ನಿಮ್ಮಪ್ಪನ ಹತ್ರ “ಪ್ರಕಾಶ, ಒತ್ತಡ ಹಾಕ್ಬೇಡ. ನಿಯತ್ತಿನ ಮನುಷ್ಯನೇ ಪಾಪ.ಲೇಟಾದ್ರು ದುಡ್ಡು ಬರುತ್ತೆ”ಎಂದುಹೇಳ್ಬಿಟ್ಟಿದ್ದರು.   ಮಾರನೇ ದಿನವೇ ಇಸ್ಮಾಯಿಲ್ ಊರು ಬಿಟ್ಟಿದ್ದ. ಆಗ ನಿಮ್ಮಪ್ಪ ಹಣ ವಾಪಸ್ ಬರುವ ಆಸೆಯನ್ನೇ ಕೈ ಬಿಟ್ಟರು “ಅದಾದ ಮೇಲೆ ಇವತ್ತೇ ನಾನು ನೋಡ್ತಿರೋದು. ಇನ್ನು ಮುಂದಿನ ಕತೆನೆಲ್ಲಾ ಅವನೇ ಹೇಳಿದನಲ್ಲ. ಅಂತು ಅವ್ರ ನಿಯತ್ತು ಮೆಚ್ಚಬೇಕು.ಅದಕ್ಕೆ ಅಲ್ವೇ ಹೇಳೋದು ದುಡ್ಡು ಶಾಶ್ವತ ಅಲ್ಲ ಅಂತ “ಎಂದು ಜಾನಕಿ ಹೇಳಿದರೆ ” ಎಂಟು ವರ್ಷ ಆದ ಮೇಲೆ ಅವರಾಗೇ ಬಂದು ದುಡ್ಡು ಕೊಟ್ಟು ಸಾಲ ತೀರ್ಸಿದಾರೆ.ಅವ್ರು ನಿಜವಾಗ್ಲೂ ಈಗಿನ ಕಾಲಕ್ಕೇ ಗ್ರೇಟ್ ಕಣಮ್ಮ”ಎಂದು ಸುಧಾ ಸಹಾ ಹೊಗಳಿದಳು. …….

ನಿಯತ್ತು Read Post »

ಕಥಾಗುಚ್ಛ

ಮಿಸ್ಟರ್ ಅನ್ ಫ್ರೆಂಡ್

ತೆಲುಗಿನಿಂದ ಅನುವಾದವಾದ ಕಥೆ ತೆಲುಗು ಮೂಲಃ ಶ್ರೀ ರಾಮದುರ್ಗಂ ಮಧುಸೂದನ ರಾವು                   ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಈಗೇನು ಮಾಡೋದು…..? ಗೇಟಿನಿಂದಲೇ ಹೊರಗೋಡಿಸಿದ್ದರೆ ಚೆನ್ನಾಗಿರೋದಾ….. ಈಗಂತೂ ಆ ಛಾನ್ಸ್ ಇಲ್ಲ. ಬಂದು ಕೂತಿದ್ದಾನೆ. ಬರೀ ಪರರ ಜೀವನಗಳಲ್ಲಿ ಇಣುಕಿ ನೋಡುವುದು ಬಿಟ್ಟರೆ ಇಷ್ಟು ವರ್ಷಗಳ ತನ್ನ ಜೀವನದಲ್ಲಿ ಮಾಡಿದ್ದು ಬೇರೇ ಏನಾದರೂ ಇದೆಯಾ ? ಎಲ್ಲಿ ಸಿಕ್ಕರೆ ಅಲ್ಲಿ…. ಯಾವಗ ಸಿಕ್ಕರೆ ಅವಾಗ…. ಹೇಗೆ ಸಿಕ್ಕರೆ ಹಾಗೆ ತೂರಿಬಿಡೋದೇ! ********** ಉಂಡಾಡಿ….. ಗಾಳಿ ಜೀವ…. ಶಿವಕುಮಾರನ ನೆನಪು ಬಂದಾಕ್ಷಣ ಮನಸ್ಸಿನಲ್ಲಿ ಹೊಳೆಯುವ ತಕ್ಷಣದ ಮಾತು ಆ ಎರಡೇ ! ನನಗಿನ್ನೂ ಚೆನ್ನಾಗಿ ನೆನಪಿದೆ. ಅವನನ್ನ ಜೀಜೆ ( ಗಾಳಿ ಜೀವ) ಎಂದು ಕರೆಯುತ್ತಿದ್ದೆವು. ನನ್ನ ಜೀವನದಲ್ಲಿ ಕನಸಿನಲ್ಲೂ ಸ್ವಾಗತಿಸದ ಮನುಷ್ಯ ಯಾರಾದರೂ ಇದ್ದಾರಾ ಎಂದರೆ ಅದು ಅವನೊಬ್ಬನೇ ! ಹಾಗಂತ ಇಬ್ಬರೂ ಗಟ್ಟಿಯಾಗಿ ಜಗಳ ಮಾಡಿಲ್ಲ. ಮಾತಾಡಿದ್ದು ಸಹ ತುಂಬಾ ಕಮ್ಮಿ !                                                           ********** ಶಾಲಾ ಜೀವನದ ಸಹಪಾಠಿ. ಯಾವಾಗಲೂ ಯಾವ ಗಿಡದ ಕೆಳಗೋ ಅಥವಾ ಆಟದ ಮೈದಾನದಲ್ಲೋ ಕಾಣಿಸಿಕೊಳ್ಳುತ್ತಿದ್ದ…. ತುಂಡಾದ ಗಾಳಿ ಪಟದ ಹಾಗೆ ! ನೋಡಿದಾಗಲೆಲ್ಲ ನಗುತ್ತಿದ್ದ….. ತನ್ನೆತ್ತರದ ನಿರ್ಲಕ್ಷ್ಯದಂತೆ ! ಧರಿಸುವ ದಿರಿಸಿನ ಮೇಲೆ ಗಮನ ಇರುತ್ತಿರಲಿಲ್ಲ. ಕಾಲಲ್ಲಿ ಚಪ್ಪಲಿ ಇಲ್ಲದೆ ತಿರುಗುತ್ತಿದ್ದ ಒಬ್ಬನೇ ವಿದ್ಯಾರ್ಥಿ ನಮ್ಮ ಶಾಲೆಯಲ್ಲಿ ಎಂದರೆ ಇವನೇ ! ಅಷ್ಟೇ ಅಲ್ಲ. ನನ್ನ ಸ್ವಾಭಿಮಾನಕ್ಕೆ ಮೊದಲಸಲ ಧಕ್ಕೆ ತಂದವನೂ ಇವನೇ. ಸದಾ ಕ್ಲಾಸಿನಲ್ಲಿ ನಾನೇ ಮೊದಲಿಗನಾಗುವಂತೆ ನೋಡಿಕೊಳ್ಳುತ್ತಿದ್ದೆ. ಟೆನ್ತ್ ಕ್ಲಾಸಿನ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಶಿವ ಲೆಕ್ಕದಲ್ಲಿ ಮೊದಲಿಗನಾಗಿದ್ದ. ಆ ದಿನಗಳಲ್ಲಿ ಅದೊಂದು ಸೆನ್ಸೇಷನ್ ! ಹಿಂದಿನ ಬೆಂಚಿನಲ್ಲಿ ಇದ್ದಾನಾ ಇಲ್ಲವಾ ಎನ್ನುವಷ್ಟು ಸೈಲೆಂಟಾಗಿ ಇರುವ ಹುಡುಗ ಇದ್ದಕ್ಕಿದ್ದಂತೆ ಎಲ್ಲರ ಕಣ್ಣಿಗೆ ಬಿದ್ದ. ’ ಎಷ್ಟು ಸೈಲೆಂಟಾಗಿರ್ತೀಯಲ್ಲ… ಅಷ್ಟು ಮಾರ್ಕ್ ಹೇಗೆ ತೆಗೆದೆ ಮಾರಾಯಾ ’ ಅಂತ ಕೇಳಿದರೆ… ’ ಓದಿದ್ದೇ ಬಂದರೆ ಯಾರಾದರೂ ತೆಗೀತಾರೆ. ಇದರಲ್ಲೇನಿದೆ ’ ಅಂತ ಕಾಜುವಲ್ಲಾಗಿ ಉತ್ತರ ಕೊಟ್ಟಿದ್ದ. ಆದರೆ ಸೋಜಿಗದ ಸಂಗತಿ ಎಂದರೆ ಮತ್ತೆ ಯಾವಾಗಲೂ ಅವನು ಅಷ್ಟು ಮಾರ್ಕು ತೆಗಿಯಲಿಲ್ಲ. ಬರೀ ಬೇಕಾಗುವಷ್ಟು ಮಾರ್ಕುಗಳಿಂದಲೇ ಟೆನ್ತ್ ಪಾಸಾದ. ಆಗಲೇ ಅವನ ತಂದೆ ತೀರಿಹೋದರು. ಮನೆ ನಡೆಯೋದೇ ಕಷ್ಟವಾಯಿತು. ಸರಿಯಾಗಿ ಆರು ತಿಂಗಳ ನಂತರ….. ಬೀದಿ ಕೊನೆಯ ಶಿವಾಲಯದಲ್ಲಿ ಪೂಜಾರಿಯಾಗಿ ಕಾಣಿಸಿಕೊಂಡ. ಅಲ್ಲಿಯವರೆಗೆ ಮಾತ್ರ ನನಗೆ ನೆನಪು. ಮತ್ತೆ ನಾನು ಆ ಊರು ಬಿಟ್ಟಿದ್ದೆ… ಅಲ್ಲಿಯ ನೆನಪುಗಳನ್ನು ಸಹ. ****** ಇದೆಲ್ಲ ನಲವತ್ತು ವರ್ಷಗಳ ಕೆಳಗಿನ ಮಾತು ! ಇವತ್ತು ಮತ್ತೆ ನೆನಪಿಗೆ ತಂದುಕೊಳ್ಳಬೇಕಾಗಿದೆ. ಎಲ್ಲಿಯ ಕರ್ನೂಲು ಎಲ್ಲಿಯ ಕೆನಡಾ. ತಾನು ಇಲ್ಲಿಗೆ ಹೇಗೆ ಬಂದದ್ದು ?… ತಾನು ಇಲ್ಲಿರುವುದು ಮೂರನೆಯ ಕಣ್ಣಿಗೆ ಗೊತ್ತಿರಲಿಲ್ಲ…. ಅಂಥಾದ್ರಲ್ಲಿ ಇವನಿಗೆ ಹೇಗೆ ಗೊತ್ತಾಯಿತು ? ರಿಷಿಗೆ ಸಿಟ್ಟು ಉಕ್ಕುಕ್ಕಿ ಬರುತ್ತಿತ್ತು …. ತನ್ನ ಮೇಲೆ…. ತನ್ನ ಬದುಕಿನ ಮೇಲೆ…. ಶಿವನ ಮೇಲೆ….. ಮಾತಾಡಿಸಲೇ ಬೇಕಾಗಿ ಬಂದ ಈ ಸಂದರ್ಭದ ಮೇಲೆ. ….. ಈಗೇನು ಮಾಡೋದು? ಮತ್ತೆ ಪ್ರಶ್ನೆ ಮೊದಲಿಗೇ ಬಂತು. ತಲೆ ಕೊಡವಿ ಎದ್ದ ಅನಿವಾರ್ಯವೆನ್ನುವಂತೆ. ******* ಐದೇ ನಿಮಿಷದ ಆತಿಥ್ಯ. ಅದೂ ಎಷ್ಟು ಬೇಕೋ ಅಷ್ಟು. “ ಹಾಯ್ ! ಹೇಗಿದ್ದಿಯಾ ?…. ಸಾರೀ ಹೇಗಿದ್ದೀರಿ? “ ರಿಷಿಯನ್ನು ನೋಡಿದ ಶಿವ ವಿಶ್ ಮಾಡಿದ. “ ಫರ್ವಾ ಇಲ್ಲ. ನೀನು ಹೇಗಿದ್ದೀಯಾ ?” ತುಟಿಯ ಮೇಲೆ ಬಲವಂತದ ನಗೆಯನ್ನು ಬಳೆದುಕೊಂಡ ರಿಷಿ. “ ಓ ಸೂಪರ್ ! ಎರಡು ವಾರದ ಹಿಂದೆ ಕೆನಡಾಗೆ ಬಂದೆ. ನನ್ನ ಅಣ್ಣನ ಮಗ ಇಲ್ಲಿ ಡಾಕ್ಟರ್. ಅವನೇ ತುಂಬಾ ಒತ್ತಾಯ ಮಾಡಿ ಎಳ್ಕೊಂಡು ಬಂದ… ಕೆನಡಾ ತೋರಿಸ್ತೇನೆ ಅಂತ.” ಶಿವ ತಮಾಷೆಯಾಗಿ ನಗುತ್ತಾ ಮಾತಾಡ್ತಿದ್ದರೆ ರಿಷಿ ನಿರ್ವಿಕಾರವಾಗಿ ನೋಡುತ್ತಿದ್ದ. ಅದೇ ನಗು.. ನಲವತ್ತು ವರ್ಷ ಕಳೆದರೂ ಮಾಸಿಲ್ಲ. ಅವನಲ್ಲಿ ನಗು ಹೇಗೆ ಹುಟ್ಟುತ್ತೋ ರಿಷಿಗೆ ಅರ್ಥವಾಗದ ವಿಷಯ. ತಾನು ದಿನಾಲೂ ಐದಾರು ಮೀಟಿಂಗ್ ಅಟೆಂಡ್ ಮಾಡ್ತಾನೆ. ಕಂಪೆನಿಗಳಿಗೆ ಸಂಬಂಧ ಪಟ್ಟ ಸೀರಿಯಸ್ ನಿರ್ಣಯಗಳನ್ನು… ನಿರ್ದಾಕ್ಷಿಣ್ಯ ನಿರ್ಣಯಗಳನ್ನು.. ಹೀಗೆ ಚಿಟಿಕೆ ಹೊಡೆಯೋದರಲ್ಲಿ ತೊಗೊಳ್ಳಬಲ್ಲ. ಆದರೆ ಈ ತರದ ನಗೆಗಾಗಿ ಎಂದೂ ಪ್ರಯತ್ನಿಸಿಲ್ಲ. ತನ್ನ ಪರ್ಸನಲ್ ಟ್ರೈನರ್ ನ ದೂರು ಇದೇ ! “ ಸರ್! ನೀವೆಲ್ಲ ಓಕೇ. ಆದರೆ ನಿಮ್ಮಲ್ಲಿ ಸ್ಮೈಲ್ ಈಸ್ ಮಿಸ್ಸಿಂಗ್ ! “ ಅಂತ. ಶಿವನ್ನ ನೋಡಿದಾಗ ಮತ್ತೆ ಆ ಮಾತುಗಳು ನೆನಪಿಗೆ ಬಂದವು. “ ಡಾಕ್ಟರಾ….” “ ಹೌದು. ಗೌರೀಪತಿ ವೇದುಲ….. ಆನ್ಕಾಲಜಿಸ್ಟ್. ಅವನ ಹೆಂಡತಿ ಹಾರಿಕಾ, ರೇಡಿಯಾಲಜಿಸ್ಟ್. “ ರಿಷಿ ತಲೆ ಅಲ್ಲಾಡಿಸಿದ. ಏನೂ ಮಾತಾಡಲಿಲ್ಲ. ಕಣ್ಣ ಹಿಂದೆ ಒಂದು ನೆರಳು ಹಾದು ಮರೆಯಾಯ್ತು. “ ನೀನು ಇಲ್ಲಿದ್ದೀಯಾ ಅಂತ ಗೊತ್ತಾಯ್ತು. ಕರ್ನೂಲಿನ ದೋಸ್ತನನ್ನು ಕೆನಡಾದಲ್ಲಿ ಭೇಟಿ ಮಾಡೋದು…. ಭಾರೀ ಗಮ್ಮತ್ತಾಗಿದೆ ಅಲ್ಲಾ …” ರಿಷಿ ಮುಜುಗರದಿಂದ ಮಿಸುಕಾಡಿದ. “ ಶಿವ…. ಸಾರೀ. ನನಗೆ ಪ್ರಿ ಫಿಕ್ಸ್ಡ್ ಷೆಡ್ಯೂಲ್ ಇದೆ… ಮತ್ತೆ ಸಿಗೋಣ… “ “ ಓ ಹೌದಾ… ಇಟ್ಸ್ ಒಕೆ.. ಖಂಡಿತಾ ಸಿಗೋಣ. “ “ ಹೇಗೆ ಹೋಗ್ತಿಯಾ ….ಇರು. ನನ್ನ ಡ್ರೈವರ್ ಡ್ರಾಪ್ ಮಾಡ್ತಾನೆ “ ಫೋನ್ ಮಾಡಲು ಹೋದ ರಿಷಿಯನ್ನು ಶಿವ ತಡೆದ. “ ಬೇಡ… ಬೇಡ. ಡಾಕ್ಟರ್ ನ ಕಾರಿದೆ. ಅವರಿಬ್ಬರೂ ಬರೋದ್ರಲ್ಲಿ ರಾತ್ರಿಯಾಗತ್ತೆ. ನಾನು ಸ್ವಲ್ಪ ಹಾಗೆ ಒಂದು ಸುತ್ತು ಹಾಕಿ ಮನೆ ಸೇರ್ತೀನಿ…..” ಬಾಗಿಲ ವರೆಗೆ ಹೋದ ಶಿವ ಹಿಂದಿರುಗಿದ. “ ರಿಷಿ! ಎಲ್ಲಾ ಸರಿಯಾಗಿದೆಯಾ.. “ ಒಂದು ಕ್ಷಣ ಕಾಲ ನಿಶ್ಶಬ್ದ… “ ಯಾ… ಯಾಕೆ ಹಾಗೆ ಕೇಳ್ತಿದ್ದಿ ?” ತಡವರಿಸುತ್ತಾ ಕೇಳಿದ ರಿಷಿ. “ಏನಿಲ್ಲ. ಜಸ್ಟ್ ಕೇಳಬೇಕೆನಿಸಿತು. ಇಂಡಿಯಾಗೆ ವಾಪಸ್ ಹೊಗೋದರಲ್ಲಿ ಮತ್ತೆ ಸಿಗ್ತೀನಿ.” ಶಿವ ಹೋದಮೇಲೆ ಸೋಫಾದ ಮೇಲೆ ಕುಸಿದ ನಿತ್ರಾಣವಾಗಿ. ************ ರಿಷಿ ತನ್ನ ಜೀವನದಲ್ಲಿ ಯಾವುದುಕ್ಕಾಗಿಯೂ ನಿಲ್ಲಲಿಲ್ಲ. ಧಾವಂತದಲ್ಲೇ ಐದು ದಶಕ ದಾಟಿದ್ದ. ಕೆಲಸಕ್ಕೆ ಸೇರಿದ್ದರಿಂದ ಹಿಡಿದು…. ನೂರಾರು ಜನಕ್ಕೆ ಕೆಲಸ ಕೊಡುವ ಹುದ್ದೆಗೆ ತುಂಬಾ ಸುಲಭವಾಗಿ ಸೇರಿದ್ದ. ಈ ಪಯಣದಲ್ಲಿ ಕಷ್ಟಗಳು ಇರಲಿಲ್ಲವೆಂತಲ್ಲ, ಬೇಕಾದಷ್ಟು.. ಅದರೆ ಅವುಗಳನ್ನು ಲೆಕ್ಕ ಮಾಡದಷ್ಟು ನಿರ್ಲಕ್ಷ್ಯ ಅಭ್ಯಾಸ ಮಾಡಿಕೊಂಡಿದ್ದ.  ಗುರಿ ಮುಟ್ಟ ಬೇಕಾದರೆ…. ಮುಟ್ಟುವ ವರೆಗೆ ಪ್ರಯತ್ನಿಸುವುದೇ … ಎನ್ನುವ ಸೂತ್ರವನ್ನು ನಂಬಿದ್ದ… ಮತ್ತೆ ಆಚರಿಸಿದ್ದ. ನಲವತ್ತರ ವಯಸ್ಸಿಗೆ ಉದ್ದಿಮೆದಾರ. ರಿಷಿ ಸೊಲ್ಯೂಷನ್ಸ್ ಅಂತ ಶುರುವಾಗಿ ಈಗ ರಿಷಿ ಗ್ರೂಪ್ ಆಫ್ ಇಂಡಸ್ಟ್ರೀಸ್ ವರೆಗೆ ಬೆಳೆಸಿದ್ದ. ಮಗಳಿಗೆ ಮದುವೆ ಮಾಡಿ ಅಳಿಯನಿಗೆ ಕಂಪೆನಿಯಲ್ಲಿ ಹೊಣೆಗಾರನನ್ನಾಗಿ ಮಾಡಿದ. ಮಗ ಎಂಡಿ ಯಾಗಿದ್ದು ಗ್ರೂಪಿನ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುತ್ತಿದ್ದ. ಆದರೆ ಜೀವನದಲ್ಲಿ ಮೊದಲನೆಯ ಸಲ ಬಹು ಆಶ್ಚರ್ಯವಾಗಿ ಸ್ವಲ್ಪ ನಿಲ್ಲಬೇಕಾಗಿ ಬಂತು. ಆರಾಮದ ಸಲುವಾಗಿ ಕೆನಡಾಗೆ ಬಂದಿದ್ದ. ರಿಷಿಗೆ ಕೆನಡಾ ಫೇವರೆಟ್ ಪ್ಲೇಸ್. ತನ್ನ ಹೆಂಡತಿ ಮಹಿತಾ ತೀರಿಕೊಂಡ ಮೇಲೆ ಪೇರಿಕೊಂಡ ಒಬ್ಬಂಟಿತನವನ್ನು ಹೋಗಲಾಡಿಸಲು ಪ್ರತಿ ವರ್ಷವೂ ಇಲ್ಲಿಗೆ ಬರುತ್ತಿದ್ದ. ರಿಷಿಗೆ ಮೊದಲಿನಿಂದಲು ಯಾವ ವಿಷಯವನ್ನಾದರೂ ಗೋಪ್ಯವಾಗಿ ಇಡುವುದು ಅಭ್ಯಾಸ. ಅದೂ ಕಂಪೆನಿಯ ವಿಷಯವೆಂದರೆ ಇನ್ನೂ ಸರಿ.. ತೀರ ಕಠಿಣವಾಗಿರುತ್ತಿದ್ದ. ತಾನು ಕೆನಡಾಗೆ ಬಂದಿರುವ ವಿಷಯ ಯಾರಿಗೂ ಗೊತ್ತಾಗಂತೆ ನೋಡಿಕೊಂಡಿದ್ದ. ಎಲ್ಲ ಪಕ್ಕಾ ಪ್ಲಾನ್ ಮಾಡಿಯೇ ತನ್ನ ಟೂರ್ ಕನ್ಪರ್ಮ್ ಮಾಡಿಕೊಂಡಿದ್ದ. ಬಂದು ಒಂದು ತಿಂಗಳಾಗಿದ್ದರು ತಾನು ಇಲ್ಲಿ ಇರುವುದು ಯಾರಿಗೂ ಗೊತ್ತಾಗದ ಹಾಗೆ ತನ್ನ ಪರ್ಸನಲ್ ಸ್ಟಾಫ್ ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಆದರೂ, ಶಿವ ಅದು ಹೇಗೆ ಕಂಡು ಹಿಡಿದ? ಸ್ವಲ್ಪ ಹೊತ್ತಿಗೆ ಏನೋ ಹೊಳೆಯಿತು. ಅವನಿಗೆ ವಿಷಯ ಹೇಗೆ ತಿಳಿಯಿತೋ ಅರ್ಥವಾಯಿತು. ********** “ ಹಾಯ್ ಸರ್……ಹೇಗಿದ್ದೀರಿ? “ ಎನ್ನುತ್ತ ಗೌರೀಪತಿ ನಗುತ್ತ ಒಳಬಂದ. “ ಯಾ ಫರ್ವಾ ಇಲ್ಲ….” ಧ್ವನಿ ಬಾವಿಯೊಳಗಿಂದ ಬಂದಂತೆ ನೀರಸವಾಗಿತ್ತು. “ ಒನ್ ಮಿನಿಟ್…. “ ಎನ್ನುತ್ತ ಪಲ್ಸ್, ಬಿಪಿ ಚೆಕ್ ಮಾಡಿದ. “ ಹಾ.. ಒಕೆ. ಹೇಳಿ. ತುಂಬಾ ನಿತ್ರಾಣ ಎನಿಸುತ್ತಿದೆಯೇ …” ’ ಹೌದು. ತುಂಬಾನೇ….ಒಮ್ಮೊಮ್ಮೆ ಏಳಲಿಕ್ಕೆ ಸಹ ಬರದ ಹಾಗೆ….” “ ವೆಲ್… “ ಯಾರಿಗೋ ಕಾಲ್ ಮಾಡಿದ. “ ಸರ್. ಇವತ್ತಿನಿಂದ ನಿಮಗೆ ಪರ್ಸನಲ್ ಡೈಟಿಷಿಯನ್ ಬರ್ತಾರೆ. ಷಿ ಈಜ್ ಬೃಂದಾ ಫ್ರಂ ಅವರ್ ಹಾಸ್ಪಿಟಲ್. ನಿಮ್ಮ ಆಹಾರದ ವಿಷಯ ಎಲ್ಲಾ ಪೂರ್ತಿಯಾಗಿ ತಾನೇ ನೋಡಿಕೊಳ್ತಾಳೆ. ಮೆಡಿಸಿನ್ ಕಂಟಿನ್ಯೂ ಮಾಡಿ. ಹೋಪ್ ಎವ್ರೀ ಥಿಂಗ್ ಗುಡ್..” . ಎದ್ದ. “ ಅಂದಹಾಗೆ ಚಿಕ್ಕಪ್ಪ ನಿಮ್ಮನ್ನ ಕೇಳಿದೆನೆಂದು ಹೇಳಲು ಹೇಳಿದ್ದಾರೆ. ಅವರು ನಿಮಗೆ ಕಾಲ್ ಮಾಡ್ತಾರಲ್ಲಾ..” “ ಯಾ.. ಜಿಡ್ಡು ಕೃಷ್ನಮೂರ್ತಿಯವರ ಪ್ರವಚನ ಕಳಿಸ್ತಾನೆ..” “ ಎಕ್ಸಲೆಂಟ್ ರಿಷಿಯವರೇ ! ಚಿಕ್ಕಪ್ಪ ನಂಥವರು ಒಬ್ಬರಿದ್ದರೆ ಸಾಕು ಎಷ್ಟು ಕಷ್ಟ ಬಂದರೂ ತಡೆದು ಕೊಳ್ಳಬಹುದು. ತುಂಬ ಕೂಲ್ ಪರ್ಸನಾಲಿಟಿ…. “ ಗೌರೀಪತಿಹೊರಟಿರಲು…“ ಡಾಕ್ಟರ್… ನಾನು ಇದರಿಂದ ಹೊರಬೀಳುತ್ತೀನಾ…. “ ರಿಷಿ ಅನೂಹ್ಯವಾಗಿ ಪ್ರಶ್ನಿಸಿದ. ಗೌರೀಪತಿಯ ಮುಖದಲ್ಲಿಯ ಬಣ್ಣಗಳು ಬದಲಾದವು. ಮತ್ತೆ ತಕ್ಷಣ ಸರಿಪಡಿಸಿಕೊಂಡ. “ ವೈನಾಟ್…ನಿಮ್ಮಲ್ಲಿ ಇಂಪ್ರೂವ್ ಮೆಂಟ್ ಕಾಣ್ತಿದೆ… ಡೋಂಟ್ ವರ್ರಿ ಸರ್. ನಾವಿದ್ದೀವಲ್ಲ “ ರಿಷಿಯ ಮುಖದಲ್ಲಿ ಒಂದು ನಿರ್ಲಿಪ್ತ ನಗೆ. “…. ಅದಕ್ಕೆ ನನಗೆ ಡಾಕ್ಟರ್ ಗಳೆಂದರೆ ಇಷ್ಟ. ಪ್ರಾಣಾನೇ ಹೊಗ್ತಾ ಇದ್ರೂ ಸರಿ… ನಿಮಗೇನೂ ಆಗಲ್ಲ ಅಂತ ಧೈರ್ಯಕೊಡ್ತಿರ್ತಾರೆ. “ “ ರಿಷಿಜೀ. ಈ ಸಮಯದಲ್ಲಿ ನೀವು ತುಂಬಾ ಯೋಚನೆ ಮಾಡಬೇಡಿ. ಜಸ್ಟ್ ಲಿವ್ ದಿಸ್ ಮೊಮೆಂಟ್. ದಟ್ಸಾಲ್. ಇಷ್ಟೆಲ್ಲ ಜೀವನಾನ್ನ ನೋಡಿದೀರಿ. ನಿಮಗೆ ಗೊತ್ತಿರದ ಫಿಲಾಸಫಿ ಏನಿರತ್ತೆ ಹೇಳಿ? ಆದ್ರೂ ನಿಮಗೇ ಗೊತ್ತಿದ್ದ ಹಾಗೆ…. ಎವೆರಿಬಡಿ ಷುಡ್ ಎಗ್ಜಿಟ್…. ಟುಡೇ ಆರ್ ಟುಮಾರೋ….. ರೈಟ್. ಹಾಗಾದ್ರೆ ನಾನು ಬರ್ಲಾ. ಟೇಕ್ ಕೇರ್. “ ಗೌರೀಪತಿ ಹೊರಟು ಹೋದ. ಒಂದಷ್ಟು ವಿಶ್ವಾಸ ಮತ್ತೊಂದಷ್ಟು ನಂಬಿಕೆಯನ್ನು ಬಿತ್ತುತ್ತಾ.. *************** ಪರಿಸ್ಥಿತಿಗಳು ಬದಲಾಗುವುದಕ್ಕೆ ವರ್ಷಗಳು ಬೇಕಾಗಿಲ್ಲ. ಕೆಲ ದಿನ, ಗಂಟೆಗಳು, ನಿಮಿಷಗಳು ಸಾಕು. ರಿಷಿಗೆ ಇತ್ತೀಚೆಗೆ ಇದು ಅನುಭವಕ್ಕೆ ಬರುತ್ತಿತ್ತು. ಸಮಯ ತುಂಬಾ ಭಾರವಾಗಿ ಸಾಗುತ್ತಿತ್ತು. ರೂಮ್ ಬಿಟ್ಟು ಹೊರಗೆ ಹೋಗಿ ಅದೆಷ್ಟು ದಿನವಾಗಿತ್ತೋ ? ಸದಾ ಲ್ಯಾಪ್ ಟಾಪಿನಲ್ಲಿ ಬ್ಯುಸಿಯಾಗಿರುತ್ತಿರುವ ರಿಷಿಯ ಕೈಯಲ್ಲಿ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕ ಕಾಣುತ್ತಿದೆ. ಯಾರೂ ತನ್ನನ್ನು ಡಿಸ್ಟರ್ಬ್ ಮಾಡದಂತೆ ಏಕಾಂತ ಸೃಷ್ಟಿಸಿಕೊಂಡ ರಿಷಿ ಸದ್ಯ ಒಬ್ಬಂಟಿ ತನದಿಂದ ಒದ್ದಾಡುತ್ತಿದ್ದ. ಇಷ್ಟೂ ದಿನ ತನ್ನನ್ನು ಹಿಡಿದು ನಿಲ್ಲಿಸಿದ ಆತ್ಮ ನಿರ್ಭರತೆ ಮೆಲ್ಲಗೆ ಕರಗುತ್ತಿತ್ತು. ಯಾಕೋ ಪಯಣ ಮುಗಿಯುತ್ತದೆ ಎನ್ನುವ ಫೀಲಿಂಗ್. ಸಣ್ಣ ಸಣ್ಣ ವಿಷಯಗಳಿಗೇ ತುಂಬಾ ಎಮೋಷನಲ್ ಆಗ್ತಿದ್ದ.. ಕಣ್ಣು ತೇವವಾಗದ ದಿನಗಳೇ ಇಲ್ಲಾಂತ ಆಗಿತ್ತು. ಆ ಗಟ್ಟಿತನ… ಮೊಂಡುತನ…. ಪಾದರಸವನ್ನು ಮೀರಿಸುವ ಚುರುಕು ಮೇಧಾಶಕ್ತಿ ಎಲ್ಲಾ ಏನಾಗಿವೆ ? ಏನೋ! ಶಿವ ಆಗಾಗ ಫೋನ್ ಮಾಡಿ ಮಾತಾಡುತ್ತಿದ್ದ. ಶುರುವಿನಲ್ಲಿ

ಮಿಸ್ಟರ್ ಅನ್ ಫ್ರೆಂಡ್ Read Post »

ಕಥಾಗುಚ್ಛ

ಪಾರಿವಾಳ ರಾಣಿ

ಕಥೆ ಪಾರಿವಾಳ ರಾಣಿ ಹರೀಶ್ ಗೌಡ ಒಂದು ಪ್ರೇಮ ಕಥೆ ಕ್ರಿ ಶ ಮತ್ತು ಕ್ರಿ ಪೂ ದಲ್ಲಿ ಹಿಂದೆ ಜಗತ್ತು ಹೇಗಿತ್ತು? ಸ್ವಚ್ಚಂದ ಜಗತ್ತು ಪ್ರಕೃತಿಯ ಮಡಿಲಿನಲ್ಲಿ ಸರ್ವರು ಸಮಾನರೆಂಬ ಭಾವನೆ ಇದ್ದಂತ ಕಾಲ. ಮತ್ತು ಜಾತಿ ವರ್ಣ ಇದರ ತಕರಾರು ಇಂದಿನದಲ್ಲ ಹಿಂದಿನಿಂದಲೂ ಇದೆ ಅದೆಲ್ಲ ಬಿಡಿ ನಮ್ಮ ಕಥೆ ಶುರು ಮಾಡೊಣ ಓದೊಕೆ ನೀವ್ ರೇಡಿ ಅಲ್ವ ಮತ್ತೆ ಬನ್ನಿ ಯಾಕ್ ತಡ. ಸುತ್ತಲೂ ಬೆಟ್ಟ ಗುಡ್ಡಗಳು ಕಾಡು ನದಿಗಳ ಮಧ್ಯೆ ನೂರಾರು ಹಳ್ಳಿ ಸೇರಿದ ದೀನದತ್ತ ಎಂಬ ಮಹಾನ್ ಸಾಮ್ರಾಜ್ಯ ಸಕಲವೂ ಸರ್ವವೂ ಸಕಾಲಕ್ಕೆ ಸಿಗುವ ರಾಜ್ಯ ಅದು. ಅಲ್ಲಿ ದೀನದತ್ತ ಅರಳಿ ಮಹಾರಾಜ ಎಂಬ ದೊರೆ ಆಳುತ್ತಿದ್ದ ಮೊದಲ ಹೆಂಡತಿ ಮದುವೆಯ ಹೊಸದರಲ್ಲಿ ಅಕಾಲಿಕ ಮರಣದಿಂದ ರಾಜ ಎರಡನೆ ಮದುವೆ ಆದ ನಂತರ ಬಹುಕಾಲ ಕಾದರು ಮಕ್ಕಳಾಗಲಿಲ್ಲ ನಂತರ ಮೂರನೆಯ ಮದುವೆಯ ತೀರ್ಮಾನ ಮಾಡಿದ ಪಕ್ಕದ ರಾಜ್ಯದ ರಾಜಕುಮಾರಿ ಸುಗಂದಿಯನ್ನ ಅಪಹರಿಸಿ ಮದುವೆ ಆದ ಮಹಾನ್ ಪರಾಕ್ರಮಿಯಾಗಿದ್ದ ಅರಳಿರಾಜನನ್ನ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ ಇದನ್ನು ತಿಳಿದಿದ್ದ ಪಕ್ಕದ ರಾಜ ತನ್ನ ಮಗಳ ಅಪಹರಣವನ್ನ ವಿರೋದಿಸದೆ ಚಾಣಕ್ಷತನದಿಂದ ಬಂಧವನ್ನ ಬೆಳಿಸಿದ ವರ್ಷ ತುಂಬುವುದರೊಳಗೆ ದೀನದತ್ತ ಸಾಮ್ರಾಜ್ಯದಲ್ಲಿ ಒಂದು ಕಳೆ ಬಂದಂತ್ತಾಗಿತ್ತು ಮಹಾರಾಣಿ ಸುಗಂದಿ ಗರ್ಭವತಿಯಾದ ಸುದ್ದಿ ನಗರದೆಲ್ಲೆಡೆ ಹಬ್ಬಿತ್ತು. ಮಹಾರಾಜ ಅರಳಿರಾಜನಿಗಂತು ಬಹುಕಾಲದ ಕನಸು ನೆರವೇರುವ ಕಾಲ ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತಿತ್ತು. ನವಮಾಸ ತುಂಬಿ ಪ್ರಸವದ ದಿನ ಬಂದೆ ಬಿಟ್ತು ಇಡಿ ರಾಜ್ಯದಲ್ಲಿ ಕೂತುಹಲ ಆತಂಕ ಅಹಮನೆಯ ತುಂಬ ವೈದಿಕ ಮಂದಿಗಳು ಸೂಲಗಿತ್ತಿಯರು ಮಹಾರಾಣಿಯ ಹೆರಿಗೆಯ ಜವಬ್ದಾರಿ ವಹಿಸಿಕೊಂಡಿದ್ದರೂ. ಸಕಲ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ನೆರವೇರತೊಡಗಿದವು. ಮಹಾರಾಜನಿಗೊಂದು ವರದಿ ತಲುಪಿತ್ತು ಗರ್ಭದಲ್ಲಿ ಮಗು ಅಡ್ಡಲಾಗಿದೆ ಹೆರಿಗೆ ಕಷ್ಠವಾಗುತ್ತಿದೆ ಎಂಬುದು. ಸುದ್ದಿ ಕೇಳಿ ಅರಳಿರಾಜನಿಗೆ ಭಯ ಮತ್ತು ಆತಂಕ ಕಳೆಗಟ್ಟಿತ್ತು. ಸಮಯಕಳೆದಂತೆ ಕೊಠಡಿಯ ಒಳಗಿಂದ ಮಗು ಅಳುವ ನಾದ ಕೇಳಿದೊಡನೆ ರಾಜನ ಮನದಲ್ಲಿ ಆನಂದ ಇಡೀ ರಾಜ್ಯವೇ ಕುಣಿದು ಕುಪ್ಪಳಿಸಿತ್ತು ರಾಜ ಬಲು ಆನಂದದಿಂದ ರಾಣಿಯ ಬಳಿ ಓಡಿ ಬಂದು ನೋಡ್ತಾನೆ ಮಗು ಕೈಕಾಲು ಆಡಿಸುತ್ತಾ ಮಲಗಿಸಿದ್ದಾರೆ ಸೂಲಗಿತ್ತಿಯರು ಮಹಾರಾಜ ನಿಮಗೆ ಹೆಣ್ಣುಮಗು ಜನನವಾಗಿದೆ ರಾಜನಿಗೆ ಬಹುಕಾಲ ಮಕ್ಕಳಿಲ್ಲದ ನೋವಿನಲ್ಲಿದ್ದವನಿಗೆ ಗಂಡು ಮಗುವಾದರೇನು ಹೆಣ್ಣಾದರೇನು ಒಟ್ಟಿನಲ್ಲಿ ಆನಂದವಾಗಿತ್ತು ಜೊತೆಗೆ ಮತ್ತೊಂದು ಸುದ್ದಿ ಹೃದಯ ಚೂರು ಮಾಡಿತ್ತು ಪ್ರಸವದ ಸಮದಲ್ಲಿ ಆದ ಅತಿಯಾದ ವೇದನೆ ಮತ್ತು ಅಧಿಕ ರಕ್ತಸ್ರಾವದಿಂದ ಮಹಾರಾಣಿ ಸುಂಗಧಿ ಇಹಲೋಕ ತೊರೆದಿದ್ದಳು. ಅಕ್ಷರಃಸಹಾ ರಾಜ ಕುಸಿದು ಹೋಗಿದ್ದ ಆಸೆಯಂತೆ ಮಗು ದೊರೆತ್ತಿತ್ತು ಆದರೆ ಮಡದಿ ದೂರವಾಗಿದ್ದಳು ನೋವಿನ ನಡುವೆ ರಾಜನ ಮುಂದಿನ ದಾರಿ ಎರಡನೇ ಹೆಂಡತಿಯ ಆಶ್ರಯದಲ್ಲಿ ಈ ಮಗಳನ್ನ ಬೆಳೆಸಬೇಕಾಗಿತ್ತು. ಮಲತಾಯಿಯಾದರೂ ಮಕ್ಕಳಿಲ್ಲದೆ ಬಂಜೆಯಾಗಿದ್ದ ಮಹಾರಾಜನ ಎರಡನೇ ಹೆಂಡತಿ ಆ ಮುದ್ದು ಮಗಳನ್ನ ಸಾಕಿ ಬೆಳೆಸಿ ತಾಯಿಯ ಸ್ಥಾನ ತುಂಬಿದಳು ಮಗಳು ಸುಂದರಳೂ ದೃಢಕಾಯಳೂ ಆಗಿ ಬೆಳೆಯತೊಡಗಿದಳು. ತನ್ನ ಮಗಳಿಗೆ ಯಾವ ಕುಂದು ಕೊರತೆಗಳು ಬರದಂತೆ ಅರಳಿ ಮಹಾರಾಜ ಸರ್ವವೂ ಅರಮನೆಯಲ್ಲಿ ಮಗಳಿಗೆ ಸಿಗುವಂತೆ ಆದೇಶ ಹೊರಡಿಸಿದ. ಆಡುವ ಆಟಿಕೆ ಇಂದ ಹಿಡಿದು ಗೆಳತಿಯರು ಶಿಕ್ಷಣವೂ ಎಲ್ಲ ಅರಮನೆಯಲ್ಲಿ ಸಿಗತೊಡಗಿತು ಮುದ್ದಾದ ಮಗಳಿಗೆ ಶುಭ ದಿನವನ್ನ ರಾಜ್ಯ ಜೋತಿಷಿಗಳ ಸಮಾಗಮದಲ್ಲಿ ನಾಮಕರಣ ಸಮಾರಂಭ ನೇರವೇರಿಸಿ ಯುವರಾಣಿ ವಸುಂದರಾ ಎಂಬ ಹೆಸರಿಟ್ಟರು. ಹೆಸರಿಗೆ ತಕ್ಕಂತೆ ಹರ್ಷಚಿತ್ತಳು ,ಗಮನ ಸೆಳೆಯ ಮೊಗವು,ಉದಾರತೆಯು ಆಕೆಯಲ್ಲಿ ತುಂಬಿತ್ತು. ಗಂಡು ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣವೂ ಸೇರಿದಂತೆ ಸಕಲ ವಿಧ್ಯೆಗಳನ್ನ ಅರಳಿರಾಜ ತನ್ನ ಮಗಳಿಗೆ ಕಲಿಸತೊಡಗಿದ ಬಾಲ್ಯದಲ್ಲಿಯೇ ವಸುಂದರಾ ಗಂಭೀರವಾಗಿ ಸಮರ್ಥವಾಗಿ ವಿಧ್ಯೆಗಳನ್ನ ಕಲಿಯತೊಡಗಿದಳು. ಮಹಾ ಬುದ್ದಿವಂತೆಯಾದ ರಾಜಕುಮಾರಿ ವಸುಂದರಾ ಬಾಲ್ಯದಿಂದಲೇ ರಾಜ್ಯದ ನಾಗರೀಕರ ಕಷ್ಠಗಳನ್ನ ಅರಿಯತೊಡಗಿದಳು ಜಾತಿ ಬೇದವನ್ನ ಮಾಡಬಾರದು ಸರ್ವರೂ ಸಮಾನರು ನಾವೆಲ್ಲ ಮಾನವರೂ ಎಂಬ ಚಿತ್ತದಿಂದ ಆಡುತ್ತಾ ಕಲಿಯುತ್ತಾ ಬೆಳೆಯತೊಡಗಿದಳು. ಆದರೆ ಇಲ್ಲಿ ಇನ್ನೊಂದು ವಿಚಾರ ಹೇಳಲು ಮರೆತಿದ್ದೆ ಅರಳಿ ರಾಜ ತುಂಬಾ ಶಕ್ತಿಶಾಲಿ ರಾಜನೂ ಹೌದು ಅದರಂತೆ ಆತನಲ್ಲಿ ಜಾತಿಯತೇ ಮತ್ತು ಮೇಲು ಕೀಳು ಭಾವನೆ ಇತ್ತು ಅವರವರ ಜಾತಿ ಧರ್ಮಕ್ಕೆ ಅನುಸಾರವಾಗಿ ಬಾಳಬೇಕು,ದುಡಿಯಬೇಕು ಸದಾ ಉಳ್ಳವರ ಮುಂದೆ ತಲೆಬಾಗಿ ನಿಲ್ಲಬೇಕು ಇಂತಹ ಮನಸು ಅವನದಾಗಿತ್ತು ಆದರೂ ಪ್ರಜೆಗಳಿಗೆ ಸಲ್ಲಬೇಕಾದ ಸವಲತ್ತುಗಳನ್ನ ನೀಡಿ ಸಲಹುತ್ತಿದ್ದ. ವಸುಂದರಾ ಒಂದು ತರಹದಲಿ ಎಲ್ಲವೂ ದೊರೆತರೂ ಒಂಟಿತನ ಕಾಡತೊಡಗಿತು ಕಾರಣ ತಂದೆ ಅರಳಿರಾಜನ ಅತಿಯಾದ ಪ್ರೀತಿ ಅವಳನ್ನ ಅರಮನೆಯ ಪಂಜರದ ಗಿಳಿಯಂತೆ ಮಾಡಿತ್ತು. ಬೇಕಿದ್ದು ಬೇಡದ್ದು ಎಲ್ಲವನ್ನ ದೊರಕುವಂತೆ ಮಾಡಿದ್ದ ರಾಜ ತನ್ನ ಮಗಳನ್ನ ಅರಮನೆ ಇಂದ ಆಚೆ ಕಳಿಸುತ್ತಿರಲಿಲ್ಲ ಮಗಳ ಮೇಲಿನ ಅತಿಯಾದ ಕಾಳಜಿ ಸಹಾ ಇದಾಗಿತ್ತು ಮಗಳಿಗೆ ಯಾವ ತೊಂದರೆಯೂ ಬಾರದಿರಲಿ ಅವಳಿಗೆ ಯಾರಿಂದಲೂ ಯಾವ ಸನ್ನಿವೇಶದಲ್ಲಿಯೂ ಕೆಡುಕು ಬರದಿರಲಿ ಎಂಬ ಅತಿಯಾದ ಕಾಳಜಿ ವಸುಂದರಾ ಬಾಳಲ್ಲಿ ಒಂಟಿತನ ಮೂಡಿಸಿತ್ತು. ಬೆಳೆದು ದೊಡ್ಡವಳಾದ ವಸುಂದರಾ ಪ್ರತಿ ನಿತ್ಯ ಅರಮನೆ ಮೊಗಸಾಲೆಯ ಕಿಟಕಿಯಲಿ ಕುಳಿತು ಹೊರಜಗತ್ತನ್ನ ನೋಡುತ್ತ ಕುಳಿತುಕೊಳ್ಳುತ್ತಾಳೆ ದಿನ ಕಳೆದಂತೆ ಅರಮನೆಯ ಸಖಿಯರು ಪರಿಚಾಲಕರು ಅಂಗರಕ್ಷಕರು ಬೆಸರ ಅನಿಸತೊಡಗಿದೆ ದಿನ ನೋಡಿದ ಮುಖಗಳೆ ಇವೆಲ್ಲ ಹೊಸ ಜಗತ್ತು ಬೇಕು ಹೊರಗೆ ಸುತ್ತಾಡಬೇಕು ಎಂಬ ಆಸೆ ಮನಸಿನಲ್ಲಿ ಕಾಡತೊಡಗಿದೆ ತಂದೆಯ ಬಳಿ ಹಲವು ಸಲ ತಿಳಿಸಿದರೂ ಅರಳಿರಾಜ ನಿರಾಕರಿಸಿಬಿಟ್ಟಿದ್ದ. ಮೊಗಸಾಲೆಯ ಕಿಟಕಿಯಲ್ಲಿ ಏನನ್ನೊ ನೋಡುತ್ತಾ ಕುಳಿತಿದ್ದ ವಸುಂದರಾ ಹತ್ತಿರ ಜೊರಾಗಿ ಬಂದ ಪಾರಿವಾಳ ಕಿಟಕಿಗೆ ಬಡಿದು ಕೆಳಗೆ ಬಿದ್ದು ಬಿಟ್ಟಿತು ತಕ್ಷಣ ಗಮನಿಸಿದ ವಸುಂದರಾ ಭಟರಿಗೆ ಅದನ್ನು ಹಿಡಿದು ತರಲು ಹೇಳಿದರು ಅವಳ ಆಜ್ಞೆಯಂತೆ ತಂದು ಅವಳ ಕೈಗೆ ಇರಿಸಿದಳು ಹದ್ದಿನಿಂದ ತಪ್ಪಿಸಿಕೊಳ್ಳಲು ವೇಗವಾಗಿ ಹಾರಿಬಂದು ಅಚಾನಕ್ಕಾಗಿ ಕಿಟಕಿಗೆ ಬಡಿದಿದ್ದ ಪಾರಿವಾಳ ರೆಕ್ಕೆ ಮತ್ತು ಕಾಲಿಗೆ ಪೆಟ್ಟು ತಿಂದು ಹಾರದ ಸ್ತಿತಿಯಲ್ಲಿ ಇದ್ದದ್ದು ನೋಡಿ ರಾಜಕುಮಾರಿಗೆ ಮರುಕ ಹುಟ್ಟಿ ಬಂದಿತ್ತು ತಕ್ಷಣ ಅದರ ಉಪಚಾರವನ್ನ ಮಾಡಿ ಅದಕ್ಕೆ ಔಷದಿಗಳನ್ನ ಸಖಿಯರ ಮುಖಾಂತರ ತರಿಸಿ ಸಂತೈಸಿದಳು. ನೋವಿಗೆ ಮುಲಾಮು ತಾಗುತ್ತಿದ್ದಂತ್ತೆ ಪಾರಿವಾಳಕ್ಕೆ ಯಾರೋ ನನ್ನ ರಕ್ಷಿಸುತ್ತಿದ್ದಾರೆ ಎಂದು ಮನಸಿನಲ್ಲಿ ಅಂದುಕೊಳ್ಳುತ್ತಾ ಸುಮ್ಮನೆ ರಾಜಕುಮಾರಿಯ ಮಡಿಲಲ್ಲಿ ಕುಳಿತು ಬಿಟ್ಟಿತು. ಹೀಗೆ ಸುಮಾರು ಐದಾರು ದಿನಗಳ ತನಕ ಅರಮನೆಯಲ್ಲಿ ವಸುಂದರಾ ಚಿಕಿತ್ಸೆ ನೀಡಿ ಪಾರಿವಾಳವನ್ನ ರಕ್ಷಿಸತೊಡಗಿದಳು. ಇನ್ನೆರಡು ದಿನ ಕಳೆವ ಒತ್ತಿಗೆ ನಿಧಾನವಾಗಿ ಹಾರಲು ಶುರುಮಾಡಿದ ಪಾರಿವಾಳವ ಕಂಡ ರಾಜಕುಮಾರಿಗೆ ಏನೋ ಒಂದು ಸಂತಸ ಹಾರುತ್ತಾ ಹಾರುತ್ತಾ ಅವಳಿಗೆ ಸಂತೋಷವ ನೀಡುವ ಪಾರಿವಾಳ ಅವಳಿಗೆ ಅರಿವಿಲ್ಲದೆ ಹೊಸ ಜೊತೆಗಾರ ಸ್ನೇಹಿತನಾಗಿ ಹಿಡಿಸಿತ್ತು. ನಂತರದ ದಿನಗಳಲ್ಲಿ ರಾಜಕುಮಾರಿಯ ಜೊತೆ ಅರಮನೆಯಲ್ಲಿಯೇ ಕಾಯಂ ನೆಲೆಸಿತು ಅಲ್ಲಿಯೇ ಹಾರುತ್ತ ಅವಳ ಬಳಿಯೇ ಕುಳಿತುಕೊಂಡು ಕಾಳುಗಳ ತಿನ್ನುತ್ತಾ ಹೊರಗೆ ಹಾರಿ ಮರಳಿ ಮತ್ತೆ ಇವಳ ಬಳಿಯೇ ಬರತೊಡಗಿತು ಪಾರಿವಾಳವು ಇವಳನ್ನ ತುಂಬಾ ಹಚ್ಚಿಕೊಂಡು ಬಿಟ್ಟಿತು. ಅರಮನೆಯಲ್ಲಿ ಅಂದು ಬಣ್ಣಗಳ ಹಬ್ಬ ಸಖಿಯರ ಜೊತೆ ವಸುಂದರಾ ಬಣ್ಣಗಳಲ್ಲಿ ಬಣ್ಣವಾಗಿ ಪಾರಿವಾಳವನ್ನು ಬಣ್ಣಮಯವಾಗಿಸಿದ್ದಳು. ಸ್ವಲ್ಪ ಸಮಯದ ಬಳಿಕ ಪುರ್ ಎಂದು ಹೊರಗೆ ಹಾರಿದ ಪಾರಿವಾಳ ದೂರದ ಹೊಳೆಯ ದಡಕ್ಕೆ ಬಂದಿತ್ತು. ಬಟ್ಟೆ ತೊಳೆಯುತ್ತಾ ಎಂದಿನಂತೆ ಕೆಲಸದಲ್ಲಿ ನಿರತನಾಗಿದ್ದ ವಿಜಯರಾಮನಿಗೆ ಆ ಬಣ್ಣ ಬಳಿದ ಪಾರಿವಾಳವ ಕಂಡು ಮರುಕ ಬಂದಿತ್ತು ಯಾರೋ ಇದರ ಮೈಗೆಲ್ಲ ಹೀಗೆ ಹಿಂಸಿಸಿ ಬಣ್ಣ ಬಳಿದಿದ್ದಾರೆ ಎಂದು ಹಿಡಿದು ನಿಧಾನಕ್ಕೆ ಮೈಸವರಿ ನೀರಿನಿಂದ ತೊಳೆದು ಶ್ವೇತವರ್ಣಕ್ಕೆ ಬರಿಸಿದ್ದ. ಬಣ್ಣದ ಕಿರಿ ಕಿರಿ ಇಂದ ನೀರಿನಲ್ಲಿ ಸ್ನಾನಮಾಡಲು ಬಂದಿದ್ದ ತನ್ನ ಮೈತೊಳೆದ ರೀತಿ ನೋಡಿ ಪಾರಿವಾಳಕ್ಕೂ ಒಂದು ಬಗೆಯ ಹಿತವನಿಸಿತ್ತು. ಕೈಯಿಂದ ಹಠಾತ್ತಾನೆ ಹಾರಿ ಮತ್ತೆ ಅರಮನೆಗೆ ಮರಳಿ ಬಂದು ರಾಜಕುಮಾರಿಯ ಕೊಠಡಿ ಸೇರಿ ಕುಳಿತುಬಿಟ್ಟಿತು. ಮಜ್ಜನ ಮಗಿಸಿ ಬಂದ ವಸುಂದರಾ ಪಾರಿವಾಳವ ಕಂಡು ಆಶ್ಚರವಾಯಿತು ಅರೇ ಯಾರಿದರ ಮೈ ತೊಳೆದವರು ತಕ್ಷಣವೇ ಸಖಿಯರ ಕೂಗಿದಳು ಯಾರಲ್ಲು ಉತ್ತರವಿಲ್ಲ ಎಲ್ಲರದೂ ಒಂದೆ ಮಾತು ಗೊತ್ತಿಲ್ಲ ರಾಜಕುಮಾರಿ ನಾವು ನಿಮ್ಮೊಡನೆ ಇದ್ದೆವಲ್ಲ. ಅವಳಲ್ಲಿ ಉತ್ತರ ಸಿಗದಂತೆ ಈ ಪ್ರೆಶ್ನೆ ಉಳಿದು ಬಿಟ್ಟಿತು. ಜನರ ಬಾಯಿಂದ ಬಾಯಿಗೆ ರಾಜಕುಮಾರಿ ಮತ್ತು ಪಾರಿವಾಳದ ಗೆಳೆತನ ಅಬ್ಬತೊಡಗಿತು. ವಸುಂದರಾಳಷ್ಟೆ ಅರಮನೆಯಲ್ಲಿ ಪಾರಿವಾಳಕ್ಕೂ ಗೌರವ ಸಿಗತೊಡಗಿತು ಅವಳ ಅನುಮತಿ ಇಲ್ಲದೆ ಯಾರು ಅದನ್ನ ಮುಟ್ಟುವಂತೆ ಇರಲಿಲ್ಲ ಅದಕ್ಕೂ ಅಷ್ಟೆ ರಾಜಕುಮಾರಿಯ ಬಿಟ್ಟು ಮತ್ತೊಬ್ಬರ ಬಳಿ ಇರಲು ಇಷ್ಟವಿರಲಿಲ್ಲ. ವಸುಂದರಾ ಕೇಶ ಕಟ್ಟುವಾಗ ಪಕ್ಕದಲ್ಲೆ ಇದ್ದ ಪಾರಿವಾಳದ ಹಣೆಗೆ ಬೊಟ್ಟನ್ನ ಇಟ್ಟು ಕ್ಷಣಕಾಲ ಮುದ್ದಾಡಿದಳು ನಂತರ ಹೊರಗೆ ಹಾರಿದ ಆ ಹಕ್ಕಿ ನೇರವಾಗಿ ನದಿಯ ದಡದಲ್ಲಿ ಇಳಿಯಿತು ನೀರು ಕುಡಿದು ದಡದಲ್ಲಿ ಏನನ್ನೋ ತಿನ್ನುತ್ತಿದ್ದದ್ದನ್ನು ಗಮನಿಸಿದ ವಿಜಯರಾಮ ಇದು ಅಂದು ಬಂದ ಬಣ್ಣ ಬಳಿದ ಪಾರಿವಾಳ ಮತ್ತೆ ಯಾರೋ ಇದಕ್ಕೆ ಬೊಟ್ಟು ಇಟ್ಟಿದ್ದಾರೆ ಅನ್ನುತ್ತಾ ನೇರವಾಗಿ ಅದರ ಬಳಿಗೆ ಬಂದು ಕೈಯಲ್ಲಿ ಹಿಡಿದು ತೊಳೆದು ಬಿಟ್ಟ ಅಂದು ನನ್ನ ಮೈತೊಳೆದವನು ಇವನೆ ಎಂದು ಅರಿತಿದ್ದ ಪಾರಿವಾಳ ಭಯವಿಲ್ಲದೆ ಆತನ ಕೈ ಸೇರಿತ್ತು. ಈತನೂ ರಾಜಕುಮಾರಿ ತರಹ ಒಳ್ಳೆಯವನೆ ತೊಂದರೆ ಕೊಡದವನೆಂದು ಅದಕ್ಕೆ ನಂಬಿಕೆ ಬರಲಾರಂಭಿಸಿತು ಮತ್ತೆ ಅಂದಿನಂತೆ ಕಾ ಕೊಸರಿಕೊಂಡು ಅರಮನೆಗೆ ಹಾರಿ ಬಂದು ಬಿಟ್ಟಿತು. ಗೆಳೆಯ ಪಾರಿವಾಳ ಬಂದದ್ದು ಗಮನಿಸಿದ ವಸುಂದರಾ ಹಿಡಿದು ಮುದ್ದಾಡಲು ನೋಡಿದಾಗ ಹಣೆಯಲ್ಲಿ ಅವಳು ಇಟ್ಟ ಬೊಟ್ಟಿಲ್ಲ ಮತ್ತೆ ಆಶ್ಚರ್ಯ ಯಾರು ಇದರ ಹಣೆಯನ್ನು ತೊಳೆದು ಕಳಿಸಿದ್ದಾರೆ? ಕೂತುಹಲವೂ ಬರತೊಡಗಿತು ಮರುದಿನ ಮತ್ತೆ ಹಣೆಗೆ ಬೊಟ್ಟು ಇಟ್ಟು ಬಿಟ್ಟಳು ಕೆಲ ಸಮಯದ ಬಳಿದ ಹೊರಗೆ ಹಾರಿಹೋಯ್ತು ಮರಳಿ ಬಂದಾಗ ಶುಭ್ರವಾಗಿತ್ತು ಅವಳಿಗೆ ಇನ್ನಷ್ಟು ಕೂತುಹಲ ಬರಲಾರಂಭಿಸಿತು ಮತ್ತೆ ಮತ್ತೆ ಬಣ್ಣ ಬಳಿದಂತೆ ಹಾರಿ ಹೋಗುತ್ತಿತ್ತು ಮರಳಿ ಬಂದಾಗ ಮೈ ತೊಳೆದು ಕಳಿಸಿರುವುದು ಕಾಣುತ್ತಿತ್ತು. ಅರಮನೆಯ ಪಾಲಕರನ್ನ ಕರೆಸಿ ಇದರ ಗುಟ್ಟು ತಿಳಿಯಬೇಕು ಈ ಪಾರಿವಾಳ ಎಲ್ಲಿ ಹೋಗಿಬರುತ್ತದೆ ಎಂಬುದನ್ನು ಪತ್ತೆ ಮಾಡಲು ಹೇಳಿದಳು ವಸುಂದರಾಳ ಆಜ್ಞೆಯಂತೆ ಪಾರಿವಾಳದ ಜಾಡು ಹಿಡಿದ ಅರಮನೆ ಪಾಲಕರು ನದಿಯ ದಂಡೆಯಲ್ಲಿ ವಿಜಯರಾಮನ ಕಾಯಲ್ಲಿ ಪಾರಿವಾಳ ಇದ್ದದ್ದು ಗಮನಿಸಿದರು. ಅಲ್ಲಿಂದ ಅರಮನೆಗೆ ಬಂದ ಪಾಲಕರು ರಾಜಕುಮಾರಿಯ ಮುಂದೆ ನೆಡೆದ ಪ್ರಸಂಗವನ್ನ ತಿಳಿಸಿದರು ಕೂಡಲೆ ಆ ವ್ಯಕ್ತಿಯನ್ನ ನನ್ನೆದುರು ಕರೆತನ್ನಿ ಊ ಹೊರಡಿ ಎಂದ ವಸುಂದರಾ ಮಾತಿಗೆ ವಿಜಯರಾಮನ ಬಳಿ ಬಂದು ಅಯ್ಯ ಅಗಸನೇ ನೀನು ಕೂಡಲೆ ರಾಜಕುಮಾರಿಯನ್ನ ಕಾಣಬೇಕಿದೆ ಇದು ಅವರ ಆದೇಶ ಎಂದರೂ ನಾನು ಅರಮನೆಯ ರಾಜಕುಮಾರಿಯನ್ನ ಕಾಣಬೇಕೆ? ಯಾಕೆ ರಾಜಭಟರೇ ಎಂದಾಗ ಪಾರಿವಾಳದ ವಿಷಯ ತಿಳಿಸಿದರೂ ಕೂಡಲೆ ವಿಜಯರಾಮ ಅರಮನೆ ಪಾಲಕರ ಜೊತೆ ವಸುಂದರಾ ಮುಂದೆ ಬಂತು ನಿಂತ. ಪ್ರತಿ ನಿತ್ಯ ಬಿಸಿಲು ಮಳೆ ಎನ್ನದೆ ಬಟ್ಟೆಗಳನ್ನ ಒಗೆದು ಒಗೆದು ಮೈ ಬೆವರು ಕಾಲಿಯಾಗಿ ಮೈ ಕೈ ಕುಸ್ತಿಪಟುವಿನಂತೆ ದೃಢಕಾಯನಾಗಿದ್ದ ಇವನನ್ನ ಕಂಡ ವಸುಂದರಾ ಮನದಲ್ಲೆ ಆಹಾ ಅದೆಂತ ಯುವಕನೀತ ಸುಂದರನೂ ಮನಸೆಳೆವ ಮೈಕಟ್ಟು ಬೆಳೆಸಿರುವ ಯಾರು ಈತ

