ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಶತಮಾನದ ಶ್ರೇಷ್ಠ ಸಾಹಿತಿ ಎಂದು ಕುವೆಂಪು ಅವರನ್ನು ಕರೆದರೂ ಯಾಕೋ ಅವರ ಬಗ್ಗೆ ತೀರ ಕಡಿಮೆಯಾಯ್ತು ಅನ್ನಿಸುತ್ತದೆ . ಯಾಕಂದ್ರೆ ಅವರ ಮಹದ್ ಬೃಹತ್ ಗ್ರಂಥ “ಮಲೆಗಳಲ್ಲಿ ಮದುಮಗಳು” ಇಂದು ನನ್ನ ಕೈಯಲ್ಲಿದ್ದು ತನ್ನನ್ನು ತಾನೇ ಓದಿಸಿಕೊಳ್ಳುತ್ತಿದೆ. ಹೆಸರಾಂತ ಸಾಹಿತಿ ದೇವನೂರು ಮಹಾದೇವ ಅವರ ಎದೆಯಾಳದ ಪ್ರಶ್ನೆಯೊಂದನ್ನು ಇಲ್ಲಿ ಇಡುವ ಮನಸ್ಸಾಗುತ್ತದೆ “ಕನ್ನಡದಲ್ಲಿ ಅತ್ಯುತ್ತಮ ಎನ್ನಿಸಿಕೊಂಡ ನಾಲ್ಕಾರು ಕೃತಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು ಕುವೆಂಪುರವರ ಮದುಮಗಳನ್ನು ಇನ್ನೊಂದರಲ್ಲಿಟ್ಟರೆ ಗುಣದಲ್ಲೂ ಗಾತ್ರದಲ್ಲೂ ಮಲೆಗಳಲ್ಲಿ ಮದುಮಗಳು ಹೆಚ್ಚು ತೂಗುತ್ತದೆ, ಈ ತಕ್ಕಡಿಗೆ ಏನಾಗಿದೆ? ಎಂದು ವಿದ್ಯಾರ್ಥಿಯಾಗಿದ್ದಾಗ ಕೇಳುತ್ತಿದ್ದೆ . ಈಗಲೂ ನೀವು ನನ್ನ ಪ್ರಬುದ್ಧ ಅಂದುಕೊಳ್ಳುವದಾದರೆ ತಕ್ಕಡಿಗೆ ಏನಾಗಿದೆ ? ಎಂದು ಅದೇ ಪ್ರಶ್ನೆ ಕೇಳುತ್ತೇನೆ.” ಎನ್ನುತ್ತಾರೆ ಹೆಸರಾಂತ ಮಾನವೀಯ ಸಾಹಿತಿ ದೇವನೂರು ಮಹಾದೇವ. ಬಹುಷಃ ಮಲೆಗಳಲ್ಲಿ ಮದುಮಗಳು ಓದಿದ ಎಲ್ಲರ ಎದೆಯಲ್ಲಿ ಎದ್ದುನಿಲ್ಲುವ ಪ್ರಶ್ನೆ ಇದು. ಬರೀ ಕಾದಂಬರಿಯಲ್ಲ ಇದು ಮಲೆನಾಡಿನ ಸಮಸ್ತವನ್ನೂ ಒಳಗೊಂಡ ಮಲೆನಾಡ ಜೀವಕೋಶ ಅಂದುಕೊಂಡರೆ ಒಳಿತು. ಮಲೆನಾಡ ಕಾನು ಕಾಡು ಬೆಟ್ಟ ಬಯಲು ಮಳೆ ನೀರು ನದಿ ಬದುಕು ಬವಣೆ ಏನುಂಟು ಏನಿಲ್ಲ ಇದರಲ್ಲಿ?. ಕಾಲೇಜು ದಿನಗಳಲ್ಲಿ ಲೈಬ್ರರಿಯಿಂದ ತಂದು ಅಲ್ಲಲ್ಲಿ ಗಿಬರಾಡಿ ಕುಡಿಮೀಸೆ ಕೆದರಿದ ಕ್ರಾಪು ಗುಳಿಗೆನ್ನೆ ನವಿರು ಸೀರೆಗಾಗಿ ಹುಡುಕಾಡಿ ಮದುಮಗಳಲ್ಲಿ ಅದೇನೂ ಕಣ್ಣಿಗೆ ಬೀಳದೇ ಅವಳ ಭಾರಕ್ಕೆ ಭಯಪಡುತ್ತಲೇ ಒಂದಷ್ಟು ಪುಟ ಮಗುಚಿ ಮರಳಿಸಿ ಬಂದಾದಮೇಲೆಯೂ ಪುರುಸೊತ್ತಾಗಿ ಒಮ್ಮೆ ಓದಬೇಕೆಂಬ ಕನಸಿದ್ದದ್ದಂತೂ ಸುಳ್ಳಲ್ಲ. ದಶಕಗಳು ಕಳೆದ ಮೇಲೆ ಕಾಲ ಕೂಡಿಬಂದು ಈಗಷ್ಟೇ ಓದಿಮುಗಿಸಿದಮೇಲೆ ಇಷ್ಟುದಿನ ಬರಿದೆ ಬರಿದೇ ಹೋಯ್ತು ಹೊತ್ತು ಅನ್ನಿಸ್ತಾ ಇದೆ. ನನ್ನೊಳಗೆ ಇಷ್ಟೊಂದು ಒಳಸಂಚಲನೆಯನ್ನು ಹುಟ್ಟುಹಾಕಿದ ಕೃತಿ ಬೇರೊಂದಿಲ್ಲ ಅಂದುಕೊಂಡಿದ್ದೇನೆ. ನಾನೂ ಒಬ್ಬಳು ಹಸಿಬಿಸಿ ಬರಹಗಾರ್ತಿ ಎಂಬ ಒಣ ಹಮ್ಮಿನ ನೆತ್ತಿಕುಟ್ಟಿ ಪುಡಿಮಾಡಿ ಬರೆದದ್ದೆಲ್ಲ ಬಾಲಿಷ ಅನ್ನಿಸತೊಡಗಿದೆ ಅನ್ನೋಕೆ ಯಾವ ಸಂಕೋಚವೂ ಕಾಡುತ್ತಿಲ್ಲ. ಕೃತಿಯನ್ನ ಅತ್ಯಂತ ಪ್ರೀತಿಯ ತಿನಿಸನ್ನು ಬೇಗ ಮುಗಿದುಹೋಗುವ ಭಯದಲ್ಲಿ ಇಷ್ಟಿಷ್ಟೇ ತಿಂದು ಉಳಿಸಿಕೊಂಡಂತೆ ತಿಂಗಳು ಕಾಲ ನಿಧಾನವಾಗಿ ಕೂತು ಬಾಲಕಿಯಾಗಿ ಓದುವ ಸುಖ ವರ್ಣನೆಗೆ ನಿಲುಕದ್ದು. ಕುವೆಂಪುರವರ ಮಾತುಗಳಲ್ಲಿ ಹೇಳುವದಾದರೆ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಯಾವುದೂ ಯಕ್ಕಶ್ಚಿತವಲ್ಲ.” ಇಲ್ಲಿ ಗುತ್ತಿಯ ವ್ಯಕ್ತಿಚಿತ್ರಣದಷ್ಟೇ ಶೃದ್ಧೆಯಿಂದ ಅವನ ನಾಯಿ ಹುಲಿಯನನ್ನು ಕುರಿತು ಬರೆದಿದ್ದಾರೆ. ಹುಲಿಕಲ್ಲ್ ನೆತ್ತಿಯನ್ನು, ಮಲೆನಾಡಿನ ಮಳೆಗಾಲದ ರೌದ್ರ ರಮಣೀಯತೆಯನ್ನು ಕಡೆದಿಟ್ಟ ತನ್ಮಯತೆಯಲ್ಲೇ ಕಾಡಿನ ಇಂಬಳವನ್ನು ಸುಬ್ಬಣ್ಣ ಹೆಗ್ಗಡೆಯ ಹಂದಿದೊಡ್ಡಿಯನ್ನು ಕುರಿತೂ ಬರೆಯುತ್ತಾರೆ ಕುವೆಂಪು. ಚಿನ್ನಮ್ಮ ಮುಕುಂದಯ್ಯರ ನಡುವಿನ ಪ್ರೇಮದ ಸಂದರ್ಭದಲ್ಲಿ ಅವರ ಲೇಖನಿ ಬಾಗಿನಿಂತಂತೆ ಐತ-ಪೀಂಚಲು ಗುತ್ತಿ- ತಿಮ್ಮಿಯರ ಪ್ರೇಮಪ್ರಣಯಕ್ಕೂ ಅವರದು ಪ್ರೀತಿಯ ಪೂಜೆಯೇ…ಒಮ್ಮೆ ಓದಿ ಮುಗಿಸಿದಮೇಲೆ ಕೃತಿಯ ಕುರಿತಾಗಿ ಓದುಗರೆದೆಗೆ ದಕ್ಕಿದ ಹೊಳಹುಗಳನ್ನೊಮ್ಮೆ ತಿಳಿಯಲು ಪುಟ ತಿರುವಿಬಂದೆ. ಅವುಗಳನ್ನು ವಿಮರ್ಶೆಗಳೆನ್ನದೇ ಹೊಳಹುಗಳು ಎಂಬುದಕ್ಕೆ ಕಾರಣ ಮಲೆಗಳಲ್ಲಿ ಮದುಮಗಳು ವಿಮರ್ಶೆಗೆ ನಿಲುಕದಷ್ಟು ಎತ್ತರಕ್ಕೆ ಮೀರಿಬೆಳೆದ ಕೃತಿ. ಈ ಕೃತಿ ಕನ್ನಡವಲ್ಲದೇ ವಿಶ್ವದ ಬೇರಾವುದೇ ಭಾಷೆಯಲ್ಲಿದ್ದಿದ್ದರೆ ನೋಬಲ್ ಪಾರಿತೋಷಕವನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿತ್ತು ಎಂಬ ಮಾತಂತೂ ಸರ್ವಕಾಲಿಕ ಸತ್ಯವಾದರೂ ಕನ್ನಡದ ಈ ಶ್ರೇಷ್ಠ ಕೃತಿಗೆ ಪಾರಿತೋಷಕಗಳ ಹಂಗಿಲ್ಲ. ಕನ್ನಡಕ್ಕೆ ಈ ಕೃತಿಯೇ ಒಂದು ಸರ್ವಶ್ರೇಷ್ಠ ಪಾರಿತೋಷಕ. ಇಂಗ್ಲೀಷ್ ನಲ್ಲಿ ಬರೆಯುವಷ್ಟು ಭಾಷಾ ಪಾಂಡಿತ್ಯವಿದ್ದರೂ ಕೂಡ ಕನ್ನಡವನ್ನು ತಲೆಮೇಲಿಟ್ಟುಕೊಂಡು ಮೆರೆಸಿದ ರಸ ಋಷಿಗೆ ನಾಡಿಗರು ಸದಾ ಋಣಿಯಾಗಿರಲೇಬೇಕು. ಕೃತಿ ತನ್ನ ಕೇಂದ್ರವನ್ನು ಬಿಟ್ಟು ದೂರ ಸರಿದಿದ್ದನ್ನು ಉಲ್ಲೇಖಿಸಿದವರಿದ್ದಾರೆ. ಕುವೆಂಪು ಬರೀ ಕೇಂದ್ರದ ಸುತ್ತಲೇ ಸುತ್ತಿ ಕೃತಿಯನ್ನು ಸೀಮಿತಗೊಳಿಸದೇ’ ಅದು ಬರೀ ಕಾದಂಬರಿಯಾಗಿಯೇ ಉಳಿದು ಹೊಗುವದನ್ನು ತಪ್ಪಿಸಿ ಸರ್ವಕಾಲಕ್ಕೂ ಸಲ್ಲುವಂತಹ ಒಂದು ಅನನ್ಯ ಕೊಡುಗೆಯನ್ನ ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಕನ್ನಡದ ಓದುಗರಮೇಲೆ ಋಣಭಾರ ಹೊರಿಸಿದ್ದಾರೆ. ಶೋಷಿತ ವರ್ಗ ಗಳ ಪರವಾಗಿ ಕೃತಿಕಾರ ನಿಂತಿದ್ದಾರೆ ಎಂಬ ಹೇಳಿಕೆಗಳನ್ನು ಒಪ್ಪಿಕೊಳ್ಳುವಂತಿಲ್ಲ. ಇದ್ದುದ ಇದ್ದಂತೆ ಕಂಡುದ ಕಂಡಂತೆ ಕೃತಿಯೇ ಕೃತಿಕಾರನ ಕೈಹಿಡಿದು ನಡೆಸಿದಂತೆ ಬರೆಯಬೇಕಾದ ಅಗತ್ಯಗಳನ್ನೆಲ್ಲ ಬರೆದಿದ್ದಾರೆ. ಮೇಲ್ವರ್ಗಗಳ ಕಪಿಮುಷ್ಠಿಗೆ ಸಿಕ್ಕು ತಳವರ್ಗಗಳು ನರಳುವ ಕಾಲಘಟ್ಟದಲ್ಲಿ ಸತ್ಯಕ್ಕೆ ಚ್ಯುತಿಯಾಗದಂತ ಕೃತಿಯ ನಡಿಗೆ ಬೊಟ್ಟಿಡಲಾಗದಷ್ಟು ಸಹಜ. ಪ್ರಕೃತಿ ಪ್ರಣಯ ವಿರಹ ಮಿಲನ ಅದಾವುದೇ ಇರಲಿ ವರ್ಣನೆಯಲ್ಲಂತೂ ಕುವೆಂಪು ಅವರದ್ದು ಬೇರಾರಿಗೂ ನಿಲುಕದ ತಪಸ್ಸಿದ್ಧಿ. ” ಅರಣ್ಯಾಚ್ಛಾದಿತವಾಗಿ ಮೇಘಚುಂಬಿಗಳಾಗಿ ನಿಂತಿರುವ ಗಿರಿಶಿಖರ ಶ್ರೇಣಿಗಳ ಮಲೆನಾಡಿನಲ್ಲಿ ಎಲ್ಲಿಯೋ ಕೆಳಗೆ ಒಂದು ಕಣಿವೆ ಮರಗಳ ನಡುವೆ ಹುದುಗಿರುವ ಮನೆಗಳಲ್ಲಿ ಹುಟ್ಟಿ ಕಣ್ಣುಬಿಡುವ ಮಕ್ಕಳ ಪಾಲಿಗೆ ಆಕಾಶ ಕೂಡ ಕಾಡಿನಷ್ಟು ವಿಸ್ತಾರಭೂಮವಾಗಿ ಕಾಣಿಸುವುದಿಲ್ಲ. ಆಕಾಶಕ್ಕಿಂತಲೂ ಕಾಡೇ ಸರ್ವವ್ಯಾಪಿಯಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿ ಭೂಮಂಡಲವನ್ನೆಲ್ಲ ವಶಪಡಿಸಿಕೊಂಡಂತಿರುತ್ತದೆ. ಪ್ರಥ್ವಿಯನ್ನೆಲ್ಲ ಹಬ್ಬಿ ತಬ್ಬಿ ಆಳುವ ಕಾಡಿನ ದುರ್ದಮ್ಯ ವಿಸ್ತೀರ್ಣದಲ್ಲಿ ಎಲ್ಲಿಯೋ ಒಂದಿನಿತಿನಿತೇ ಅಂಗೈಯಗಲದ ಪ್ರದೇಶವನ್ನು ಮನುಷ್ಯ ಗೆದ್ದುಕೊಂಡು ತನ್ನ ಗದ್ದೆ ತೋಟ ಮನೆಗಳನ್ನು ರಚಿಸಿಕೊಂಡಿದ್ದಾನೆ , ಅಷ್ಟೆ . ” ಕುವೆಂಪು ನುಡಿಯಲ್ಲಿ ಕಾಡಿನ ಹಿರಿಮೆ. ” ಇಷ್ಟಪ್ರಿಯ ಕಂಠ ಧ್ವನಿ ಕಿವಿಗೆ ಬಿದ್ದೊಡನೆ ಚಿನ್ನಮ್ಮನ ಚೇತನಗರಿ ಹಗುರವಾಗಿ ಹೆದೆ ತುಂಡಾದ ಬಿಲ್ಲಿನ ಸೆಟೆತವೆಲ್ಲ ತೊಲಗಿ ಆದರ ದಂಡವು ನೆಟ್ಟಗಾಗಿ ವಿರಾಮ ಭಂಗಿಯಲ್ಲಿ ಮಲಗುವಂತೆ ಒಂದೆರಡು ನಿಮಿಷಗಳಲ್ಲಿಯೇ ಆನಂದ ಮೂರ್ಛೆಯೋ ಎಂಬಂತಹ ಗಾಢ ನಿದ್ದೆಗೆ ಮುಳುಗಿ ಬಿಟ್ಟಳು . ನರಕ ನಾಕಗಳಿಗೆ ಅದೆಷ್ಟು ಅಲ್ಪಾಂತರವೋ ವಿರಹ ಮಿಲನ ನಾಟಕದಲ್ಲಿ.” ಕಾವೇರಿ ಇಸ್ಕೂಲು ಬಾವಿಗೆ ಹಾರಿಕೊಂಡು ಸತ್ತಮೇಲೆ ಕುವೆಂಪು ಬರೆದ “ತನ್ನ ಮೈಯನು ಕೆಡಿಸಿದ್ದ ಕಡುಪಾಪಿಗಳಲ್ಲಿ ಚೀಂಕ್ರನೂ ಸೇರಿದ್ದನೆಂಬುದು ಕಾವೇರಿಗೆ ಗೊತ್ತಾಗದಿದ್ದುದು ಒಂದು ಭಗವತ್ ಕೃಪೆಯೇ ಆಗಿತ್ತು. ಅದೇನಾದರೂ ಗೊತ್ತಾಗಿದ್ದರೆ ಭಗವಂತನೇ ಸತ್ತುಹೋಗುತ್ತಿದ್ದನು! ಆತ್ಮಹತ್ಯೆಗೂ ಪ್ರಯೋಜನ ವಿರುತ್ತಿರಲಿಲ್ಲ. ಸಕಲ ಮೌಲ್ಯ ವಿನಾಶವಾದ ಮೇಲೆ ಸತ್ತಾದರೂ ಸೇರಿಕೊಳ್ಳಲು ಯಾವ ಪುರುಷಾರ್ಥರೂಪದ ಯಾವ ದೇವರು ತಾನೇ ಇರುತ್ತಿತ್ತು ? ” ಇಂತಹ ಅದೆಷ್ಟೋ ಸಾಲುಗಳು ಮತ್ತೆಮತ್ತೆ ಮೆಲಕಿಗೆ ಸಿಕ್ಕು ಎದೆಯಲ್ಲಿ ಮಿಸುಗುತ್ತಲೇ ಇರುತ್ತವೆ. ತುಂಗಾ ನದಿಯ ನೆರೆಯ ರಭಸಕ್ಕೆ ಗುತ್ತಿಯ ನಾಯಿ ಹುಲಿಯ ಕೊಚ್ಚಿಹೋದದ್ದು ಕಾಲಲ್ಲಿ ಮುಳ್ಳುಮುರಿದಂತ ನೋವು. ತಮ್ಮಲ್ಲಿ ಜೀತಮಾಡುವ ಕುಟುಂಬಗಳ ಗಂಡು ಹೆಣ್ಣುಗಳ ಮದುವೆಕೂಡ ತಮ್ಮ ಮೀಸೆಗಳಡಿಯಲ್ಲೇ ತಮ್ಮಿಷ್ಟದಂತೆ ನಡೆಯಬೇಕೆಂಬ ಜಮೀನ್ದಾರ ರೊತ್ತಿಗೆಯ ಮೀರಿ ತಾನು ಮೆಚ್ಚಿಕೊಂಡ ಗುತ್ತಿಯೊಂದಿಗೆ ಓಡಿಹೋಗಿ ಕಡುಬವಣೆಯುಂಡರೂ ಬಿಡದೇ ಅವನನ್ನೇ ನೆಚ್ಚಿ ನಂಬಿ ಜೊತೆಯಾದ ಹೊಲೆಯರ ತಿಮ್ಮಿ , ಪ್ರೀತಿಗಾಗಿ ತಾನು ಅತಿಯಾಗಿ ಪ್ರೀತಿಸುವ ಅದಕ್ಕಿಂತ ಹೆಚ್ಚು ಭಯಪಡುವ ಅಪ್ಪನಿಗೂ ಬೆನ್ನಾಗಿ ಸ್ವಂತ ಮದುವೆ ಚಪ್ಪರದಿಂದ ತಪ್ಪಿಸಿಕೊಂಡು ಕಾಡುಮೇಡಲೆದು ತನ್ನಪ್ರಿಯ ಮುಕುಂದಯ್ಯನ ಸೇರಿಕೊಂಡ ಚಿನ್ನಮ್ಮ ಈ ಎರಡೂ ಹೆಣ್ಣುಗಳು ಒಲ್ಲದ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ಗೆದ್ದು ನಿಲ್ಲುವ ಕಥಾನಾಯಕಿಯರು. ಪೀಂಚಲು ಐತರ ನಡುವಿನ ದಾಂಪತ್ಯವಂತೂ ಪ್ರೀತಿ ಪ್ರಣಯವನ್ನೂ ಮೀರಿನಿಂತ ಅದರಾಚೆಯ ಮಾತಿಗೆ ನಿಲುಕದ ವಿಹಂಗಮ ಪ್ರೇಮ. ಇನ್ನು ನಾಗಕ್ಕನೆಂಬ ನಿಯತ್ತಿನ ಹೆಣ್ಣು ಪತಿಯ ಮರಣದ ನಂತರ ಪುರುಷ ಸಾಂಗತ್ಯವನ್ನು ಹೀಂಕರಿಸಿ ದೂರನಿಂತವಳು. ಉಳ್ಳವರ ಮನೆಯ ಗಂಡಿಗೆ ವಿಧವೆ ಸೊಸೆಯನ್ನು ಕೂಡಿಕೆ ಮಾಡಿ ತನ್ನ ಸ್ವಾರ್ಥ ಸಾಧಿಸಿಕೊಳ್ಳುವ ಅತ್ತೆಯ ನೀಚ ಯೋಚನೆಗೆ ಸೆಡ್ಡು ಹೊಡೆದು ನಿಂತ ಹೆಣ್ಣು ತನ್ನಂತಹದ್ದೇ ಒಂದು ಪುಟ್ಟ ಹೆಣ್ಣುಜೀವಕ್ಕಾಗಿ ತನ್ನೊಳಗೇ ತಾನಿಟ್ಟುಕೊಂಡ ಕಟ್ಟಳೆಮೀರಿ ವೆಂಕಪ್ಪನಾಯಕನ ಒಪ್ಪಿಕೊಂಡಿದ್ದು ಹೆಣ್ತನದ ಪಾರಮ್ಯದ ಹೃದಯವೈಶಾಲ್ಯ. ಗೊಬ್ಬೆ ಸೆರಗು ಹೊನ್ನಳ್ಳಿ ಹೊಡೆತ ಕಪ್ಪೆಗೋಲು ಕುಳವಾಡಿ ಚಿಟ್ಟಳಿಲು ಒಡೆಯರ ದಿಬ್ಬ ದೈಯ್ಯದ ಹರಕೆ ಕಿವಿಚಟ್ಟೆ ಹಂದಿಹಸಗೆ ಉಮ್ಮಿಡಬ್ಬಿ ಹರ್ಮಗಾಲ ಬೀಸಿಕಲ್ಲು ಮದೋಳಿಗ ಇಂತಹ ಅಸಂಖ್ಯ ದೇಸಿಶಬ್ದಗಳ ಸಾಂಗತ್ಯದಲ್ಲಿ ಹೂವಳ್ಳಿ ಕೋಣೂರು ಸಿಂಬಾವಿ ಕಲ್ಲೂರು ಬೆಟ್ಟಳ್ಳಿ ಕಾಗಿನಳ್ಳಿ ಲಕ್ಕುಂದ ಮೇಗರವಳ್ಳಿಗಳ ಸುತ್ತಸುತ್ತಿ ,ಹೆಗ್ಗಡೆಗಳ ಗೌಡರ ಹೊಲೆಯರ ಹಸಲರ ಹಳೆಪೈಕದವರ ಕಿಲಿಸ್ತಾನರ ಕೇರಿಗಳನ್ನೆಲ್ಲ ಹೊಕ್ಕು ಮಂಜಮ್ಮ ಜಟ್ಟಮ್ಮ ದೇವಮ್ಮ ಚಿನ್ನಮ್ಮ ಮಂಜಮ್ಮ ಅಂತಕ್ಕ ಕಾವೇರಿ ಅಕ್ಕಣಿ ಪೀಂಚಲು ನಾಗತ್ತೆ ನಾಗಕ್ಕ ಪೀಂಚಲು ತಿಮ್ಮಿ ಪುಟ್ಟಿ ದೇಯಿ ಹಿಂಡು ಹಿಂಡು ಹೆಣ್ಣುಗಳೊಟ್ಟಿಗೆ ನಿತ್ಯ ತಿಂಗಳುಗಟ್ಟಲೆ ಒಡನಾಡಿ ಕೊನೆಪುಟವ ಮೊಗಚುತ್ತಿದ್ದಂತೆ ಅಚಾನಕ್ ಒಂಟಿಯಾಗಿ ದೂರಕ್ಕೆ ಸಿಡಿದುಬಿದ್ದ ತಳಮಳ ಎದೆಗೆ. ಅಂತಕ್ಕನ ಮಗಳು ಕಾವೇರಿ ದಟ್ಟಿರುಳಿನಲ್ಲೂ ಚೀಂಜ್ರ ಶೇರೇಗಾರನ ಕ್ರೌರ್ಯಜ್ಕೊಳಗಾಗಿ ಸತ್ತ ದೇಯಿ ಕನಸಿಗೆ ನುಗ್ಗಿ ನಿದ್ದೆಗೆಡಿದುತ್ತಿದ್ದಾರೆ……ಒಟ್ಟಿನಲ್ಲಿ ಮಲೆಗಳಲ್ಲಿ ಮದುಮಗಳು ಎದುರಿಗೆ ಇದ್ದರೆ ನಾವು ನಾವಾಗಿರದೇ ಅದರದೇ ಒಂದು ಭಾಗವಾಗಿ ಪಾತ್ರವಾಗಿ ಕಥೆಯ ತುಂಬಾ ಕೃತಿಯ ತುಂಬಾ ಖುದ್ದು ಓಡಾಡಿ ಬಂದ ಧನ್ಯತೆ. ಸರ್ವಶ್ರೇಷ್ಠ ಗಾಯಕರ ಕಂಠದಲ್ಲೊಮ್ಮೆ ಕೆ ಎಸ್ ನರಸಿಂಹ ಸ್ವಾಮಿಯವರ “ದೀಪವು ನಿನ್ನದೆ ಗಾಳಿಯು ನಿನ್ನದೇ ಆರದಿರಲಿ ಬೆಳಕು ಕೇಳುವಾಗಿನ ನಮ್ಮ ನಾವು ಮರೆತು ಹಾಡಿನಲ್ಲಿ ಒಂದಾಗುವ ಭಾವವೇ ಮಲೆಗಳಲ್ಲಿ ಮದುಮಗಳೆದುರು ಕೂತರೆ… ಅಂದುಕೊಂಡರೆ ಅತಿಶಯೋಕ್ತಿಯಲ್ಲ. ಒಮ್ಮೆ ಮುಗಿಸಿದಮೇಲೆ ಮತ್ತೆ ಕೈಬಿಡಲಾಗದೇ ಮರುಓದಿಗೆ ಪುಟ ಮಗುಚುತ್ತಿದ್ದೇನೆ. ಮಲೆಗಳಲ್ಲಿ ಮದುಮಗಳ ಎದುರಿಗೆ ಕೂತು ಪುಟ ಮಗುಚುವದೇ ಒಂದರ್ಥದಲ್ಲಿ ಜನ್ಮಸಾರ್ಥಕ್ಯ. ***************************** ಪ್ರೇಮಾ ಟಿ.ಎಂ.ಆರ್.