ಪಾರಿವಾಳ ರಾಣಿ Read Post »

ಕಥಾಗುಚ್ಛ

ಬಣ್ಣದ ಚಿಟ್ಟೆಗಳು

ಕಥೆ ಬಣ್ಣದ ಚಿಟ್ಟೆಗಳು ವಾಣಿ ಅಂಬರೀಶ ಈ ಊರಿನ ಕುವರ ಆ ಊರಿನ ಕುವರಿ ಅವಳೆಲ್ಲೋ ಇವನ್ನೇಲ್ಲೋ,, ಇನ್ನೂ ಇವರಿಬ್ಬರ ಪ್ರೀತಿ ಇನ್ನೇಲ್ಲೋ.. ಅದೇ ನಾ ಹೇಳ ಬಯಸುವ ಇವರಿಬ್ಬರ ನಡುವೆ ಪ್ರೀತಿ ಬೆಸೆಯುವ ಪ್ರೇಮದ ಕಥೆ.. ಮಲ್ನಾಡಿನ ಮುದ್ದು ಮನಸ್ಸಿನ ಬೆಡಗಿ, ಕೊಡಗಿನ ಕುವರಿ ಈ ಸ್ವಪ್ನ ಸುಂದರಿ, ಇವಳೇ ಈ ಕಥೆಯ ಕಥಾನಾಯಕಿ “ನಯನಶ್ರೀ “ ಈ ಭೂಮಿಯ ಮೇಲಿರುವ ಅದ್ಭುತಗಳಲ್ಲೊಂದಾದ ಆ ಮಲೆನಾಡಿನ ಹಸಿರ ಸಿರಿಯ ಸೊಬಗಿನಲ್ಲಿ ಚಂದದಿ ನಲಿದಾಡುತ ಬೆಳೆದಿರುವಳು ಈ ಕಥೆಯ ನಾಯಕಿ.. ಅನಂತಸ್ವಾಮಿ ಮತ್ತು ವೈದೇಹಿ ಎಂಬ ದಂಪತಿಗಳ ಪುತ್ರಿ ನನ್ನ ಕಥೆಯ ಸುಂದರಿ…ಇವರಿಗೆ ಆರತಿಗೂ ಒಬ್ಬಳೇ, ಕೀರುತಿಗೂ ಇವಳೊಬ್ಬಳೆ ಹಾಗಾಗಿ ಇನ್ನಷ್ಟು ಪ್ರೀತಿ, ಮಮತೆ, ಅಪ್ಯಾಯತೆಗಳ ಜೊತೆಗೆ ಚಿನ್ನದ ಗಣಿಯ ಹಾಗೇ ಜೋಪಾನ ಮಾಡುತ್ತಿದ್ದರು. ಈ ನಮ್ಮ ಕಥಾನಾಯಕಿಯ ಚೆಲುವ ಬಣ್ಣಿಸಲು ಅದೆಷ್ಟು ಮಣಿಮುತ್ತಿನ ಹಾರ ಪೋಣಿಸಿದರೂ ಸಾಲದು.. ಮೋಡದ ಮರೆಯ ಚಂದಿರನಂತೆ ಮುದ್ದು ಬಿಂಬ, ಪ್ರಕೃತಿಯ ಮಡಿಲಿನಲಿ ಆಕೃತಿಯ ರೂಪವಾಗಿ ನಮ್ಮ ಸಂಸ್ಕೃತಿಯೇ ಮೆಚ್ಚುವಂತಹ ಶ್ವೇತಾ ಸುಂದರಿ, ಚೆಲುವಿನ ಚಿತ್ತಾರದ ಚೈತ್ರ ಚಂದಿರನಂತೆ ಅವಳ ಚೆಲುವು, ಕಣ್ಣಿನೊಳಗೆ ಸೌಂದರ್ಯವೋ ಸೌಂದರ್ಯದೊಳಗೆ ಕಣ್ಣೋ ಎನ್ನುವಂತಹ ನಯನಗಳು, ಉದ್ದನೇಯ ರೇಷ್ಮೆಯ ನೂಲಿನಂತಹ ಕೇಶರಾಶಿಯಿಂದ ಸೌಂದರ್ಯ ದೇವತೆಗೆ ಸೆಡ್ಡು ಹೊಡೆಯುವಂತೆ ಇದ್ದಳು.. ಇನ್ನು ನಮ್ಮ ಕಥಾನಾಯಕನ ಬಗ್ಗೆ ಹೇಳುವುದಾದರೆ, ಇವನ್ನೊಬ್ಬ ಬಿಸಿಲನಾಡು ರಾಯಚೂರಿನ ಗಂಡೆದೆಯುವಕ, ಈ ಕಥೆಯ ಕಥಾನಾಯಕ “ಶತಾವರ “.. ರಾಮಮೂರ್ತಿ ಹಾಗೂ ಲಕ್ಷ್ಮೀ ಎಂಬ ದಂಪತಿಗಳ ಮೂವರು ಮಕ್ಕಳಲ್ಲಿ ನಮ್ಮ ಕಥೆಯ ನಾಯಕ ಕಿರಿಯ ಪುತ್ರನು. ಶ್ವೇತ ಮತ್ತು ಸ್ವಾತಿ ಎಂಬ ಸಹೋದರಿಯರ ಜೊತೆ ಆಟ, ಪಾಠ, ಚೇಷ್ಟೆಗಳ ಜೊತೆಗೆ ವಿದ್ಯಾ-ಬುದ್ದಿವಂತನಾಗಿ ಬೆಳೆಯುತ್ತಾನೆ. ನಮ್ಮ ನಾಯಕನೂ ಸಹ ಸುಂದರನಾಗಿರುತ್ತಾನೆ, ಎತ್ತರದ ಮೈಕಟ್ಟು, ಗೋದಿ ಬಣ್ಣದವನಾಗಿರುತ್ತಾನೆ.. ರೇಷ್ಮೆಯಂತಹ ಕೇಶರಾಶಿಯಡಿ ಚಂದನವನವೇ ನಾಚುವಂತ ಕೋಲ್ಮಿಂಚಿನ ಕಣ್ಣುವುಳ್ಳವ,, ಮರೆಯದಂತೆ ಮುಖದಲಿ ಮಂದಹಾಸ ಮೂಡಿಸುವ ಸುಂದರ ಮೊಗದ ಸೋಜಿಗ.. ಇವನೇ ಈ ಕಥೆಯ ಬಿಸಿಲಸಿಮೆಯ ಕಥಾನಾಯಕ “ಶತಾವರ “.. ಇವರಿಬ್ಬರ ಜೀವನದ ಗುರಿ, ತಲುಪಬೇಕಾದ ದಾರಿ ಒಂದೇ ಆಗಿದ್ದರೂ ಪ್ರಯಾಣಿಸುವ ದಿಕ್ಕು ಮಾತ್ರ ಬೇರೆ ಬೇರೆಯಾಗಿರುತ್ತದೆ. ಇಬ್ಬರು ಸಹ ಉತ್ತಮ ಸಮಾಜದ ನಿರ್ಮಾಣ, ಜನಸೇವೆ ಈ ಸಮಾಜದ ಬಗೆಗಿನ ಕಳಕಳಿ ಉಳ್ಳವರಾಗಿರುತ್ತಾರೆ. ಹಾಗಾಗಿ ಇಬ್ಬರು ಸಹ ಆಯ್ಕೆ ಮಾಡಿಕೊಂಡಿರುವುದು ಐ.ಎ.ಸ್ ಎಂಬ ಉನ್ನತವಾದ ಗೌರವಾನ್ವಿತ ಪದವಿ. ಇದರಿಂದ ಅವರ ಆಸೆಗಳ ಪೂರೈಸಿಕೊಳ್ಳುವ ನಿಟ್ಟಿನಲ್ಲಿರುತ್ತಾರೆ.. ನಂತರದ ದಿನಗಳಲ್ಲಿ ಶತಾವರ ರವರು ಐ.ಎ.ಸ್ ಪರೀಕ್ಷೆ ತೇರ್ಗಡೆಯಾಗಿ ಎರಡು ವರ್ಷದ ಪ್ರೋಬೆಷನರಿ ಅವಧಿ ಮುಗಿಸಿಕೊಂಡು ಕೊಡಗು ಜಿಲ್ಲೆಯ ಸಿ.ಇ.ಒ ಆಗಿ ನೇಮಕ ಹೊಂದುತ್ತಾರೆ. ಇನ್ನೂ ನಯನಶ್ರೀ ಅವರು ತಮ್ಮ ಕನಸನ್ನು ಪೂರೈಸುವ ಹಾದಿಯಲ್ಲಿರುತ್ತಾರೆ. ಶತಾವರ ರವರು ತಮ್ಮ ಮೊದಲ ದಿನದ ಕೆಲಸಕ್ಕೆ ಅತ್ಯಂತ ಉತ್ಸುಕರಾಗಿ ಸೇರುತ್ತಾರೆ. ಇವರಿಗೆ ಎಲ್ಲಾ ಜವಾಬ್ದಾರಿಗಳ ಅರಿವಿರುತ್ತದೆ ಹಾಗೂ ಅವರ ಕಾರ್ಯವೈಖರಿಯಿಂದ ಎಲ್ಲರ ಮನ ಗೆದ್ದಿರುತ್ತಾರೆ. ಹಾಗೆ ಒಂದು ದಿನ ಕೊಡಗಿನ ಒಂದು ಕಾಲೇಜಿನ ಇಪ್ಪತ್ತೈದನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗಿಯಾಗಿರುತ್ತಾರೆ. ನಯನಶ್ರೀಯು ಕೂಡ ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿರುವುದರಿಂದ ಅವಳ ಸ್ನೇಹಿತೆಯರೊಡನೆ ಬಂದಿರುತ್ತಾಳೆ. ಇನ್ನೇನು ಕಾರ್ಯಕ್ರಮ ಶುರುವಾಗುತ್ತದೆ ಹಲವು ಗಣ್ಯರು ಸೇರಿ ಜ್ಯೋತಿ ಬೆಳೆಗಿಸುವ ಮೂಲಕ. ಕೆಲ ಗಣ್ಯರ ಭಾಷಣದ ನಂತರ ನೂತನ ಸಿ.ಇ.ಒ ಶತಾವರರವರ ಸರದಿ ಬಂದಾಗ ಅವರ ಮಾತುಗಳು ಯಾವ ವಾಕ್ ಚಾತುರ್ಯರಿಗೂ ಕಡಿಮೆ ಇಲ್ಲ ಎಂಬಂತೆ ಇದ್ದವು, ಕೇಳುಗರನ್ನು ಅವರ ಮಾತಿನಿಂದಲೇ ಮಂತ್ರ ಮುಗ್ಧರನ್ನಾಗಿಸುತ್ತಿದ್ದರು, ಅವರ ಸೂರ್ಯನ ಹೊಳಪಿನ ಕಣ್ಣುಗಳಿಂದ ಎಲ್ಲಾ ಜನರ ಚಿತ್ತವನ್ನು ಕಟ್ಟಿಹಾಕಿಕೊಂಡಿದ್ದರು. ಅವರ ಭಾಷಣ ಮುಗಿಯುವ ತನಕ ನಯನಶ್ರೀ ಅಂತು ಬೇರಾವುದೋ ಲೋಕದಲ್ಲಿ ಮಗ್ನಳಾಗಿರುತ್ತಾಳೆ. ಭಾಷಣ ಮುಗಿದ ನಂತರ ಚಪ್ಪಾಳೆಯ ಧ್ವನಿಯಿಂದ ಎಚ್ಚೆತ್ತುಕೊಂಡಳು.. ಶತಾವರರವರ ಮಾತುಗಳು ಕೇಳಿದ ಅವಳು ಮೊದಲ ನೋಟದಲ್ಲಿಯೇ ಅವರಿಗೆ ಮನಸೋತು ತನ್ನ ಪುಟ್ಟ ಹೃದಯದಲ್ಲಿ ದೊಡ್ಡದಾದ ದೇವಾಲಯವನ್ನೇ ನಿರ್ಮಿಸಲಾರಂಭಿಸಿದಳು. ನಂತರದ ದಿನಗಳಲ್ಲಿ ಇವರೇಕೆ ಹೀಗೆ ಈ ಸಮಾಜದ ಬಗ್ಗೆ ನನಗಿರುವ ಆಸೆ, ಕನಸುಗಳನ್ನು ಹೋತ್ತುಕೊಂಡಿದ್ದಾರಲ್ಲ, ಎಲ್ಲೋ ಇದ್ದ ನಾವಿಬ್ಬರು ಹೇಗೆ ಒಂದೇ ಹಾದಿಯಲ್ಲಿ ಯೋಚಿಸಲು ಹೇಗೆ ಸಾಧ್ಯ, ಹೀಗೆ ಹಲವಾರು ವಿಷಯಗಳು ನಮ್ಮ ಕಥಾನಾಯಕಿಯ ಮನಸ್ಸಿನ ನೆಮ್ಮದಿಗೆ ಅಡ್ಡಿಪಡಿಸುತ್ತಿದ್ದವು. ಹಾಗೆಯೇ ಶತಾವರರವರನ್ನು ಸೂಕ್ಷ್ಮವಾಗಿ ತೆರೆಮರೆಯಲ್ಲಿ ಗಮನಿಸುತ್ತಾ ಅವರ ಬಗ್ಗೆ ತನ್ನಲ್ಲೇ ಇರುವ ಪ್ರೀತಿಯ ಹೂವಿಗೆ ನೀರೆರೆದು ಜೋಪಾನ ಮಾಡುತ್ತಿದ್ದಳು. ಹಾಗೆ ಒಂದು ದಿನ ಗಾಢವಾದ ಯೋಚನೆಯಲ್ಲಿ ಮುಳುಗಿದ್ದ ನಯನಶ್ರೀಗೆ ನೆನಪಾಗುವುದೇ, ಪಾರಿವಾಳಗಳ ಮೂಲಕ ಸಂದೇಶ ರವಾನಿಸುತ್ತಿದ್ದ ಹಳೆಯ ದಿನಗಳು. ಆದರೆ, ಈಗ ನಾವಿರುವ ಕಾಲದಲ್ಲಿ ಅಂತಹ ಪಾರಿವಾಳಗಳು ಸಿಕ್ಕುವುದಿಲ್ಲವಲ್ಲವೇ…?? ಅದಕ್ಕಾಗಿ ಅವಳೊಂದು ಅನಾಮಧೇಯ ಪತ್ರದಲ್ಲಿ ಶತಾವರರವರ ಆಡಳಿತ ದಕ್ಷತೆ,ಕಾರ್ಯ ವೈಖರಿ, ಜನರ ಸಮಸ್ಯೆಗಳ ಅವಲೋಕಿಸುವ ಪರಿ, ಅವರ ಪ್ರಾಮಾಣಿಕತೆ, ಅವರೆಡೆ ಕೆಲಸ ನಿರ್ವಹಿಸುತ್ತಿದ್ದ ಉಳಿದ ನೌಕರರ ಕಡೆ ಅವರಿಗಿರುವ ಗೌರವ ಹಾಗೂ ಅವರು ಹಾಜರಾಗುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ, ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದ ಬಗ್ಗೆ ಮತ್ತು ಹೀಗೆ ಹಲವಾರು ಅವರ ಚಟುವಟಿಕೆಗಳ ಬಗ್ಗೆ ಬರೆದು ಕಛೇರಿಯ ವಿಳಾಸಕ್ಕೆ ಕಳುಹಿಸುತ್ತಿದ್ದಳು.. ಹೀಗೆ ಸತತ ಕೆಲ ದಿನಗಳ ಕಾಲ ನಡೆಯುತ್ತಾ ಇರುತ್ತದೆ.. ಶತಾವರ ರವರಿಗೂ ಸಹ ದಿನಾಲೂ ಬರುವ ಪತ್ರಗಳನ್ನು ಓದುತ್ತಾ ಯಾರಿರಬಹುದು ಇವರು, ನನ್ನ ಬಗ್ಗೆ ಇಂತಹ ಒಳ್ಳೆಯ ಅಭಿಪ್ರಾಯವನ್ನಿಟ್ಟುಕೊಂಡು, ನಾ ಹೋಗಿ ಬಂದ ಕಡೆಗಳ ಬಗೆಗೂ ಹೇಳುತ್ತಿದ್ದಾರಲ್ಲ ಎಂಬ ಸಣ್ಣ ಕುತೂಹಲ ಹಾಗೆ ಬಂದು ಹೋಗುತ್ತದೆ. ಈಗಾಗಲೆ ಸಿ.ಇ.ಒ ರವರ ಮನದಲ್ಲಿ ಸಣ್ಣದೊಂದು ಕುತೂಹಲ ಮೂಡಿಸಿರುವ ನಯನಶ್ರೀ ಮುಂದಿನ ದಿನಗಳಲ್ಲಿ ಅವರ ಬಗ್ಗೆ ತನ್ನದೇ ಆದ ಮಾತುಗಳ ಸಾಲುಗಳನ್ನು ಬರೆಯುತ್ತಾಳೆ. ಅವರ ಚೆಲುವ ನೋಡಿ ಇವಳಾಗುತ್ತಾಳೆ ಕವಯಿತ್ರಿ, ಬರೆಯುತ್ತಾಳೇ ಬಣ್ಣಿಸಿ ಬರಹಗಾರ್ತಿಯಾಗಿ… ಇವನಾರವ ಸುಂದರ ಸೋಜಿಗ,, ಕಣ್ಣರಳಿಸಿ ನೋಡಿದಷ್ಟು ಸುಂದರ,, ಬಣ್ಣಿಸಲಾರೆ ನಾ ಇನ್ನೂ ಅವನ ಚೆಲುವ… ಮುಂಜಾನೆಯ ನಗುವಿನಲಿ ಪೂರ್ಣ ಸೂರ್ಯ ಪ್ರಕಾಶದಂತೆ,, ಇಳಿ ಸಂಜೆಯಲಿ ಸುಂದರ ಮುದ್ದು ಚಂದಿರನಂತೆ… ನಾನಾದೆ ಇವನಿಗೆ ಮೂಖವಿಸ್ಮಿತ… ಹೀಗೆ ಇನ್ನೂ ಹಲವಾರು ರೀತಿಯಲ್ಲಿ ಬಣ್ಣಿಸುತ್ತಾ ಅವಳು ಅನಾಮಧೇಯ ಪತ್ರಗಳ ಮೂಲಕ ತನ್ನ ಮನದ ಭಾವನೆಗಳನ್ನು ಬರೆದು ಕಛೇರಿಗೆ ಪತ್ರಗಳನ್ನು ಕಳಿಸುತ್ತಾ ಇರುತ್ತಾಳೆ. ಇನ್ನೂ ಇವೆಲ್ಲ ಗಮನಿಸುತ್ತಾ, ಎಲ್ಲಾ ಪತ್ರಗಳನ್ನು ಓದುತ್ತಾ ಯಾರೀ ಸ್ವಪ್ನ ಸುಂದರಿ, ಈ ರೀತಿಯಲಿ ನನ್ನ ಮನವ ಕಾಡುತಿಹಳು ಎಂದು ಆಕೆಯ ಮೊಗವ ನೋಡದೇನೆ ಇವರ ಮನಸ್ಸಿನಲ್ಲಿಯೂ ಸಣ್ಣದಾದ ಬಯಕೆ ಚಿಗುರು ಹೊಡೆಯುತ್ತದೆ.ಗ ಪ್ರೀತಿಯ ಆಸೆಯ ಕಂಗಳಿಂದ ಅವಳು ಕಳುಹಿಸುವ ಪ್ರತ್ರಕ್ಕಾಗಿ ಕಾಯುವ ತವಕವೂ ಬರುತ್ತದೆ. ಹೀಗಿರುವಾಗ ನಯನಶ್ರೀಯು ಒಮ್ಮೆ ತನ್ನ ಪತ್ರದಲ್ಲಿ ಆಕೆಯ ಹೆಸರು ಮತ್ತು ಅವಳ ಸಂಕ್ಷಿಪ್ತ ವಿವರಗಳೊಂದಿಗೆ ನಿಮ್ಮನ್ನೊಮ್ಮೆ ಭೇಟಿಯಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ. ಹಾಗೆ ಆ ಪತ್ರದ ಹಿಂಬದಿಯಲ್ಲಿ ನಿಮಗೂ ನನ್ನೋಮ್ಮೆ ಭೇಟಿ ಮಾಡವ ಇಚ್ಛೆ ಇದ್ದಲ್ಲಿ ನನ್ನ ನಾಳೆಯ ಪತ್ರದಲ್ಲಿ ಸಮಯ ಮತ್ತು ಭೇಟಿ ಮಾಡುವ ಸ್ಥಳದ ಬಗ್ಗೆ ತಿಳುಸುತ್ತೇನೆ ಹಾಗೂ ನಿಮಗಾಗಿ ನಾ ಕಾಯುತ್ತಾ ಇರುತ್ತೇನೆ ಎಂದು ಬರೆಯುತ್ತಾಳೆ. ಶತಾವರರವರಿಗೂ ನಯನಶ್ರೀಯನ್ನೂ ನೋಡಬೇಕೆಂಬ ಇಚ್ಛೆ ಇದ್ದುದರಿಂದ ಮಾರನೇಯ ದಿನದ ಅವಳ ಪತ್ರಕ್ಕಾಗಿ ಕಾಯುತ್ತಿರುವಾಗ ಅವಳ ಪತ್ರ ಬರುತ್ತದೆ. ಅದರಲ್ಲಿ ಮೊದಲೇ ತಿಳಿಸಿದ ಹಾಗೆ ಸಮಯ ಮತ್ತು ಸ್ಥಳದ ಬಗ್ಗೆ ಬರೆದಿರುತ್ತಾಳೆ..ಆದೇ ದಿನದ ತಿಳಿ ಸಂಜೆಯಲಿ ಒಬ್ಬರನ್ನೊಬ್ಬರು ಭೇಟಿ ಮಾಡುವ ಸಂದರ್ಭ ಬರುತ್ತದೆ. ಒಬ್ಬರಿಗೆ ಇನ್ನೊಬ್ಬರು ಕಾಯುವ ರೀತಿಯೂಹೀಗಿರುತ್ತದೆ.. ಅನುರಾಗದ ಅಲೆಯಲಿ, ಪ್ರೀತಿಯ ಕೊಳಲನಿಡಿದು ನಿಂತ ಕೃಷ್ಣನ ಹಾಗೆ ಶತಾವರ ಕಾಯುತ್ತಿದ್ದರೆ,, ಅಂಬರದಾಚೆ ಇನ್ನೂ ಎತ್ತರಕ್ಕಿರುವ ಪ್ರೀತಿಯನು, ಸೇರಗ ತುದಿಯಲ್ಲಿಡಿದುಕೊಂಡ ರಾಧೆಯ ಹಾಗೆ,, ನಯನಶ್ರೀ ಕಾಯುತ್ತಾ ಕುಳಿತಿದ್ದಳು. ನಯನಶ್ರೀಯ ಮುಖವನ್ನೇ ನೋಡದೆ ಅವಳ ಬರಹಗಳಿಗೆ ಮನಸೋತು ಹೋದ ಶತಾವರರವರು ದಿಕ್ಕೇ ತೋಚದ ಹಾಗೆ ನಿಂತಿರುತ್ತಾರೆ. ಅಷ್ಟರಲ್ಲಿಯೇ ಅವರನ್ನು ಕಂಡ ನಯನಶ್ರೀಯು ಅತ್ತಿರ ಹೋಗಿ “ನಮಸ್ತೇ ಶತಾವರ ರವರೇ” ಎನ್ನಲು ಅವರು ” ನೀವು..??” ಎಂದು ಕೇಳಲು ಇವಳು ” ನಾ ನಯನಶ್ರೀ ” ಎಂದು ಹೇಳುತ್ತಾಳೆ. ಆಗ ಶತಾವರ ರವರು ” ಹೋ,,ಹೋ,, ನೀವೆನಾ..!! ಆ ಅನಾಮದಯ ಪತ್ರಗಳ ಹಿಂದಿರುವ ರುವರಿ” ಎನ್ನಲು, ಇವಳು ” ಹೌದು, ಆ ಬರವಣಿಗೆಯ ಹಿಂದಿನ ಕೈಗಳು ನನ್ನದೇ” ಎಂದು ಉತ್ತರಿಸುತ್ತಾಳೆ. ಹಾಗೆ ಇನ್ನೂ ಹಲವು ಮಾತುಗಳನ್ನಾಡತ್ತಾ ಅವರ ಮೊದಲ ಭೇಟಿಯುನ್ನು ಮುಕ್ತಾಯಗೊಳಿಸುತ್ತಾರೆ… ಒಬ್ಬರಿಗೆ ಇನ್ನೊಬ್ಬರ ಭೇಟಿ, ಕಣ್ಣು ಕಣ್ಣುಗಳ ಸಂಗಮ,, ಎರಡು ಹೃದಯಗಳ ಸಮಾಗಮ… ಈ ಬದುಕೆಂಬ ಬಣ್ಣದ ಆಟದಲಿ, ಅವಳ್ಯಾರೋ, ಇವನ್ಯಾರೋ ಆದರೂ ಬೆಸೆಯಿತು ಸುಂದರ ಅನುಭಂದ, ಹೀಗೆ ಇರಲಿ ಇವರಿಬ್ಬರ ಪ್ರೀತಿಯ ಬಂಧ, ಬಾರದಿರಲಿ ಎಂತಹದೇ ತೊಡಕಿನ ಬಂಧ.. ಇನ್ನೇನು ಶುರುವಾಯ್ತು ಇಬ್ಬರ ನಡುವಿನ ಪ್ರೀತಿಯ ಜೊತೆಗಿನ ಪಯಣ.. ಮನದ ಕದವ ಸರಿಸಿ ಮಾತನಾಡಿಕೊಂಡ ಅದೇಷ್ಟೋ ಮಾತುಗಳು, ಭೇಟಿಯಾದ ನೂರು ಜಾಗಗಳು, ಸಾವಿರಾರು ನೆನಪುಗಳ ಮೂಟೆಯೊಂದಿಗೆ ಸಾಗುತ್ತಿರುವ ಪ್ರೀತಿ ಬಾಳ ನೌಕೆಯ ಖಾಯಂ ಪ್ರಯಾಣಿಕರಾಗಿ ಬಿಡುತ್ತಾರೆ ಶತಾವರ ಹಾಗೂ ನಯನಶ್ರೀ… ಇವರಿಬ್ಬರ ಈ ಪ್ರೀತಿ ಶತಾವರ ರವರ ಕೆಲಸಕ್ಕೂ ಮತ್ತು ನಯನಶ್ರೀಯ ತಾನು ಕೂಡ ಐ.ಎ.ಸ್ ಅಗಬೇಕೆಂಬ ಕನಸಿಗೇನು ಅಡ್ಡಿಯಾಗಿರುವುದಿಲ್ಲ. ಹೀಗಿರುವಾಗ ಒಂದು ದಿನ ಅವರ ಪ್ರೀತಿಯ ಬಗ್ಗೆ ಅವರವರ ಪೋಷಕರಿಗೆ ಹೇಳುತ್ತಾರೆ. ಇಬ್ಬರ ಆಯ್ಕೆಯು ಸೂಕ್ತವಾಗಿ ಇದ್ದುದರಿಂದ ಯಾವುದೇ ಅಡ್ಡಿ-ಅಡಚಣೆ ಮಾಡದೇ ಎರಡೂ ಕುಟುಂಬದವರು ಇವರ ಪ್ರೀತಿಗೆ ಅಸ್ತು ಎನ್ನುತ್ತಾರೆ. ಇಬ್ಬರ ಪ್ರೀತಿಯು ಆಳವಾಗಿ ಬೇರೂರಿತ್ತು. ಇವರ ಮದುವೆಯ ಮಮತೆಯ ಕರೆಯೋಲೆಗೂ ಎರಡು ಕುಟುಂಬದವರು ಒಪ್ಪಿಗೆ ನೀಡಾಯಿತು. ಮೇಲಿರುವ ಎಲ್ಲಾ ದೇವಾನುದೇವತೆಗಳ ಆಶೀರ್ವಾದಗಳೊಂದಿಗೆ ನಮ್ಮ ನಯನಶ್ರೀಗೆ ಶತಾವರರಿಂದ ಮೂರು ಗಂಟುಗಳ ನಂಟಿನ ತಾಳಿ ಭಾಗ್ಯ ಮಾತ್ರ ನೇರವೇರಬೇಕಾಗಿತ್ತು. ಇನ್ನೇನು ಒಳ್ಳೆಯ ಅಳಿಯ ಸಿಕ್ಕಾಯಿತು, ಅವರಿಬ್ಬರಿಗೂ ಸಂಪ್ರದಾಯದ ಪ್ರಕಾರ ಜೋಡಿ ಮಾಡಿಸಿದರೆ ಆಯ್ತು ಎನ್ನುತ್ತಾ ನಯನಶ್ರೀಯ ಪೋಷಕರು ಒಂದು ಕಡೆ, ಈ ಕಡೆ ಶತಾವರರವರ ಪೋಷಕರು ಅವನ ಕನಸ್ಸಿನಂತಯೇ ಒಳ್ಳೆಯ ಉದ್ಯೋಗ ಮತ್ತು ಒಳ್ಳೆಯ ಮನಸ್ಸಿನ ಹುಡುಗಿಯು ಕೂಡ ಬಂದಾಯಿತು, ಮದುವೆಯೊಂದು ಮಾಡಿಸಿ ನಮ್ಮ ಜವಾಬ್ದಾರಿಯನ್ನು ಇಳಿಸಿಕೊಳ್ಳುವ ಬಗ್ಗೆ ಮಾತಾನಾಡುತ್ತಾ ಇರುತ್ತಾರೆ. ಆದರೆ, ಆಕಾಶದಲ್ಲಿ ಹಾರಾಡುವ ಪ್ರಣಯ ಪಕ್ಷಿಗಳಂತೆ, ಒಂದೇ ಜೀವ ಎರಡು ದೇಹದಂತಿರುವ ನಯನಶ್ರೀ ಮತ್ತು ಶತಾವರರವರಿಗೆ ಅವರ ಮದುವೆಗೂ ಮುನ್ನ ನಯನಶ್ರೀ ಯ ಕನಸ್ಸು ಕೂಡ ಮುಖ್ಯವಾಗಿ ಇರುವುದರಿಂದ ಇವರಿಗೆ ಅಷ್ಟೇನೂ ಮದುವೆಯ ಬಗ್ಗೆ ಆತುರ ಇರಲಿಲ್ಲ… ಇವರೆಲ್ಲರ ಇಚ್ಛೆ ಮತ್ತು ಯೋಚನೆಗಳು ಹೀಗಿರುವಾಗ ಆ ಕ್ರೂರ ವಿಧಿಯ ಸಂಚು ಬೇರೆಯದ್ದೇ ಆಗಿರುತ್ತದೆ. ಸುಖ ಸಂತೋಷಗಳು ತುಂಬಿದ್ದ ಇವರುಗಳ ಜೀವನದಲ್ಲಿ ನಡೆಯ ಬಾರದ ಘಟನೆ ನಡೆದೇ ಬಿಡುತ್ತದೆ . ಒಂದು ದಿನ ಸಂಜೆಯ ಸಮಯದಲ್ಲಿ ನಯನಶ್ರೀ ಮತ್ತು ಶತಾವರರಿಬ್ಬರು ಭೇಟಿಯಾಗುತ್ತಾರೆ. ಮಾತು ಮರೆತ ಮೌನಿಗಳಂತೆ, ಒಬ್ಬರ ಕಣ್ಣಲಿ ಒಬ್ಬರು ನೋಡುತ, ಈ ಜಗದ ಪರಿವೇ ಇಲ್ಲದೇ, ಪ್ರೀತಿಯ ತೋಟದಲ್ಲಿರುವ, ಬಣ್ಣದ ಚೀಟ್ಟೆಗಳಾಗಿರುತ್ತಾರೆ…. ಸಮಯ ಆಗಲೇ ರಾತ್ರಿ 8.15 ಆಗಿರುತ್ತದೆ, ಶತಾವರ: ಸರಿ ಹೋಗೊಣ ಮನೆಗೆ

ಬಣ್ಣದ ಚಿಟ್ಟೆಗಳು Read Post »

ಕಥಾಗುಚ್ಛ

ಶ್ರೀಗಂಧದ ಕೊರಡು

ಕಥೆ ಶ್ರೀಗಂಧದ ಕೊರಡು  ಸುಧಾ ಭಂಡಾರಿ‌ ಪಾರು ಎಂದಿನಂತೆ ಊಟದ ನಂತರ ಒಬ್ಬಳೆ ಟಿವಿ ಹಚ್ಗಂಡು ಕೂತಿದ್ಲು.ತುಂಬಾ ದಿನಗಳ ನಂತ್ರ ರಾಜ್ ಕುಮಾರ ನ ‘ ಜೀವನ ಚೈತ್ರ’ ತಾಗಿತ್ತು.ಪಾರುಗೆ ರಾಜ್ ಕುಮಾರ ಸಿನಿಮಾ ಅಂದ್ರೆ ಪಂಚಪ್ರಾಣ. ಸಿನಿಮಾದಲ್ಲಿ ರಾಜ್‍ಕುಮಾರ್ ಹೆಂಡತಿ ಬಸುರಿ ಎಂದು ಗೊತ್ತಾದಾಗ ಅವಳನ್ನ ಎತ್ಗಂಡು ‘ ಲೇ ನೀನು ನನ್ ಮಗೂನ ತಾಯಿ ಆಗ್ತಿದ್ದೀಯಾ’ ಅಂತ ಮುದ್ದಾಡಿ ಒಂದು ಹಾಡು ಇರೋ ಸೀನ್ ಬರ್ತದೆ..ನೋಡ್ತಾ ನೋಡ್ತಾ ಪಾರೂನ ಅಂತರಂಗದ ಆಸೆ ಮತ್ತೆ ಧುಸ್ಸೆಂದು ಹೆಡೆ ಎತ್ತಿ ಆಕ್ರೋಶ,ಅಸಹಾಯಕತೆಯಿಂದ ಕಣ್ಣೀರು ಕನ್ನೆ ತೊಳೆಸಿತ್ತು..ಎಷ್ಟು ಹೊತ್ರು ಹಾಗೆ ಕುಳಿತಿದ್ದಳೊ ಏನೊ; ಅತ್ಯಮ್ಮ ಮಲಗೆದ್ದು ‘ ಏ ಪಾರೂ ಎಲ್ಲಿದ್ಯೆ? ಇವತ್ತು ಚಾಯಿ ಮಾಡುದಿಲ್ವೇನೆ’ ಎಂದು ಕರೆಯುತ್ತಲೆ ಎಚ್ಚೆತ್ತ ಅವಳು ‘ ಮಾಡ್ಕಂಡು ಕುಡೀರಿ: ಎನ್ನುತ್ತ ಕಿವಿ ಕೇಳದ ಅತ್ಯಮ್ಮನಿಗೆ ಕೇಳಿಯೂ ಕೇಳದಿರುವ ಹಾಗೆ ಗೊಣಗುತ್ತ ಅಡುಗೆ ಮನೆಗೆ ಹೋಗಿ ತನ್ನ ಅಸಹಾಯಕತೆಯನ್ನೆಲ್ಲ ಪಾತ್ರೆಗಳ ಮೇಲೆ ತೋರಿಸಿದಳು.          ಪಾರು ಘಟ್ಟದ ಮೇಲಿನ  ಗಟ್ಟುಮಟ್ಟಾ ಗಂಡಾಳಿನಂತ  ಹೆಣ್ಣು ಮಗಳು. ಒಡಿದೀರ ಮನೆಯ ದನ ಮೇಯ್ಸಗಂಡು ಹಾಯಾಗಿ ಗುಂಡ್ಕಲ್ಲ ಹಾಗೆ ಬೆಳೆದವಳು. ಗಂಡನ ಕಳಕಂಡ ನಾಗಿ ಒಡಿದೀರ ಮನೆ ಕೆಲ್ಸ ಮಾಡ್ಕಂಡು ಅವರಿವರ ಕೃಪೆಯಿಂದ ಇಬ್ಬರು ಹೆಣ್ಮಕ್ಕಳ ಮದ್ವಿ ಮಾಡಿ ಕಿರಿಯ ಮಗಳು ಪಾರೂನ ಮದ್ವಿ ಮಾಡಿ ಮುಗಿಸಿ ಸಿವ್ನ ಪಾದ ಸೇರ್ಕಂಡ್ರೆ ಜಲ್ಮ ಸಾರ್ಥಕ ಅಂದ್ಕಂಡಿದ್ಲು.ಇದೇ ಹೊತ್ತಿಗೆ ನಾಗರಪಂಚಮಿಗೆ ಘಟ್ಟದ ಕೆಳ್ಗೆ ಮದ್ವಿ ಮಾಡಿಕೊಟ್ಟಿದ್ದ ತಂಗಿ ಶಾರ್ದೆ ಅಕ್ಕನ‌ ಮನೆಗೆ ಬಂದವ್ಳು ಒಂದ್ ವಿಸ್ಯ ಅಕ್ಕನ ಕಿವೀಲಿಟ್ಲು. ‘ ಅಲ್ವೆ ಅಕ್ಕಾ, ಹೆಂಗೂ ಪಾರೂ ಮದ್ವಿ ಮಾಡ್ಬೇಕು ಅಂತಿವಿ ಅಲ್ವೆ? ನಮ್ ಸುರೇಸ ಎಂತಾಗನೆ. ಚೆಂದಾಗಿ ದುಡಿತಿವ, ಪೈಟಾಗಿ ಮನಿ ಕಟ್ಗಂಡು ಅವ್ವಿ ಜೊತೀಲಿ ಅವ್ನೆ.ನೋಡುಕೂ ದಾಟ್ನೀಟ್ ಇವ. ನಾ ಒಂದ್ ಮಾತ್ ಹೇಳಿರೆ ಅಲ್ಲಾ ಅಂಬುದಿಲ್ಲ.ಪಾರೂಗೆ ಸರಿ ಹೋಯ್ತದೆ ಜೋಡಿ.ಯಾವ್ದುಕೂ ಕೇಳ್ನೋಡು’ ಅಂದಿದ್ಲು. ಈ ವಿಸ್ಯ  ಕಿವಿಗೆ ಬಿದ್ದಿದ್ದೆ  ಪಾರೂಗೆ ಸ್ವರ್ಗಕ್ಕೆ ಮೂರೇ ಗೇಣು! ಅವ್ಳ ಜೀಂವ್ ಮಾನ್ದಾಗೆ ಒಡಿದೀರ್ ಮನಿ ಬಿಟ್ರೆ ಎಲ್ಲೂ ಇರದಿದ್ದ ಫ್ಯಾನು- ಪೋನು ಎಲ್ಲಾ ಅವರ ಮನೀಲಿ ಚಿಕ್ಕಿ ಮನಿಗೆ ಬಂದಾಗ ನೋಡಿದ್ಲು.ಪಾರು ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟಳು.ಅಂತೂ ನಾಗಿ  ದಿಬ್ಣ ತಗಂಬಂದು ಸುರೇಸನ ಕೈನಾಗೆ ಇಟ್ಟು ಧಾರಿ ನೀರು ಬಿಟ್ಟು ನಿರುಮ್ಮಳನಾದ್ಲು. ಮದುವಿ ಏನೋ ಮುಗೀತು.ರಾತ್ರಿ ಸೋಬ್ನದ ಸಾಸ್ತ್ರ  ಮುಗಿಸಲು ಅವ್ವಿ, ದೊಡ್ಡ ಅಕ್ಕ  ಉಳ್ಕಂಡಿರು.ಅಕ್ಕ ಚೆಂದಾಗಿ ಸೀರಿ ಉಡ್ಸಿ , ಮಲ್ಗಿ ಹೂವು ಮುಡಿಸಿದಳು.ಮುತೈದೆಯರು ಸೋಬ್ನದ ಹಾಡೇಳಿ , ಪಾರೂ ಕೈಲಿ ಹಾಲು ಕೊಟ್ಟು ಒಳ್ಗೆ ಕಳ್ಸಿರು. ಪಾರು ನಾಚುತ್ತ, ಬೆಳ್ಗಿಂದ ಒಂದ್ ಕಿತಾನೂ ನನ್ ಮೊಕ ನೋಡಿ ನಗ್ದಿರು ಈ ಆಸಾಮಿ ಹೆಂಗೋ ಏನೊ ಅಂತ ಢವಗುಟ್ತಿರು ಎದೆ ಬಡಿತನ ಹಿಡಿತದಲ್ಲಿಟ್ಗಂಡು ಒಳ್ಗ್ ಬಂದು ಚಿಲ್ಕ ಹಾಕಿ ತಲೆ ಬಗ್ಸಿ ಹಾಲಿನ ಲೋಟ ಮುಂದೆ ಹಿಡಿದ್ಲು.ಗಂಡ ಅನ್ನು ಪ್ರಾಣಿ ಲೋಟ ತಗಂಡು ಹಾಲ್ ಒಟ್ಟೂ ಕಡಿದ; ಸಿನಮಾದಲ್ಲೆಲ್ಲ ನೋಡು ಹಂಗೆ ತಂಗೂ ಒಂಚೂರು ಉಳಿಸಿ ಕೈ ಹಿಡಿದು ಎಳ್ಕಂಡು ತೊಡಿ ಮೇಗೆ ಕೂರ್ಸಗಂಡು ಕುಡಿಸ್ತಾನೆ ಅಂತ ಆಸೆಗಣ್ಣಿಂದ ನೋಡುತ್ರಿದ್ದವ್ಳಿಗೆ ಮೊದಲ ನಿರಾಸೆ. ಹಂಗೆ ಕುಡಿದವ್ನೆ ಹೆಂಡತಿಯ ಮೊಕ ನೋಡದೆ ಎಲ್ಲೆಲ್ಲೂ ನೋಡ್ತಾ ‘ ನೋಡು ಪಾರ್ವತಿ ನೀನು ಈ ಮಂಚದ ಮೇಗೆ ಮನಿಕ; ನಾ ಕೆಳ್ಗೆ ಚಾಪಿ ಹಾಕ್ಕಂಡು ಮನಿಕಂತಿ ‘ ಎಂದ.ಪಾರು ಏನೊಂದು ತಿಳಿಯದೆ’ ಯಂತಕ್ರ ಹಿಂಗಂತಿರಿ.ಮೈ ಹುಸಾರ್ ಇಲ್ವಾ? ನೀವು ಕೆಳ್ಗೆ ಮನಿಕಂಬುದು ಬ್ಯಾಡ.ಒಟ್ಗೆ ಮನಿಕಂಬ’ ಎನ್ನಲು ‘ ಬ್ತಾಡ, ನೀ ಮೇಗೆ ಮನಿಕ ‘ ಎಂದವನೆ ಮೂಲೆಲಿ ಚಾಪಿ ಹಾಕ್ಕಂಡು ಸುರುಟಿಕೊಂಡ.ಪಾರುಗೆ ಏನ್ ಮಾಡ್ಬೇಕು ತಿಳಿಲಿಲ್ಲ.ನಿರಾಸೆಯಿಂದ ಹಾಗೆ ಮಂಚದ ಮ್ಯಾಗೆ ಕುಳಿತಿದ್ದವ್ಳಿಗೆ’ ಲೈಟ್ ತೆಗಿ, ಮನಿಕ.ನಂಗೆ ನಿದ್ದಿ ಬರುದಿಲ್ಲ’ ಎಂದು ಮಗ್ಗಲು ಬದಲಿಸಿದ.ಪಾರೂಗೆ  ಉಟ್ಡಿದ್ದ ಸೀರಿ, ಮಲ್ಗಿ ದಂಡಿ ಸಾವಿರ ವಿಷದ ಹಾವು ಕಡಿದಂತಾಗಿ ಅಳು ಒತ್ತರಿಸಿ ಬಂದು ಹಾಗೇ ಮಂಚದ ಮ್ಯಾಗೆ ಬಿದ್ದುಕೊಂಡಳು.        ದಿನವೂ ಬಯಕೆಯ ಭಾರದಿಂದ ಕೋಣೆ ಸೇರುವ ಪಾರೂಗೆ ದಿನವೂ ನಿರಾಸೆ.ಅವನಲ್ಲಿ ಅನು ಇಲ್ಲ ಮುನು ಇಲ್ಲ.ತಿಂಗಳು ಎರಡು ಮೂರು ಕಳೀತು.ಒಂದಿನ ಪಾರೂನ ಬಯಕೆ, ಆಕ್ರೋಶ ಎಲ್ಲಾ ಮೇಳೈಸಿ ಒಂದ್ ನಿಕ್ಕಿ ಮಾಡುದೇಯ ಅಂಬು ಗಟ್ಟಿ ಮನ್ಸ್ ಮಾಡಿ ಚಿಲ್ಕ ಹಾಕಿದವ್ಳೆ ಗಂಡನ ಕೊರಳಿಗೆ ಜೋತು ಬಿದ್ದಳು. ಗಟ್ಟಿಯಾಗಿ ತಬ್ಬಿಕೊಂಡು ಮಂಚಕ್ಕೆ ಎಳೆದಳು.ಅಷ್ಟೇ ಶಾಂತವಾಗಿ ಹೆಂಡತಿಯ ಕೈ ಸರಿಸಿ ದೂರ ಸರಿದ. ಒತ್ತರಿಸಿ ಬಂದ ಆವೇಶ,ಅವಮಾನದಿಂದ ‘ ಹೇಳಿ, ಎಂತಕೆ ನನ್ ಕಿತ ಮನಿಕಂಬುದಿಲ್ಲ.ನೋಡುಕೆ ದಾಂಡಿಗನ‌ ಹಾಂಗಿವ್ರಿ. ನಾ ಎಂತಕ್ ಬ್ಯಾಡ? ನಂಗ್ ಯಾವ್ದು ಉತ್ತರ ಹೇಳಿ.ಮೂರ್ ತಿಂಗ್ಳಾಯ್ತೆ ಬಂತು.ಒಂದ್ ಕಿತ ಮುಟ್ಲಿಲ್ಲ ಕಿಟ್ಲಿಲ್ಲ.ಹಿಂಗೆ ಇರುದಾಗಿರೆ ಎಂತ ಸುಡುಕೆ ನನ್ ಮದ್ವಿ ಮಾಡಕಂಡಿರಿ ಹೇಳಿ’ ಎಂದು ಗಂಡನ ಹೆಗಲು ಹಿಡಿದು ಜಗ್ಗಿದಳು. ‘ ನೋಡು, ನಂಗೆ ದಾಡಿ ಆಗದೆ.ನಾ ನಿನ್ ಕಿತ ಮನಿಕಂಬುಕಾಗುದಿಲ್ಲ. ನೀ ಹಿಂಗೆ ಗೌಜು, ಗಲಾಟಿ ಮಾಡುದಾರೆ ನಾ ಎಲ್ಲಾರೂ ಮನಿ ಬಿಟ್ಟು ಹೋಯ್ತೆ; ನೀ ಅವ್ವಿ ನೋಡ್ಕಂಡು ಮನಿಲಿರು. ನಿಂಗೆ ಇಲ್ಲಿ ಇರುಕೆ ಮನ್ಸಿಲ್ಲ ಅಂದ್ರೆ ನಿನ್ ಅವ್ವಿ ಮನಿಗೆ ಬೇಕಾರೆ ಹೋಗು.ನಾ ಬ್ಯಾಡ ಅಂಬುದಿಲ್ಲ.ಮತ್ತ್ ಈ ವಿಸ್ಯದಾಗೆ ಮಾತಾಡ್ ಬ್ಯಾಡ’ ಹೀಗಂದವ್ನೆ ಕೆಳ್ಗೆ ಚಾಪಿ ಮೇಲೆ ಬಿದ್ಗಂಡು ಚಾದ್ರ ಮುಚ್ಗಂಡ. ಪಾರೂನ ಕನಸು, ಆಸಿ ಎಲ್ಲಾ ಮಣ್ ಪಾಲಾಗಿ ಮಂಚದ ಮ್ಯಾಗೆ ಬಿದ್ಗಂಡು ಬಿಕ್ಕಳಿಸುತ್ತಲೆ ಇದ್ಲು.ಬೆಳ್ಗುಂಸರಿಗೆ ಐದ್ ಗಂಟಿಗೆ ಎದ್ ಸಪ್ಪಿಗ್ ಹೋಗ್ವವ ಒಂದ್ ಕಿತ ಹೆಂಡತಿ ಕಡಿಗೆ ನೋಡ್ದ. ಒಂದ್ ಮೂಲೆಲಿ ಮುರುಟುಕೊಂಡಿದ್ದ ಹೆಂಡತಿನ ಎತ್ತಿ ಸರಿಯಾಗಿ ಮಲಗ್ಸಿ ತಲಿ ಕೂದ್ಲ ಸರಿ ಮಾಡಿ ಚಾದ್ರ ಹೊದಿಸ್ದ.ಪಾರು ಕಣ್ ಬಿಟ್ಲು.ಕೆನ್ನೆ ಸವರಿ ಹೊರಟ. ದಿನ ಉರುಳ್ತಾ ಇತ್ತು. ಈಗ ಪಾರೂಗೆ ಪಕ್ಕಾ ತನ್ನ ಗಂಡಗೆ ಏನೊ ತೊಂದರಿ ಅದೆ,ಅದ್ಕೆ ನನ್ ಮುಟ್ಟುದಿಲ್ಲ ಅನ್ನುದು ಗೊತ್ತಾಗಿದು. ಹಾಂಗೂ ಕೊನಿ ಆಸೆ ಅಂಬು ಹಂಗೆ ಯಾವ್ದಾದ್ರೂ ಡಾಕ್ಟರ್ ಹತ್ರ ತೋರಿಸ್ಕಂಬ, ನಾನೂ ಬತ್ತಿ ಎಂದ್ಲು.ಊಹುಂ, ಏನೂ ಪ್ರಯೋಜನ ಆಗ್ಲಿಲ್ಲ.ವಿಸ್ಯ ಚಿಕ್ಕಿ ಶಾರ್ದೆ ಕೆಮಿಗೂ ಬಿತ್ತು.ಅವ್ರೂ ಹೇಳಿ – ಕೇಳಿ ನೋಡಿದ್ರು. ಏನೂ ಹೆಚ್ಚು ಕಮ್ಮಿ ಆಗ್ಲಿಲ್ಲ.ದಿನ ,ವರ್ಸ  ಉರುಳ್ರಾ ಇತ್ತು. ಪಾರು ಎದೆಯಲ್ಲಿ ಬಯಕೆ ದಿನ ದಿನವೂ ಹೆಡೆ ಎತ್ತಿ  ಬುಸುಗುಡುತ್ತಿತ್ತು. ದೇಹ ನಿರಾಸೆಯಿಂದ ಕೃಶವಾಗುತ್ತಿತ್ತು.             ಈ ನಡುವೆ ವರ್ಷದ ದೀಪಾವಳಿ ಬಂತು.ಸುರೇಸ ಹೆಂಡತಿಗೆ ಕಾಲಿಗೆ ಗೆಜ್ಜೆ, ಎರ್ಡ್ ಸೀರಿ ತಂದ್ಕೊಟ್ಟ. ಮೊದಲ ಹಬ್ಬಕೆ ಅವ್ವಿ ಮನಿಗೂ ಕರ್ಕೊಂಡೋಗಿ ಬಂದ.ಆ ದಿನ ರಾಜ್ ಕುಮಾರ್ ಸಿನಿಮಾ ನೋಡಿ ಅಶಾಂತಿಯಿಂದ ಕೂತಿದ್ದವ್ಳಿಗೆ ಸಂಜಿನಪ್ಪಗೆ ಬರ್ಬೇಕರೆ ಒಂದು ಪೊಟ್ಲೆ ಕೈಗಿತ್ತು’ ಏ ಪಾರು, ಇದ್ರಲ್ಲಿ ಬಿಸಿ ಬಿಸಿ ನೀರುಳ್ಳಿ ಬಜ್ಜಿ ಅದೆ.ಅವ್ವಿಗೆ ಕೊಟ್ಗಂಡು ತಿನ್ನು.ನಾ ಮಿಂದ್ಕ ಬತ್ತೆ.ಒಂದ್ ಕಪ್ ಖಡಕ್ ಚಾಯಿ ಮಾಡು’ ಎಂದ.ಪಾರೂನ ಮನಸ್ಸು ಮತ್ತೆ  ಮೆದುವಾಯ್ತು.ಇಂತ ಗಂಡನ್ನ ಬಿಟ್ಟು ಎಲ್ ಹೋಗ್ತಾಳೆ.ವಯಸ್ಸಾದ ಅವ್ವಿ,ಅಕ್ಕಂದಿರಿಗೆ ಹೆಂಗ್, ಏನ್ ಹೇಳ್ತಾಳೆ ಪಾಪ! ಇಲ್ಲ ಪಾರೂ ಗಟ್ಟಿ ನಿರ್ಧಾರ ಮಾಡಿ ಆಗಿದೆ. ಇರು ಕಿತಾ ಇಲ್ಲೆ , ಹಿಂಗೆ ಇರೂದು ಅಂತ. ಗಂಡನ್ ಮೇಲೆ ಕನಿಕರ ತೋರ್ತಾಳೆ.ಅತ್ಯಮ್ಮನ ಸೇವೆ ಮಾಡ್ತಾಳೆ. ಅಕ್ಕಂದಿರ ಇಬ್ರು ಮಕ್ಕಳ ಓದ್ಸುಕೆ ಮನಿಲಿಟ್ಕಂಡಳೆ.ನೋಡೋರ ಕಣ್ಣಗೆ ಚೆಂದದ ಜೋಡಿ; ಒಳಗಿನ ಗುಟ್ಟು ಸಿವ್ನೆ ಬಲ್ಲ.ಪಾರೂ ಶ್ರೀಗಂಧದ ಕೊರಡಿನ ಹಾಗೆ ಜೀವ ತೇಯ್ತಿದ್ದಾಳೆ; ಒಳಗೊಳಗೆ ಬಾಡಿ ಬಸವಳಿತಿದ್ದಾಳೆ. ****************************

ಶ್ರೀಗಂಧದ ಕೊರಡು Read Post »

ಕಥಾಗುಚ್ಛ

ಕಥೆ ಋಣ ಎಂ. ಆರ್. ಅನಸೂಯ ಗಿರಿಜಮ್ಮ ತೋಟದಲ್ಲಿ ಮಾವಿನ ಫಸಲನ್ನು ನೋಡುತ್ತಾ “ಈ ಸತಿ ಮಾವಿನ ಫಸಲು ಚೆನ್ನಾಗಿ ಬಂದೈತೆ ಅಲ್ವೇನೋ ನಾಗ” “ಹೂನ್ರಮ್ಮ, ಈ ಸತಿ ಕಾಯಿ ಜಗ್ಗಿ ಹಿಡಿದೈತೆ. ಹಂಗೇನೆ ಹಲಸಿನ ಗಿಡಗಳು, ಹುಣಸೇಗಿಡ ಎಲ್ಲಾದ್ರೂಗನೂ ಚೆನ್ನಾಗಿ ಕಾಯಿ ಹಿಡಿದೈತೆ “ ತೋಟದ ಗೇಟ್ ಬಳಿ ಮೋಟರ್ ಬೈಕ್ ನ ಹಾರ್ನ್ ಸೌಂಡ್ ಕೇಳಿದ ಇಬ್ಬರೂ ಆ ಕಡೆ ನೋಡಿದರೆ ರಾಜಣ್ಣ ಕೈಯಲ್ಲಿ ಕಾಫಿ ಪ್ಲಾಸ್ಕ್ ಹಾಗೂ ಒಂದು ಸಣ್ಣ ಬ್ಯಾಗ್ ನ್ನು ಹಿಡಿದು ಬರುತ್ತಿದ್ದರು.  ” ಸಾವ್ಕಾರ್ ಕಾಫಿ ತರ್ತಾವ್ರೆ”  ಎನ್ನುತ್ತಾ ಇಬ್ಬರೂ ಅಲ್ಲೇ ಇದ್ದ ಬೇವಿನ ಮರದ ಕೆಳಗೆ ಬಂದ್ರು. ” ನಾನೇ ಮನೆಗೆ ಬರ್ತಿದ್ದೆ. ನೀವ್ಯಾಕೆ ಬಂದ್ರಿ” ಎನ್ನುತ್ತಾ ಗಿರಿಜಮ್ಮ ಮರದ ಕೆಳಗಿದ್ದ ಕಲ್ಲು ಬೆಂಚ್ ಮೇಲೆ ಕುಳಿತು ಕೊಡದ ನೀರನ್ನು ಬಗ್ಗಿಸಿ ಕೈ ತೊಳೆದುಕೊಂಡು ಕುಳಿತರು.  ಬ್ಯಾಗ್ನಲ್ಲಿದ್ದ ಕವರ್ ತೆಗೆಯುವುದನ್ನು ನೋಡಿದ ನಾಗ “ಉಮಕ್ಕ ಏನೋ ತಿಂಡಿ ಕಳಿಸೈತೆ” ಗಿರಿಜಮ್ಮ ಕಾಫಿಯನ್ನು ಕಾಫಿಯನ್ನು ಮೂರು ಪ್ಲಾಸ್ಟಿಕ್ ಲೋಟಗಳಿಗೆ ಸಮನಾಗಿ ಬಗ್ಗಿಸಿ,ನಾಗನಿಗೆ ಕಾಫಿ ಹಾಗೂ  ಕಡ್ಲೆಬೇಳೆ ವಡೆ ಕೊಟ್ಟು ಗಂಡ ಹೆಂಡತಿ ಇಬ್ಬರೂ ಕಾಫಿ ಕುಡಿಯುತ್ತಾ ವಡೆ ತಿನ್ನುತ್ತಿದ್ದರು. ನಾಗ  ಕಾಫಿ ಕುಡಿದು ವಡೆ ತಿನ್ನುತ್ತ ತನ್ನ ಕೆಲಸ ನೋಡಲು ಹೋದ. ಗಿರಿಜಮ್ಮ ” ರಾತ್ರಿ ಅಪ್ಪಯ್ಯನಿಗೆ ಫೋನ್ ಮಾಡಿ ಮುಂದಿನ ವಾರ  ಬರ್ತೀನಿ ಅಂತ ಹೇಳ್ಬೇಕು. ಅಷ್ಟೊತ್ತಿಗೆ ಮಾವಿನ ಕಾಯಿ ಹಣ್ಣಾಗ್ತವೆ. ಹಣ್ಣು ಕೊಟ್ಟು ಮಾತುಕತೆನೆಲ್ಲ ಮುಗಿಸ್ಕಂಡೆ  ಬರ್ತಿನಿ. ಇನ್ನು ಮುಂದಕ್ಕ ಹಾಕೋದು ಬೇಡ” ಎಂದರು. “ಹಂಗೆ ಮಾಡು  ಎನ್ನುತ್ತಾ ಈ ಸರ್ತಿ ತೆಂಗಿನ ಫಸಲೆಲ್ಲಾ  ಚೆನ್ನಾಗೈತೆ ” ಎಂದರು ರಾಜಣ್ಣ ತೆಂಗಿನ ಮರಗಳನ್ನು ನೋಡುತ್ತ.”ಅಮ್ಮಾವ್ರೆ, ಇವೆಲ್ಲ ಈ  ಹೊಸ ತೋಟದಗೆ ಬಿದ್ದಿರೋ ಕಾಯಿ. ನೀವು ಸಾವ್ಕಾರ ಜೊತೆಗೆ ಮನೆಗ್ ಹೋಗ್ರಿ. ನಾನು  ಹಳೇ ತೋಟದಗೆ  ಬಿದ್ದಿರೋ ಕಾಯ್ಗಳ್ನ ಆರ್ಸ್ ಕಂಡು ಮನೆ ಹತ್ರ ಬರ್ತಿನಿ” ನಾಗ ಕೂಗಿ ಹೇಳಿದ “ಹಂಗೆ ಮಾಡು ” ಎನ್ನುತ್ತಾ ಗಿರಿಜಮ್ಮಗಂಡನ ಬೈಕ್ ನ ಹತ್ತಿದರು.ನಾಗ ಹಳೇ ತೋಟ, ಹೊಸ ತೋಟ ಎಂದು ಕರೆಯಲು ಕಾರಣವಿತ್ತು. ಹಳೆತೋಟವೆಂದ್ರೆ ಗಿರಿಜಮ್ಮನ ಗಿರಿಜಮ್ಮನ ಅತ್ತೆ ಮಾಡಿದ್ದು. ಅವರಿಗಿದ್ದುದು ಎಂಟೆಕ್ರೆ ಜಮೀನು. ಅದರಲ್ಲಿ ನಾಲ್ಕೆಕರೆ ತೆಂಗಿನ ತೋಟ ಮಾಡಿ ಎರಡು ಎಕ್ರೆಯಲ್ಲಿ  ನೀರುಳ್ಳಿ ಹಾಗು ರಾಗಿ ಹಾಕುತ್ತಿದ್ದರು ಉಳಿದ  ಎರಡು ಎಕ್ರೆಯನ್ನು ಕೋರಿಗೆ ಕೊಟ್ಟಿದ್ದರು.  ಗಂಗಮ್ಮನ  ಗಂಡ ಚಂದ್ರ ಶೇಖರಯ್ಯನವರು ಕಿರಾಣಿ ಅಂಗಡಿ ಇಟ್ಟಿದ್ದರಿಂದ  ತೆಂಗಿನ ಗಿಡ ಇಟ್ಟು ಬೆಳೆಸಿದ್ದೆಲ್ಲಾ ಗಂಗಮ್ಮನೇ. ಹಾಗಾಗಿ ಅದು ಗಂಗಮ್ಮನ ತೋಟವೆ ಸರಿ ಹೊಸ ತೋಟವು  ಗಿರಿಜಮ್ಮ ಬೆಳ್ಸಿದ ತೋಟವಾಗಿತ್ತು  ಗಿರಿಜಮ್ಮನ ತಾಯಿ ಶಾರದಮ್ಮ ಶಿವಮೂರ್ತಿಯನ್ನು ಮದ್ವೆಯಾಗಿ ಗಂಡನ ಮನೆ ಸೇರಿ ಎರಡು ಹೆಣ್ಣುಮಕ್ಕಳ ತಾಯಾಗಿ ಸಂಸಾರ ಬೆಳೆದಿತ್ತು.‌  ಗಂಗಮ್ಮನಿಗೆ  ಶಾರದ,  ಪಾರ್ವತಿ, ಸುವರ್ಣ ಮೂವರು ಹೆಣ್ಣುಮಕ್ಕಳ ನಂತರ ಹುಟ್ಟಿದವನೇ  ರಾಜಶೇಖರ. ಶಾರದಮ್ಮನ ಮಗಳಾದ ಗಿರಿಜಾ ಹುಟ್ಟಿದಾಗ ತಮ್ಮ ರಾಜಶೇಖರನಿಗಿನ್ನು ಐದು ವರ್ಷ.ಗಿರಿಜಳನ್ನು ರಾಜಶೇಖರನಿಗೆ  ಕೊಟ್ಟು ಮದುವೆ  ಮಾಡುವುದು ಎಂದು ತಾಯಿ ಮಗಳ ನಡುವೆ ಅಲಿಖಿತ ಒಪ್ಪಂದವಾಗಿತ್ತು. ಶಿವಮೂರ್ತಿಯವರ  ಕಡೆಯಿಂದಲೂ  ಅನುಮೋದನೆ ದೊರಕಿತ್ತು. ಶಾರದಾಳಿಗೆ ಎರಡನೆಯ ಮಗು ಹೆಣ್ಣೇ ಆಗಿದ್ದು ಅವಳೇ  ಶಾಂಭವಿ. ಶಾರದಮ್ಮನ ಮಗಳು ಗಿರಿಜಳ ಮದುವೆ ಆಗುವ ಎರಡು ವರ್ಷಕ್ಕಿಂತ ಮುಂಚೆ ಗಂಗಮ್ಮನ ತೋಟದ ಪಕ್ಕದಲ್ಲಿ ಇದ್ದ ಜಮೀನು ಮಾರಾಟಕ್ಕಿತ್ತು. ಆಗ ಶಾರದಮ್ಮನವರ  ಒತ್ತಾಸೆಯಿಂದ ಶಿವಮೂರ್ತಿಯವರಿಗೆ ಇಷ್ಟವಿಲ್ಲದಿದ್ದರೂ ಸಹ ಅದನ್ನು ಕೊಂಡ್ಕಂಡಿದ್ದರು. ಶಾರದಳನ್ನು ಮದುವೆಯಾದ ಮೇಲೆ ತಮ್ಮ ವ್ಯವಹಾರಗಳು ಏಳ್ಗೆ ಕಂಡಿವೆ  ಎಂಬುದು ಅವರ ನಂಬಿಕೆ. ಹಾಗಾಗಿ ಹೆಂಡತಿಯ ಮಾತಿಗೆ ಇಲ್ಲವೆನ್ನಲಾಗದೆ ಒಪ್ಪಿದ್ದರು. ಶಾರದಳ ತಂದೆ ಚಂದ್ರಶೇಖರಯ್ಯನವರು ಪಾರ್ಶ್ವವಾಯು  ಪೀಡಿತರಾದ ಮೇಲೆ  ಮಗನ ಮದುವೆ ಮಾಡುವ ಹಂಬಲ ಹೆಚ್ಚಾಗಿದ್ದರಿಂದ ಗಿರಿಜಳ P U C ಮುಗಿದ ತಕ್ಷಣ  ರಾಜಶೇಖರನೊಂದಿಗೆ  ಮದ್ವೆ ನಡೆದಿತ್ತು ರಾಜಶೇಖರನಿಗೆ ಕೊಡುವುದು ಬೇಡವೆನ್ನಲು ಯಾರಿಗೂ ಕಾರಣವೇ ಇರಲಿಲ್ಲ. ರಾಜ್ಯ ಹೆದ್ದಾರಿಯಲ್ಲಿದ್ದ ಹೋಬಳಿ ಕೇಂದ್ರವಾಗಿದ್ದ ದೊಡ್ಡ ಹಳ್ಳಿಯಲ್ಲಿ ಅಂಗಡಿ ವ್ಯವಹಾರದ ಜೊತೆಗೆ ಜಮೀನು, ದೊಡ್ಡಮನೆಯ  ಏಕೈಕ ವಾರಸ್ದಾರ  ಹೆಸರಿಗೆ ತಕ್ಕಂತೆ ಲಕ್ಷಣವಾದ ಗಂಡು. ಚಿಕ್ಕಂದಿನಿಂದಲೇ ಮದುವೆ ನಿಶ್ಚಯವಾಗಿದ್ದರಿಂದ ಗಿರಿಜಳಿಗು ರಾಜಶೇಖರ  ಮಾಮನನ್ನು ಕಂಡರೆ ಇಷ್ಟ. ಶಾರದಮ್ಮನ ತಂಗಿಯರಾದ ಪಾರ್ವತಿ ಹಾಗೂ ಸುವರ್ಣರಿಗೂ ಸಹಾ ಮದುವೆಯಾಗಿ ಒಳ್ಳೆ ಮನೆಗಳನ್ನು ಸೇರಿದ್ದರು. ಮದ್ವೆಯಾದ ವರ್ಷದಲ್ಲೆ ಅನಾರೋಗ್ಯದಿಂದಾಗಿ ಚಂದ್ರಶೇಖರಯ್ಯನವರು ತೀರಿ ಕೊಂಡರು. BSc ಓದಿದ್ದ ರಾಜಶೇಖರ  ಅಂಗಡಿ ಮತ್ತು ತೋಟ ನೋಡಿಕೊಳ್ಳುತ್ತಿದ್ದ. ಜತೆಗೆ ತಾಯಿಯ ಸಹಕಾರ ಇತ್ತು. ಗಿರಿಜಾಳಿಗೆ ಗಂಡು ಮಗುವಾದ್ದರಿಂದ ಮಗುವಿಗೆ ಚಂದ್ರ ಶೇಖರ ಎಂದು ತಾತನ ಹೆಸರನ್ನಿಟ್ಟರು.  ಗಿರಿಜಳ ತಂದೆ ಶಿವಮೂರ್ತಿಯವರ  ವ್ಯವಹಾರ  ದೊಡ್ಡದಾಗಿದ್ದು ಬಿಡುವಿಲ್ಲದ  ದುಡಿಮೆ  ಅವರದಾಗಿತ್ತು. ರಾಜಶೇಖರನ  ಸಲಹೆಯಂತೆ ಗಿರಿಜಾ ಒಮ್ಮೆ ತವರಿಗೆ ಬಂದಾಗ ತಮ್ಮ ತೋಟದ ಪಕ್ಕದಲ್ಲಿರುವ ಜಮೀನನ್ನು ತಾವೇ ಕೊಂಡು ಕೊಳ್ಳುತ್ತೇವೆ ಎಂದು ಅಪ್ಪ ಅಮ್ಮನ ಬಳಿ ಹೇಳಿದಳು ಅಲ್ಲಿಗೆ ಬಂದು ನಾವು ಅ ಜಮೀನನ್ನು ನೋಡಲಾಗದು ನೀವೇ ಮಾಡ್ಕಂಡು ಹೋಗ್ರಿ. ಮುಂದೆ ನಿನಗೆ ಕೊಡುವ ಉದ್ದೇಶವಿಟ್ಟುಕೊಂಡೆ ನಾವು ಅದನ್ನು ಕೊಂಡ್ಕಂಡಿದ್ದು ಆದು ಎಂದೆಂದಿದ್ದರೂ ನಿನ್ನದೆ. ನೀನೇನು ನಮಗೆ ಹಣ ಕೊಡಬೇಕಿಲ್ಲ ಎಂದು ಇಬ್ಬರೂ ತಮ್ಮ ಕೊನೆ ತೀರ್ಮಾನ  ಕೊಟ್ಟಿದ್ದರು. ಮಗುವಿಗೆ  ವರ್ಷ ತುಂಬುವ ವೇಳೆ ಒಂದು ಮಧ್ಯಾಹ್ನ ಗಿರಿಜಾ ಮಗುವಿನೊಂದಿಗೆ ಮಲಗಿದ್ದಾಗ ಅಜ್ಜಿ ಗಂಗಮ್ಮ ಅಯ್ಯೋ ಶಾರದ ಎಂದು ಜೋರಾಗಿ ಕೂಗಿದ ಶಬ್ದ ಕೇಳಿ ಬೆಚ್ಚಿಬಿದ್ದಳು. ತಕ್ಷಣ ಎದ್ದು ಬಂದು ನೋಡಲು  ಆ ಕೂಗನ್ನು ಕೇಳಿ ಗಾಬರಿಯಾಗಿ ಅಂಗಡಿಯಲ್ಲಿದ್ದ ರಾಜ ಶೇಖರನೂ ಒಳಗೆ ಬಂದ. ತಕ್ಷಣ ಪೋನ್ ಕೈಗೆತ್ತಿಕೊಂಡು ಮಾತನಾಡಿದ ಮೇಲೆ ಗಿರಿಜಳ ಬಳಿ ಬಂದು ಅಕ್ಕನಿಗೆ ಹಾರ್ಟ್ಅಟ್ಯಾಕ್ ಆಗಿ ಹೋಗಿಬಿಟ್ಟಳು ಎಂದು ಹೇಳಿದ ಅದನ್ನು ಕೇಳಿದ ಗಿರಿಜಳಿಗೆ ಶಾಕ್.ರಾತ್ರಿ ಮಾತನಾಡಿದ  ಅಮ್ಮ ಈಗಿಲ್ಲ ! ಅಮ್ಮ ಹೋದ ದು:ಖದೊಡನೆ ತಂಗಿ ಶಾಂಭವಿಯ ಮುಂದಿನ ದಿನಗಳನ್ನು ನೆನೆದರೆ ವ್ಯಥೆ ಹೆಚ್ಚಾಗುತ್ತಿತ್ತು. ಶಾಂತವಾದ ಕಲ್ಯಾಣಿಗೆ ಕಲ್ಲೆಸೆದಂತಹ ಪರಿಸ್ಥಿತಿ ಆ ಸಂಸಾರದ್ದು. ತಾಯಿಯ ಸಾವಿಗೆಂದು ಬಂದ ಗಿರಿಜಾ ಹೆಚ್ಚು ಕಡಿಮೆ ಐದು ತಿಂಗಳು ತಂಗಿಯೊಂದಿಗೆ ತವರು ಮನೆಯಲ್ಲೇ ಇದ್ದುಬಿಟ್ಟಳು. ಶಾಂಭವಿಯಂತೂ ಪೂರ್ತಿಯಾಗಿ ಕುಗ್ಗಿಬಿಟ್ಟಳು. ಅಪ್ಪನಿಗೆ ದು:ಖವಿದ್ದರೂ ತೋರ್ಪಡಿಸದೆ ಶಾಂಭವಿಯನ್ನು ಸಂತೈಸುತ್ತಿದ್ದರು. ಆಗ ಶಾಂಭವಿ  SSLC  ಓದುತ್ತಿದ್ದಳು. ಗಂಗಮ್ಮ ಬಂದ್ರೂನೂ ಒಂದು ದಿನ ಇದ್ದರೆ ಹೆಚ್ಚು. ಮಗಳಿಲ್ಲದ ಮನೆಯಲ್ಲಿರಲು ಮನಸ್ಸಿಗೇ ಕಷ್ಟವಾಗುತ್ತಿತ್ತು.ಗಿರಿಜಳಿಗೆ ನೀನು ಬೇಕಾದರೆ ಇನ್ನೂ ಇರು. ನಾನು ಮನೆ ಕಡೆ ನೋಡ್ಕಂತಿನಿ. ನಿನಗಿದು ತವರು ಮನೆ. ನನಗಿದು ಮಗಳ ಮನೆ ಎಂದು ಬಿಟ್ಟಿದ್ದರು  ಈ ನಡುವೆ ಶಿವಮೂರ್ತಿಯ  ಅಕ್ಕ ಗೌರಮ್ಮತಮ್ಮನಿಗೆ ಮರು ಮದ್ವೆ ಆಗಲು ಸಲಹೆ ಕೊಟ್ಟಿದ್ದರು.  ಶಾಂಭವಿಗೆ ಕಷ್ಟವಾಗುತ್ತದೆ ಎಂದು ಅಡುಗೆ ಮಾಡಲು ತಮ್ಮ ಕಡೆಯ  ಹೆಂಗಸನ್ನು ಕರೆ ತಂದುಬಿಟ್ಟಿದ್ದರು.”ಶಾಂಭವಿಗು ಮದುವೆ ಆದ ಮೇಲೆ ನಿನ್ನನ್ನು ಯಾರು ನೋಡ್ಕಂತರೆ. ನಾವೆಲ್ಲಾ  ಎಷ್ಟು ದಿನ ಇರೋಕಾಗುತ್ತೆ. ಮನೆಯಲ್ಲಿ ಶಾಂಭವಿನೂ ಒಬ್ಬಳೆ” ಎಂದು ಹೇಳುತ್ತಲೇ ಇದ್ದರು. ಆಗ ಶಿವಮೂರ್ತಿ  ಏನನ್ನು ಹೇಳದೆ ಮೌನಕ್ಕೆ ಶರಣಾಗುತ್ತಿದ್ದರು. ಗಂಗಮ್ಮ  ಮತ್ತು ರಾಜಶೇಖರ ಇಬ್ಬರೂ ಸೇರಿ  ಗಿರಿಜಳಿಗೆ  ” ನೀನು ಮನೆಗೆ ಬಂದು ಬಿಡು. ಆಗ ಮನೆ ಕಡೆ ನೋಡಿಕೊಳ್ಳಲು  ಕಷ್ಟವಾದಾಗ ವಿಧಿಯಿಲ್ಲದೆ  ಮದುವೆಗೆ ಒಪ್ಕಳ್ಳುತ್ತಾರೆ” ಎಂದು ಹೇಳಿದರು. ಆಗ ಗಿರಿಜಾ “ಶಾಂಭವಿ ನಾನಿನ್ನು ಊರಿಗೆ ಹೊರಡುತ್ತೇನೆ” ಎಂದೊಡನೆ ಅಕ್ಕನನ್ನು ತಬ್ಬಿ ಕೊಂಡು ಅತ್ತುಬಿಟ್ಟಳು. ಅವಳೊಡನೆ ಗಿರಿಜಳೂ ಸಹಾ. ಅಂದು ಶಿವಮೂರ್ತಿ ಮನೆಗೆ  ಬಂದು ಊಟ ಮಾಡಿದ ಮೇಲೆ “ಅಪ್ಪಾ ಅಕ್ಕ ಊರಿಗೆ  ಹೋಗ್ತಳಂತೆ. ಇನ್ನು ಸ್ವಲ್ಪ ಸ್ವಲ್ಪ ದಿನ ಇರು ಅನ್ನಪ್ಪ” ಎಂದು ಅತ್ಕಂಡು ಹೇಳುತ್ತಿದ್ದರೆ ನೋಡಿದವರ ಕಣ್ಣಲ್ಲೂ ಕಣ್ಣೀರ ಧಾರೆ ಹರಿದುಬಿಡುತ್ತಿತ್ತು ಕಣ್ದುಂಬಿದ ಶಿವಮೂರ್ತಿ ಅವಳ ತಲೆ ಸವರುತ್ತ “ಇರ್ತಳೆ  ಸುಮ್ನಿರು ನಾನು ಅವಳಿಗೆ ಹೇಳ್ತಿನಿ”ಎಂದು ಸಂತೈಸಿದರು ” ಗಿರಿಜ ಇಷ್ಟೇ ದಿನ ಇದ್ದೀಯಾ ಇನ್ನು ಸ್ವಲ್ಪ ದಿನ ಇರಮ್ಮ ನಾನು ರಾಜಶೇಖರಂಗೆ ಹೇಳ್ತೀನಿ”ಎಂದಾಗ ಅಳುತ್ತಲೇ “ಅಯ್ತಪ್ಪ” ಎಂದು ಗಿರಿಜ ಹೇಳಿದ ಮೇಲೆ ಶಾಂಭವಿಯು  ಗಂಗಮ್ಮನಿಗೆ ಫೋನ್ ಮಾಡಿ ” ಅಜ್ಜಿ ಅಕ್ಕ ಇನ್ನೂ ಸ್ವಲ್ಪ ದಿನ ಇಲ್ಲೆ ಇರಲಿ” ಆ ಕಡೆಯಿಂದ ಗಂಗಮ್ಮನೂ ಅಳುತ್ತಾ “ಆಯ್ತು ಪುಟ್ಟಿ” ಎನ್ನದೆ ವಿಧಿಯಿರಲಿಲ್ಲ. ಮೊಮ್ಮಕ್ಕಳನ್ನು ಸಮಾಧಾನ ಮಾಡಲೆಂದು ಮಾರನೆಯ ದಿನವೇ ಬಂದು ಎರಡು ದಿನವಿದ್ದು ಸಮಯ ನೋಡ್ಕಂಡು ತಂದೆಯನ್ನು ಮರು ಮದುವೆಗೆ ಒಪ್ಪಿಸುವಂತೆ ಸಲಹೆ ನೀಡಿ ಹೊರಟು ಬಂದಿದ್ದರು. ಒಂದು ವಾರ ಕಳೆದ ನಂತರ ಶಿವಮೂರ್ತಿ ರಾತ್ರಿ ಊಟ ಮಾಡಿದ ಮೇಲೆ ವ್ಯವಹಾರಕ್ಕೆ ಸಂಬಂಧಿಸಿ ಫೋನ್ ಮಾಡಿ ಮಾತನಾಡುತ್ತಿದ್ದರು.ಆಗ ಅಲ್ಲಿಗೆ ಬಂದ ಗಿರಿಜಾ ಶಾಂಭವಿ ಇಬ್ಬರು ಕುಳಿತರು. ಆಗ ಶಿವಮೂರ್ತಿ “ಏನ್ರಮ್ಮ” ಎನ್ನುತ್ತಾ ಪಕ್ಕದಲ್ಲೇ ಕುಳಿತರು. ಆಗ ಗಿರಿಜಾ ” ನಾನು ಊರಿಗೆ ಹೋಗ್ಬೇಕಿತ್ತಪ್ಪ. ಬಹಳ ದಿನ ಆಯ್ತು” ಎಂದಳು.ಆಗ ಶಿವಮೂರ್ತಿ “ನಾನು ರಾಜಶೇಖರನ ಹತ್ರ ಮಾತಾಡಿದೀನಿ. ಸ್ವಲ್ಪ ದಿನ ಇರಮ್ಮ” ಎಂದಾಗ ಗಿರಿಜ “ಅಪ್ಪಾ, ಅಜ್ಜಿ  ಆತ್ತೆ ಮಾವ ಎಲ್ಲರೂ ನೀನು  ಮದುವೆ ಆಡಬೇಕು ಅಂತಾ ಹೇಳ್ತಾರೆ.  ಶಾಂಭವಿದು ಮದ್ವೆ ಆದ ಮೇಲೆ ನಿಂಗೆ ಕಷ್ಟ ಆಗುತ್ತೆ. ಯಾರೂ ಬಂದು ಇಲ್ಲಿರಕ್ಕೆ ಆಗಲ್ಲ.ಎಲ್ರಿಗೂ ಕಷ್ಟ ಶಾಂಭವಿನೂ ಒಬ್ಬಳೆ ಇದಾಳೆ “ ” ಅಲ್ಲಮ್ಮ ನಲವತ್ತೈದು ವರ್ಷ ಆಗೈತೆ ನನಗೆ ಈಗೆಂಥ  ಮದ್ವೆ” ಎಂದರು ಶಿವಮೂರ್ತಿ.” ನೀನು ಒಪ್ಕೊಳ್ಳಪ್ಪ ಅದನ್ನೆಲ್ಲಾ ಅತ್ತೆ ನೋಡ್ಕಂತರೆ” ಎಂದಳು ಗಿರಿಜ. ಆಗ ಶಿವಮೂರ್ತಿ” ನೀನೇನೋ ಗಂಡನ ಮನೆಗೆ ಹೋಗ್ತೀಯ ಶಾಂಭವಿಗೆ ಕಷ್ಟ ಆಗುತ್ತಮ್ಮ ಮುಂದೆ. ಮಲತಾಯಿನ ತಂದು ಬಿಟ್ಟ  ಅಂತ ಆ ಹುಡುಗಿ ನೊಂದ್ಕಬಾರದು.”  ಶಿವಮೂರ್ತಿ ಹೇಳಿದರು. ಅಲ್ಲಿಯವರೆಗೆ ಸುಮ್ಮನಿದ್ದ  ಶಾಂಭವಿ “ಅಂಗೆಲ್ಲ ಏನೂ ಆಗಲ್ಲಪ್ಪ. ನಾನು ಅಡ್ಜೆಸ್ಟ್ ಮಾಡ್ಕಂತಿನಿ”ಎಂದಳು. “ಸರಿ ಆಯ್ತು.  ನಿಮ್ಮತ್ತೆಗೂ ಅಜ್ಜಿಗೂ ನೀವೇ  ಹೇಳ್ರಿ” ಎಂದು ಮಲಗಲು ಹೋದರು. ಮಾರನೇ ದಿನವೇ ಗಿರಿಜಾ ಗೌರತ್ತೆಗೆ ಫೋನ್ ಮಾಡ್ಬಿಟ್ಟು ಕರೆಸಿಕೊಂಡಳು. ಗೌರತ್ತೆ ಒಂದು ಸಂಬಂಧವನ್ನು ಆಗ್ಲೇ ಮನದಲ್ಲೆ ಲೆಕ್ಕಾಚಾರ ಹಾಕಿಟ್ಟು ಕೊಂಡಿದ್ದರು. ಅವರಿಗೆ ಪರಿಚಯವಿದ್ದ ಬಡ ಕುಟುಂಬವೊಂದರ  ಹುಡುಗಿಯೇ ಮಹೇಶ್ವರಿ. ಗಂಡ ತೀರಿಕೊಂಡ ಮೇಲೆ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಬೆಳೆಸಿದ  ರಾಜಮ್ಮ ಇವರಿಗೆ ಹಿಂದಿನ ಪರಿಚಯ. ಮಹೇಶ್ವರಿಯು  P U C ಮುಗಿಸಿ ಟೈಲರಿಂಗ್ ಕಲಿತು ಸಂಪಾದನೆ ಮಾಡುತ್ತಿದ್ದಳು. ಅವಳ ಇನ್ನಿಬ್ಬರು ತಂಗಿಯರು ಕೂಡಾ ಟೈಲರಿಂಗ್ ಕಲಿತಿದ್ದರು. ಮೂವರು  ವೃತ್ತಿ ಪರಿಣತಿ ಪಡೆದ ಕಾರಣ ಒಳ್ಳೆಯ ದುಡಿಮೆಯಿತ್ತು ಮಹೇಶ್ವರಿಗೆ ವಯಸ್ಸು ಇಪ್ಪತ್ತೆಂಟಾದರೂ ಮದ್ವೆ ಇಲ್ಲ ಯಾರೂ ಮುಂದೆ ನಿಂತು ಗಂಡು ನೋಡದೆ ಇರುವುದರ  ಕಾರಣವೋ ಅಥವ ಕಂಕಣ ಬಲ ಕೂಡಿ ಬರದಿರುವ ಕಾರಣವೋ ಏನೋ ಮದ್ವೆ ಆಗಿರಲಿಲ್ಲ. ಶಿವಮೂರ್ತಿ ಅಕ್ಕ ಗೌರಮ್ಮ ರಾಜಮ್ಮನನ್ನು ಕರೆಸಿ ವಿಷಯ ತಿಳಿಸಲು  ತಮ್ಮ ಬಡತನದ ಇತಿಮಿತಿಗಳನ್ನರಿತಿದ್ದ  ರಾಜಮ್ಮ ಒಪ್ಪಿ ಕೊಂಡರು. ಪರಿಸ್ಥಿತಿಯ ಅರಿವಿದ್ದ ಮಹೇಶ್ವರಿಯೂ ಸಹ ಒಪ್ಪಿಕೊಂಡಳು. ತಮ್ಮನ ಮನೆಗೆ ಬಂದ ಗೌರಮ್ಮನವರು ರಾಜಮ್ಮನಿಗೆ ಪೋನ್ ಮಾಡಿ ಮಗಳನ್ನು ಕರೆದುತರಲು

Read Post »

ಕಥಾಗುಚ್ಛ

ದುರಾಸೆ ಹಿಂದೆ ದುಃಖ

ಕಥೆ ದುರಾಸೆ ಹಿಂದೆ ದುಃಖ ಲಕ್ಷ್ಮೀದೇವಿ ಪತ್ತಾರ   ಮಂಗಲಾ, ಸುಮಾ ನೆರೆಹೊರೆಯವರು.ಸಾಯಂಕಾಲದ ಹೊತ್ತಾದರೆ ಸಾಕು ಎದುರು ಮನೆ ಸುಮಾ,ಮಂಗಲಾಳ ಮನೆ ಕಟ್ಟಿ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಕೂಡುವುದು ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿದೆ.ಹೀಗೆ ಸಾಯಂಕಾಲ ಎಂದಿನಂತೆ ಬಂದ ಸುಮಾಳನ್ನು ಕುರಿತು “ಏನೇ ಸುಮಾ ನಿನ್ನೆ ಎಲ್ಲಿಗೋ ಹೋದಂಗಿತ್ತು ಎಲ್ಲಿಗೆ ಹೋಗಿದ್ದೆ” ಕೇಳಿದಳು ಮಂಗಲಾ. “ಏನು ಕೇಳ್ತೀಯಾ ಮಂಗಲಾ ಹಂಪೆ ಉತ್ಸವದ ಅಂದ-ಚಂದ. ನೋಡಲು ಎರಡು ಕಣ್ಣು ಸಾಲೋದಿಲ್ಲ. ಅಬ್ಬಾ ಒಂದೊಂದು ಕಡೆ ಒಂದೊಂದು ಕಾರ್ಯಕ್ರಮ. ಬಗೆ ಬಗೆ ಸಾಮಾನು. ಮಸ್ತ ಊಟದ ವ್ಯವಸ್ಥೆ. ಕೈಯಾಗ ದುಡ್ಡಿದ್ದರ ಸಾಕು. ಏನು ಬೇಕು ಅದನ್ನು ತಗೋಬಹುದು. ಅಲ್ಲದೆ ಫ್ರೀ ಬಸ್ ಬಿಟ್ಟಾರ. ಫ್ರೀ ಊಟ, ಫ್ರೀ ಬಸ್ ನೀನು ಹೋಗಿ ಬಾರಲ್ಲ “ಎಂದಳು ಸುಮಾ. ನನ್ನ ಗಂಡಂದು ಬರೇ ದುಡ್ಡೇ ಹುಚ್ಚು. ಮುಂಜಾಲೆ ಹೋದರೆ ಒಮ್ಮೆಲೆ ಕತ್ತಲಾದ ಮೇಲೆ ಮನೆ ಕಾಣೋದು. ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ ಎಂದು ಮಂಗಲಾ ತನ್ನ ದುಃಖ ತೋಡಿಕೊಂಡಳು. ಅದಕ್ಕೆ ಸುಮಾ ಒಳ್ಳೆಯ ಉಪಾಯವನ್ನೇ ಸೂಚಿಸಿದಳು. ಹೇಗೂ ನಿನ್ನ ಗಂಡ ದುಡೀಲಿಕ್ಕೆ ಹೋದಾಗ ನೀನು, ನಿನ್ನ ಮಗನೊಂದಿಗೆ ಹೋಗಿ ಬಾ. ನಮ್ಮ ಊರು ಜನ ಬೇಕಾದಷ್ಟು ಮಂದಿ ಹೊಂಟಾರ. ನೀನು ಹೋಗಿ ಸಾಯಂಕಾಲದೊಳಗೆ ಬಂದು ಬಿಡು” ಎಂದಳು. ಇಷ್ಟು ಹೇಳೋದು ಒಂದೇ ತಡ ಮೊದಲೇ ಗಯ್ಯಾಳಿ, ಎಲ್ಲದರ ಹಪಾಹಪಿ ಇರುವ ಮಂಗಲಾ ತನ್ನ  ಮಗನನ್ನು          ಕರೆದುಕೊಂಡು ಫ್ರೀ ಬಸ್ ಹತ್ತಿ ಹೊರಟೇ ಬಿಟ್ಟಳು. ಹಾಗೆ 4-5 ವರ್ಷದ ಮಗನಿಗೆ, ಮಂಗಲಾಗೆ ಹಂಪಿಯ ಸೋಬುಗು ಮೆರಗು, ಜನದಟ್ಟಣೆ ಕಂಡು ಬೆರಗಾಗಿ ನಾವು ಎಲ್ಲಿಗೆ ಬಂದಿದ್ದೇವೆ ಎಂದು ಹೌಹಾರುವಂತಾಯಿತು. ಗಟ್ಟಿಗಿತ್ತಿ ಮಂಗಲಾ ಓಡ್ಯಾಡಿ ತನ್ನ ಮಗನಿಗೆ ಆಟಿಗೆ ಸಾಮಾನು ತನಗೆ ಮನೆಗೆ ಬೇಕಾದ ವಸ್ತುಗಳನ್ನು ಕೊಂಡು ಕೊಂಡು ಊಟದ ವ್ಯವಸ್ಥೆ ಮಾಡಿದ್ದಲ್ಲಿಗೆ ಬಂದಳು. ಅಲ್ಲೆ ಇದ್ದ ಪರಿಚಿತೆ ಮಹಿಳೆ ಜೊತೆ ಮಾತಾಡಿದಳು. ನಂತರ ಬಹಳ ನುಕೂ-ನುಗ್ಗಲು ಇದ್ದ ಕಾರಣ ಮಗುವನ್ನು ಪರಿಚಿತಳಿಗೆ ಕೊಟ್ಟು “ನಿನಗೂ ಒಳಗ್ಹೋಗಿ ಊಟ ತರುವೆ. ಇಲ್ಲೆ ನನ್ನ ಮಗು ನೋಡಿಕೊಂಡಿರಿ” ಎಂದು ಹೇಳಿ ಒಳಗ್ಹೋದಳು. ಅಲ್ಲೆಗೆ ಆಕಸ್ಮಿಕವಾಗಿ VIP ಆಗಮನವಾಗಿ ಅವನ ಗುಂಪಿನ ಹಿಂದೆ ಮಂಗಳಾ ವಿಶೇಷ ಊಟವಿದ್ಹೆಡೆಗೆ ಹೋದಳು. ನೋಡಿದರೆ ಬಗೆ ಬಗೆ ಅಡುಗೆ ಮೊದಲೇ ಅತಿ ಆಶೆಯ ತಿನಿಸು ಬಡಕಿ ಮಂಗಳ ಒಂದೊಂದೆ ಅಡುಗೆ ತಿನ್ನುತ್ತಾ ಹೋದಳು. ಒಂದೊಂದು ವಿಶೇಷ ರುಚಿ ಹೊಂದಿರುವ ಅಪರೂಪದ ಅಡುಗೆ. ಈ ತರದ ಊಟ ಒಮ್ಮೆಯೂ ಮಾಡಿರದ ಮಂಗಳ ಉಣ್ಣುತ್ತಾ ಉಣ್ಣುತ್ತಾ ತನ್ನ ಮಗುವನ್ನು, ಮಗುವನ್ನು ಕರೆದುಕೊಂಡು ಕುಳಿತಿರುವ ಪರಿಚಯದವಳನ್ನು ಮರೆತಳು. ಆಕೆಗೆ ಊಟ ಒಯ್ಯಬೇಕೆಂಬುದ ಮರೆತು ಹಾಗೆ ಗದ್ದಲದ ನಡುವೆ ಹೊರಬಂದಳು. VIP ನೋಡಲು ನೂಕು ನುಗ್ಗಲು. ಈ ಗದ್ದಲದಲ್ಲೆ ಪ್ಲಾಸ್ಟಿಕ ಡಬ್ಬಿಗಳನ್ನು ಹೊತ್ತು ಮಾರುವನು ಗದ್ದಲದಲ್ಲೆ ಸಿಕ್ಕೂ ಅವನ ಸಾಮಾನುಗಳು ಚೆಲ್ಲಾಪಿಲ್ಲಿಯಾದವು. ಅವನ್ನು ಕೆಲವರು ಎತ್ತಿಕೊಂಡು ಹೋದರು. ಈಕೆಗೂ ತೆಗೆದುಕೊಂಡು ಒಯ್ಯಬೇಕೆಂದು ಯೋಚಿಸುವಷ್ಟರಲ್ಲೆ ಮಗುವಿನ ನೆನಪಾಯಿತು. ಓಡಿ ಹೋಗಿ ನೋಡುತ್ತಾಳೆ. ಮಗುವು ಇಲ್ಲ. ಅಪರಿಚಿತ ಹೆಂಗಸು ಇಲ್ಲ. ಹುಚ್ಚಿಯಂತೆ ಹುಡುಕುತ್ತಾ ಹೋದಳು. ಗದ್ದಲಿನಲ್ಲೆ ಕಂಡಕಂಡವರಿಗೆ ತನ್ನ ಮಗು ಹೀಗೆ ಇತ್ತು. ನೋಡಿದಿರಾ ಎಂದು ಕೇಳಿದಳು. ಎಲ್ಲಿ ನೋಡಿದರೆ ಸುಳಿವಿಲ್ಲ. ಹೀಗೆ ಹುಡುಕುವಾಗ ಮಗುವನ್ನು ನೋಡಿಕೊಂಡಿರಲು ಹೇಳಿದ ಹೆಂಗಸು ಸಿಕ್ಕಳು.ಮಂಗಲಾ “ನನ್ನ ಮಗು ಎಲ್ಲಿ” ಎಂದರೆ, “ಎಷ್ಟು ಹೊತ್ತು ಅಂತ ಕಾಯೋದು. ನನ್ನ ಹೊಟ್ಟೆಯೂ ಚುರುಗುಟ್ಟಿತು. ನಾನು ಮೊದಲೇ ಒಂತರಾ ಮನುಷ್ಯಳು. ಯಾವಾಗ ಹೇಗೆ ಇರುತ್ತೇನೂ ನನಗೆ ಗೊತ್ತಿರುವುದಿಲ್ಲ. ನನಗೂ ನೀನು ಬೇಗ ಬರದೇ ಇರುವುದು ಬೇಸರವಾಗಿ ನಿನ್ನ ಮಗುವನ್ನು ಅಲ್ಲೆ ಬಿಟ್ಟು ಬಂದೆ “ಎಂದಳು. ಮಂಗಲಾಗೆ ಆಕಾಶವೇ ಕಳಚಿ ಬಿದ್ದಾಂತಾಯಿತು. ನಿಂತ ನೆಲವೇ ಕುಸಿದಂತಾಯಿತು. ತರ ತರ ನಡುಗಿ ಹೋದಳು. ತನ್ನ ಒಂದು ಕ್ಷಣದ ಬಾಯಿ ರುಚಿ ಆಶೆಗೆ (ದುರಾಶೆಗೆ) ಮುಂದಿನ ಪರಿಣಾಮ ಯೋಚಿಸಲಿಲ್ಲವಲ್ಲ. ನನ್ನ ಮಗು ಏಲ್ಲಿ ಹೋಯಿತು. ಯಾರು ಎತ್ತಿಕೊಂಡು ಹೋದರು. ನನ್ನ ಮಗುವನ್ನು ಏನೂ ಮಾಡುವರೊ. ಎಂತಹ ಮುದ್ದಾದ ಸುಂದರ ಮಗು ನನ್ನದು. ದೇವರು ನನಗೇಕೆ ಇಂತಹ ಬುದ್ಧಿ ಕೊಟ್ಟೆ ಎಂದು ಒಂದೇ ಸಮನೆ ಹಲುಬುತ್ತಾ, ಕಣ್ಣೀರಿಡುತ್ತಅ ಕಂಡ ಕಂಡವರನ್ನೂ ತನ್ನ ಮಗು ಕುರಿತು ಕೇಳುತ್ತಾ ಹುಚ್ಚಿಯಂತೆ ಹುಡುಕುತ್ತಾ ಹೊರಟಳು. ************************