ಕಾದಂಬರಿ ಕುರಿತು ಮರಳಿಮಣ್ಣಿಗೆ ಡಾ.ಶಿವರಾಮ ಕಾರಂತ ಸುಮಾವೀಣಾ ಮರಳಿಮಣ್ಣಿಗೆ’ಯ ರಾಮನನ್ನು ನೆನಪಿಸಿದ ಕೊರೊನಾ ಕಾಲಾಳುಗಳು ‘ಮರಳಿ ಊರಿಗೆ”, “ಮರಳಿ ಗೂಡಿಗೆ’, ‘ಮರಳಿ ಮನೆಗೆ’, ‘ಮರಳಿ ನಾಡಿಗೆ’ ಇವೆ ಪದಗಳು ಕೊರೊನಾ ಎಮರ್ಜನ್ಸಿಯಾದಾಗಿನಿಂದ ಕೇಳುತ್ತಿರುವ ಪದಗಳು.ಆದರೆ ಇವುಗಳ ಕಲ್ಪನೆ, ಯೋಚನೆ ನಮ್ಮ ‘ಕಡಲ ತಡಿಯ ಭಾರ್ಗವ’ನಿಗೆ ಅಂದೇ ಹೊಳೆದಿತ್ತು ಹಾಗಾಗಿ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾದ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ನಮ್ಮ ಕೈಗಿತ್ತಿದ್ದಾರೆ. ಹ್ಯಾಟ್ಸ ಆಫ್ ಟು ಕಾರಂತಜ್ಜ ಎನ್ನಬೇಕು. ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ರಾಮ, ಐತಾಳರು, ಲಚ್ಚ ಹಾಗು ರಾಮ ಎಂಬ ಮೂರು ತಲೆಮಾರುಗಳು ಬರುತ್ತವೆ. ಮೊದಲನೆ ತಲೆಮಾರಿನಲ್ಲಿ ರಾಮ ಐತಾಳರು ಮಾಡುವ ವೈದಿಕ ವೃತ್ತಿ ಹಾಗು ಪುರುಷಪ್ರಧಾನ ವ್ಯವಸ್ಥೆಯ ಧೋರಣೆಗಳು ಕಂಡು ಬರುತ್ತವೆ. ನಂತರದ ತಲೆಮಾರಿನ ಲಚ್ಚನಲ್ಲಿ ಆಧುನಿಕ ವಿದ್ಯಾಭ್ಯಾಸ ಅವನ ಬದುಕಿನ ನೆಲೆಯನ್ನು ಮರೆಯಿಸಿ ಲೋಭಿ ಬದುಕಿನ ಬಿರುಗಾಳಿಯನ್ನು ಬೀಸಿಸುತ್ತದೆ. ಸುಳ್ಳು, ದುಂದು ವೆಚ್ಚ ಇತ್ಯಾದಿಗಳನ್ನು ಮಾಡುತ್ತಾನೆ. ಈತನ ಹೆಂಡತಿ ನಾಗವೇಣಿ. ಆಸೆ ಕಂಗಳಿಂದ ಮದುವೆಯಾಗಿ ಬಂದು ನಲುಗುತ್ತಾಳೆ. ಗಂಡನಿಂದ ನೋವುಂಡ ನಾಗವೇಣಿ ಮಗನಿಂದ ಸಮಾಧಾನವನ್ನು ಪಡೆಯುತ್ತಾಳೆ. ಅಂತಹ ಮಗನೇ ಮೂರನೆ ತಲೆಮಾರಿನ ರಾಮು. ತಾಯಿಯ ಶ್ರಮವನ್ನು ಅರಿತ ಈತ ಅತ್ಮಾಭಿಮಾನವುಳ್ಳವನಾಗಿ ಮೆರೆಯುತ್ತಾನೆ. ರಾಮನು ಮರಳಿ ಮಣ್ಣಿಗೆ ಬಂದ ನಂತರ ಶಾಲಾ ಮಾಸ್ತರಿಕೆ ಮತ್ತು ಕೃಷಿ ಎರಡನ್ನೂ ಆಪ್ತವಾಗಿ ದುಡಿಸಿಕೊಳ್ಳುತ್ತಾನೆ.ಹೋಟೇಲ್ ಉದ್ಯಮದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೇಲಾದ ಪ್ರಭಾವ ಮತ್ತು ಪ್ರಾದೇಶಿಕತೆಯ ಸೊಗಡು ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯ ವೈಶಿಷ್ಟ್ಯ. 1850ರಿಂದ1940 ನಡುವಿನ ಸುಮಾರು ನೂರು ವರ್ಷಗಳ ಅವಧಿಯಲ್ಲಿ ಕರಾವಳಿ ಕರ್ನಾಟಕದ ಹಳ್ಳಿಯೊಂದರಲ್ಲಿ ತಲೆಮಾರುಗಳ ನಡುವೆ ನಡೆದ ಸಾಮಾಜಿಕ ಪ್ರಕ್ರಿಯೆಯನ್ನು ಕಾದಂಬರಿ ತೆರೆದಿಡುತ್ತದೆ. 1942ರಲ್ಲಿ ಪ್ರಕಟವಾದ ಈ ಕಾದಂಬರಿ ಇವತ್ತಿಗೂ ಅಕ್ಷರಷಃ ಅನ್ವಯಿಸುತ್ತದೆ. ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರ ರಾಮ ಮುಂಬೈ ಬದುಕಿಗೆ ವಿದಾಯ ಹೇಳಿ ರೈಲು ನಿಲ್ದಾಣಕ್ಕೆ ಬಂದಾಗ ಅವನ ಫ್ರೆಂಡ್ಸ್ರೂಮಿನವರ ಜೊತೆಗೆ ಅವನ ವಿದೇಶಿ ಚಿತ್ರ ಕಲಾ ಶಿಕ್ಷಕಿ ನೋವಾ ಕೂಢ ಬಂದು ಒಂದು ಪುಟ್ಟ ಚಿತ್ರಪಟವನ್ನು ಸುರುಳಿ ಮಾಡಿ “ಇದು ನನ್ನ ಮನೆಯ ಹಿಂದಿನ ಗುಡ್ಡ” ಎಂದು ಹೇಳಿ ನಕ್ಕಿರುತ್ತಾಳೆ ಆಗ ರಾಮುವಿಗೆ ನೋವಾ ತನ್ನ ನಾಡಿಂದ ಓಡಿಬಂದುದರಿಂದ ಆ ನಾಡಿಗಾಗಿ ಅವಳ ಜೀವ ಹಂಬಲಿಸುತ್ತಿದೆಯೇನೋ ಎಂದೆನಿಸಿ ಕಣ್ಣೀರು ಬರುತ್ತದೆ. ಇದೆ ನಾಡಿನ ಹಂಬಲ ತವರ ಹಂಬಲ ಅಂದರೆ, ಅದಕ್ಕೇ ನಮ್ಮ ಜಾನಪದ ಹೆಣ್ಣುಮಕ್ಕಳು “ಕಾಸಿಗೆ ಹೋಗಲಿಕೆ ಏಸೊಂದು ದಿನ ಬೇಕ ತಾಸ್ಹೊತ್ತಿನ ಹಾದಿ ತವರೂರು” ಎಂದು ತಾವು ಹುಟ್ಟಿದ ನೆಲವನ್ನು ಕಾಶಿಗೆ ಹೋಲಿಸಿರುವುದು. ಕಾದಂಬರಿಯಲ್ಲಿ ಅನ್ಯ ಮನಸ್ಥಿತಿಯ ಒಂದೇ ಕುಟುಂಬದ ಮೂರು ಜನರನ್ನು ನೋಡಬಹುದು ಆದರೆ ಈಗ ಇಂಥ ಸಾವಿರ ಲಕ್ಷ ಲಕ್ಷ ಮನಸ್ಸುಗಳು ನಮ್ಮ ನಡುವಿವೆ. ಅನ್ಯ ದೇಶಗಳು “ಅನ್ಯದೇಶಿ” ಎನಿಸಿಕೊಂಡವರನ್ನು ಒಮ್ಮೆಗೇ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವದಿಲ್ಲ ಅಲ್ಲೂ ಜನಾಂಗೀಯ ಭೇದ, ಹಿಂಸೆ, ತಾರತಮ್ಯ ಗಳು ಇರಬಹುದು, ಹೊಂದಾಣಿಕೆಯ ಸಮಸ್ಯೆ ಇರಬಹುದು ಭಾಷೆಯ ಸಮಸ್ಯೆ ಇರಬಹುದು. ಇದರ ನಡುವೆ ಅತ್ಯಂತ ಚೆನ್ನಾಗಿರುವ ಕುಟುಂಬಗಳು ಇವೆ ಅದರ ಬಗ್ಗೆ ತಕರಾರಿಲ್ಲ. ‘ಮೆರೆಯುತ್ತಿದ್ದ ಭಾಗ್ಯವೆಲ್ಲ ಹರಿದು ಹೋಯಿತೆನುವ ತಿರುಕ ಮರಳಿ ನಾಚಿ ಮರಳುತ್ತಿದ್ದ ಮರುಳನಂತೆಯೇ’ ಎಂಬಂತೆ ಸೋ ಕಾಲ್ಡ್ ಹೈಪ್ರೊಫೈಲ್ ಇರುವವರಿಂದ ಮೊದಲುಗೊಂಡು ಕಡುಬಡವರವರೆಗೂ ಎಲ್ಲಾ ಸ್ಥರದ ಉದ್ಯೋಗಕ್ಕಾಗಿ, ಅಧ್ಯಯನಕ್ಕಾಗಿ, ದಿನಗೂಲಿಗಾಗಿ ಊರು ಬಿಟ್ಟವರು ಮರಳಿ ತಮ್ಮ ಮನೆಯನ್ನು ತಮ್ಮ ತಮ್ಮ ಹಳ್ಳಿಗಳನ್ನು ಸೇರಬಯಸುತ್ತಿದ್ದಾರೆ. ಹಳ್ಳಿಗಳಿಂದ ನಗರಕ್ಕೆ ವಲಸೆ ಬರುವ ಕಾಲ ಬದಲಾಗಿ ನಗರಗಳಿಂದಲೇ ಹಳ್ಳಿಗಳಿಗೆ ವಲಸೆ ಹೋಗುವ ಕಾಲ ಬಂದಿದೆ. ಲಾಕ್ ಡೌನ್ ಆಗಿದೆ ಇದ್ದಲ್ಲೆ ಇರಿ ಎಂದರೆ ಕೇಳಲಿಲ್ಲ. ಅದರಲ್ಲೂ ರಾಯಚೂರಿನ ಹೆಣ್ಣಮಗಳು ತನ್ನೂರಿನವರೆಗೂ ಕಡೆಗೂ ತನ್ನ ಮನೆಯನ್ನು ಕಡೆಗೂ ಸೇರಲೇ ಇಲ್ಲವಲ್ಲ ಹಸಿವಿನಿಂದ ಹಾಗೆ ಪ್ರಾಣ ಬಿಟ್ಟಳಲ್ಲ. ಹಾಗೆ ದೂರದ ಕಣ್ಣೂರಿನಿಂದ ಮಂಗಳೂರಿಗೆ ಕಾಲ್ನಡಿಗೆಯಲ್ಲೇ ಬಂದ ಗರ್ಭಿಣಿ ಹೆಣ್ಣು ಮಗಳು ನಡೆದೇ ಬಂದಿದ್ದಾರಲ್ಲ ಏನು ಹೇಳ ಬೇಕು ಇದಕ್ಕೆ. ಸರಕಾರ ಇಷ್ಟು ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ , ಊಟದ ವ್ಯವಸ್ಥೆ ಮಾಡಿದ್ದಾರೆ ಇಷ್ಟು ಆದ ಮೇಲೂ ಏಕೆ ಈ ಹಂಬಲ ಎಂಬ ಪ್ರಶ್ನೆ ಸಹಜವಾಗಿ ಮೂಡುವಂಥದ್ದೆ. ಇನ್ನು ವಿದೇಶಗಳಲ್ಲಿ ಇರುವವರೂ ಕೂಡ ನಮ್ಮನ್ನು “ದೇಶಕ್ಕೇ ಕರೆಸಿಕೊಳ್ಳಿ…” ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಕಾರಣ ಇಷ್ಟೆ ತವರಿನ ಸೆಳೆತ. ಆ ಸೆಳೆತವೇ ಆಪ್ಯಾಯಮಾನ. ನಮ್ಮ ನಾಡಿನ ಸೌಗಂಧ ನಮಗೇ ಗೊತ್ತು. ಉಪ್ಪರಿಗೆಯ ಮೇಲಿನ ಮೆಟೀರಿಯಲ್ಸ್ಟಿಕ್ ಜೀವನ ನಿಜವಾದ ಅನುಭೂತಿಯನ್ನು ಕೊಡಲಾರದು. ‘ಸಿರಿಗರವನ್ನು ಹೊಡೆದವರ ನುಡಿಸಲು ಬಾರದು’ ಎಂಬಂತೆ ಹಣದ ನಶೆಯೇರಿಸಿಕೊಂಡವರು, ನಾವೇ ಎಲ್ಲಾ ಎಂಬ ಹುಂಬತನಕ್ಕೆ , ವ್ಯಾಮೋಹಗಳಿಗೆ ಒಳಗಾಗಿ ಪ್ರತಿಭಾಪಲಾಯನಗೈದವರು, ನಾವು ಭಾರತೀಯ ಸಂಜಾತರು ಎಂದು ಹೇಳಿ ಕೊಳ್ಳಲು ಹಿಂಜರಿಯುತ್ತಿದ್ದವರೆಲ್ಲಾ ಭಾರತಕ್ಕೆ ಮರಳಿ ಹೋಂ ಕ್ವಾರಂಟೈನ್ಗಳಾಗಿದ್ದರು. ಇನ್ನು ಕೆಲವರು ಕ್ವಾರಂಟೈನ್ ಅವಧಿ ಮುಗಿದರೂ ಆಚೆ ಬಾರದೆ ಕಿಟಕಿಯ ಪರದೆ ಸರಿಸಿ ಹೊರಗೆ ಏನಾಗುತ್ತಿದೆ ಎಂದು ಮೆಲ್ಲಗೆ ನೋಡುತ್ತಿದ್ದರು. ಇನ್ನು ನಗರ ಪ್ರದೇಶಗಳಿಂದ ಹಿಂದಿರುಗಿದವರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು “ಮರಳಿ ಮಣ್ಣಿಗೆ” ಪದಕ್ಕೆ ಘನತೆ ತಂದುಕೊಟ್ಟಿದೆ. ‘ಮರಳಿ ಮಣ್ಣಿಗೆ’ ಕಾದಂಬರಿಯ ರಾಮನೂ ಮಾಡಿದ್ದೂ ಕೃಷಿಯನ್ನೇ. ಎಷ್ಟು ಸಾಂದರ್ಭಿಕವಾಗಿದೆಯಲ್ಲವೇ? ಹೌದು! ನಮಗೆ ಅನ್ಯ ದೇಶ ಅನ್ನ ಕೊಡಬಹುದು ಹಣ ಕೊಡಬಹುದು, ಸ್ಥಾನಮಾನ ಕೊಡಬಹುದು, ಜೀವನ ಕೊಡಬಹುದು ಆದರೆ ನೆಮ್ಮದಿಯನ್ನು ಎಂದಿಗೂ ಕೊಡಲಾರದು ಎಂದೇ ನನ್ನ ಅನಿಸಿಕೆ. ವಲಸಿಗ ಹಕ್ಕಿಗಳು ತಮ್ಮ ವಿಹಾರವನ್ನು ಮುಗಿಸಿ ಸ್ವಸ್ಥಾನಕ್ಕೆ ಮರಳುವಂತೆ ತಮ್ಮ ಮೂಲ ನೆಲೆಗೆ ಮರಳಲೇಬೇಕು. ಅದೇನೆ ಕೊಡುಗೆ ಕೊಡುವುದಿದ್ರೂ ನಮ್ಮ ದೇಶಕ್ಕೆ ಕೊಡಬಹುದಲ್ಲವೇ? ವಿಶ್ವದ ಯಾವ ಬಲಿಷ್ಠ ರಾಷ್ಟ್ರಕ್ಕೂ ಆರ್ಥಿಕ ಸಂಪತ್ತನಲ್ಲಿ, ಭೌದ್ಧಿಕ ಸಂಪತ್ತಿನಲ್ಲಿ ಭಾರತ ಕಡಿಮೆಯೇನಿಲ್ಲ . ಕೊರೊನಾ ಎಮರ್ಜನ್ಸಿ ಬಂದ ನಂತರ ಸಾಮಾಜಿಕ ಆಧ್ಯಯನ ಕಾರರು ಮೊದಲಿನಂತಹ ದಿನಗಳು ಇನ್ನು ಇರಲಾರವು ಎಂದಿದ್ದಾರೆ. ಇನ್ನು ಎಂಥಹ ದಿನಗಳು ಬಂದರು ಅದಕ್ಕೆ ನಾವು ಸರ್ವ ಸನ್ನಧ್ಧರಾಗಿರಬೇಕು. ಲಾಕ್ ಡೌನ್ ಕಾಲ “ಮರಳಿ ಮಣ್ಣಿಗೆ” ಅಲ್ಲ “ಮರಳಿ ನಮ್ಮ ಸಂಸ್ಸ್ಕೃತಿ”ಗೆ ಎಂಬಂತಾಗಿದೆ. ಕೈ ಜೋಡಿಸಿ ನಮಸ್ಕರಿಸುತ್ತಿದ್ದೇವೆ . ಮನೆಯ ಅಡುಗೆ ರುಚಿಸುತ್ತಿದೆ. ಎಲ್ಲರೂ ಒಟ್ಟಾಗಿ ಕ್ವಾಲಿಟಿ ಟೈಮ್ ಕಳೆಯುತ್ತಿದ್ದೇವೆ. ನಮ್ಮ ಅಡುಗೆಮನೆಯನ್ನು ವಿದೇಶಿ ಅಡುಗೆ ಸಾಮಾಗ್ರಿಗಳು ಆಕ್ರಮಿಸಿಕೊಂಡಿದ್ದನ್ನು ತಡೆದು “ ಹಿತ್ತಲ ಗಿಡ ಮದ್ದಲ್ಲ “ಎಂಬಂತೆ ನೇಪಥ್ಯಕ್ಕೆ ಸರಿದಿದ್ದ ನಮ್ಮ ಅಡುಗೆಯಲ್ಲಿ ಹಿಂದಿನಿಂದಲೂ ಬಳಸುತ್ತಿದ್ದ ಅರಿಸಿನ ಕಾಳುಮೆಣಸು, ಬೆಳ್ಳುಳ್ಳಿ ಶುಂಠಿಗಳು ಅಡುಗೆ ಮನೆಯ ಪರಿಮಳವನ್ನು ಹೆಚ್ಚಿಸಿವೆ. “ ಕೆಟ್ಟು ಪಟ್ಟಣ ಸೇರು” ಎಂಬ ಗಾದೆ “ಕೆಟ್ಟು ಹಳ್ಳಿ ಸೇರು” ಎಂದು ಬದಲಾಗಿದೆ. ಕೊರೊನಾ ವೈರಸ್ ಬಂದಿದೆ ಸರಿ! ನಮ್ಮ ದೇಶದ ಅರ್ಥ ವ್ಯವಸ್ಥೆಯ ಮೇಲೆ ಬಲವಾದ ಪೆಟ್ಟನ್ನೂ ನೀಡಿದೆ. ಆದರೆ ಜಾಗತಿಕ ಮಟ್ಟದಲ್ಲಿ ಭಾರತದ ಅಂತಃಶಕ್ತಿ ಏನು ಎಂಬುದನ್ನು ವೃದ್ಧಿಸಿಕೊಂಡಿದೆ. ವಿಶ್ವಸಂಸ್ಥೆಯಿಂದ ಮೊದಲುಗೊಂಡು ಅಮೇರಿಕಾ ಬ್ರೆಜಿಲ್ ರಾಷ್ಟ್ರಗಳು ನಮ್ಮನ್ನು ಕೊಂಡಾಡುತ್ತಿವೆ. ಮನಿ ಪವರ್ಗಿಂತ ಈಗ ನಮ್ಮ ಭಾರತ ಮಣ್ಣಿನ ಪವರ್ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ನಮ್ಮ ದೇಶ, ನಾಡು ಏನೂ ಅಲ್ಲ ಎಂದ ರೋಗಗ್ರಸ್ಥ ಮನಸ್ಸುಗಳು ಕೊರೊನಾ ಬಂದಾಗಿನಿಂದ ಮರಳಿ ಮಣ್ಣಿಗೆ ಬಂದಿವೆ ಬರುತ್ತಿವೆ. ******************************* ಸುಮಾವೀಣಾ
ನಮ್ಮೂರ ಕೆರೆಯ ವೃತ್ತಾಂತ
ಪದ್ಯ/ಗದ್ಯ ನಮ್ಮೂರ ಕೆರೆಯ ವೃತ್ತಾಂತ ಡಾ. ಅರಕಲಗೂಡು ನೀಲಕಂಠ ಮೂರ್ತಿ ನಮ್ಮೂರ ವಿಶಾಲ ತಬ್ಬಿಅಲೆಯಲೆಯಾಗಿ ಹಬ್ಬಿಹರಿದಿದ್ದ ಸಾಗರದಂಥ ಕೆರೆಈಗ ಬಸ್ ನಿಲ್ದಾಣ! ಹೇಮಾವತಿಯ ಚಿತ್ತಹರಿಯುವ ಮುನ್ನನಮ್ಮೂರಿನತ್ತಆ ‘ದೊಡ್ಡ ಕೆರೆ’ಯೇಕೋಟೆ ಪೇಟೆಯಬಂಗಾರ ಜೀವಜಲ!ಅದೀಗ ನಮ್ಮೂರ ‘ಹೆಮ್ಮ’ಯಬಸ್ ಸ್ಟ್ಯಾಂಡ್! ಒಂದೊಮ್ಮೆ ಮೊಗೆಮೊಗೆದಷ್ಟೂಉಗ್ಗಿದ್ದ ನೀರು…ಎಂದೆಂದೂ ಬತ್ತಿ ಬರಡಾಗದೆನಿತ್ಯ ಹರಿದಿದ್ದ ತೇರು!ಶತಮಾನಗಳ ತಲೆಮಾರುಗಳಮೈ-ಮನ ತೊಳೆದಿದ್ದನೀರಡಿಕೆ ನಿರಂತರ ನೀಗಿದ್ದವರುಷ ವರುಷ ಗಜಗಾತ್ರಗಣೇಶ ಮೂರ್ತಿಗಳನೆಆಪೋಶಿಸಿದ್ದಆ ನೀರ ಮಹಾರಾಶಿಈಗಸೆಲೆಯೂ ಇಲ್ಲದ ಅಪರಂಜಿ –ಬರಡು!ಯಾರ ಚಿಂತನೆಯಅದೆಂಥ ಬೆರಗು!ಆ ನೀರ ಜೊತೆಜೊತೆಗೆಪ್ರತಿಫಲಿಸಿದ್ದಇನ್ನುಳಿದ ಕೆರೆಗಳೂ ಕೂಡಈಗ ನೆಲಸಮ…ಬರೀ ನೆನಪು! ಅಂದಿನ ಆ ನೀರ ಅನಂತತೆಇಂದು ನಿಶಾರಾತ್ರಿಗಳಲಿಕೇಕೆ ಹಾಕಿ ಊಳಿಡುವಹೊಚ್ಚ ಹೊಸ ಬಸ್ ಸ್ಟ್ಯಾಂಡ್..! ನೀರು…ನೀರು…ನೀರು! ನೀರಿನಬಗ್ಗೆ ಎಚ್ಚರಿಕೆಯ ಘಂಟೆ ಮೊಳಗುತ್ತಿದೆ ಜಗತ್ತಿನಾದ್ಯಂತ. ಜೊತೆಗೆ ಹಿಮಗೆಡ್ಡೆಗಳು ಕರಗುತ್ತಿರುವಂಥ, ಮತ್ತದರಿಂದ ಏರುಗತಿಯಲ್ಲಿರುವ ಸಮುದ್ರಮಟ್ಟ. ದಿಗ್ಭ್ರಮೆಗೊಳಿಸುವ ಚಂಡಮಾರುತಗಳು ಮತ್ತು ನಗರಗಳಲ್ಲೂ ಈಜು ಹೊಡೆಸುತ್ತಿರುವ ರಾಕ್ಷಸೀ ಮಳೆ! ಇಂಥ ಆಘಾತದ ವೈಜ್ಞಾನಿಕ ವರ್ತಮಾನಗಳು. ಕಾರಣವೂ ವಿಜ್ಞಾನದಲ್ಲಿ ಇಲ್ಲದಿಲ್ಲ. ಈ ವಿಷಯ ಒತ್ತಟ್ಟಿಗಿರಲಿ. ಈ ಲೇಖನಕ್ಕೂ ಮೇಲಿನ ವಿಷಯಕ್ಕೂ ಸದ್ಯದಲ್ಲಿ ಸಂಬಂಧವಿಲ್ಲ. ನೀರು ಮತ್ತು ನೀರನ್ನು ಹೊತ್ತು ತುಂಬಿತುಳುಕುವ ಕೆರೆಗಳ ಬಗ್ಗೆ…(ನಮ್ಮೂರ “ವಾಟರ್ ಬಾಡೀಸ್ ಬಗ್ಗೆ)… ನಮ್ಮೂರು ನಿಮಗೆಲ್ಲ ಈಗಾಗಲೇ ತಿಳಿದಿರುವಹಾಗೆ ಅರಕಲಗೂಡು. ಅ.ನ.ಕೃ.ಕುಟುಂಬದ ಮೂಲವಾದ ಊರು. ನಮ್ಮೂರು ಎರಡು ಭಾಗವಾಗಿದೆ — ಪೇಟೆ ಹಾಗೂ ಕೋಟೆ ಎಂದು. ಮಧ್ಯದಲ್ಲಿ ಪೇಟೆ ಯಿಂದ ಕೋಟೆಯಕಡೆ ಹೋಗುವಾಗ ಎಡಭಾಗದಲ್ಲಿ ಒಂದು ದೊಡ್ಡ ಕೆರೆ. ಪಕ್ಕದಲ್ಲೇ ಪೇಟೆ-ಕೋಟೆಯ ನಡುವೆ ಡಾಂಬರು ರಸ್ತೆ. ಇನ್ನೊಂದು ಪಕ್ಕ ಹಳ್ಳದ ತೋಟ. ಇದಲ್ಲದೆ ಪೇಟೆಯ ಸುತ್ತಮುತ್ತ ಇನ್ನೊಂದು ಮೂರು ಸಣ್ಣ ಕೆರೆಗಳಿದ್ದವು. ಇದಿಷ್ಟು ನಾವು ಚಿಕ್ಕಂದಿನಿಂದ ನೋಡುತ್ತಾ ಬೆಳೆದ ಚಿತ್ರಣ… ಆದರೀಗ ಅದು ಹಾಗಿಲ್ಲ! ಅದಕ್ಕೆ ಮೊದಲು, ಆ ಕೆರೆಯ ಬಗ್ಗೆ ಒಂದೆರಡು ಮಾತು… ನನ್ನ ಕಣ್ಣಲ್ಲಿ ಈಗಲೂ ಅದು ಹಾಗೇ ಅಂದಿನ ಹಾಗೆಯೇ ಸಾಗರ! ಬಹಳವೇ ವಿಶಾಲವಾಗಿತ್ತು. ಅದರ ನಿಜ ವಿಸ್ತೀರ್ಣ ನನಗೆ ಅರಿವಿಲ್ಲದಿದ್ದರೂ, (ಅದು ಇಲ್ಲಿ ಅಪ್ರಸ್ತುತ ಕೂಡ), ವಿಶಾಲವಾಗಿದ್ದುದು ನಿಜ. ಸುಮಾರು ಜಮಾನುಗಳಿಗೆ ಜೀವಜಲದಂತೆ ಉಣಬಡಿಸಿತ್ತು. ಕೋಟೆ ಪೇಟೆ ಎರಡೂ ಸೇರಿದಂತೆ ಅನೇಕಾನೇಕ ತುಂಬು ಮನೆಗಳ ಮೈಮನದ ಕೊಳೆ ಅಳಿಸಿ, ಶುಭ್ರ ಬಟ್ಟೆಗಳಿಗೆ ಕಾರಣವಾಗಿದ್ದ ಕೆರೆ. ಮತ್ತು ಹೇಮಾವತಿ (ಗೊರೂರಿನಿಂದ – ಸುಮಾರು ಐದು ಕಿಲೋಮೀಟರಿನಷ್ಟು ದೂರ -ನಮ್ಮೂರ ವರೆಗೆ) ನದಿಯ ನೀರು ನಮ್ಮ ತೃಷೆಯನ್ನು ನೀಗಿಸಲು ಹರಿದುಬರುವ ತನಕ, ಆ ದೊಡ್ಡ ಕೆರೆ ಯೇ ನಮ್ಮ ಬಾಯಾರಿಕೆಯನ್ನು ನಿರಂತರ ತಣಿಸಿದ್ದಲ್ಲದೆ, ನಮ್ಮೆಲ್ಲ ಕುಟುಂಬಗಳ ಅಡುಗೆ ಮನೆಯ ಒಲೆಗಳ ಮೇಲೆ ತದೇಕ ಕುದಿಯುತ್ತಿದ್ದ ಎಲ್ಲ ಥರದ ದ್ರವಾಹಾರದ ಮೂಲವೂ ಆಗಿದ್ದು, ಶೇಖರಣೆಗೆ ಕೊಳದಪ್ಪಲೆಗಳಲ್ಲಿ ತುಳುಕಿದ್ದಲ್ಲದೆ, ದೇವರ ವಿಗ್ರಹಗಳ ಶುಭ್ರತೆಗೂ, ತೀರ್ಥಕ್ಕೂ ಗಂಗಾಮಾತೆಯಾಗಿದ್ದ ಮೂಲಾಧಾರ! ಪ್ರತಿ ವರ್ಷ ನಮ್ಮೂರಲ್ಲಿ ಗಣೇಶನ ಹಬ್ಬಕ್ಕೆ ತುಂಬ ದೊಡ್ಡ ವಿಗ್ರಹವನ್ನು ಪ್ರತಿಸ್ಠಾಪಿಸುತ್ತಿದ್ದರು. ಆ ಅಷ್ಟು ದೊಡ್ಡ ಗಣಪತಿ ಮೂರ್ತಿಯನ್ನು ಕೂಡ ಇದೇ ನಮ್ಮ ಹೆಮ್ಮೆಯ ಕೆರೆಯಲ್ಲಿಯೇ ವಿಸರ್ಜನೆ ಮಾಡುತ್ತಿದ್ದುದು. ನಾನು ಸುಮಾರು ವರ್ಷ ಆಫ್ರಿಕ ಖಂಡದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೆ — ನನ್ನ ಮೈಸೂರಿನ ಕ್ಲಿನಿಕ್ ಆರಂಭಿಸುವ ಮುನ್ನ. ವರ್ಷಕ್ಕೊಮ್ಮೆ ರಜೆಗೆ ಕುಟುಂಬದ ಒಡನೆ ಭಾರತಕ್ಕೆ ಬಂದು ಹೋಗುತ್ತಿದ್ದೆ. ಆಗೆಲ್ಲ, ಹೇಗಾದರೂ ಬಿಡುವು ಮಾಡಿಕೊಂಡು ಊರಿಗೆ ಹೋಗುವುದು, ಆ ಕೆರೆಯನ್ನು ಹತ್ತಿರದಿಂದ ಕಣ್ತುಂಬಿಸಿಕೊಂಡು ಬರುವುದು ಅಭ್ಯಾಸವಾಗಿತ್ತು. ಇಂಥ ಕೆರೆ ಈಗಿಲ್ಲ! ಅನೇಕಾನೇಕ ಊರುಗಳ ದುರಂತ ಗಳ ಹಾಗೆ, ಅದು ಈಗಿಲ್ಲ…ಹಾಗಿದ್ದರೆ ಅದು