ದುರಾಸೆ ಹಿಂದೆ ದುಃಖ Read Post »

ಕಥಾಗುಚ್ಛ

ಸಂದಣಿ

ವಿಶೇಷ ಕಥೆ ಸಂದಣಿ ಅಶ್ವಥ್ ಬೆಳಗಿನ ಆಮೆವೇಗದ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡು ಕಾಯುತ್ತಾ ಸಂಯಮ ಸಮಾಧಾನಗಳನ್ನೊಂದಿಷ್ಟು ಅಭ್ಯಾಸ ಮಾಡಿ ಆಫೀಸು ತಲುಪುವುದು ಸತೀಶನಿಗೆ ನಿತ್ಯಕರ್ಮವಾಗಿತ್ತು. ಅಕಸ್ಮಾತಾಗಿ ಬೆಳಗಿನ ಜಾವ ಮೂರು ನಾಲ್ಕುಗಂಟೆಯಲ್ಲೋ ಅಥವಾ ಅರ್ಧದಿನ ರಜಾಹಾಕಿ ಮನೆಗೆ ಮರಳುವಾಗಲೋ ಟ್ರಾಫಿಕ್ನಲ್ಲಿ ಸಿಕ್ಕಿಕೊಳ್ಳದೇ ಮನೆ ತಲುಪಿದ ದಿನ ತನ್ನ ಬೈಕಿಗೆ ರೆಕ್ಕೆ ಬಂದಿವೆಯೇನೋ ಅನಿಸುವಷ್ಟರ ಮಟ್ಟಿಗೆ ಹದಿನೈದು ನಿಮಿಷದ ಕಿರು ಪ್ರಯಾಣವಾಗಿರುತ್ತಿತ್ತು. ಬೆಂಗಳೂರಿನಲ್ಲಿರುವ ಹತ್ತು ವರ್ಷಗಳಲ್ಲಿ ‍ಮೂರು ಕಂಪನಿಗಳನ್ನು ಬದಲಾಯಿಸಿದರೂ ಎಲ್ಲೂ ಈಗಿನಷ್ಟು ಹತ್ತಿರವಾಗಿರಲಿಲ್ಲ. ಮೊದಲೆಲ್ಲಾ ೩ ಪ ಗಂಟೆಗಳವರೆಗಿನ ಆಫೀಸ್ ಪ್ರಯಾಣವಾಗಿದ್ದುದು ಈಗ ಎರಡು ಗಂಟೆಗೆ ಬಂದಿರುವುದು ನಿರಾಳವಾಗಿತ್ತು. ಬೆಳಗಿನ ಒಂಭತ್ತರ ಆಫೀಸ್ ಕೆಲಸಕ್ಕೆ ಆರೂವರೆ -ಏಳರ ಹೊತ್ತಿಗೆ ಬೈಕನ್ನು ಹೊಸ್ತಿಲಿನಾಚೆ ಎಳೆದು ರಸ್ತೆಯಲ್ಲಿ ಜಾಗ ಹಿಡಿದುಬಿಡಬೇಕಿತ್ತು. ರಸ್ತೆ ಸೇರುವಾಗ ಹಿಡಿದ ಜಾಗದಿಂದ ಪಟ್ಟುಬಿಡದೇ ಮುಂದೆ ಮುಂದೆ ಹೋಗಿಸಿಲ್ಕ್ಬೋರ್ಡ್ಸರ್ಕಲ್ಲಿನಾಚೆಫ್ಲೈಓವರ್ ಸೇರುವ ಹೊತ್ತಿಗೆ ಆತುರದಲ್ಲಿ ಆದ ಕಾಫಿ, ತಿಂಡಿಯೆಲ್ಲ ಈಗ ಜೀರ್ಣ ಆಗಬಹುದಾ! ಅನ್ನುತ್ತಲೇ ಅನ್ನಚೀಲದೊಳಗೆ ಕುಲುಕುತ್ತಾ ಇರುತ್ತಿತ್ತು. ದಾರಿಮಧ್ಯೆ ಅದೇ ಕೆಲವು ಹಳೆಮುಖಗಳು, ಮತ್ತ್ಯಾವುದೋ ಲಗ್ಗೇಜುಗಾಡಿ, ಕೆಲವೊಮ್ಮೆ ಬಿಎಂಟಿಸಿಯ ಬಸ್ಸುಗಳು, ಟ್ರಾಫಿಕ್ಕುಗಳನ್ನು ಆಗ್ಗಾಗ್ಗೆ ಕೆದಕುತ್ತಾ ಮುಂದೆ ತಳ್ಳುವುದಕ್ಕೆ ಹಾವಿನಾಕಾರದಲ್ಲಿ ಹೊರಳಿಕೊಂಡು ಹೋಗುವ ಸ್ಕೂಟಿಗಳು. ಆಟೋ, ಟ್ಯಾಕ್ಸಿಗಳು. ಹೀಗೆಆವಾಹನದಟ್ಟಣೆಯದೀರ್ಘನೋಟ ಒಂದು ರೀತಿಯ ಹಲಬಗೆಯ ವಾಹನಗಳ ಸೂಪರ್ಮಾರ್ಕೆಟ್ಟಿನ ಹಾಗೆ ಕಾಣುತ್ತಿತ್ತು. ತರಹೇವಾರಿ ಹೊಗೆಪೈಪುಗಳಲ್ಲಿ ಪೆಟ್ರೋಲ್ & ಡೀಸೆಲ್ ಉರಿದುಗುಳುವ ದಟ್ಟಹೊಗೆ ಆ ಓಪನ್ಮಾರ್ಕೆಟ್ನಿಂದ ಸೂಸುವ ಘಾಟಿನಂತಿರುತ್ತಿತ್ತು. ಅದೊಂದು ದಿನ ಮೋಡ ಕವಿದ ವಾತಾವರಣ, ಇನ್ಯಾವ ಕ್ಷಣದಲ್ಲಾದರೂ ಮಳೆ ಬಂದು ಬಿಡಬಹುದು ಅನಿಸುತ್ತಿದ್ದರಿಂದ ರೈನ್ಕೋಟ್ಹಿಡಿದೇ ಬೈಕ್ ಏರಿದ ಸತೀಶ. ನಿಧಾನವಾಗಿ ದಾರಿ ಮಧ್ಯದಲ್ಲಿ ಟ್ರಾಫಿಕ್ಕಿನಲ್ಲಿ ತನ್ನೆರಡೂ ಕಾಲುಗಳನ್ನು ಬೈಕಿನ ಹೆಚ್ಚುವರಿ ಚಕ್ರಗಳ ಹಾಗೆ ಉಜ್ಜುತ್ತಾ ಎಳೆಯುತ್ತಾ ಕೆಲವೊಮ್ಮೆನಾಲ್ಕು ಚಕ್ರ ಕೆಲವೊಮ್ಮೆ ಮೂರು ಮತ್ತೆ ಎರಡು ಹೀಗೆ ಚಕ್ರಗಳ ಬಹುಕೃತ ವೇಷವನ್ನು ಬದಲಾಯಿಸುತ್ತಿರುವಾಗ ಪಕ್ಕದಲ್ಲೇ ಬಂದು ಬೈಕ್ನ ಮುಂದೆ ಮುದ್ದಾದ ಹಾಲುಗಲ್ಲದ ಮಗು, ಅದಕ್ಕೆ ತಕ್ಕನಾದ ಪುಟ್ಟ ಹೆಲ್ಮೆಟ್ಟು ಹೊದ್ದು ಇನ್ನೇನು ನಿದ್ರೆ ಹತ್ತೀತೇನೋ ಅನ್ನುವಂತೆ ತಲೆತೂಗುತ್ತಿತ್ತು. “ಸಾರ್, ಮಗು ತೂಕಡಿಸೋ ತರ ಕಾಣ್ತಿದೆ ಎಚ್ಚರ ಮಾಡಿ” ಅಂದ ಸತೀಶ. “ನೋ! ಐ ಆಮ್ಜಸ್ಟ್ಟಯರ್ಡ್” ಅನ್ನುತ್ತಾ ತೊದಲುವ ಮುಖ ನೋಡಿ, ಚೆಂದದ ನಗೆ ಬೀರಿ ಬಲಗೈ ಹೆಬ್ಬೆರಳಿನ ಲೈಕ್ ಒತ್ತುತ್ತಾ ಹಾಗೇ ನೋಡುತ್ತಾ ನಿಂತ. “ಏನ್ಮಾಡೋದುಸಾರ್… ಈ ಹಾಳಾದ್ಟ್ರಾಫಿಕ್ಕಲ್ಲಿ ನಾನು ಬೇಯೋದಲ್ಲದೇ ದಿನಾವಇವನ್ನೂ ಬೇಯಿಸ್ಕೊಂಡೇ ಹೋಗ್ಬೇಕು. ಬೇರೆ ದಾರಿ ಇಲ್ಲ. ಪಾಪ, ದಿನಾ ಇದೇ ನೋಡಿ ನೋಡಿ ಇದಕ್ಕೇ ಹೊಂದ್ಕೊಂಡಿದ್ದಾನೆ” ಮಗು ಎಡಕ್ಕೆ ಓರೆಯಾಗುತ್ತ “ಯೆಸ್ಸ್” ಅನ್ನುತ್ತಾ ಕಣ್ಣುಗುಡ್ಡೆ ಮೇಲು ಮಾಡಿ ಬೇಸರಿಸಿಕೊಂಡಿದ್ದರೂ, ಕೈಬೆರಳುಗಳನ್ನು ಪಾರ್ಲೆ ಬಿಸ್ಕೆಟ್ಪ್ಯಾಕ್ನ ಬೇಬಿಯ ಹಾಗೆ ಕಾಣಿಸಿ ಮತ್ತಷ್ಟು ಮುಗ್ಧತೆಯನ್ನು ಹೊರಸೂಸಿತು. “ಅಯ್ಯೋ ಕಂದಾ! ಕನ್ನಡ ಅರ್ಥಆಗ್ತದೇನೋ? ಎಷ್ಟು ರಿಯಾಕ್ಟ್ ಮಾಡ್ತಾನೆ ನೋಡಿ ! ಎಷ್ಟ್ವಯಸ್ಸು ಸಾರ್?ಎನ್ನುತ್ತಾ ಮುಂದೆ ಸರಿಯುತ್ತಿದ್ದ ಟ್ರಾಫಿಕ್ಕಿಗೆ ಎರಡೂ ಬೈಕುಗಳು ನಿಧಾನವಾಗಿ ಹೊಂದಿಕೊಂಡು ಸಂಭಾಷಣೆ ಮುಂದುವರಿದೇ ಇತ್ತು. “ನಾವು ಮೈಸೂರ್ನವರು ಕನ್ನಡ ಅರ್ಥ ಆಗತ್ತೆ. ಬಾಡಿಗೆಮನೆ ನೈಬರ್ಸು, ಡೇಕೇರು ಎಲ್ಲಾ ಸೇರಿ ಇಂಗ್ಲೀಷ್ಮಯ ಆಗಿದೆ. ಅಲ್ಲದೇ ನಾವೂ ಏನು ಕಡಿಮೆಯಾ? ಬೆಳಿಗ್ಗೆ ಬರೋ ಪೇಪರಿಂದ ಹಿಡಿದು ಆಫೀಸ್ಕೆಲಸದಲ್ಲೆಲ್ಲ ಇಂಗ್ಲೀಷಿನವರೇ ಆಗಿ ಹೋಗಿದ್ದೀವಿ, ಎಳೆವಯಸ್ಸಿನಲ್ಲಿ ಹೀಗೇನೇ ಅಲ್ವಾ ಕಲಿಯೋದು”? ಅನ್ನುತ್ತಾ ಬೇಸರದ ಬೆಳಗಿಗೊಂದಿಷ್ಟು ತಿಳಿಯೆನಿಸುವ ಆಪ್ತತೆಯನ್ನು ತೋರಿದರು ತಂದೆ. ಅಷ್ಟೂ ಹೊತ್ತು ಚಿಂತಾಕ್ರಾಂತನಾಗಿದ್ದ ಪುಟ್ಟಮಗು ಅಚಾನಕ್ಕಾಗಿ ಸಿಕ್ಕ ಸತೀಶನತ್ತ ಹೊರಳಿದ್ದೇ ಅವನ ನವಿರಾದ ಮಾತಿಗೆ ಕಿವಿಗೊಡುತ್ತಾ ಕಣ್ಣು ಹೊರಳಿಸುತ್ತಾ ಪರಿಚಯ ಬೇಕು ಅನ್ನುವಂತೆ “ನೀಯಾರು” ಅಂತು. ” ನಾನೂ ನಿಮ್ಮ ಅಪ್ಪನ ಹಾಗೇ, ನಿತ್ಯ ಟ್ರಾಫಿಕ್ಕಿನೊಳಗೆ ಬೇಯೋವ್ನು” ನಮ್ಮೂರು ಹಳೆಬೀಡು ಹತ್ರ ಹಳ್ಳಿ. ನಿನ್ನಂಗಿದ್ದಾಗ ನಮ್ಮ ಹಳ್ಳಿಯಲ್ಲಿ ಹೇಗಿತ್ತು ಗೊತ್ತಾ ಪುಟ್ಟಾ?” ಅನ್ನುವಷ್ಟರಲ್ಲಿ “ನೈಸ್ ಟಾಕಿಂಗ್ಟುಯೂ ರೀ ನೆಕ್ಸ್ಟ್ಟರ್ನಲ್ಲಿ ಡೇಕೇರ್ಗೆ ಬಿಟ್ಟು ಮತ್ತೆ ಈ ರೋಡ್ನೇ ಸೇರ್ಕೊಬೇಕು” ಅನ್ನುತ್ತಾ ಅಪ್ಪ ಗಾಡಿಯನ್ನು ಬಲಕ್ಕೆ ಹೊರಳಿಸುವುದಕ್ಕೆ ನೋಡುತ್ತಿದ್ದಂತೆ, ಮಗುವಿಗೆ ಮತ್ತೆ ಬೇಸರ ಮಡುಗಟ್ಟಿ “ಐ ವಾಂಟು ಟಾಕ್ಮೋರ್” ಅನ್ನುತ್ತಾ ಗೊಣಗಿದ. ನಿದ್ರೆ ಬಂದೇ ಬಿಟ್ಟಿತು ಅನ್ನುವಂತೆ ತೂಗುತ್ತಲಿದ್ದವನು ಇದ್ದಕ್ಕಿದ್ದ ಹಾಗೆ ಚುರುಕಾಗಿದ್ದು ಕಂಡು, “ನೋಡಿ, ಏನೋ ಪರಿಚಯಕ್ಕೆ ಸಿಕ್ಕರೆ ಸಾಕು, ತಲೆತಿಂತಾನೆ! ಈಗ ನಿದ್ರೆಮಾಡಿಯಾನು ನೋಡಿ ಅಂದಿದ್ದು ನಿಮ್ಮದೇ ತ ಪ್ಪೇನೋ ಅನ್ನೋ ಹಾಗೆ ಮಾಡಿಬಿಟ್ಟಾನು”. ಅನ್ನುತ್ತಾ ಅಪ್ಪ ತಮಾಷೆ ಮಾಡಿದ. ಇರಲಿ ಬಿಡಿ ಸಾರ್.ಅರ್ಥ ಆಗತ್ತೆ. ಮಕ್ಕಳನ್ನು ಬೆಳೆಸೋಕೆ ಜಾಗ ಅಲ್ಲ ಇದು. ಏನ್ಮಾಡೋದು, ಲೈಫ್ಸ್ಟೈಲೇ ಹಾಗಾಗಿದೆ. ನಮ್ಮ ಕಾಲ ನಮ್ಮ ಮಕ್ಕಳಿಗೆ ಇಲ್ಲ. ಇನ್ನು ಮುಂದೆ ಹೇಗೋ ಎನ್ನುತ್ತಾ ಕಣ್ಣು ಮೇಲು ಮಾಡುವ ಸರದಿ ಈಗ ಸತೀಶನದ್ದಾಗಿತ್ತು. ರೈಟ್ .ಯಾಕಾದ್ರೂ ಈ ಎಂಜಿನಿಯರಿಂಗ್ ಮಾಡಿದೆನೋ ಅನ್ಸುತ್ತೆ ರೀ ಒಂದೊಂದ್ಸಾರ್ತಿ. ಅಂದ್ಹಾಗೆ ನನ್ನ ಹೆಸರು ಅವಿನಾಶ್, ಇಲ್ಲೇ ವಿಪ್ರೋದಲ್ಲಿರೋದು ಅನ್ನುತ್ತಾ ಬಲಗೈ ಚಾಚಿದರು. ನಾನು ಸತೀಶ್, ಹನಿವೆಲ್ಲು ಬಟ್ನಾಟ್ಸೋವೆಲ್ಲ್ . ಊರು ನೆನಪಾದ್ರೆ ಎಲ್ಲಾ ಬಿಟ್ಹಾಕಿ ಹೊರಟ್ಹೋಗೋಣ ಅನ್ಸುತ್ತೆ ಏನ್ಮಾಡೋದೇಳಿ ಫಜೀತಿ. ಈಗ ಅಲ್ಲೂ ಏನೂ ಸುಲಭ ಅಲ್ಲ. ಕರೆಕ್ಟ್.ನಮ್ಮದೂ ಮೈಸೂರ್ಹತ್ರ ಸ್ವಲ್ಪ ಜಮೀನಿದೆ. ನಮ್ಮ ತಾತ ಮಾಡಿಸ್ತಿದ್ರು. ನಾವೆಲ್ಲ ಹುಟ್ಟಿ ಬೆಳೆದಿದ್ದು ಮೈಸೂರಲ್ಲೇ. ಹಳ್ಳಿ ಅಲ್ಲದಿದ್ರೂ, ಇಷ್ಟು ಕೆಟ್ಟ ಪಟ್ಟಣ ಆಗಿರ್ಲಿಲ್ಲ ಬಿಡಿ. ಅನ್ನುತ್ತಾ ಹಳೆಯ ಮೈಸೂರಿನ ನೆನಪಿಗಿಳಿದ ಅವಿನಾಶ್, ನಮ್ಮ ಪುಟ್ಟಂಗೆ ಇವತ್ತು ನಿಮ್ಮ ಜೊತೆ ಮಾತಾಡೋ ಮನಸಾಗಿದೆ. ನೆಕ್ಸ್ಟ್ಕ್ರಾಸ್ತೊಗೊಳ್ತೀನಿ. ಅರ್ಧಗಂಟೆ ಆಗತ್ತೆ ಮಿನಿಮಮ್. ಅಷ್ಟರಲ್ಲೆಲ್ಲ ತೊಂದ್ರೆ ಕೊಟ್ಬಿಡಪ್ಪಾ ಸತೀಶ್ ಅವ್ರಿಗೆ” ಅಂದು ಮತ್ತೆನ ಕ್ಕರು. ಮಗು ಹಿಗ್ಗಿದ. ” ಇರಲಿ ಬಿಡಿ ಸಾರ್.ಇದರಲ್ಲಿ ತೊಂದ್ರೆ ಏನಿದೆ. ಆದರೆ ರಸ್ತೆಯಲ್ಲಿ ಹೀಗೆ ಟೈಮ್ಪಾಸ್ಮಾಡೋದಕ್ಕೆ ನಗೋದೋ ಅಳೋದೋ ಗೊತ್ತಾಗಲ್ಲ” ಅನ್ನುತ್ತಾ ಮಗುವಿನ ಮುಗ್ಧಮುಖ ನೋಡುತ್ತಾ ಟ್ರಾಫಿಕ್ಕಿನ ಧಾರುಣತೆಯನ್ನೆಲ್ಲವನ್ನು ಇಲ್ಲವಾಗಿಸಿ ಮಗುವಿನೊಂದಿಗೆ ಸಂಭಾಷಣೆಗಿಳಿದ. ಸಮರ್ಥ್. ಏನ್ಮಾಡ್ತೀಯಾ ಡೇಕೇರಲ್ಲಿ? ತಿಂಡಿ ಆಯ್ತಾ? ಲಂಚ್ಬಾಕ್ಸ್ನಲ್ಲಿ ಏನಿದೆ? ಓಯೆಸ್.ಇಡ್ಲಿವಿತ್ಸಕ್ರೆ ಚಟ್ನಿ. ಲಂಚ್ಬಾಕ್ಸ್ನಲ್ಲೂ ಅದೇ. ನಂಗ್ಬೇಕಿತ್ತಲ್ಲ. ನನ್ನಲಂಚ್ಬಾಕ್ಸ್ತಂದಿಲ್ಲ. ತೊಗೊಳ್ಳಲಾ ಅನ್ನುತ್ತಾ ಕೈಚಾಚಿದ. “ಹ್ಹಿಹಿ…. ಇದುಸ್ಮಾಲ್ಬಾಕ್ಸ್….” ಅನ್ನುತ್ತಾ ಬ್ಯಾಗನ್ನು ಗಟ್ಟಿಯಾಗಿ ಹಿಡಿದು, ಸಮಾಧಾನಕ್ಕೆನ್ನುವಂತೆ “ಡ್ಯಾಡಿದೂ ಇಲ್ಲ”. ಅಂದ. ಮಾತು ಹಾಗೇ ಮುಂದುವರಿದು ಹೆಚ್ಚಿನವಪರಿಚಯ ಹೇಳಿಕೊಳ್ಳುತ್ತಾ, ಹಳೆಬೀಡಿನ ನೆನಪುಗಳನ್ನೆಲ್ಲ ಹೊಸದೆನ್ನುವಂತೆ ಮಾಡಿಕೊಂಡು ತನ್ನ ಬಾಲ್ಯದ ಕೆಲವು ತುಣುಕುಗಳನ್ನೆಲ್ಲ ಮಗುವಿನೊಂದಿಗೆ ಹಂಚಿಕೊಳ್ಳುತ್ತಾ, ತನ್ನ ಹಳೆಯ ಗೋಲಿಯಾಟ, ಮರಕೋತಿಆಟ, ಹಳ್ಳಿ, ಹೊಸ, ಮರ, ಹಸು ಹಕ್ಕಿ ಇತ್ಯಾದಿ ಹೊಸಲೋಕವನ್ನೇ ಅವಸರವಸರವಾಗಿ ತೆರೆದಿಡುತ್ತಾ ಸರಿಯುತ್ತಿದ್ದ. ಪರಿಚಯ ಆಗಿದ್ದು ಖುಷಿಯಾಯ್ತು ಸಾರ್.ನಾನು ಜೆಪಿನಗರದಿಂದ ಹೊರಡೋದು ದಿನಾ… ಮತ್ತೆ ಯಾವಾಗಲಾದರೂ ಸಿಗೋಣ. ಮುಂದಿನ ಕ್ರಾಸ್ಬಂದೇ ಬಿಡ್ತು. ಇಫ್ಯುಡೋಂಟ್ಮೈಂಡ್, ಫೋನ್ನಂಬರ್ಶೇರ್ಮಾಡಿ. ನನ್ನದು ನೈನ್ಡಬಲ್ಎಂಟ್ ಎನ್ನುತ್ತಾ ಒಂದರ ಮಗ್ಗಿ ಶುರು ಮಾಡಿದ. ‘ಶ್ಯೂರ್ಶ್ಯೂರ್ʼ ನಮ್ರೂಮ್ಕೂಡ ಅಲ್ಲೇ ಜೆಪಿನಗರ. ಖಂಡಿತಾ ಸಿಗೋಣ. ಬಾ ಇಂಟರೆಸ್ಟಿಂಗ್ ಇದಾನೆ ಮಗ ಅಂದು ತನ್ನ ಮೊಬೈಲ್ತೆಗೆದು ಅವಿನಾಶ್ಹೇಳಿದ ಒಂದರವಮಗ್ಗಿ ಒತ್ತಿಟ್ಟುಕೊಳ್ಳುತ್ತಾ, ಒಂದುರಿಂಗ್ಮಾಡಿ, ಮಿಸ್ಡ್ಕಾಲ್ ಇದೆ ನೋಡಿ ನಂದು ಅನ್ನುತ್ತಾ ಮಗುವಿಗೆ “ಬಾಯ್!” ಅನ್ನುತ್ತಲೇ… ಅವನನ್ನು ಅಣಕಿಸುವಂತೆ ಮಗು “ಅಂಕಲ್!” ಅಂದ. ಎಲಾ ಇವನಾ? ಒಂದರ್ಧ ಗಂಟೆ ಮಾತಿಗೆ ಎಷ್ಟು ಪರಿಚಯದವನ ಹಾಗೆ ಆಗಿಬಿಟ್ಟ ಅಂದುಕೊಳ್ಳುತ್ತಲೇ ಸತೀಶ ಟ್ರಾಫಿಕ್ಕಿನ ಉದ್ದನೆಯ ಸಾಲಿನತ್ತ ದೃಷ್ಟಿ ನೆಟ್ಟ. ಆ ದಿನ ಸಂಜೆ ಮನೆಗೆ ಬರುವಾಗಲೂ ಮತ್ತೆ ಅದೇ ಸಾಲುಗಟ್ಟಿದ ವಾಹನಗಳ ನಡುವೆ ಬೇಯುತ್ತಾ ಬರುವ ದಾರಿಯಲ್ಲಿ ಸಿಕ್ಕ ಪುಟ್ಟ ಗೆಳೆಯನ ನೆನಪು ಮಾಡಿಕೊಳ್ಳುತ್ತಾ ಇನ್ನಷ್ಟು ಬೇಸರವಾದ. ಆ ರಾತ್ರಿ ಆ ಮಗುವಿನ ನೆನಪಾಗಿ ತಾನು ಮೊದಲು ಕಂಡ ಆ ತೂಕಡಿಸುವಂತಹ ಮುಗ್ದ ಮುಖ ಮತ್ತೆ ದಿಟ್ಟಿಸಿದ ಹಾಗನಿಸಿ ಕಸಿವಿಸಿಗೊಂಡು ದೀರ್ಘವಾಗಿ ಯೋಚನೆಗಿಳಿದ. ನನ್ನ ಬಾಲ್ಯದ ದಿನಗಳಿಗೂ, ಈ ಮಗುವಿನ ಈ ದಿನಗಳಿಗೂ ಎಷ್ಟೊಂದು ವ್ಯತ್ಯಾಸ… ನಮಗೆ ನಿದ್ರೆ ಮಾಡಿಸುವುದಕ್ಕೆ ಮನೆಯಲ್ಲಿ ಹರಸಾಹಸ ಪಡಬೇಕಾಗುತ್ತಿತ್ತು. ಮನೆಯಲ್ಲಿ ಇರಿಸಿಕೊಳ್ಳುವುದೇ ಕಷ್ಟವಾಗಿರುತ್ತಿದ್ದು ಸದಾ ಅಂಗಳ ಬೀದಿ ಹೊಲಗದ್ದೆಗಳ ಕಡೆಯೇ ಆಟವಾಡುತ್ತಾ, ಇದ್ದ ಆ ಹಳ್ಳಿಗೂ, ಬೆಳಗಾದರೆ ಟ್ರಾಫಿಕ್ಕಿನ ಸುಪ್ರಭಾತ, ಮತ್ತೆ ಸಂಜೆ ಅದೇ ಟ್ರಾಫಿಕ್ಕಿನ ಮಂಗಳಾರತಿಯ ನಡುವೆ ಈ ಹೊಸ ತಲೆಮಾರಿನ ಬದುಕು ಎಷ್ಟೊಂದು ವಿಚಿತ್ರವಾಯಿತಲ್ಲ, ಇದಕ್ಕೆ ತಾನೂ ಒಬ್ಬ ಕಾರಣನಾದನಲ್ಲ ಅನಿಸುವಂತಾಯಿತು. ಟ್ರಾಫಿಕ್ಕು , ಜನಜಂಗುಳಿ ನಗರದ ದಟ್ಟಣೆಗಳೆಲ್ಲವೂ ನಾವೇ ಜನರೇ ಮಾಡಿಕೊಂಡಿರುವ ಸ್ವಯಂಕೃತ ಸಮಸ್ಯೆಗಳಲ್ಲವೇ? ಎಲ್ಲರಿಗೂ ಚಂದದ ಬಾಲ್ಯಬೇಕು ಅನ್ನುತ್ತಾ ಇನ್ನೂ ಹಳ್ಳಿ ಯನ್ನೇ ಅವಲಂಬಿಸಿದರೆ ಊರಿನಲ್ಲಿ ಸವಲತ್ತುಗಳೇನೇನೂ ಇಲ್ಲ. ಸವಲತ್ತುಗಳನ್ನು ಸೃಷ್ಟಿಸಿಕೊಳ್ಳುವ ಧಾವಂತದಲ್ಲಿ ಚದುರಿಹೋಗಿದ್ದ ಸಣ್ಣಊರುಗಳನ್ನೆಲ್ಲ ಕಲೆಹಾಕಿ ಮಹಾನಗರಗಳನ್ನಾಗಿ ಬೆಳೆಸಿಕೊಂಡು, ಅಲ್ಲಿ ಒಂದಿಷ್ಟು ಆಸ್ತಿ, ಸೈಟು, ಅಪಾರ್ಟ್ಮೆಂಟುಗಳನ್ನೆಲ್ಲ ಮಾಡಿಕೊಂಡು, ಹಣದ ಒಟ್ಟು ಮೊತ್ತವನ್ನು ಮನಸ್ಸಿನಲ್ಲೇ ಲೆಕ್ಕಮಾಡಿಕೊಂಡು ಪ್ರತಿವರ್ಷ ಐಟಿ ಟ್ಯಾಕ್ಸ್ಕಟ್ಟುವಾಗ ಆ ಲೆಕ್ಕ ಮರುಪರಿಶೀಲನೆಯನ್ನೂ ಮಾಡಿಕೊಂಡು ವಿಚಿತ್ರ ಅಂಕಿಸಂಖ್ಯೆಯ ಲೆಕ್ಕದಲ್ಲಿ ಸಿರಿವಂತಿಕೆಯ ನೆಮ್ಮದಿಯೊಳಗೆ ಮುಳುಗಿ ನಿಜದ ನೆಮ್ಮದಿಯ ನೆನಪೂ ಇಲ್ಲದ ಹಾಗಾಗಿದೆ. ಎಷ್ಟು ಹೊತ್ತು ಯೋಚಿಸಿದರೂ ನಿದ್ರೆ ಹತ್ತದೆ ಹಾಗೇ ಕೂತಲ್ಲೇ ಕೂತಿದ್ದವನಿಗೆ ಊಟ ಮಾಡಿಲ್ಲವೆನ್ನುವುದು ಗೊತ್ತಾಗಿ, ಈಗ ಒಲೆ ಹೊತ್ತಿಸುವ ಮನಸ್ಸಿಲ್ಲದ್ದಕ್ಕೆ ಮನೆಯ ಪಕ್ಕದ ಬೀದಿಯ ಬೇಕರಿ ಬಾಗಿಲು ಮುಚ್ಚುವ ಮೊದಲೇ ಏನಾದರೂ ಸಿಕ್ಕೀತು ಅಂದುಕೊಂಡು ದಾಪುಗಾಲಿಡುತ್ತಾ ಗೇಟು ದಾಟಿದ. ರಾತ್ರಿ ಒಂದರ ನಂತರವೂ ನಿದ್ರೆ ಬಾರದವನಾಗಿ ತನ್ನ ಬಾಲ್ಯವನ್ನೇ ಮತ್ತೆ ಮೆಲುಕು ಹಾಕಿಕೊಂಡು ಒಂದಿಷ್ಟು ಸಂತೊಷಪಟ್ಟುಕೊಳ್ಳುತ್ತಾ, ಬೆಳಗಿನ ಟ್ರಾಫಿಕ್ಕಿನ ಬಗ್ಗೆ ಮಾಮೂಲಿನಂತೆ ಅಲ್ಲದೇ ಏನೋ ವಿಚಿತ್ರ ಆಯಾಸದ ಭಾವನೆ ಮೂಡಿ ಬೆಳಗಿನ ಆ ಮುಗ್ದ ಮಗುವಿನ ತೂಕಡಿಕೆಗೆ ಪ್ರತಿಕ್ರಯಿಸುವವನಂತೆ ತಾನೂ ತೂಕಡಿಸುತ್ತಾ ಕೂತ. ಮಾರನೆಯ ದಿನ ಟ್ರಾಫಿಕ್ಕಿನೊಳಗೆ ಬೈಕನ್ನು ಈಜಿಸಿಕೊಂಡು ಆಫೀಸೆಂಬೋ ದಡ ಮುಟ್ಟಿದರೂ ಈ ನೆನಪಿನ ಗುಂಗಿನಿಂದ ಸತೀಶ ಹೊರಬಂದಿರಲಿಲ್ಲ. ಹಿನ್ನೆಲೆಯಲ್ಲಿ ಯೋಚನೆ ಮುಂದುವರಿದೇ ಇತ್ತು. ಸಮಸ್ಯೆ ಎಲ್ಲಾಗ್ತಾ ಇದೆ? ನಾವೆಲ್ಲ ವ್ಯವಸ್ಥೆಯನ್ನ ಬೆನ್ನುಹತ್ತಿ ವ್ಯವಸ್ಥೆಯೂ ಇಲ್ಲ, ಕಡೆಗೆ ಹಳ್ಳಿಯ ಸಮೃದ್ಧತೆಯೂ ಇಲ್ಲ ಅನಿಸುವಂತೆ ಎಲ್ಲರೂ ಒಬ್ಬರಿಗೊಬ್ಬರು ಪೈಪೋಟಿಯಲ್ಲಿ ಹಣಜಮಾವಣೆಯ ವ್ಯಾಪಾರಕ್ಕಿಳಿದು ಬಿಟ್ಟೆವೇ? ಪುಟ್ಟಪಟ್ಟಣಗಳನ್ನು, ನಗರಗಳನ್ನು ಮಹಾನಗರಗಳನ್ನಾಗಿ ದೈತ್ಯಾಕಾರಕ್ಕೆ ಬೆಳೆಸಿದ ಆ ಆಸಕ್ತಿ ಹಳ್ಳಿಗಳನ್ನೂ, ಅಲ್ಲಿನ ಸುತ್ತಲಿನ ಸಣ್ಣಪಟ್ಟಣಗಳನ್ನೂ ವ್ಯವಸ್ಥಿತಗೊಳಿಸಿಕೊಳ್ಳುವುದು ಅಷ್ಟೊಂದುಕಷ್ಟವೇ? ಇಲ್ಲಿ ನಗರಗಳಲ್ಲಿ ನೋಡಿದರೆ ಎಲ್ಲರೂ ಎಲ್ಲರನ್ನೂ ಬೈದುಕೊಳ್ಳುತ್ತಾ, ಕಾರ್ಪೊರೇಷನ್ನವರಿಗೊಂದಿಷ್ಟು ದೂರುತ್ತಾ ಇದ್ದುಬಿಡುತ್ತೇವೆ. ಹೇಗೋ ದೈನಂದಿನ ಸಾಮಾನ್ಯ ವ್ಯವಸ್ಥೆಗಳ ಏರ್ಪಾಡಿಗಾದರೂ ಕಾರ್ಪೊರೇಷನ್ನು, ಎಸ್ಕಾಮ್, ವಾಟರ್ಬೋರ್ಡ್ಗಳೆಲ್ಲ ನೀರು, ವಿದ್ಯುತ್ತು, ಚರಂಡಿ, ಕಸ ವಿಲೇವಾರಿಗಳನ್ನಂತೂ ಹೇಗೋ ಹಾಗೆ ತೂಗಿಸಿ, ಕೊಟ್ಟ ತೆರಿಗೆಗೆ ತಿಪ್ಪೆ ಸಾರಿಸ್ತಾರೆ. ನಮ್ಮ ಹಳ್ಳಿಗಳಲ್ಲಿ ಬೇರೆಯದೇ ರೀತಿಯ ಸಮಸ್ಯೆ. ಜಾತಿಜಾಡ್ಯದಿಂದ ಹಿಡಿದು, ಶೀತಕೆಮ್ಮಿಗೂ ಒಂದು ಆಸ್ಪತ್ರೆಗೆ ಹತ್ತಾರು ಮೈಲಿಯಾಚೆಯ ಪಟ್ಟಣಕ್ಕೆ ಹೋಗಿ ಟೋಕನ್ಹಿಡಿದುಕೊಳ್ಳಬೇಕಾದ; ಪ್ರಾಥಮಿಕ ಮಾಧ್ಯಮಿಕ ಶಾಲೆಗಳೆಲ್ಲವಕ್ಕೂ ಹಳದಿವ್ಯಾನುಗಳನ್ನು ಅವಲಂಬಿಸಿಕೊಂಡು, ಅದಕ್ಕೆ ಫೀಸು ಕಟ್ಟುವುದಕ್ಕೆಂದು ತಿಣುಕಾಡುವ; ಬೆಳೆಹೊತ್ತಿನಲ್ಲಿ ಮಳೆಯಿಲ್ಲದೆ ಕೊಯ್ಲಿನ ಹೊತ್ತಿಗೆ ನೆರೆ ಬರುವಂತಹ ಪರಿಸ್ಥಿತಿಯಿದ್ದರೂ, ಹೇಗೋ ಹಾಗೆ ಬೆಳೆದಿದ್ದ ಫಸಲಿಗೂ ಎಷ್ಟೋ ಸಿಕ್ಕಷ್ಟು ಅನ್ನುವ ಹಾಗೆ ಸಂಪಾದನೆ ಮಾಡಿಕೊಂಡು ಪ್ರತಿವರ್ಷ ಮುಂದಿನ ಬೆಳೆ ಸಾಲ, ಅದನ್ನ ಮನ್ನಾ ಮಾಡಬೇಕಾದ ಸರ್ಕಾರ, ಅದರಲ್ಲಿ ಕಮೀಷನ್ನು; ಈ ರೀತಿಯ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದ ಸತೀಶನ ತಲೆಭಾರವಾಗಿತ್ತು. ಬ್ರೇಕ್ಹೊತ್ತಿನಲ್ಲಿ ಒಂದು ಕಾಫಿ ಹೀರುತ್ತಾ, ಕಳೆದ ತಿಂಗಳಷ್ಟೇ ಅಮೇರಿಕಾದ ಆನ್ಸೈಟ್ಕೆಲಸದಿಂದ ಮರಳಿದ್ದ ಸಹೋದ್ಯೋಗಿ

ಸಂದಣಿ Read Post »

ಕಥಾಗುಚ್ಛ

ಯಾರು ಹೊಣೆ ?

ಕಥೆ ಯಾರು ಹೊಣೆ ? ಎಂ.ಆರ್.ಅನಸೂಯ ಅಮ್ಮಾ ,ಅಮ್ಮಾ’ ಎಂದು ಚಂದ್ರಮ್ಮ ಬಾಗಿಲು ತಟ್ಟುತ್ತಾ ಕೂಗಿದಂತಾಯಿತು . ಟಿ.ವಿ ನೋಡುತ್ತ ಕೂತಿದ್ದ ಸುಮಿತ್ರ  ಗಡಿಯಾರದ ಕಡೆ ನೋಡಿದಳು. ಆಗಲೇ ರಾತ್ರಿ ಒಂಭತ್ತು  ಗಂಟೆಯಾಗಿತ್ತು. ಈಗ್ಯಾಕೆ ಬಂದಳಪ್ಪಾ ಎಂದುಕೊಳ್ಳುತ್ತಾ ಸುಮಿತ್ರ ಬಾಗಿಲು ತೆಗೆದು “ಏನು ಚಂದ್ರಮ್ಮ ಇಷ್ಟೊತ್ನಲ್ಲಿ ಯಾಕೆ  ಬಂದೆ’ ಎಂದು ಬಾಗಿಲತ್ರನೇ ನಿಂತು ಕೇಳಿದಳು. “ಅಮ್ಮಾ, ನಡಿರಮ್ಮ ಒಳಗೆ ಸ್ವಲ್ಪ ಮಾತಾಡ್ಬೇಕು”ಎನ್ನುತ್ತ   ಚಂದ್ರಮ್ಮ ಒಳಗೆ ಬಂದು ಕುಳಿತಳು. ಸುಮಿತ್ರ ಸೋಫದ ಮೇಲೆ ಕುಳಿತು”ಏನ್ಸಮಾಚಾರ ಚಂದ್ರಮ್ಮ” ಎಂದರು “ನೋಡ್ರಮ್ಮ ನಮ್ಮ ಹುಡುಗಿ ಗೀತ ಎಂಥ ಹಲ್ಕಾ ಕೆಲಸ  ಮಾಡ್ಕಂಡು ಕುಂತವಳೆ. ಮೂರೂ ಬಿಟ್ಟವಳು ” ಎಂದು ಅಳಲು ಶುರು ಮಾಡಿದಾಗ “ಅದೇನು ಸರ್ಯಾಗಿ ಹೇಳು ಚಂದ್ರಮ್ಮ” “ಏನೇಳನ್ರಮ್ಮ ನಂ ಹುಡುಗಿ ಗೀತ ಬಸ್ರಾಗಿ ಕುಂತವಳೆ.  ಸರೀಕರೆದ್ರುಗೆ ತಲೆಯೆತ್ಕಂಡು ಓಡಾಡ್ದಂಗೆ ಮಾಡ್ಬಿಟ್ಲು. ಎಲ್ಲನ ಹೋಗಿ ಸತ್ರೆ ಸಾಕು ಅನ್ಸು ಬಿಟ್ಟೈತೆ ಏನ್ಮಾಡದೊ ಒಂದು ಗೊತ್ತಾಗಕಿಲ್ಲ”ಎಂದು ಅಳುತ್ತಿದ್ದಳು ಆಗ ಸುಮಿತ್ರಾ “ನಿನ್ನದೇ ತಪ್ಪುಬೆಂಗಳೂರಿಗೆ  ನೀನ್ಯಾಕೆ ಕಳಿಸ್ದೆ .ಇಲ್ಲೇ ಮನೆ ಕೆಲಸ ಸಿಕ್ತಿರಲಿಲ್ವೆ.ಯಾರಾದ್ರೂನು  ವಯಸ್ಸಿಗೆ ಬಂದಿರ ಹುಡುಗಿನ ಬೇರೆ ಊರಿಗೆ ಕಳಿಸ್ತಾರ ಈಗ ಅತ್ರೆ ಏನು ಬಂತು”ಎಂದು ಒರಟಾಗಿ ಹೇಳಿದಳು.  “ಇಲ್ಲೆ ಇರಂಗಿದ್ರೆ ನಾನ್ಯಾಕ್ರಮ್ಮ ಬೆಂಗಳೂರಿಗೆ ಕಳಿಸ್ತಿದ್ದೆ”  “ಇಲ್ಲಿರಕಾಗ್ದೆ ಇರೋ ಅಂಥಾದ್ದು ಏನಾಗಿತ್ತು” “ಏನು ಹೇಳನ್ರಮ್ಮ.ನನ್ನ ಹಣೆಬರಾನೇ  ಸರ್ಯಾಗಿಲ್ಲ. ನನ್ನ ಗಂಡ ಕುಡ್ದೂ ಕುಡ್ದೂ ಸತ್ತ. ಆ ನನ್ನ ಎರಡ್ನೆ ಮಗಾನು  ಅವರಪ್ಪನಂಗೆ ಕುಡಿಯ ಚಟಕ್ಕೆ ಬಿದ್ದು ಹಾಳಾದ.ದಿನಾ ಕುಡ್ಕಂಡು ಬಂದು ಆ ಹುಡುಗೀನ ಬಾಯಿಗೆ ಬಂದಂಗೆ ಬೈದು ಹೊಡಿಯಕ್ಕೆ ಹೋಗ್ತಿದ್ದ. ಈ ಹುಡುಗಿ ಹೆದರ್ಕಂಡು ಪಕ್ಕದ ಮನೆಗೆ ಓಡೋಗದು. ದಿನಾ ಈ ರಗಳೆ ನೋಡಕ್ಕೆ ಆಗ್ತಿರಲಿಲ್ಲ. ಬೆಂಗ್ಳೂರನಗಿರ ನನ್ನ ಎರಡ್ನೆ ಮಗಳು ಮನೆ ಕೆಲ್ಸ ಒಂದು ನೋಡಿದೀನಿ ಕಳ್ಸು ಅಂದ್ಲು. ಅದಕ್ಕೆ ಕಳಿಸ್ದೆ ಕಣ್ರಮ್ಮ.ಇನ್ನೇನು ಮಾಡ್ಲಿ ನೀವೇ ಹೇಳ್ರಮ್ಮ” ಎಂದಾಗ ಸುಮಿತ್ರಾಳಲ್ಲೂ ಉತ್ತರವಿರಲಿಲ್ಲ. ನಮ್ಮ ಘನ ಸರ್ಕಾರ ಘೋಷಿಸಿರುವ ಭೇಟಿ ಬಚಾವೋ ಯೋಜನೆ ನೆನಪಿಗೆ ಬಂತು. ಅ‌ಸಹಾಯಕಳಾದ ಚಂದ್ರಮ್ಮನಿಗೆ ಬೇರೆ ದಾರಿ ಇರಲಿಲ್ಲ ಅನಿಸಿತು. ಆಗ ಸುಮಿತ್ರಾಳು ಸಹಾ ಮೌನಕ್ಕೆ ಶರಣಾದಳು.ಸ್ವಲ್ಪ ಹೊತ್ತಿನ ನಂತರ ಚಂದ್ರಮ್ಮ ಮೆಲ್ಲಗೆ “ನನ್ನ ದೊಡ್ಮಗಳು ಡಾಕ್ಟರತ್ರ ಕರ್ಕೊಂಡು ಹೋಗ್ತವಳೆ. ಒಂದೆರಡು ಸಾವ್ರ ಕೊಡ್ರಮ್ಮ. ನನ್ನ ಮಾನ ಮರ್ಯಾದೆ ಹೋಗುತ್ತೆ. ಈಗ್ಲೆ ಕರ್ಕೊಂಡು ಹೋಗ್ಬೇಕು” ಎಂದು ಹೇಳಿ ಅತ್ತಳು.ಸುಮಿತ್ರ ದುಡ್ಡು ಕೊಟ್ಟ ತಕ್ಷಣವೇ “ಬರ್ತಿನಮ್ಮ ನಿಮ್ಮ ಉಪಕಾರ ಮರೆಯಂಗಿಲ್ಲ” ಎನ್ನುತ್ತಾ ಹೊರಟಳು ಚಂದ್ರಮ್ಮ ಸುಮಿತ್ರಾಳ ಮನೆಕೆಲಸಕ್ಕೆ ಸೇರಿ ಹದಿನೈದು ವರ್ಷಗಳ ಮೇಲಾಗಿತ್ತು.ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ ಚಂದ್ರಮ್ಮ ಸುಮಿತ್ರನ ಮನಸ್ಸನ್ನುಗೆದ್ದಿದ್ದಳು ಯಾವ ಕೆಲಸವನ್ನು ಹೇಳಿದರೂ ಇಲ್ಲ ಎನ್ನದೆ ಮಾಡುವ ಚಂದ್ರಮ್ಮನ ಮಾತು ಕಡಿಮೆ.ಸುಮಿತ್ರಳು ಸಹ ಅವಳೆಲ್ಲ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಳು. ಇವರ ಆಪ್ತತೆಯನ್ನು ಕಂಡ ಸುಮಿತ್ರನ ಮಗಳು “ನಿನ್ನ ಆಪ್ತ ಸಖಿ ಹೇಗಿದ್ದಾಳೆ” ಎಂದು ತಮಾಷೆ ಮಾಡುತ್ತಾಳೆ. ಇಂತಹ ಚಂದ್ರಮ್ಮನಿಗೆ ಐದು ಜನ ಮಕ್ಕಳಿದ್ದರು. ಮೂರುಹೆಣ್ಣು ಎರಡು ಗಂಡು. ಗಂಡ ಕುಡಿತದ ಚಟಕ್ಕೆ ಬಿದ್ದು ಆರೋಗ್ಯ ಕೆಡಿಸಿಕೊಂಡು ತೀರಿಕೊಂಡಿದ್ದ. ಹಿರಿಮಗ ಮದುವೆ ಆದ ಮೇಲೆ ಬೇರೆ ಮನೆ ಮಾಡಿದ್ದ. ದೊಡ್ಡ ಮಗಳನ್ನು ತಮ್ಮನಿಗೆ ಕೊಟ್ಟು ಮದುವೆ ಮಾಡಿದ್ದಳು. ಬಸ್ ಅಪಘಾತವೊಂದರಲ್ಲಿ ತಮ್ಮ ಸತ್ತ ಮೇಲೆ ಮಗಳು ಪುಟ್ಟ ಹೆಣ್ಣುಮಗುವನ್ನು ಕರೆದುಕೊಂಡು ತವರು ಮನೆ ಸೇರಿದ್ದಳು. ಕೂಲಿ ಮಾಡಿ ದುಡಿದು ತರುತ್ತಿದ್ದರಿಂದ ಯಾರಿಗೂ ಭಾರವಾಗಿರಲಿಲ್ಲ. ಚಂದ್ರಮ್ಮನ ಎರಡನೆ ಮಗನೂ ಸಹಾ ಅವರಪ್ಪನಂತೆ ಕುಡಿತಕ್ಕೆ ದಾಸನಾಗಿದ್ದ. ಅವನು ದುಡಿದದ್ದೆಲ್ಲ ಅವನ ಕುಡಿತಕ್ಕೇ ಸರಿ ಹೋಗುತ್ತಿತ್ತು. ಎರಡನೆ ಮಗಳು ಮತ್ತು ಅವಳ ಗಂಡ ಇಬ್ಬರೂ ಬೆಂಗಳೂರು ಸೇರಿದ್ದರು. ಇನ್ನು ಮೂರನೆ ಮಗಳು ಗೀತ ಹತ್ತನೆ ತರಗತಿಯ ತನಕ ಓದಿ ಫೇಲಾಗಿ ಶಾಲೆ ಬಿಟ್ಟಿದ್ದಳು. ಚಂದ್ರಮ್ಮಮೂರು ಮನೆಗಳ ಮನೆ ಕೆಲಸ ಮಾಡಿದರೆ, ಗೀತ ಎಲ್ಲೂ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು ಅಡುಗೆ ಮಾಡ್ಕೊಂಡು ಅಕ್ಕನ ಮಗಳನ್ನ  ನೋಡಿಕೊಂಡಿದ್ದಳು.ಒಟ್ಟಾರೆ ಮನೆಯ ಹೆಣ್ಣುಮಕ್ಕಳೇ ಸಂಸಾರದ ಆಧಾರದ ಸ್ತಂಭವಾಗಿದ್ದರು. ಚಂದ್ರಮ್ಮನಿಗೆ ಹುಷಾರಿಲ್ಲದಾಗ ಮನೆ ಕೆಲಸ ಮಾಡಿ ಕೊಡುತ್ತಿದ್ದ ಗೀತ ಲಕ್ಷಣವಾಗಿದ್ದಳು.ಕುಡುಕನಾಗಿದ್ದ ಎರಡನೆ ಅಣ್ಣನ ಕಾಟ ತಡೆಯಲಾಗದೆ ಗೀತ ಬೆಂಗಳೂರಿನಲ್ಲಿದ್ದ ಅಕ್ಕನ ಮನೆಗೆ  ಬಂದು ಅವಳ ಮನೆ ಹತ್ತಿರವೇ ಇದ್ದ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಮನೆಯಲ್ಲಿದ್ದ ಮಗುವನ್ನು ನೋಡಿ ಕೊಳ್ಳ ಬೇಕಾಗಿತ್ತು. ಮನೆಯಲ್ಲಿದ್ದಂಥ ಮಗುವಿನ ಅಜ್ಜಿಗೆ ಸಹಾಯಕಿಯಾಗಿ ಇರಬೇಕಿತ್ತು. ಬೆಳಿಗ್ಗೆ ಎಂಟು ಗಂಟೆಗೆ ಹೋದರೆ ಸಂಜೆ ಎಂಟು ಗಂಟೆಗೆ ವಾಪಸಾಗುತ್ತಿದ್ದಳು ಊಟ ತಿಂಡಿ ಎಲ್ಲಾ ಅಲ್ಲೇ ಆಗುತ್ತಿದ್ದರಿಂದ ಅಕ್ಕನಿಗೂ ಸಹ ಭಾರವಾಗಿರಲಿಲ್ಲ. ಕೈಗೆ ನಾಲ್ಕು ಸಾವಿರ ಸಿಗುತ್ತಿತ್ತು. ಪ್ರತಿ ಭಾನುವಾರ ರಜೆ ಸಿಗುತ್ತಿತ್ತು. ಮನೆಯಲ್ಲಿನ ಇತರ ಕೆಲಸಗಳನ್ನು ಬೇರೆಯವರು ಮಾಡಿ ಕೊಡುತ್ತಿದ್ದರಿಂದ ಮಗು ನೋಡಿಕೊಳ್ಳುವ ಕೆಲಸ ಅಷ್ಟೇ. ಇಷ್ಟೇ ಆಗಿದ್ದರೆ ಚಂದ್ರಮ್ಮ ಇಷ್ಟೊತ್ನಲ್ಲಿ ಸುಮಿತ್ರನ ಮನೆಗೆ  ಬಂದು ಹೀಗೆ ಗೋಳಾಡುವ ಪ್ರಮೇಯವೇ ಇರುತ್ತಿರಲಿಲ್ಲ.ಗೀತಳ ಅಕ್ಕ ಗಾರ್ಮೆಂಟ್ ಕೆಲ್ಸಕ್ಕೆ ಹೋದ್ರೆ ಅವಳ ಗಂಡ ಹೋಟೆಲ್ ಕೆಲ್ಸಕ್ಕೆ ಹೋಗುತ್ತಿದ್ದ. ಅವನ ಜೊತೆ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದನು ಅವನೊಡನೆ ಗೀತಳ ಸ್ನೇಹವು ಬೆಳೆದು ಅವರಿಬ್ಬರೂ  ಪ್ರೇಮಿಗಳಾಗುವ ಹಂತಕ್ಕೆ ಬಂದಿತ್ತು.ಅವಳ ಅಕ್ಕನಿಗೆ  ನಾವಿಬ್ಬರೂ ಮದುವೆಯಾಗುತ್ತೇವೆ ಎಂದು ಹೇಳಿದ್ದಳು  ಅವಳ ಅಕ್ಕ ಸ್ವಲ್ಪ ಸಲಿಗೆ ಬಿಟ್ಟಿದ್ದೇ ಈಗ ತಪ್ಪಾಗಿತ್ತು. ಪ್ರತಿ ಭಾನುವಾರ ಅವನ ಜತೆ ಸಿನಿಮಾ ಹೋಟೆಲ್ ಗೆ ಹೋಗಿ ಬರುತ್ತಿದ್ದಳು. ಅವಳ ಅಕ್ಕನ ಕಣ್ಣಿಗೆ ಗೀತಳ ಹೊಟ್ಟೆಯು ಸ್ವಲ್ಪ ದಪ್ಪಗಾದಂತೆ ಎನಿಸಿ ಅನುಮಾನದಿಂದ ಕೇಳಿದಾಗ ಗೀತ ನಿಜವನ್ನು ಬಾಯ್ಬಿಟ್ಟಳು.”ಏನೇ ಇದೆಲ್ಲಾ ಮದ್ವೆಗೆ ಮುಂಚೆನೆ” ಎಂದು ಕೇಳಿದರೆ “ನಾವಿಬ್ರು, ದೇವಸ್ಥಾನದಗೆ  ಮದ್ವೆ ಆಗಿದೀವಿ.”ಎಂದು ಹೇಳಿ ತೆಗೆದಿಟ್ಟಿದ್ದ ಕರಿಮಣಿ ಸರವನ್ನು ಹಾಕಿಕೊಂಡಳು.ಇದನ್ನು ಕೇಳಿದ ಅವಳಕ್ಕನ ಗಂಡ ಸಿಟ್ಟಾಗಿ “ನೀನು ಇಲ್ಲಿರಬೇಡ ಮೊದ್ಲು ಊರಿಗೆ ಹೊರಡು” ಎಂದು ಕೂಗಾಡಿದನು ಮಾರನೆ ದಿನವೇ ಅವಳ ಅಕ್ಕ ಗೀತ ಕೆಲಸ ಮಾಡುತ್ತಿದ್ದ ಮನೆಗೆ ಅವಳ  ಜೊತೆಗೆ ಹೋಗಿ ಅವರಲ್ಲೇ ಬಿಟ್ಟಿದ್ದ ಸಂಬಳದ ದುಡ್ಡು ಸುಮಾರು ನಲ್ವತ್ತು ಸಾವಿರದಷ್ಟಿದ್ದ ದುಡ್ಡು ಕೇಳಿ ತರಲು  ಹೋದಾಗ ಗೊತ್ತಾಯ್ತು ಆಗಲೇ ಐದು ಸಾವಿರವನ್ನು ಗೀತ  ಖರ್ಚು ಮಾಡಿದ್ದಳು. ಸ್ವಲ್ಪ ದಿನ ಊರಿಗೆ ಹೋಗಿ ಬರ್ತಳೆ. ನಮ್ಮಮ್ಮಂಗೆ ಹುಷಾರಿಲ್ಲ ಎಂದು ಮನೆಕೆಲಸದ ಯಜಮಾನಿಗೆ ಸುಳ್ಳು ಹೇಳಿ ಇಬ್ರು ಬಂದರು. ಗಂಡನ ಮಾತಿನಂತೆ ಅವಳ ಅಕ್ಕನೂ ಗೀತನ ಜತೆಗೆ ಊರಿಗೆ ಬಂದಿದ್ದಳು. ಚಂದ್ರಮ್ಮನಿಗೆ ಇರೋ ವಿಷ್ಯಾನೆಲ್ಲಾ ತಿಳಿಸಿ ಗಾರ್ಮೆಂಟ್ನವರು ರಜಾ ಕೊಡಲ್ಲ ಎಂದು ಹೇಳಿ ಹೊರಟೆ ಬಿಟ್ಟಿದ್ದಳು. ಬೆಳಿಗ್ಗೆ ಮನೆ ಕೆಲ್ಸಕ್ಕೆ ಬಂದ ಚಂದ್ರಮ್ಮ ಏನೂ ಮಾತಾಡದೆ ಮೌನವಾಗಿದ್ದಳು. ಸುಮಿತ್ರಾ ಟೀ ಕೊಟ್ಟು ಕೇಳಿದ್ರು”ಏನಂದ್ರು ಡಾಕ್ಟರ್”. ಅಬಾಷನ್ ಮಾಡಕ್ಕಾಗಲ್ಲವಂತೆ. ಆಗ್ಲೆ ನಾಕ್ ತಿಂಗಳು ತುಂಬೈತಂತೆ “ಎಂದಳು ಸೋತು ಸುಣ್ಣವಾದ ಧ್ವನಿಯಲ್ಲಿ  ನಾಲ್ಕು ತಿಂಗಳಾದ್ರೂ ನಿಮಗೆ ಅಷ್ಟೂ ಗೊತ್ತಾಗಲಿಲ್ವೆ ” ಸ್ವಲ್ಪ ಒರಟಾಗೇ ಕೇಳಿದಳು ಸುಮಿತ್ರ.”ಆಗೆಲ್ಲ ಎನೇನೊ ಹೇಳ್ಕಂಡು ಅವ್ರ ಅಕ್ಕನ್ನ ಏಮಾರಿಸಿ ಬಿಟ್ಟವಳೆ.ಮೂರೂ ಬಿಟ್ಟವಳು ಅವರಕ್ಕನಿಗೆ ಗೊತ್ತಾಗಿರದೆ ಈಗ. ಗೊತ್ತಾದ ತಕ್ಷಣವೇ ಇಲ್ಲಿಗೆ ಕರ್ಕೊಂಡು ಬಂದವಳೆ” ಅದರ ಬಗ್ಗೆ ಮಾತಾಡಕ್ಕೆ ಅವಳಿಗೆ ಇಷ್ಟವಿಲ್ಲವೆಂದರಿತ ಸುಮಿತ್ರಾನೂ ಸುಮ್ಮನಾದಳು. ಹೋಗುವಾಗ “ಒಂದು ವಾರ ಕೆಲ್ಸಕ್ಕೆ ಬರಲ್ಲಮ್ಮ.ನನ್ನ ದೊಡ್ಡ ಮಗಳ್ನ ಕಳಿಸ್ತಿನಿ”ಎಂದು ಹೇಳಿ ಹೋದಳು. ಮಧ್ಯಾಹ್ನ ಒಂದು ಗಂಟೆಗೆ ಚಂದ್ರಮ್ಮನು ಅವಳ ಎರಡನೆ ಮಗಳು ಬಂದರು.ಅವಳ ಮಗಳು ತಾನು ತಂದಿದ್ದ ಲಗೇಜ್ ಬ್ಯಾಗಿನಿಂದ ಒಂದು ಕೆಂಪು ಪ್ಲಾಸ್ಟಿಕ್ ಕವರ್ ತೆಗೆದು ಅವರಮ್ಮನ ಕೈಗೆ ಕೊಟ್ಟಳು ಚಂದ್ರಮ್ಮಅದನ್ನು ಸುಮಿತ್ರಾ ಕಡೆ ಕೊಡುತ್ತಾ” ಇದ್ರಗೆ ಮುವತ್ತು ಸಾವಿರ ಐತ್ರಮ್ಮ.ನಾನು ಕೇಳಗಂಟ ಇದು ನಿಮ್ಮತ್ರನೇ ಇರಲಿ.ನನ್ ಮಗನ ಕಣ್ಣೀಗೇನಾರ ಬಿದ್ರೆ ಎಗರಿಸಬಿಡ್ತನೆ”ಎಂದಳು. ಆಗ ಸುಮಿತ್ರಾ “ಬೇಡಬೇಡ ಚಂದ್ರಮ್ಮ .ಬ್ಯಾಂಕ್ನಲ್ಲಿಡು”ಎಂದಾಗ ಅವಳ ಮಗಳು “ನಮ್ಮಮ್ಮನ ಹೆಸರಿನಗ ಐತಂತ ಅವ್ನಿಗೆ ಗೊತ್ತಾದರೆ ನಮ್ಮಮ್ಮನ ಪ್ರಾಣ ಹಿಂಡಿ ತಗಂಡು ಬಿಡ್ತನೆ. ಅದಕ್ಕೆ ಒಂದು ಹದಿನೈದು ದಿನ ಕಳೆದ ಮೇಲೆ ಗೀತನ ಅಕೌಂಟ್ ಗೆ ಹಾಕ್ಕಂತಳೆ ಅಲ್ಲಿತನಕ ನಿಮ್ಮತ್ರನೆ ಇರಲಿ” ಎಂದಾಗ ಸುಮಿತ್ರಾ ದುಡ್ಡನ್ನು ಎಣಿಸಿ ಕೊಂಡು “ಹದಿನೈದು ದಿನ ಆದ ಮೇಲೆ ತಗೊಂಡು ಹೋಗಿ ಬ್ಯಾಂಕಲ್ಲಿ ಇಡಬೇಕು” ಎಂದು ತಾಕೀತು ಮಾಡಿದರು.ನಂತರ ನೆನ್ನೆ ರಾತ್ರಿ ತಾನೆ ತಗೊಂಡಿದ್ದ ಎರಡು ಸಾವಿರ ವಾಪಸ್ ಕೊಟ್ಟರು.ಒಂದು ವಾರ ಕಳೆದ ಮೇಲೆ ಚಂದ್ರಮ್ಮ ಬಂದಳು. ನೋಡಿದರೆ ಅದೇ ಚಿಂತೆಯಲ್ಲಿ ಸೊರಗಿದಾಳೆ ಎನಿಸಿತು. ಕೆಲಸವೆಲ್ಲ ಮುಗಿಸಿದ ಮೇಲೆ ಸುಮಿತ್ರಾ”ಏನು ಆ ಹುಡುಗನ್ನ ಸುಮ್ನೆ ಬಿಟ್ಬಿಟ್ರಾ”ಎಂದು ಕೇಳಿದಳು.”ಅದೆಂಗರಮ್ಮ ಸುಮ್ತಿರಕಾಗುತ್ತೆ. ತಂಗಿ ಗಂಡ,ಚಂದ್ರಮ್ಮನ ಮಗಮತ್ತು ಅಳಿಯ ಎಲ್ಲ ಹೋಗಿ ಜೋರು ಮಾಡಿದರಂತೆ.”ಆಗ ನಾವಿಬ್ರೂ ಒಪ್ಪಿನೇ ಮದ್ವೆ ಆಗಿರೋದು.ದೇವಸ್ಥಾನದಲ್ಲಿ ಮದ್ವೆ ಮಾಡ್ಕಂಡಿದೀವಿ.ಈಗಲೇ ಮನೆ ಮಾಡಕ್ಕೆ ನನ್ನತ್ರ ದುಡ್ಡಿಲ್ಲ. ವರ್ಷ ಕಳೆದ್ಮೇಲೆ ನಾನೇ ಬಂದು ಕರ್ಕೊಂಡು ಹೋಗ್ತೀನಿ. ಈಗ ನನ್ನ ಹತ್ರ ಇರೋದು ಹತ್ತು ಸಾವಿರ ಅಷ್ಟೆ”ಎಂದು ಹೇಳಿ ದುಡ್ಡು ಕೊಟ್ಟು ಕಳಿಸಿದ್ದ. ನಮ್ಮ ಹುಡುಗಿ ಹಳ್ಳಕ್ಕೆ ಬಿದ್ದೈತೆ.ಇಂಥ ಪರಿಸ್ಥಿತಿಯಾಗೆ ಇನ್ನೇನು ಮಾಡಾದು ಅಂತ ಬಾಯ್ಮುಚ್ಚಿಕೊಂಡು ಬಂದವ್ರೆ.ಅವಳ ಹಣೆಬರನ ನಾವು ತಿದ್ದಕ್ಕಾಗುತ್ತೇನು. ಮಾಡಿದ್ದುಣ್ಣೋ ಮಹರಾಯ. ಉಪ್ಪುತಿಂದ ಮ್ಯಾಲೆ ನೀರು ಕುಡಿಬೇಕು ಚಂದ್ರಮ್ಮನ ತಂಗಿ ಗಂಡ ಬಂದು ಚಂದ್ರಮ್ಮನ ಎರಡ್ನೆ ಮಗನಿಗೆ “ಆ ಹುಡುಗಿ ಸುದ್ದಿಗೆ ಹೋಗ್ಬೇಡಪ್ಪ ಹುಷಾರ್ ಪ್ರಾಣಗೀಣ ಕಳ್ಕೊಂಡ್ರೆ ಏನ್ಮಾಡಾದು.ಆಗಬಾರದಾಗಿತ್ತು ಆಗೋಗೈತೆ. ಅವಳ ಹಣೆಬರ ಇದ್ದಂಗಾಗುತ್ತೆ. ನಮ್ಮ ಕೈ ಮೀರೈತೆ”ಅಂತ ಹೇಳಿ ಹೋದ. ನಮ್ಮ ಅಕ್ಕಪಕ್ಕದ ಮನೆ ಜನಗಳಿಗೆಲ್ಲ ಗೊತ್ತಾಗಿ ಬಿಟ್ಟೈತೆ. ಆಡ್ಕಂಡು ನಗೋವ್ರ ಮುಂದೆನೇ ಎಡವಿ ಬಿದ್ದಂಗಾಯ್ತು. ಜನಕ್ಕೆ ಆಡ್ಕಳ್ಳ ಕತೆ ಆಗೋಯ್ತು ನಮ್ಮನೆ ಬದುಕು.ನೆಂಟರೆಲ್ಲ ಆಡಿಕ್ಯಂಡು ನಗ್ತಾವರೆ.ನಮ್ಮತ್ರಯಾರೂ ಮಾತಾಡಲ್ಲ.ಎಲ್ಲಾದ್ರು ತಲೆ ಮರೆಸ್ಕಂಡು ಹೋಗಿ ನೇಣಾಕ್ಕಂಡು ಸಾಯಂಗಾಗೈತೆ ನಾನ್ ತಲೆಎತ್ಕಂಡ್  ಒಡಾಡಕ್ಕಾಗದಂಗೆ ಮಾಡ್ಬಿಟ್ಟಳು” ಅಳುತ್ತಾ ಕಣ್ಣೀರು ಹಾಕಿದಳು.ಮತ್ತೆ ಮತ್ತೆ ಅದೇ ವಿಶ್ಯಾ ಕೆದಕಿ ಕೇಳುತ್ತಾ ಬೇಜಾರು ಮಾಡೋದು ಬೇಡವೆಂದು  ಸುಮಿತ್ರಾ ಏನೂ ಕೇಳಲಿಕ್ಕೆ ಹೋಗಲಿಲ್ಲ. ಒಂದಿಪ್ಪತ್ತು ದಿನಗಳಾಗಿರಬಹುದು. ಒಂದು ದಿನ “ನಮ್ಮ ದೊಡ್ಮಗಳು  ನೆನ್ನೆ ಡಾಕ್ಟ್ರತ್ರಕ್ಕೆ ಗೀತನ್ನ  ಕರ್ಕೊಂಡು ಹೋಗಿದ್ದಳು. ಅವಳಿಗೆ ರಕ್ತ ಕಡಿಮೆ ಐತಂತ ಹೇಳವ್ರೆ”ಎಂದಳು. ಈಗ ಮಗಳ ಬಗ್ಗೆ ಸಿಟ್ಟಿಗಿಂತ ಮರುಕವೇ ಎದ್ದು ಕಾಣುತ್ತಿತ್ತು. ಎಷ್ಟೇ ಆಗಲಿ ಹೆತ್ತ ತಾಯಿ ಅಲ್ವೆ ! ಆ ಕ್ಷಣ ಚಂದ್ರಮ್ಮನ್ನ  ನೋಡಿದ ಸುಮಿತ್ರಳಿಗೆ ಅಯ್ಯೋ ಅನಿಸಿತು.ಆ ಕ್ಷಣದಲ್ಲಿ ಸುಮಿತ್ರಳಿಗೆ  ಟಿ.ವಿ.ನಲ್ಲಿ ನೋಡಿ ಕೇಳಿದ ಮರ್ಯಾದಾ ಹತ್ಯೆಗಳು ನೆನಪಿಗೆ ಬಂತು. ಚಂದ್ರಮ್ಮನ ತಾಯ್ತನವೇ ಗೆದ್ದಿತ್ತು.ತಂದೆತಾಯಿಗಳು ಹೆತ್ತ ಮಕ್ಕಳನ್ನೇ ಕೊಲ್ಲುವಷ್ಟು  ಕಟುಕರಾಗಲು ಹೇಗೆ ಸಾದ್ಯ ? ಮಕ್ಕಳ ಪ್ರೇಮ ಪ್ರಕರಣ  ತಮ್ಮ ಕೈ ಮೀರಿ ಬೆಳೆದಾಗ ಅದಕ್ಕೆ ಬೇರೆ ರೀತಿಯಲ್ಲಿಯೇ ಪರಿಹಾರಗಳನ್ನು ಹುಡುಕಬೇಕು. ಅದನ್ನು ಬಿಟ್ಟು ತಮ್ಮ ಹೆತ್ತ ಮಕ್ಕಳನ್ನೆ ಕೊಲ್ಲುವ ಮಟ್ಟಕ್ಕಿಳಿಯಬಾರದು.ಏನೂ ಮಾಡಲಾಗದಿದ್ದರೆ ಕಡೆ ಪಕ್ಷ ಸುಮ್ಮನೆ ಇದ್ದು ಬಿಡಬೇಕು ಚಂದ್ರಮ್ಮನ ಅಸಹಾಯಕ ಪರಿಸ್ಥಿತಿಗೆ ಯಾವ ರೀತಿಯ ಸಮಾಧಾನ  ಹೇಳಬೇಕೆಂದು ಸುಮಿತ್ರಳಿಗೆ ತೋಚಲಿಲ್ಲ. ಚಂದ್ರಮ್ಮನ ಸಂಸಾರ ನೆರೆಹೊರೆಯವರ ನಗು ಪಾಟ್ಲಿಗೆ  ಗುರಿಯಾಗಿ ಅವಳ ನೆಮ್ಮದಿಯನ್ನು ಕೆಡಿಸಿತ್ತು. ಅದೂ