ಈಗೆಲ್ಲಿ? ಹೌದು, ಈಗೆಲ್ಲಿ. ನಮ್ಮೂರಲ್ಲಿ ನಾನು ಚಿಕ್ಕವನಿದ್ದಾಗಿಂದ ಕಂಡಹಾಗೆ ಕೋಟೆ ಪೇಟೆಯ ನಡುವೆ ನಮ್ಮ ಬಸ್ ನಿಲ್ದಾಣವಿತ್ತು – ಚಿಕ್ಕದಾದರೂ ನಮ್ಮೂರಿಗೆ ಸಾಕಾಗಿತ್ತು. ಇತ್ತೀಚಿನವರೆಗೂ ಅದೇ ಇತ್ತು. ಯಾವ ತಲೆಯ ಅದೆಂಥ ಕೋಡೋ ಏನೋ ಎದ್ದಂತೆ, ಈಗಿರುವ ನಿಲ್ದಾಣದ ಅನತಿ ದೂರದಲ್ಲೇ ಇನ್ನೊಂದು, ಕಾಂಪೌಂಡ್ ಸಹಿತ, ನಿಲ್ದಾಣ ನಿರ್ಮಿಸಲಾಯಿತು. ನಿರ್ಮಿಸಿದ್ದಷ್ಟೇ ಲೆಕ್ಕ, ನಂತರ ಪಾಳು – ಎಲ್ಲ ಥರದ ಚಟುವಟಿಕೆಗಳ ತವರಾಯಿತು! ಇದಿಷ್ಟು ನಾನು ಕಣ್ಣಾರೆ ಕಂಡದ್ದು. ನಾನು ಆಫ್ರಿಕಾದಿಂದ ಭಾರತಕ್ಕೆ ಮರಳಿ, ನನ್ನ ಕ್ಲಿನಿಕ್ ಆರಂಭಿಸಿ, ನಮ್ಮ ಬದುಕಿನ ಚಟುವಟಿಕೆಯತ್ತ ತೊಡಗಿಸಿಕೊಳ್ಳುತ್ತಿದ್ದ ಹಾಗೇ, ಊರಿಗೆ ಮೊದಲ ರೀತಿ ಹೋಗಿಬರಲು ಕೂಡ ದುಸ್ತರವಾಗುತ್ತಿತ್ತು. ಹಬ್ಬ, ಹುಣ್ಣಿಮೆ, ಹಿರಿಯರ ತಿಥಿ ಮುಂತಾಗಿ ಹೋದಾಗ ಕೂಡ ಕೆರೆಯತ್ತ ತಿರುಗಲೂ ಆಗದಷ್ಟು ಧಾವಂತ! ಬೆಳಿಗ್ಗೆ ಹೋದರೆ, ಮಧ್ಯಾಹ್ನದ ಊಟದ ತಕ್ಷಣ ವಾಪಸ್ಸಾಗುವುದನ್ನೇ ನೋಡುವಷ್ಟು! ಹೀಗಾಗಿ ಕೆರೆಯ ಕಡೆ ಗಮನವೇ ಇರದಷ್ಟು ಅಥವಾ ಅಷ್ಟು ವ್ಯವಧಾನವಿರಲಿಲ್ಲ ಎನಿಸುವಷ್ಟು! ಆ ಒಂದು ದಿನ, ನನ್ನ ಕ್ಲಿನಿಕ್ಕಿಗೆ ನಮ್ಮೂರವರು ಒಬ್ಬರು ಬಂದರು. ಅವರಿಂದ ತಿಳಿಯಿತು – ಅತೀ ದುಃಖದ ಸಮಾಚಾರ… ನಮ್ಮೂರ ಕೆರೆ ಇನ್ನಿಲ್ಲ! ಹೌದು, ಕೆರೆ ಇಲ್ಲ. ಹಾಗಾದರೆ ಏನಾಯಿತು ಅಥವಾ ಎಲ್ಲಿಗೆ ಸಾಗಿಸಲಾಯಿತು–ಹೊಸದೇನಾದರೂ ತಾಂತ್ರಿಕತೆಯಿಂದ ಬೇರೆಡೆಗೇನಾದರೂ…?! ಉಹುಂ…ಇಲ್ಲ! ಮುಚ್ಚಲಾಗಿದೆ. ಮುಚ್ಚಿ ಮತ್ತೊಂದು, ಮೂರನೆಯ, ಬಸ್ ನಿಲ್ದಾಣ ನಿರ್ಮಿಸಲಾಗಿದೆ! ಆಹಾ…ಅದ್ಭುತ! ಎಂಥ ತಲೆ ಇರಬಹುದು, ಎಂಥ ಸಾಧನೆ! ಒಮ್ಮೆ ಊರಿನತ್ತ ಹೋದೆ…ವಿಶಾಲ ಕೆರೆಯಲೀಗ ಆ ವೈಶಾಲ್ಯವೇ ಇಲ್ಲ! ಕೆರೆಯ ಬದಲು ಅಲ್ಲಿ ಬಸ್ ಸ್ಟ್ಯಾಂಡ್! ಮತ್ತು ಅದರ ಅತ್ತಿತ್ತ ಮಕ್ಕಳ ಆಟಕ್ಕಾಗಿ ಒಂದು ಉದ್ಯಾನವನದ ರೀತಿ! ಅಷ್ಟೇ ಅಲ್ಲ. ಪೇಟೆಯ ಸುತ್ತ ಇದ್ದ ಯಾವ ಕೆರೆಯೂ ಈಗಿಲ್ಲ. ಎಲ್ಲ ಬರಡು. ಭಣ ಭಣ! ಯಾರು ಕಾರಣರೋ, ಅಥವಾ ಅದೆಂಥ ಕಾರಣವೋ (ಯಾರ ಪಾಪವೋ) ನಾನರಿಯೆ…ಆದರೆ ನನಗನಿಸಿದ್ದು…ಊರೂರಲ್ಲೂ ಇಂಥ ಒಬ್ಬೊಬ್ಬ ಪ್ರಭೃತಿಯಿದ್ದರೆ, ಜಗತ್ತು ಉದ್ಧಾರ! ಕಾವೇರಿ ಗಂಗೆಯರನ್ನು ಭೂಮಿಗಿಳಿಸಿದ ಅಗಸ್ತ್ಯ ಭಗೀರಥರೀಗ ಈ ಇಂಥವರಿಂದ ಧನ್ಯ…! ***********************************
ನಮ್ಮೂರ ಕೆರೆಯ ವೃತ್ತಾಂತ Read Post »
ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳುವಳಿ ಉತ್ತರ ಕರ್ನಾಟಕ ಭೇಟಿಗೆ ಶತಮಾನ
ಲೇಖನ ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳುವಳಿ ಉತ್ತರ ಕರ್ನಾಟಕ ಭೇಟಿಗೆ ಶತಮಾನ ಡಾ. ಎಸ್.ಬಿ. ಬಸೆಟ್ಟಿ ಒಂದು ಶತಮಾನದ ಹಿಂದಿನ ಕಾಲ ಬ್ರಿಟಿಷ್ ಆಳ್ವಿಕೆಯ ಅತಿರೇಕಗಳಿಂದ ಇಡೀ ಭಾರತವೇ ರೋಸಿಹೋಗಿತ್ತು. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಪ್ಲೇಗ್, ಕಾಲರಾ, ಸಿಡುಬು, ಸ್ಪಾನಿಶ್ ಪ್ಲೂ ಇತ್ಯಾದಿ ಸಾಂಕ್ರಾಮಿಕ ಸೋಂಕುಗಳು ಜಗತ್ತನ್ನು ಕಂಗೆಡಿಸಿದ್ದವು. ಪ್ಲೇಗ್, ಕಾಲರಾ, ಸಿಡುಬು ಆಗಾಗ ಬರುತ್ತಲೇ ಇದ್ದರೂ ಸ್ಪಾನಿಶ್ ಪ್ಲೂ ಮಾತ್ರ ೧೯೧೮-೧೯ ರ ವೇಳೆ ಒಮ್ಮೆಲೆ ವ್ಯಾಪಕವಾಗಿ ಹರಡಿತು. ಇದು ಹರಡಿದ್ದು ಒಂದನೇ ಮಹಾಯುದ್ಧದಲ್ಲಿ ಪಾಲ್ಗೊಂಡ ಸೈನಿಕರು ಮುಂಬಯಿ ಮೂಲಕ ಹಡಗಿನಲ್ಲಿ ೨೯ನೇ ಮೇ ೧೯೧೮ ರಂದು ಬಂದಾಗ. ಆಗ ಪೋಲಿಸರು, ಮಿಲ್‌ಗಳಲ್ಲಿ ಕೆಲಸ ಮಾಡುವವರು ಸರಕಾರಿ ನೌಕರರು ತೀವ್ರ ಅಸ್ವಸ್ಥರಾದರು. ಎಲ್ಲರೂ ಒಂದೇ ದಿನ ಚಳಿ,ಜ್ವರ, ಮೈಕೈನೋವು ಇತ್ಯಾದಿಗಳಿಂದ ರಜೆ ಹಾಕಬೇಕಾಗಿ ಬಂತು. ಆಗ ರೈಲು ಮಾರ್ಗದಲ್ಲಿ ಸಂಚರಿಸುವವರ ಮೂಲಕ ವೈರಸ್ ಮದ್ರಾಸ್ ಪ್ರಾಂತ್ಯ, ಮುಂಬಯಿ (ಈಗಿನ ಉತ್ತರ ಕರ್ನಾಟಕ), ಹೈದರಾಬಾದ್ ಪ್ರಾಂತ್ಯಗಳಿಗೆ (ಹೈದರಾಬಾದ್ ಕರ್ನಾಟಕ) ಹಬ್ಬಿತು. ರೈಲು ಮೂಲಕ ಕರಾವಳಿಗೂ ತಲುಪಿತು. ಇನ್ನೊಂದೆಡೆ ಧಾರವಾಡ ಕಡೆಯಿಂದಲೂ ಬಂತು. ಕರಾವಳಿ ಕರ್ನಾಟಕದಲ್ಲಿ ಹೊಳೆ ದಾಟಿ ಹೋಗಬೇಕಾಗಿದ್ದು ನೇರ ರಸ್ತೆ ಮಾರ್ಗಗಳಿಲ್ಲದ ಕಾರಣ ವೈರಸ್ ಬೇರೆ ಕಡೆಯಷ್ಟು ತೀವ್ರವಾಗಿ ಬಾಧಿಸಲಿಲ್ಲ. ಆದರೂ ಜನಸಂಖ್ಯೆಯ ಶೇ. ೨% ರಷ್ಟು ಮಂದಿ ಸಾವಿಗೀಡಾಗಿದ್ದರೆಂದು ಅಂದಾಜಿಸಲಾಗಿದೆ. ದೇಶದಲ್ಲಿ ೧ ಕೋಟಿಗೂ, ಜಗತ್ತಿನಲ್ಲಿ ೫ ಕೋಟಿಗೂ ಅಧಿಕ ಜನರು ಸಾವಿಗೀಡಾಗಿದ್ದರು. ಪ್ರಥಮ ವಿಶ್ವ ಯುದ್ಧದ ತರುವಾಯ ಭಾರತದ ಜನತೆ ೧೯೧೮-೧೯ರ ಸ್ಪ್ತಾನಿಶ್ ಪ್ಲೂ ಎಂಬ ವಿಶ್ವವ್ಯಾಪಿ ಮಹಾಮಾರಿಯಿಂದ ತತ್ತರಿಸಿ ಹೇಗೋ ಚೇತರಿಕೊಳ್ಳುತ್ತಿರುವಂತೆಯೇ ೧೯೧೯ ರ ಕರಾಳವಾದ ರೌಲೆಟ್ ಕಾಯ್ದೆಯು ಜನತೆಯ ಸ್ವಾತಂತ್ರ್ಯ ವನ್ನು ಮತ್ತಷ್ಟು ಮೊಟಕುಗೊಳಿಸಿತ್ತು. ಆ ವೇಳೆಗೆ ಗಾಂಧೀಜಿ ರೌಲೆಟ್ ಕಾಯ್ದೆಯ ವಿರುದ್ಧವಾಗಿ ೬ನೇ ಎಪ್ರಿಲ್ ೧೯೧೯ ರಂದು ದೇಶವ್ಯಾಪಿ ಸತ್ಯಾಗ್ರಹವನ್ನು ನಡೆಸಿದರು. ಬ್ರಿಟಿಷ್ ಸರಕಾರದ ಆಳ್ವಿಕೆಯಲ್ಲಿನ ದಬ್ಬಾಳಿಕೆಯ ಪರಮಾವಧಿ ಎಂಬಂತೆ ೧೩ನೇ ಎಪ್ರಿಲ್ ೧೯೧೯ ರಂದು ಜನರಲ್ ಡೈಯರನು ಎಸಗಿದ ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ಮಾನವತೆಯ ಸಾಕ್ಷೀಪ್ರಜ್ಞೆಯನ್ನೇ ಅಲುಗಾಡಿಸಿ ಹಾಕಿತ್ತು. ಈ ಘಟನೆಯಿಂದ ಭಾರತದ ಮೂಲೆ ಮೂಲೆಗಳಲ್ಲಿ ಜನರು ಶೋಕ ತಪ್ತರಾದರು. ಹಾಗೂ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗಾಣಿಸಲು ಹೊಸದಾಗಿ ಚಳುವಳಿಯನ್ನು ನಡೆಸಲು ದೃಢವಾದ ಸಂಕಲ್ಪವನ್ನು ಮಾಡಿದರು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಬ್ರಿಟೀಷ್ ಸರಕಾರ ಯಾವ ಮಟ್ಟಕ್ಕೂ ಇಳಿದು ಪಾಶವೀಕೃತ್ಯಗಳನ್ನು ಹಾಗೂ ಅನಾಚರಗಳನ್ನೂ ಮಾಡಬಲ್ಲದು ಎಂದು ಗಾಂಧೀಜಿಯ ಮನಸ್ಸಿನಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳುವಳಿಯ ಯೋಜನೆಯು ಮೂಡಿತು. ಅವರು ಅದನ್ನು ಅವರ ಸತ್ಯಾಗ್ರಹದ ಪಥದಲ್ಲಿ ಹಂತಹಂತವಾಗಿ ರೂಪಿಸಿದರು. ಈ ಚಳುವಳಿಯು ೧ನೇ ಅಗಸ್ಟ್ ೧೯೨೦ ರಂದು ಆರಂಭವಾಗುವ ಹೊತ್ತಿನಲ್ಲಿ ಲೋಕಮಾನ್ಯ ತಿಲಕರು ಕಾಲವಾದರು. ದೇಶವು ಶೋಕದಲ್ಲಿ ಮುಳುಗಿದ್ದರೂ, ಲೋಕಮಾನ್ಯರ ಸ್ಮರಣೆಯೊಂದಿಗೆ ಗಾಂಧೀಜಿಯ ನಾಯಕತ್ವದಿಂದ ಜನತೆಯಲ್ಲಿ ಮಹಾಜಾಗೃತಿಯು ಉಂಟಾಯಿತು. ಹಿಂದೂಗಳು ಹಾಗೂ ಮುಸಲ್ಮಾನರು ಅಲ್ಲದೇ ಎಲ್ಲಾ ಮತಧರ್ಮದವರೂ ಒಂದಾಗಿ ಅಸಹಕಾರ ಚಳುವಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು. ಅಸಹಕಾರದ ಮೊದಲ ಹೆಜ್ಜೆಯಾಗಿ ಗಾಂಧೀಜಿ ತಮಗೆ ಸರಕಾರ ಕೊಟ್ಟಿದ್ದ ಕೈಸರ್-ಎ-ಹಿಂದ್ ಮತ್ತಿತರ ಪದಕಗಳನ್ನು ಹಿಂತಿರುಗಿಸಿದರು. ಅಖಿಲ ಭಾರತ ಮಟ್ಟದಲ್ಲಿ ಯಾವುದೇ ಭೇದ ಬಂಧವಿಲ್ಲದೇ ಮಹಿಳೆಯರು ಮಕ್ಕಳೂ ಸೇರಿದಂತೆ ಎಲ್ಲಾ ವರ್ಗಗಳ ಜನರು ಈ ಚಳುವಳಿಯಲ್ಲಿ ಸಹಜವಾಗಿ ಭಾಗವಹಿಸಲು ಅವಕಾಶ ಇದ್ದಿತು. ದೇಶ ಕಟ್ಟುವ ಕೆಲಸಕ್ಕಾಗಿ ಧನ – ಜನ ಸಂಗ್ರಹಿಸಲು ಮತ್ತು ನಿದ್ರಿಸುತ್ತಿದ್ದ ಭಾರತವನ್ನು ಎಚ್ಚರಿಸಲು ಗಾಂಧೀಜಿ ದೇಶದ ಉದ್ದಗಲಕ್ಕೂ ಉತ್ಸಾಹದ ಚಿಲುಮೆಯಂತೆ ಓಡಾಡುತ್ತಿದ್ದರು. ವಿಮಾನಯಾನ ಹೊರತುಪಡಿಸಿ ಉಳಿದೆಲ್ಲ ಸಂಪರ್ಕ ಸಾಧನಗಳಾದ ಕಾಲ್ನಡಿಗೆ, ಎತ್ತಿನಬಂಡಿ, ಕುದುರೆಗಾಡಿ, ರೈಲು, ದೋಣಿ ಹಾಗೂ ಹಡಗುಗಳಲ್ಲಿ ಸಂಚರಿಸಿದರು. ಹಾಗೆಯೇ ಕರ್ನಾಟಕಕ್ಕೂ ಗಾಂಧೀಜಿ ಹಲವು ಸಲ ಬಂದರು. ಕರ್ನಾಟಕದ ಉದ್ದಗಲಕ್ಕೂ ಅವರ ಅಭಿಮಾನಿಗಳು, ಆತ್ಮೀಯ ಸ್ನೇಹಿತರು ಹಾಗೂ ಕಾರ್ಯಕರ್ತರು ಹರಡಿದ್ದರು. ಉತ್ತರ ಕರ್ನಾಟಕ ಜನರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರಿಗೆ ಹೆಗಲಿಗೆ ಹೆಗಲು ಕೊಟ್ಟವರು. ಸ್ವಾತಂತ್ರ್ಯ ಆಂದೋಲನ ಸಂಪೂರ್ಣ ಜಯದಲ್ಲಿ ಉತ್ತರ ಕರ್ನಾಟಕ ಜನರು ಪಾಲು ಇದೆ. ಅಂತೆಯೇ ಗಾಂಧೀಜಿ ಯುಗದ ಪ್ರಥಮ ಮಹಾ ಆಂದೋಲನವಾದ ಅಸಹಕಾರ ಚಳುವಳಿಯ ಉತ್ತರ ಕರ್ನಾಟಕದಲ್ಲಿ ಶತಮಾನದ ನೆನಪನ್ನು ಕೂಡಾ ಈ ವರ್ಷ (೨೦೨೦) ಮಾಡಿಕೊಳ್ಳುತ್ತಿದ್ದೇವೆ. ಆ ನೆನಪಿನಲ್ಲಿ ಗಾಂಧೀ ಹೆಜ್ಜೆಯನ್ನು, ಚಿಂತನೆಯನ್ನೂ ಸ್ಮರಿಸೋಣ. ಗಾಂಧೀಜಿ ಕರ್ನಾಟಕಕ್ಕೆ ಐದನೇ ಭೇಟಿ (೮, ೯, ೧೦, ೧೧ನೇ ನವ್ಹಂಬರ್ ೧೯೨೦ರಲ್ಲಿ) : ಕರ್ನಾಟಕದ ಮೊದಲನೆ ಮುಕ್ಕಾಂ ನಿಪ್ಪಾಣಿ ಎಂದು ಗೊತ್ತಾಗಿತ್ತು. ನಿಪ್ಪಾಣಿ ಅಲ್ಲಿಂದ ಚಿಕ್ಕೋಡಿ, ಹುಕ್ಕೇರಿ, ಸಂಕೇಶ್ವರಗಳ ಪ್ರವಾಸ ಮುಗಿಸಿಕೊಂಡು ಬೆಳಗಾವಿಗೆ ಬಂದರು. ಈ ಬೆಳಗಾವಿ ಭೇಟಿ ಮುಂದಿನ ೧೯೨೪ ಅಧಿವೇಶಕ್ಕೆ ಪೀಠಿಕೆಯಾಯಿತು. ನಿಪ್ಪಾಣಿ ಭೇಟಿ(೮ನೇ ನವೆಂಬರ್ ೧೯೨೦ರಲ್ಲಿ) : ಬೆಂಗಳೂರು ಪ್ರವಾಸದ ಎರಡೂವರೆ ತಿಂಗಳ ನಂತರ ಅಂದರೆ ೮ನೇ ನವೆಂಬರ್ ೧೯೨೦ ರಂದು ನಿಪ್ಪಾಣಿಗೆ ಬಂದ ಗಾಂಧೀಜಿ ಚಿಕ್ಕೋಡಿ, ಹುಕ್ಕೇರಿ ಹಾಗೂ ಸಂಕೇಶ್ವರದ ಮೂಲಕ ಬೆಳಗಾವಿ ತಲುಪಿದರು. ಆಗ್ಗೆ ಬ್ರಾಹ್ಮಣ-ಬ್ರಾಹ್ಮಣೇತರ ಎಂಬ ಭಾವನೆ ಬೆಳೆದು ಅಲ್ಲಲ್ಲಿ ವಾತಾವರಣ ಕದಡಿತ್ತು. ನಿಪ್ಪಾಣಿಯ ಸಾರ್ವಜನಿಕ ಸಭೆಯಲ್ಲಿ ಮಾರುತಿರಾಯ ಎಂಬುವರು ಈ ವಿಷಯವನ್ನು ಎತ್ತಿದರು. ಗಾಂಧೀಜಿ ಈ ಬಗ್ಗೆ ಮಾತನಾಡುತ್ತಾ ಹೇಳಿದ ಅರ್ಥ ಹೀಗಿದೆ: ಇಡೀ ಬ್ರಾಹ್ಮಣ ಸಮಾಜವನ್ನು ದ್ವೇಷಿಸಿ ಅವರಿಂದ ದೂರ ಇರುವುದು ಆತ್ಮಘಾತಕತನ. ನಮ್ಮಲ್ಲಿರುವ ಯಜ್ಞ, ತ್ಯಾಗ, ತಪಸ್ಸು ಮುಂತಾದ ಅಭಿಪ್ರಾಯಗಳೆಲ್ಲ ನಮಗೆ ಬಂದ್ದು ಬ್ರಾಹ್ಮಣರಿಂದಲೇ. ಪ್ರಪಂಚದಲ್ಲಿ ಬ್ರಾಹ್ಮಣರಷ್ಟು ತ್ಯಾಗ ಮಾಡಿದರು ಬೇರೆ ಯಾರೂ ಇಲ್ಲ. ಈ ಮಾತು ಈ ಕಲಿಯುಗದಲ್ಲಿಯೂ ಅನ್ವಯಿಸುವಂತಿದೆ. ಕುಡಿಯುವ ಹಾಲಿನಲ್ಲಿ ಏನಾದರೂ ಕೊಳೆ ಇದ್ದರೆ ಕೂಡಲೇ ಕಾಣುತ್ತದೆ. ಅದೇ ಕೊಳಕು ಪದಾರ್ಥದಲ್ಲಿ ಎಷ್ಟಿದ್ದರೂ ತಿಳಿಯುವುದಿಲ್ಲ. ಆದ್ದರಿಂದ ಅವರಲ್ಲಿ ಏನೇ ಲೋಪದೋಷ ಇದ್ದರೂ ಕೂಡಲೇ ನಮ್ಮ ಗಮನವನ್ನು ಸೆಳೆಯುತ್ತದೆ. ಬ್ರಾಹ್ಮಣರ ಅಲ್ಪ ದೋಷಗಳನ್ನು ದೊಡ್ಡದು ಮಾಡಿ ಹೇಳುವುದೇ ಅವರ ಯೋಗ್ಯತೆಗೆ ಸಾಕ್ಷಿ ಎಂದು ನನ್ನ ಭಾವನೆ. ಬ್ರಾಹ್ಮಣರಷ್ಟು ತಪಸ್ಸು ಮಾಡಿದವರು ಯಾವ ದೇಶದಲ್ಲಿಯೂ ಇಲ್ಲ. ಆದ್ದರಿಂದ ಬ್ರಾಹ್ಮಣರ ತಪ್ಪು ಎಣಿಸುವಾಗ ವಿವೇಕ ಇರಬೇಕು. ಅವರೊಂದಿಗೆ ಅಸಹಕಾರ ಎಂದರೆ ಆತ್ಮನಾಶವೇ. ಜಗತ್ತಿಗೆ ಅವರು ಮಾಡಿದ ಸೇವೆಯನ್ನು ಒಪ್ಪಿಕೊಂಡು ಅವರೊಡನೆ ಸಹಕರಿಸುವುದೇ ಸರಿಯಾದ ದಾರಿ ಇತ್ಯಾದಿಯಾಗಿ ಹೇಳಿದರು ಎಂದು ಶ್ರೀ ಮಹಾದೇವ ದೇಸಾಯಿ ವರದಿ ಮಾಡಿದ್ದಾರೆ. ಬೆಳಗಾವಿ ಭೇಟಿ(೯ನೇ ನವೆಂಬರ್ ೧೯೨೦ರಲ್ಲಿ) : ಗಾಂಧೀಜಿ ನಿಪ್ಪಾಣಿಯಿಂದ ಬೆಳಗಾವಿಗೆ ಬಂದರು. ಮರುದಿವಸ (೦೯-೧೧-೧೯೨೦) ಅಂದಿನ ಸಭೆಯ ವ್ಯವಸ್ಥೆ ವಹಿಸಿಕೊಂಡಿದ್ದವರು ಮಳಗಿ ಗೋವಿಂದರಾಯರು. ೧೫ ಸಾವಿರಕ್ಕೂ ಮೇಲ್ಪಟ್ಟು ಜನ ಆ ಸಭೆಗೆ ಆಗಮಿಸಿದ್ದರು. ಅಷ್ಟು ದೊಡ್ಡ ಸಭೆ ಆವರೆಗೆ ಅಲ್ಲಿ ನಡೆದಿರಲಿಲ್ಲ. ಮೌಲಾನ ಶೌಕತ್ ಅಲಿಯವರಿಗೂ ಮತ್ತು ಗಾಂಧೀಯವರಿಗೂ ಬೆಳ್ಳಿಯ ಕರಂಡಕದಲ್ಲಿ ಮಾನ ಪತ್ರ ಅರ್ಪಿಸಲಾಯಿತು. ಸಭೆಯಲ್ಲಿ ಒಂದು ಸಾವಿರ ರೂಪಾಯಿ ನಿಧಿ ಕೂಡಿತು. ನಂತರ ಅಲ್ಲಿನ ಮಾರುತಿ ಗುಡಿಯಲ್ಲಿ ಮಹಿಳೆಯರ ಸಭೆ ನಡೆಯಿತು. ಬೆಳಗಾವಿಯಲ್ಲಿ ಮಹಿಳೆಯರ ಸಭೆ (೯ನೇ ನವ್ಹಂಬರ್ ೧೯೨೦) : ಮಹಿಳೆಯರ ಸಭೆ ಮಾರುತಿ ಗುಡಿಯಲ್ಲಿ ನಡೆಯಿತು. ಸಭೆಯಲ್ಲಿ ಗಾಂಧೀಜಿ ಹೀಗೆ ಹೇಳಿದರು : ಈ ಗುಡಿಯಲ್ಲಿ ನಿಮ್ಮೆಲ್ಲರ ದರ್ಶನದಿಂದ ನಾನು ಪುನೀತನಾದೆ. ಎಲ್ಲಕ್ಕಿಂತ ನನಗೆ ಹೆಚ್ಚು ಸಂತೋಷ ನನ್ನ ಗೆಳೆಯ ಶೌಕತ್ ಅಲಿಯನ್ನು ನೀವು ನೋಡಬಯಸಿದ್ದು. ಅವರು ದಣಿದು ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ನೀವು ನೋಡಬಯಸಿದ ಕಾರಣ ಆತನಿಗೆ ಹೇಳಿಕಳುಹಿಸಿ ಕರೆದುಕೊಂಡು ಬಂದೆ. ಈ ನಿಮ್ಮ ಸದ್ಭಾವನೆಯಲ್ಲಿ ಭಾರತದ ಗೆಲುವು ಅಡಗಿದೆ. ನಮ್ಮ ಹಿಂದೂ ಹೆಂಗಸರೂ ಮುಸ್ಲಿಂರನ್ನು ಅಣ್ಣ-ತಮ್ಮಂದಿರೆಂದು ಎಲ್ಲಿಯವರೆಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದುರದೃಷ್ಟ ನೀಗದು. ಈ ದೇವಸ್ಥಾನದಲ್ಲಿ ಕುಳಿತು ನಿಮ್ಮ ಮನಸ್ಸನ್ನೂ ನೋಯಿಸಲು ನನಗೆ ಇಷ್ಟವಿಲ್ಲ. ನಾನು ಒಬ್ಬ ಸನಾತನಿ ಹಿಂದೂ. ಬೇರೆ ಯಾವ ಧರ್ಮವನ್ನೂ ತಿರಸ್ಕರಿಸಬಾರದೆಂದು ಅಗೌರವದಿಂದ ಕಾಣಬಾರದೆಂದು ನನ್ನ ಹಿಂದೂಧರ್ಮ ನನಗೆ ಹೇಳಿಕೊಟ್ಟಿದೆ. ಎಲ್ಲಿಯವರೆಗೆ ನಾವು ಇತರ ಮತದವರನ್ನು ಪ್ರೀತಿಸುವುದಿಲ್ಲವೋ ನಮ್ಮ ನೆರೆಹೊರೆಯವರನ್ನೂ ಪ್ರೀತಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶ ಕ್ಷೇಮ ಸಾಧ್ಯವಾಗದು ಎಂದು ನನಗೆ ಗೊತ್ತಾಗಿದೆ. ನಮ್ಮ ರೂಢಿಗಳನ್ನು ಬದಲಾಯಿಸಿ, ಮುಸಲ್ಕಾನರ ಜೊತೆಗೆಯಲ್ಲಿ ಊಟಮಾಡಿ ಅವರನ್ನು ಮದುವೆ ಮಾಡಿಕೊಳ್ಳಿ ಎಂದು ಹೇಳಲು ನಾನು ಇಲ್ಲಿಗೆ ಬಂದಿಲ್ಲ. ಆದರೆ ಪ್ರತಿಯೊಬ್ಬ ಮನುಷ್ಯನನ್ನೂ ಪ್ರೀತಿಸಬೇಕು ಎಂದು ಹೇಳಲು ಬಂದಿದ್ದೇನೆ. ಇತರ ಮತಗಳ ಜನರನ್ನು ಪ್ರೀತಿಸಬೇಕೆಂದು ನಿಮ್ಮ ಮಕ್ಕಳಿಗೆ ಹೇಳಿಕೊಡಲು ಬೇಡುತ್ತೇವೆ. ದೇಶಧ ಆಗುಹೋಗುಗಳನ್ನು ರಾಷ್ಟ್ರೀಯ ವಿದ್ಯಮಾನಗಳನ್ನು ಅರಿತುಕೊಳ್ಳಬೇಕೆಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ. ಇದಕ್ಕಾಗಿ ನೀವು ಉನ್ನತ ವಿದ್ಯಾ ವ್ಯಾಸಂಗ ಮಾಡಬೇಕಾದ್ದಿಲ್ಲ. ದೊಡ್ಡ ಗ್ರಂಥಗಳನ್ನು ಓದಬೇಕಾಗಿದ್ದಿಲ್ಲ. ನಮ್ಮ ಸರಕಾರ ರಾಕ್ಷಸಿ ಸರಕಾರ ಎಂದು ಹೇಳುತ್ತೇನೆ. ಸರಕಾರ ನಮ್ಮ ಮುಸ್ಲಿಂ ಸೋದರರ ಭಾವನೆಯನ್ನು ತುಂಬಾ ಗಾಸಿಗೊಳಿಸಿದೆ. ಪಂಜಾಬಿನಲ್ಲಿ ಸ್ತ್ರೀ-ಪುರುಷರ ಮೇಲೆ, ಮಕ್ಕಳ ಮೇಲೆ ಮಾಡಿದ ಭಯಂಕರ ಅತ್ಯಾಚಾರಗಳನ್ನು ಹೇಳಲು ಸಾಧ್ಯ ಇಲ್ಲ. ಈ ಸರಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳದು. ಪರಿತಾಪ ಪಡೆದು ನಮ್ಮನ್ನೇ ತಿರುಗಿ ಕೇಳುತ್ತದೆ. ಈ ಕ್ರೌರ್ಯವನ್ನೆಲ್ಲ ಮರೆತು ಬಿಡಿ ಎಂದು ಆದ್ದರಿಂದಲೇ ಇದನ್ನು ರಾಕ್ಷಸಿ ಸರಕಾರ ಎನ್ನುತ್ತೇನೆ. ಈಗ ನಮ್ಮ ಜನರು ಎಲ್ಲರೂ ಅಸಹಕಾರ ಮಾಡಬೇಕು. ರಾವಣನೊಂದಿಗೆ ಸೀತೆ ಅಸಹಕರಿಸಲಿಲ್ಲವೇ ? ರಾಮಚಂದ್ರ ಅಸಹಕರಿಸಲಿಲ್ಲವೇ ? ರಾವಣ ಎಷ್ಟು ಪ್ರಲೋಭನಗೊಳಿಸಿದ ಸೀತೆಯನ್ನು ಮತ್ತು ರತ್ನಗಳನ್ನು ಕಳಿಸಿದ ಸೀತೆ ಅದು ಯಾವುದನ್ನೂ ಕಣ್ಣೆತ್ತಿ ಕೂಡ ನೋಡದೆ, ರಾವಣನ ಹಿಡಿತದಿಂದ ತಪಿಸಿಕೊಳ್ಳಲು ಕಟ್ಟು ನಿಟ್ಟಾದ ತಪಶ್ಚರ್ಯೆ ಮಾಡಿದಳು. ಮುಕ್ತಳಾಗುವವರೆಗೆ ಒಳ್ಳೆಯ ಬಟ್ಟೆ ಉಡಲಿಲ್ಲ. ಒಡವೆ ತೊಡಲಿಲ್ಲ. ರಾಮ-ಲಕ್ಷ್ಮಣರಿಬ್ಬರೂ ಎಷ್ಟು ತಪಸ್ಸು ಮಾಡಿದರು. ಅವರ ಇಂದ್ರಿಯ ಸಂಯಮ ಎಷ್ಟು ? ಬರೀ ಹಣ್ಣು ಹಂಪಲು ತಿನ್ನುವ ಬ್ರಹ್ಮಚರ್ಯ ವ್ರತನಿಷ್ಠರಾಗಿ ಕಾಲ ಕಳೆದರಲ್ಲ. ಈ ದಬ್ಬಾಳಿಕೆಯ ಸರಕಾರ ನಮ್ಮ ಬೆನ್ನಿನಮೇಲೆ ಸವಾರಿ ಮಾಡುತ್ತಿರುವವರೆಗೆ ಗಂಡಸಿಗಾಗಲಿ, ಹೆಂಗಸಿಗಾಗಲಿ ಒಳ್ಳೆಯ ಬಟ್ಟೆ ಬರೆ ಉಡಲು ಒಳ್ಳೆಯ ಒಡವೆ ತೊಡಲು ಅಧಿಕಾರವೇ ಇಲ್ಲ. ಭಾರತ ಸ್ವಾತಂತ್ರ್ಯ ಆಗುವವರೆಗೆ, ಮುಸಲ್ಮಾನರ ಗಾಯಗಳು ಮಾಯುವವರೆಗೆ ನಾವೆಲ್ಲರೂ ಫಕೀರರ ಹಾಗೆ ಇರಬೇಕು. ಕಷ್ಟ-ಸಹನೆಯ ಬೇಗೆಯಲ್ಲಿ ನಮ್ಮ ಶ್ರೀಮಂತಿಕೆ ನಮ್ಮ ವಿಲಾಸ ಭೋಗಗಳನ್ನು ಸುಡಬೇಕು. ನಿಮ್ಮ ಸುಖಭೋಗಗಳನ್ನು ಬಿಟ್ಟು ಕಠಿಣ ತಪಶ್ಚರ್ಯೆಯನ್ನು ಅವಲಂಬಿಸಿ ನಿಮ್ಮ ಚಿತ್ತವನ್ನು ಶುದ್ಧವಾಗಿಟ್ಟುಕೊಳ್ಳಬೇಕೆಂದು ವಿನಯದಿಂದ ಪ್ರಾರ್ಥಿಸುತ್ತೇನೆ. ೫೦ ವರ್ಷಗಳ ಹಿಂದೆ ನಮ್ಮ ಎಲ್ಲರೂ ರಾಟಿ ತಿರುಗಿಸುತ್ತಿದ್ದರು. ಕೈನೂಲಿನ ಬಟ್ಟೆ ಉಡುತ್ತಿದ್ದರು. ಹೆಂಗಸರಿಗೆ ನಿಮಗೆ ಹೇಳುತ್ತೇನೆ ಎಂದು ನಾವು ಸ್ವದೇಶಿ ಧರ್ಮವನ್ನು ಕೈಬಿಟ್ಟೆವೋ ಅಂದೇ ನಮ್ಮ ಪತನ ಪ್ರಾರಂಭವಾಯಿತು. ನಾವು ಗುಲಾಮರಾದೆವು. ದೇಶದಲ್ಲಿ ಎಲ್ಲ ಕಡೆಯಲ್ಲಿಯೂ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಉಡಲು ಬಟ್ಟೆ ಇಲ್ಲದೆ ಬೆತ್ತಲೆ ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗಿದೆ. ನೀವು ಪ್ರತಿಯೊಬ್ಬರೂ ದಿನವೂ ಒಂದು ಗಂಟೆ ಹೊತ್ತು ನೂತು ಆ ನೂಲನ್ನು ದೇಶಕ್ಕೆ ದಾನ ಕೊಡಬೇಕು ಎಂದು ಬೇಡುತೇನೆ. ಕೆಲವು ಕಾಲ ನಿಮಗೆ ಸೊಗಸಾದ ಬಟ್ಟೆ ಸಿಗಲಿಕ್ಕಿಲ್ಲ. ಆದರೆ ಸೊಗಸಾದ ನೂಲನ್ನು ನೂಲಲು ಕಲಿತರೆ ಆಗ ಅದು ಸಿಕ್ಕೇ ಸಿಗುತ್ತದೆ. ಆದರೆ ದೇಶ ಗುಲಾಮಗಿರಿಯಲ್ಲಿರುವ ತನಕ ಒಳ್ಳೆ ಬಟ್ಟೆಯನ್ನು ಉಡುವ ಯೋಚನೆಯನ್ನೇ ಮಾಡಬಾರದು. ಒಳ್ಳೆಯ ನೂಲನ್ನು ನೂಲಲು ಸಮಯ
ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳುವಳಿ ಉತ್ತರ ಕರ್ನಾಟಕ ಭೇಟಿಗೆ ಶತಮಾನ Read Post »
ಕಾದಂಬರಿ ಕುರಿತು ಚೋಮನದುಡಿ. ಡಾ.ಶಿವರಾಮ ಕಾರಂತ ಭಾರತೀಯ ಸಾರಸ್ವತ ಲೋಕದಲ್ಲಿ ದಲಿತರು , ಅದರಲ್ಲಿಯೂ ಅಸ್ಪೃಶ್ಯರು ಎದುರಿಸುತಿದ್ದ ಸಾಮಾಜಿಕ ಅನ್ಯಾಯಗಳ ವಿರುದ್ಧ ಶಾಂತವಾಗಿಯೇ ಪ್ರಥಮ ಬಾರಿಗೆ ದನಿಯೆತ್ತಿದ ಸಾಮಾಜಿಕ ಕಾದಂಬರಿ ಹಾಗೂ ಮೊದಲ ದಲಿತ ಕಾದಂಬರಿ ಎಂದು ಗುರುತಿಸಲ್ಪಡುವ ಶಿವರಾಮ ಕಾರಂತರ “ಚೋಮನ ದುಡಿ” ನನ್ನ ನೆಚ್ಚಿನ ಕಾದಂಬರಿ. ಸ್ವಾತಂತ್ರ್ಯದ ತರುವಾಯ ಪ್ರಜಾಪ್ರಭುತ್ತದ ಕೋಟೆಯಲ್ಲಿ ಹಲವಾರು ಸಂವೇದನಶೀಲ ಬರಹಗಾರರು ದಲಿತ ಲೋಕದ ಒಳಹರಿವು ಕುರಿತು ಅನನ್ಯವು, ಅನುಪಮವೂ ಆದ ಕೃತಿಗಳು ಬಂದಿವೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ, ಆಂಗ್ಲರ ದಬ್ಬಾಳಿಕೆಯ ನಡುವೆ ಹಾಗೂ ಜಿಡ್ಡುಗಟ್ಟಿದ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ 1933 ರಲ್ಲಿ ಪ್ರಕಟವಾದ ಈ ಕಾದಂಬರಿ ತುಂಬಾ ವಿಶೇಷ ಹಾಗೂ ಅಪ್ತವೆನಿಸುತ್ತದೆ. ಚೋಮನ ಪಾತ್ರದ ಮುಖಾಂತರ ಇಡೀ ದಲಿತ ಸಂವೇದನೆಯನ್ನು ಕಾರಂತರು ಕಟ್ಟಿ ಕೊಡುವ ಕ್ರಮ ಸಹೃದಯರನ್ನು ಆಕರ್ಷಿಸುತ್ತದೆ. ಕೆಳವರ್ಗ ಹಾಗೂ ಮೇಲ್ವರ್ಗಗಳ ನಡುವಿನ ಸಾಮಾಜಿಕ ಕಂದಕವನ್ನು ಈ ಕಾದಂಬರಿಯು ಅನಾವರಣಗೊಳಿಸುವ ರೀತಿ ಅಪ್ಯಾಯಮಾನವಾಗಿದೆ. ಚೋಮನಲ್ಲಿ ಮೊಳಕೆಯೊಡೆದ ತಾನು ಬೇಸಾಯಗಾರ ಆಗಬೇಕು ಎಂಬ ಉತ್ಕಟ ಸಂಘರ್ಷದ ಸುತ್ತ ಕಾದಂಬರಿಯ ವಸ್ತು ಚಲಿಸುತ್ತಿರುತ್ತದೆ. ಇನ್ನೂ, ಒಬ್ಬ ಓದುಗನಾಗಿ ನನಗೆ ಕಾಡಿದ ; ಕಾಡುತ್ತಿರುವ ಈ ಕಾದಂಬರಿಯ ದೃಶ್ಯವೆಂದರೆ ಅದು ಚೋಮನ ಮಗನ ನೀಲನ ಸಾವು.. ಅಲ್ಲಲ್ಲ..ಕೊಲೆ !! ನೀಲ ನೀರಿನಲ್ಲಿ ಈಜಾಡುತಿದ್ದಾಗ ಕೈ ಸೋತು ಮುಳುಗುತಿರುತ್ತಾನೆ. ಆ ಸಮಯದಲ್ಲಿ ಹಳ್ಳದ ಮೇಲಣ ದಂಡೆಯ ಮೇಲೆ ಎಷ್ಟೋ ಜನ ಮೇಲು ಜಾತಿಯವರು ಬಟ್ಟೆ ಒಗೆಯುತಿದ್ದರು, ಕೆಲವು ಹುಡುಗರು ಅದೇ ನೀರಿನಲ್ಲಿ ಆಡುತಿದ್ದರು. ಆದರೆ ಮುಳುಗುತಿದ್ದವನ ಉಸಿರು ಹೊಲೆಯನಾಗಿದ್ದರಿಂದ ಅವನ ಕೂಗು, ಆಕ್ರಂದನ ಅಲ್ಲಿರುವ ಜಾಣ ಕಿವುಡರಿಗೆ ಕೇಳಿಸದೆ ಹೋಗುತ್ತದೆ. ನಡು ಹಗಲಿನಲ್ಲಿಯೇ ನಮ್ಮ ಸಾಮಾಜಿಕ ಜಾತಿ ವ್ಯವಸ್ಥೆಯು ನೀಲನ ಉಸಿರನ್ನು ನಂದಿಸಿ ಬಿಡುತ್ತದೆ. ಕಾದಂಬರಿಯ ಮತ್ತೊಂದು ಪ್ರಮುಖ ಪಾತ್ರ ಬೆಳ್ಳಿ. ಚೋಮನ ಮಗಳಾದ ಬೆಳ್ಳಿ ಚೋಮನಿಗೆ ತಾಯಿಯಾಗಿ, ತನ್ನ ಸಹೋದರಿಗೆ ಅಮ್ಮನಾಗಿ ಅಕ್ಕರೆಯಿಂದ ಆರೈಕೆ ಮಾಡುವ ಪರಿ ಸ್ತ್ರೀ ಸಂಕುಲದ ಅನನ್ಯತೆಯನ್ನು ಸಾರುತ್ತದೆ. ತನ್ನ ಕುಟುಂಬಕ್ಕಾಗಿ ತೋಟದ ಎಸ್ಟೇಟ್ ಗೆ ಹೋಗುವ, ವಯೋ ಸಹಜವಾದ ಕಾಮಕ್ಕೆ ಬಲಿಯಾಗವುದು ಇವೆಲ್ಲವು ಸಹೃದಯ ಓದುಗರಲ್ಲಿ ಅವಳ ಬಗೆಗೆ ಅನುಕಂಪವನ್ನು ಮೂಡಿಸುತ್ತವೆ. ಕಾದಂಬರಿಯ ಮತ್ತೊಂದು ಮಗ್ಗುಲು ಚೋಮನ ಹೆಂಡ ಮತ್ತು ದುಡಿ. ಅವುಗಳೇ ಅವನ ನಿಜವಾದ ಜೀವನ ಸಂಗಾತಿಗಳು. ಅವನ ಸಂತೋಷವನ್ನು, ಅವನ ದುಃಖವನ್ನೂ ಸಶಕ್ತವಾಗಿ ಪ್ರತಿಬಿಂಬಿಸುವಂತವುಗಳೆಂದರೆ ಅವು ಹೆಂಡ ಮತ್ತು ದುಡಿ. ಕಾದಂಬರಿಯ ಆರಂಭದಲ್ಲಿಯ ‘ದುಡಿ’ ಯ ಸದ್ದು ಚೋಮನ ಸಂತೋಷವನ್ನು ಪ್ರತಿನಿಧಿಸಿದರೆ, ಕೊನೆಯಲ್ಲಿ ಅಪ್ಪಳಿಸುವ ನಿನಾದ ಚೋಮನ ನೋವು, ಹತಾಶೆ, ಅವಮಾನ, ಒಂಟಿತನ ಎಲ್ಲವನ್ನೂ ಮೌನವಾಗಿ ಸಾರುತ್ತ ಅವನನ್ನೇ ಬೀಳ್ಕೊಡುತ್ತವೆ..!! ಈ ಎಲ್ಲ ಕಾರಣಗಳಿಂದಾಗಿಯೇ ಈ ಕಾದಂಬರಿ ಪ್ರಕಟವಾಗಿ ಒಂಬತ್ತು ದಶಕಗಳು ಆಗುತ್ತ ಬಂದರೂ ಇಂದಿಗೂ ಸಂವೇದನಶೀಲ ಸಹೃದಯ ಓದುಗರನ್ನು ಜಿಜ್ಞಾಸೆಗೆ ಹಚ್ಚುತ್ತಿದೆ. ರತ್ನರಾಯ ಮಲ್ಲ
ಹಿರಿಯ ರಂಗಕರ್ಮಿ ಎಚ್.ಜಿ.ಸೋಮಶೇಖರ ಅಗಲಿಕೆ..!