ಯಾರು ಹೊಣೆ ? Read Post »

ಕಥಾಗುಚ್ಛ

ಹೆಣ್ಣು

ಕಥೆ ಹೆಣ್ಣು ಸಹನಾ ಪ್ರಸಾದ್ ರಾತ್ರಿ ಎಲ್ಲ ಮಧುಸೂದನನಿಗೆ ನಿದ್ರೆ ಇಲ್ಲ. ಆ ಕಡೆ, ಈ ಕಡೆ ಹೊರಳಾಡಿ, ಎದ್ದು ಕುಳಿತು, ಮತ್ತೆ ಮಲಗಿ, ಹೀಗೆ ಅರ್ಧ ರಾತ್ರಿ ಕಳೆಯಿತು. ಸಧ್ಯ, ಹೆ0ಡತಿಗೆ ಬೇರೆ ಕೋಣೆಯಲ್ಲಿ ಮಲಗಿ ಅಭ್ಯಾಸ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ರ0ಪ ಮಾಡಿ ಬಿಟ್ಟಿರುತ್ತಿದ್ದಳು. “ ಅಬ್ಬಬ್ಬಾ, ರಾತ್ರಿಯೆಲ್ಲ ನಿಮ್ಮ ಗೊರಕೆ ಇಲ್ಲಾ ಹೊರಳಾಟ, ನನ್ಕೈಲಿ ಆಗುವುದಿಲ್ಲಪ್ಪ. ಆರಾಮವಾಗಿ ಹೊದ್ದು ಮಲಗಲು ನಿಮಗೇನು ಕಷ್ಟ? ಹೇಗು ನನಗೆ ಚಿಕ್ಕ ವಯಸ್ಸಿನಿ0ದ ಆಸೆ, ನನ್ನದೇ ರೂಮು ಇರಬೇಕೆ0ದು, ರಮ್ಯಳ ರೂಮು ಖಾಲಿಯಾಗಿದೆಯಲ್ಲ, ಅಲ್ಲಿ ನಾನಿರುತ್ತೇನೆ” ಎ0ದು ಮಗಳ ರೂಮಿಗೆ ಶಿಫ್ಟ್ ಆಗಿದ್ದಳು. ಮದುವೆಯಾಗಿ ಗ0ಡನ ಮನೆಗೆ ಹೋದ ಮಗಳು ಬರುವುದು ವಾರಕೊಮ್ಮೆ. ಬ0ದರೂ ಜಾಸ್ತಿ ಹೊತ್ತು ಇರುತ್ತಿರಲಿಲ್ಲ. ಇಡೀ ಕೋಣೆ ತನ್ನದಾದರೂ ನಿದ್ರೆ ದೂರವಾಗಿದೆ. “ ಪರವಾಗಿಲ್ಲ ರೀ, ಇದ್ದೊಬ್ಬ ಮಗಳ ಮದುವೆ ಮಾಡಿ ನಿಷ್ಚಿ0ತೆಯಾದಿರಿ. ಇನ್ನು ನೀವು, ನಿಮ್ಮ ಪತ್ನಿ, ನಿಮ್ಮ ಕೆಲಸ, ಹಾಯಾಗಿರಬಹುದು” ಮಗಳ ಮದುವೆಯಲ್ಲಿ ಬಹಳ ಜನ ಹೇಳಿದ ಮಾತಿದು. ಅದು ನಿಜ ಕೂಡ. ತಡವಾಗಿ ಮದುವೆಯಾದರೂ, ತನ್ನದು, ಸ0ಧ್ಯಳದು ಅನ್ಯೋನ್ಯ ದಾ0ಪತ್ಯ.ತನಗಿ0ತಾ ಹೆಚ್ಚು ಸಿರಿವ0ತಿಕೆ ಅವಳ ತವರು ಮನೆಯದು. ನೋಡಲು ಸು0ದರ, ಅಷ್ಟೇ ಒಳ್ಳೆಯ ಮನಸ್ಸು. ತನ್ನ0ತಹ ಸುಮಾರಾದ  ಗ0ಡನ್ನು ಮದುವೆಯಾದುದ್ದು ಅಚ್ಚರಿಯೆ. ಇಲ್ಲ, ಅದು ಅನಸೂಯ ಅತ್ತೆಯ ದಯೆ. ಥೂ, ಯಾಕೊ ಅತ್ತೆಯನ್ನು ಮನಸ್ಸಿನಿ0ದ ತೆಗೆದು ಹಾಕಲೇ ಆಗುತ್ತಿಲ್ಲ. ತನ್ನ ಬದುಕಲ್ಲಿ ಅವಳು ಒ0ದಾಗಿಬಿಟ್ಟಿದ್ದಾಳೆ. ಮಗ್ಗಲು ಬದಲಾಯಿಸಿದ. ಸ0ಧ್ಯಳಿಗೆ ಚೊಚ್ಚಲು ಬಸಿರು, ರಮ್ಯಳದ್ದು. ಮೊದಲೇ ಇಬ್ಬರಿಗೂ  ಲೇಟ್ ಮದುವೆ, ಬಸಿರಾದಾಗ ಮದುವೆಯಾಗಿ ಎರಡು ವರುಷಗಳ ಮೇಲಾಗಿ ಪರಿಸ್ಥಿತಿ ನಾಜೂಕಾಗಿತ್ತು. ಮಗಳ0ತೆ ಜೋಪಾನ ಮಾಡಿದವಳು ಅತ್ತೆಯೆ. ಅವಳು ಇಲ್ಲದಿದ್ದರೆ ದೂರದ ತವರಿಗೆ ಕಳುಹಿಸಿ, ಅಲ್ಲಿ ಅವಳ ವಯಸಾದ ತಾಯಿಯ ಮಡಿಲಲ್ಲಿ ಬಿಡಬೇಕಿತ್ತು. ಓಡಾಟ ಬೇಡವೇ ಬೇಡ, ಸ0ಪೂರ್ಣ ವಿಶ್ರಾ0ತಿ  ಎ0ದು ಬೇರೆ ಹೇಳಿಬಿಟ್ಟಿದ್ದರಲ್ಲ. ಆ ಸಮಯಕ್ಕೆ ಅನಸೂಯ ಅತ್ತೆಯ ನೆರವಿಲ್ಲದಿದ್ದರೆ ಇ0ದು ರಮ್ಯಾ ಇರುತ್ತಲೇ ಇರಲ್ಲಿಲ್ಲ…. ಇನ್ನು ಮಲಗಲು ಸಾದ್ಯವೇ ಇಲ್ಲ ಎ0ದು ಎದ್ದು ಕುಳಿತ. ಸ0ಧ್ಯಳನ್ನು ಎಬ್ಬಿಸಿ ಎಲ್ಲವನ್ನು ಹೇಳಿಬಿಡಲೇ, ಅವಳ ಮಡಿಲಲ್ಲಿ ಮುಖವಿಟ್ಟು ಅತ್ತು ಹಗುರವಾಗಲೇ, ದಯವಿಟ್ಟು ಅತ್ತೆಗೆ ಎಲ್ಲಾ ವಿವರಿಸಿ ನನ್ನನ್ನು ಕ್ಷಮಿಸಲು ಹೇಳು ಎ0ದು ಕಾಲಿಗೆ ಬೀಳಲೇ, ಉದ್ವಿಗ್ನನಾಗಿ ಎದ್ದು ನಿ0ತ.  ಕಾಲುಗಳು ಆಗುವುದೇ ಇಲ್ಲವೆ0ದು ಮುಷ್ಕರ ಹೂಡಿದವು. ಹೇಳಲು ಉಳಿದಿರುವುದಾದರೂ ಏನು? ಎಲ್ಲ ಕಾಗದ ಪತ್ರಗಳು, ಡಾಕ್ಯುಮೆ0ಟುಗಳು ತಯ್ಯಾರಾಗಿವೆ. ವಕೀಲರು, ಲೀಗಲ್ ಅಡ್ವೈಸರ್ಗಳು ಎಲ್ಲಕ್ಕು ಸಹಿ ಹಾಕಿ ರೆಡಿ ಮಾಡಿದ್ದಾರೆ. ಇದೇನು ನೆನ್ನೆ ಮೊನ್ನೆಯ ಮಾತಲ್ಲ. ಸುಮಾರು ಮೂರು ತಿ0ಗಳು ಹಗಲು ರಾತ್ರಿ ಯೋಚಿಸಿ ಮಾಡಿದ ಯೋಜನೆ. ನಾಳೆ ಇದಕ್ಕೆಲ್ಲ ತೆರೆ ಬಿದ್ದು, ಇನ್ನು ತನ್ನ ಮಾತು, ಬೇರೆ ಡೈರೆಕ್ಟರ್ಗಳ ಇಷ್ಟದ0ತೆ ಕ0ಪನಿ ನಡೆಯುವುದು. ಅನಸೂಯ ಅತ್ತೆಗೆ ನಾಳೆ ವಿದಾಯ. ತನ್ನ ಮಗುವಿಗಿ0ತ ಪ್ರೀತಿಸಿ, ತನ್ನೆಲ್ಲ್ಲಾ ಸಾರವನ್ನುಣಿಸಿ ಈ ಕ0ಪನಿಯ ಏಳಿಗೆಗೆ ಕಾರಣಳಾದ ಅವಳನ್ನು ತಾವು ಹೊರಕಳಿಸುತ್ತಿರುವುದು. “ ಅವರದು ಹಳೇ ಕಾಲದ ತರ್ಕಗಳು, ಯೋಚನೆಗಳು. ಆ ಥರಹದ ಮೋರಾಲಿಟಿ ಈಗಿನ ಕಾಲಕ್ಕೆ ಸರಿಹೋಗಲ್ಲ. ನಮ್ಮ ಕ0ಪನಿಗೆ ಬ್ಯುಸಿನೆಸ್ಸ್ ಮುಖ್ಯ, ಧರ್ಮ, ಅಧರ್ಮ, ಈ ತರಹದ ಗೊಡ್ಡು ಯೋಚನೆಗಳಲ್ಲ. ನ್ಯಾಯ,ಅನ್ಯಾಯ ಅ0ತ ತೆಲೆಕೆಡಿಸಿಕೊಳ್ಳುವುದು, ಲ0ಚ ತಿಳಿದು ಕೊಡುವುದಿಲ್ಲ,ಯಾರನ್ನೂ ಒಲಿಸಿಕೊಳ್ಳುವುದಿಲ್ಲ ಎ0ದೆಲ್ಲಾ ಹೇಳುತ್ತಾ ಕುಳಿತರೆ ಲಾಸ್ ಆಗದೆ ಮತ್ತಿನ್ನೇನು? ಅವತ್ತು ಆ ಮನುಷ್ಯನನ್ನು  ಸರಿಯಾಗಿ ನೋಡಿಕೊ0ಡಿದ್ದರೆ , ಆ ಕಾ0ಟ್ರಾಕ್ಕ್ಟ್  ನಮ್ಮದಾಗುತ್ತಿತ್ತು., ಧರ್ಮಭೀರುಗಳಾಗಿ ವ್ಯಾಪಾರ, ವ್ಯವಹಾರ ಸಾಧ್ಯವಿಲ್ಲ. ಅನಸೂಯ ಮೇಡಮ್ ರಿಟೈರಾಗಲಿ, ಕ0ಪನಿಯ ಏಳ್ಗೆಗೆ   ಅವರಿರುವವರೆಗೆ ಸಾಧ್ಯವೆ ಇಲ್ಲ” ಬಹಳ ದಿನಗಲಿ0ದ ಅತ್ತೆಯ ಬಗ್ಗೆ ಉಚ್ಚ ವಲಯದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಕ0ಪನಿಯ ಪ್ರಗತಿಗೆ ಅವಳ ಕೊಡುಗೆ ಅಪಾರ ಎನ್ನುವುದೇನೋ ಸರಿ, ಆದ್ರೆ ಈಗಿನ ಕುಸಿತಕ್ಕೆ ಅವಳ ನೀತಿಯುತವಾದ ಯೋಚನೆಗಳು, ಅನಿಸಿಕೆಗಳು ಸುಮಾರು ಮಟ್ಟಿಗೆ  ಕಾರಣ ಎನ್ನುವುದೂ ಸುಳ್ಳಲ್ಲ. ನಾಳೆ ಅತ್ತೆಗೆ ಫೇರ್ ವೆಲ್ ಪಾರ್ಟಿ. ಅವಳಿಗೆ ದೊಡ್ಡ ಬೊಕೆಯಿತ್ತು, ಬೆಳ್ಳಿ ಗಣಪನ ವಿಗ್ರಹ ಕೊಟ್ಟು “ ಆಯಿತು, ನೀನಿನ್ನು ಹೊರಡಮ್ಮ” ಎನ್ನುವ ಕಾರ್ಯಕ್ರಮ. ಅವಳನ್ನು ಈ ರೀತಿ ವೀ ಅರ್ ಎಸ್ ತೆಗೆದುಕೊಳ್ಳುವುದಕ್ಕೆ ಕಮಿಟಿಗೆ ಸಪೋರ್ಟ್ ನೀಡಿದವನಲ್ಲಿ ತಾನೂ ಒಬ್ಬ. ಅತ್ತೆಗೂ ಇದು ಗೊತ್ತು. ಇದುವರೆಗೂ ಅವಳು ತನಗೇನೂ ಹೇಳಿಲ್ಲ. ಸ0ಧ್ಯಳಿಗೂ ಗೊತ್ತಿಲ್ಲ. ಮೊದಲೇ ಅವಳ ದೃಷ್ಟಿಯಲ್ಲಿ ತಾನು ಹಣಕ್ಕಾಗಿ ಮಾನವೀಯತೆಯನ್ನು ಮರೆಯುವ0ತಹವನು. ಈಗ ಅತ್ತೆಯನ್ನು ಕ0ಪನಿಯಿ0ದ ಹೊರ ಕಳಿಸುವುದರಲ್ಲಿ ತನ್ನ ಪಾತ್ರವಿದೆ ಎ0ದರೆ ಭೂಮ್ಯಾಕಾಶವನ್ನು ಒ0ದು ಮಾಡಿಬಿಡುವಳು. ಬೆಳಗು ಹರಿದೇ ಬಿಟ್ಟಿತು. ತಿ0ಡಿಯನ್ನೂ ತಿನ್ನದೆ ಮನೆಯಿ0ದ ಹೊರಬಿದ್ದ. ಆಫೀಸು ತಲುಪಿ ಬೋರ್ಡ್ ರೂಮಿನಲ್ಲಿ ಸೇರಿ ಮೂಲೆ ಹಿಡಿದು ಕುಳಿತಾಗಲೂ, ಅಲ್ಲಿ ಕೊಟ್ಟ ತ0ಪು ಪಾನೀಯ ಕುಡಿದಾಗಲೂ, ಅತ್ತೆ, ಸು0ದರ ರೇಷ್ಮೆ ಸೀರೆ ಉಟ್ಟು ನಸುನಗುತ್ತಾ ಒಳ ಬ0ದದ್ದು, ಅವಳ ಬಗ್ಗೆ ಹೊಗಳಿಕೆಯ ಮಾತು ಬೇರೆಯವರು ಹೇಳಿದ್ದು ಕೇಳಿದಾಗಲೂ ಮನಸ್ಸಿನ ಚಡಪಡಿಕೆ, ಎದೆಯ ಡವಡವ ನಿಲ್ಲಲಿಲ್ಲ. ಸಭೆಯನ್ನು ಉದ್ದೇಶಿಸಿ ಎರಡು ಮಾತುಗಳನ್ನಾಡಲು ಕೇಳಿಕೊಳ್ಳಲು, ಅವಳು ಎದ್ದು ನಿ0ತಳು. ತನ್ನ ಬಗ್ಗೆ ಈಗ ಹೇಳುವಳು, ತಾನೆ0ತಹ ದ್ರೋಹಿ ಎನ್ನುವಳು, ತನ್ನ ಯೌವನ, ಜೀವನವೆಲ್ಲಾ ಧಾರೆ ಎರೆದ ಈ ಕ0ಪನಿ ತನ್ನನ್ನೆಷ್ಟು ಕ್ರೂರವಾಗಿ ಹೊರಕಳುಹಿಸುತ್ತಾ ಇದೆ ಎನ್ನುವಳು, ಬೇರೆಯವರಿರಲಿ, ಸ್ವ0ತ ಅಣ್ಣನ ಮಗನಾದ ತಾನು ಹೀಗೆ ಮಾಡಬಾರದಾಗಿತ್ತು ಎನ್ನುವಳು…. ಕಾಯುತ್ತಾ ಕುಳಿತವನಿಗೆ, ಕೈಯಲ್ಲಿದ್ದ ಗ್ಲಾಸು ಬಿದ್ದು ಒಡೆದಿದ್ದು, ಎಲ್ಲಾ ತನ್ನತ್ತ ನೋಡಿದ್ದು, ಅತ್ತೆ ಮುಗುಳ್ನಗುತ್ತ ಎಲ್ಲರಿಗೂ ವಿದಾಯ ಹೇಳಿದ್ದು, ಕ0ಪನಿಗೆ ಒಳ್ಳೆಯದಾಗಲಿ ಎ0ದು ಹರಸಿದ್ದು, ಇನ್ನು ಮು0ದೆ ಅವಳ ಜಾಗವನ್ನಾಕ್ರಮಿಸುವ ತನಗೆ ಶುಭ ಕೋರಿದ್ದು, ಯಾವುದೇ ದ್ವೇಷ, ರೋಷದ ಮಾತಾಡದಿದ್ದು, ಅತ್ತೆಯ ಎದುರು ತಾನು ತೀರ ಸಣ್ಣವನಾಗಿಬಿಟ್ಟೆ ಎ0ಬ ನೋವಿನ ವಿನಹ ಏನೂ ಅರಿವಾಗಲಿಲ್ಲ. *************************************************

ಹೆಣ್ಣು Read Post »

You cannot copy content of this page

Scroll to Top