ಹಿರಿಯ ಕಲಾವಿದ ದತ್ತಣ್ಣನವರ ಅಣ್ಣ ಹಿರಿಯ ರಂಗಕರ್ಮಿ ಎಚ್.ಜಿ.ಸೋಮಶೇಖರ ಅಗಲಿಕೆ..! ಹಿರಿಯ ಕಲಾವಿದ ದತ್ತಣ್ಣ ಅವರ ಅಣ್ಣ 86 ವರ್ಷದ ಹೆಚ್.ಜಿ.ಸೋಮಶೇಖರ ರಾವ್ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸೋಮಣ್ಣ ಇಂದು ಕೊನೆಯುಸಿರೆಳೆದಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿದ್ದ ಸೋಮಣ್ಣನವರಿಗೆ ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದವರು. ಇವರು ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕ ಕರ್ತುಗಳ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವಂತಗೊಳಿಸಿದ್ದವರು. ಇವರು ಚಿತ್ರರಂಗವನ್ನು ಪ್ರವೇಶಿಸಿದ್ದು 1981ರಲ್ಲಿ. ಅದು ಟಿ.ಎಸ್.ರಂಗಾರವರ ನಿರ್ದೇಶನದ ‘ಸಾವಿತ್ರಿ’ ಮೂಲಕ. ಖ್ಯಾತ ನಟ ಅನಿಲ್ ಠಕ್ಕರ್ರವರ ಪ್ರತಿದ್ವಂದಿಯಾಗಿ ಇವರು ನೀಡಿದ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ನಂತರ ಸೋಮಣ್ಣ ಅನೇಕ ಚಿತ್ರಗಳಲ್ಲಿ ಭಾವಪ್ರಧಾನ ಮತ್ತು ಹಾಸ್ಯ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದವರು. ರವೀ ನಿರ್ದೇಶನದ ‘ಮಿಥಿಲೆಯ ಸೀತೆಯರು’ ಇವರ ಅಭಿನಯ ಸಾಮರ್ಥ್ಯವನ್ನು ಸರಿಯಾಗಿ ಗುರುತಿಸುವಂತೆ ಮಾಡಿತು. ರವೀಯವರೇ ನಿರ್ದೇಶಿಸಿದ ಇನ್ನೊಂದು ಚಿತ್ರ ‘ಹರಕೆಯ ಕುರಿ’ಯಲ್ಲಿ ಸೋಮಶೇಖರ ರಾವ್ ನೀಡಿದ ಸೊಗಸಾದ ಅಭಿನಯಕ್ಕಾಗಿ 1992 -93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು. ಕೆನರಾ ಬ್ಯಾಂಕ್ನಲ್ಲಿ ಉನ್ನತ ಅಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ ರಾಯರಿಗೆ ಕನ್ನಡ ರಂಗಭೂಮಿಗೆ ತಮ್ಮ ಸೇವೆಯನ್ನು ಸಲ್ಲಿಸುವುದೇ ನಿಜವಾದ ಕಾಯಕವಾಯಿತು. ಸೋಮಶೇಖರ ರಾಯರ ಬದುಕಿನ ಅನುಭವ ಕಥನವು ಪ್ರಕಟವಾಗಿದೆ. ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ರಾಯರು ತಮ್ಮ 86 ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಅವರು ನಮ್ಮನ್ನು ಅಗಲಿದ್ದಾರೆ..! ************************************ ಕೆ.ಶಿವುಲಕ್ಕಣ್ಣವರ
ಹಿರಿಯ ರಂಗಕರ್ಮಿ ಎಚ್.ಜಿ.ಸೋಮಶೇಖರ ಅಗಲಿಕೆ..! Read Post »
ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಕಾವ್ಯ ಎಸ್. ಕಾಡಿದ , ಅರಿವು ವಿಸ್ತಿರಿಸಿದ, ಬದುಕಿನ ಚೆಲುವು ತಿಳಿಸಿದ ಕುವೆಂಪು ನನ್ನನ್ನು ದೀರ್ಘವಾಗಿ ಓದಿಸಿದ ಪ್ರೀತಿಯ ಕಾದಂಬರಿ ಎಂದರೆ ; ಕುವೆಂಪುರವರ “ಮಲೆಗಳಲ್ಲಿ ಮದುಮಗಳು ” ಕಾದಂಬರಿ. 712 ಪುಟಗಳಿರುವ ಈ ಬೃಹತ್ ಕಾದಂಬರಿಯಲ್ಲಿ ಪಾತ್ರವರ್ಗ, ಸ್ಥಳಗಳು, ಜಾತಿ, ಪಂಗಡಗಳ ವಿವರಣೆಗಳ ಸುತ್ತ ಹೆಣೆದುಕೊಳ್ಳುತ್ತಾ ಅಂದಿನ ಮೇಲುಜಾತಿ, ಕೀಳುಜಾತಿಯ ವಿಡಂಬನೆ, ಕೂಲಿ ಆಳುಗಳನ್ನು ನಡೆಸುಕೊಳ್ಳುತ್ತಿ ದ್ದ ಹೀನಾಯ ಸ್ಥಿತಿ, ಬ್ರಾಹ್ಮಣ ವರ್ಗದವರೇ ಶ್ರೇಷ್ಠರೆಂದು, ಉಳಿದ ವರ್ಗದವರನ್ನು ಹೀನಾಯವಾಗಿ ಕಾಣುತ್ತಾ ಅವರ ಮೂಢಾಚಾರಗಳನ್ನು ಜೀವನೋಪಾಯ ಸಂಪಾದನೆಗೆ ಬಂಡವಾಳ ವಾಗಿಸಿದ್ದ ಬ್ರಾಹ್ಮಣರ ಮನೋಧರ್ಮ, ಪುರುಷ ಪ್ರಾಧಾನ್ಯತೆಯ ಸಮಾಜ, ಮಹಿಳೆಯ ಅಸಮಾನತೆ, ಮೂಢನಂಬಿಕೆ, ಬಡತನ, ಕ್ರೈಸ್ತಧರ್ಮದ ಪ್ರಚಾರದ ವಿವಿಧ ರೀತಿಗಳು, ಮಲೆನಾಡಿನ ವರ್ಣನೆ, ಸಹ್ಯಾದ್ರಿಯ ಬೆಟ್ಟಗಳ ವರ್ಣನೆ, ದಟ್ಟ ಕಾಡಿನ ರಮಣೀಯತೆಯ ಭವ್ಯವಾದ ಕಣ್ಣುಕಟ್ಟುವ ವರ್ಣನೆ, ಕಾಡಿನ ಭೀಕರತೆ, ಕೃಷಿ, ತೋಟಗಾರಿಕೆ, ಅಂದಿನ ಆಚಾರ -ವಿಚಾರ, ಹಳ್ಳಿಯ ಸೊಗಡು, ನುರಿತ ಗ್ರಾಮ್ಯ ಭಾಷೆಯ ಸುತ್ತ ಒಂದರೊಳಗೊಂದು ಹೆಣೆದುಕೊಳ್ಳುತ್ತಾ ಸಾಗುತ್ತದೆ. ಕಾದಂಬರಿಯಲ್ಲಿನ ಊರುಗಳಾದ ಸಿಂಬಾವಿ, ಲಕ್ಕುಂದ, ಮೇಗರವಳ್ಳಿ, ಬೆಟ್ಟಳ್ಳಿ, ಕೋಣೂರು, ತೀರ್ಥಹಳ್ಳಿ, ಕಾಗಿನಹಳ್ಳಿ ಹೂವಳ್ಳಿ, ಕಾನೂರು… ಇತ್ಯಾದಿ ಹಾಗೂ ಪ್ರಸ್ತಾಪವಾಗಿರುವ ವ್ಯಕ್ತಿಗಳಾದ ಭರಮೈಹೆಗ್ಗಡೆ, ಜಗ್ಗಮ್ಮ, ಸುಬ್ಬಣ್ಣಹೆಗ್ಗಡೆ, ಮುಕುಂದಯ್ಯ, ಚಿನ್ನಮ್ಮ, ನಾಗತ್ತೆ, ನಾಗಕ್ಕ, ವೆಂಕಟಣ್ಣ ಗೌಡ್ರು, ಲಕ್ಕಮ್ಮ, ತಿಮ್ಮಪ್ಪಹೆಗ್ಗಡೆ, ಮಂಜಮ್ಮ, ಶಂಕರಹೆಗ್ಗಡೆ, ರಂಗಮ್ಮ(ಹುಚ್ಚು ಹೆಗ್ಗಡತ್ತಿ ), ಸೀತಮ್ಮ, ಕಲ್ಲಯ್ಯಗೌಡ್ರು, ದೇವಯ್ಯಗೌಡರು, ದೇವಮ್ಮ, ರಂಗಪ್ಪಗೌಡರು, ದೊಡ್ಡಣ್ಣಹೆಗ್ಗಡೆ, ಧರ್ಮು, ಕಾಡು, ತಿಮ್ಮು, ರಾಮು, ಗುತ್ತಿ, ತಿಮ್ಮಿ, ಐತ, ಪಿಂಚಲೂ, ಬಚ್ಚ, ಕರಿಸಿದ್ದ, ಸಣ್ಣತಿಮ್ಮ,ಚಿಂಕ್ರ, ದೇಯಿ, ಅಕ್ಕಣ್ಣಿ..ಇತ್ಯಾದಿ ಪಾತ್ರಗಳೊಂದಿಗೆ ಕಾದಂಬರಿ ಬೇರೆಯದೇ ಅದ್ಭುತ ಲೋಕಕ್ಕೆ ಕರೆದೊಯ್ಯುತ್ತದೆ. ನನ್ನನ್ನು ಅತಿಯಾಗಿ ಕಾಡಿದ ಪಾತ್ರಗಳೆಂದರೆ ಒಡಯರಿಗೆ ನಿಷ್ಠ ಆಳುಗಳಾದ (ಸ್ವಾಮಿ ನಿಷ್ಠರು )ಗುತ್ತಿ, ಐತ, ಚೊಚ್ಚಲ ಬಸಿರು ಹೊತ್ತಿದ್ದರು, ಮುಕುಂದಯ್ಯ -ಚಿನ್ನಮ್ಮರನ್ನು ಒಂದಾಗಿಸುವುದಕ್ಕಾಗಿ ಸರ್ವಸ್ವವನ್ನು ಲೆಕ್ಕಿಸದೆ ಶ್ರಮವಹಿಸುವ ಪಿಂಚಲು. ಚಿನ್ನಮ್ಮಳಿಗೋಸ್ಕರ ಸೀರುಡಿಕೆಯಾದ ತಾಯಿ ಸ್ವರೂಪಿ ನಾಗಕ್ಕ. ಚಿಂಕ್ರ ಮತ್ತು ದೇಯಿಯ ಮಕ್ಕಳನ್ನು ತನ್ನ ಮಕ್ಕಳಾಗಿ ಪ್ರೀತಿ ತೋರುವ ಅಕ್ಕಣ್ಣಿ. ಸ್ವಾಮಿಭಕ್ತ ಹುಲಿಯ (ಗುತ್ತಿಯ ನಾಯಿ )ತನ್ನ ಒಡೆಯನಿಗಾಗಿ ಭೋರ್ಗರೆದು ಹರಿಯುತ್ತಿರುವ ತುಂಗೆಯನ್ನು ಲೆಕ್ಕಿಸದೆ ನದಿಗೆ ಹಾರಿ ಪ್ರವಾಹದ ವಿರುದ್ಧ ಈಜಿದ ಗುತ್ತಿಯ ಪ್ರೀತಿಯ ಕುನ್ನಿ. ಮುಕುಂದಯ್ಯ -ಚಿನ್ನಮ್ಮರ ಪ್ರೀತಿ, ಪ್ರಲಾಪ, ಅಕ್ಕರೆಯ ನಡವಳಿಕೆ. ವೇಷ -ಭೂಷಣ, ಆಚಾರ -ವಿಚಾರಗಳಲ್ಲಿ ಕ್ರೈಸ್ತಧರ್ಮದ ಅನುಸರಿಸುತ್ತಿದ್ದ ದೇವಯ್ಯಗೌಡರು. ದೊಡ್ಡ ವಿದ್ವಾಂಸರಾಗಿ, ಪವಾಡಪುರುಷರಾಗಿ, ಸಂನ್ಯಾಸಿಯಾಗಿ ಗೋಚರವಾದ ಗಡ್ಡದಯ್ಯ. ಗಡ್ಡದಯ್ಯ ಹೇಳಿದ ಸ್ವಾಮಿ ವಿವೇಕಾನಂದರು ಭರತಖಂಡವನ್ನು ಸಂಚರಿಸಿ, ಭೋದಿಸಿ ಹೊಸದೊಂದು ಯುಗಶಕ್ತಿಯನ್ನು ಉದ್ಬೋದನಗೊಳಿಸುವ ವಿಚಾರ. ಸಾಬರುಗಳ ಮೋಸ -ವಂಚನೆಯ ವ್ಯಾಪಾರ, ಕೊಲೆ -ಸುಲಿಗೆ, ಹೊಡೆತಗಳು. ಕೆಲವೊಂದು ಪಾತ್ರಗಳ ವರ್ತನೆ ನಮ್ಮನ್ನು ಕಲ್ಪನೆಗೂ ಮೀರಿ ಯೋಚನಾಲೋಕಕ್ಕೆ ತಳ್ಳಿ ಮತ್ತೆ ವಾಸ್ತವಕ್ಕೆ ಕರೆತರುತ್ತವೆ. ಈ ಕಾದಂಬರಿಯನ್ನು ಓದುತ್ತಾ ಅದರೊಳಗಿನ ಒಂದು ಪಾತ್ರವಾಗಿ, ಅಲ್ಲಿದ್ದ ಪಾತ್ರಗಳೆಲ್ಲ ನನ್ನ ಸುತ್ತಮುತ್ತಲಿನವರಂತೆ ವಿಜೃಂಭಿಸಿ ಖುಷಿ ದೊರೆತು,ಅನರ್ಘ್ಯ ಅನುಭವ ಮೈ ಹೊಕ್ಕಿತು. ಕುವೆಂಪುರವರ ಕಲ್ಪನೆಯಲ್ಲಿ ಮೂಡಿಬಂದಿರುವ ಪ್ರತಿಯೊಂದು ಪಾತ್ರಗಳು ಅನನ್ಯ ಹಾಗೂ ಅದಮ್ಯವಾಗಿವೆ. ಕುವೆಂಪುರವರ ವಿಸ್ತೃತ ಕಲ್ಪನೆಗೆ ಪ್ರತಿಯೊಂದು ಪಾತ್ರಗಳು ಶರಣಾಗಿವೆ. ಇಂತಹ ಬೃಹತ್ ಕಾದಂಬರಿಯಲ್ಲಿಯ ಅದ್ಭುತವಾದ ಸಾಹಿತ್ಯವನ್ನು ಸವಿಯುವಂತೆ ಮಾಡಿದ ಆತ್ಮಕ್ಕೆ ನಾ ಸದಾ ಚಿರಋಣಿ. ************************************************************ . . ಕಾವ್ಯ ಎಸ್
ಪಾಕ ಕ್ರಾಂತಿ
ಕಾದಂಬರಿ ಕುರಿತು ಪಾಕ ಕ್ರಾಂತಿ ಪೂರ್ಣಚಂದ್ರ ತೇಜಸ್ವಿ ದಿವಂಗತ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ನೀಳ್ಗತೆ *ಪಾಕ್ ಕ್ರಾಂತಿ* ಓದಲು ಸುರುವು ಮಾಡುವದಕ್ಕೂ ಮೊದಲು ನನಗೆ ಅನ್ನಿಸಿದ್ದು ಕ್ರಾಂತಿಯ ಬಗೆಗೆ ಬರೆದಿರುವ ಲೇಖನವಿರಬಹುದು, ಬಹುಶಃ ಪಾಕಿಸ್ತಾನದ ಯಾವುದೋ ಕ್ರಾಂತಿಯದು ಎಂದು. ಆದರೆ ಒಂದೆರಡು ವಾಕ್ಯ ಓದಿದಾಗ ಇದು ಪಾಕ್ ಕ್ರಾಂತಿಯಲ್ಲ ಪಾಕ ಕ್ರಾಂತಿ ಅಂದರೆ ಪಾಕಶಾಸ್ತ್ರದ, ಅಡುಗೆಯಲ್ಲಿ ಮಾಡಿದ ಕ್ರಾಂತಿಯ ಬರಹ ಅಂತ. ನಾಲ್ಕೇ ಜನ ಕಥೆಯಲ್ಲಿ ಬರುತ್ತಾರೆ, ಅದರಲ್ಲಿ ಹೆಂಡತಿ ತವರಿಗೆ ಹೋದಾಗ ಅಡುಗೆಯಲ್ಲಿ ಕ್ರಾಂತಿ ಮಾಡಲು ಹೊರಟ ಮಹಾಶಯರದು ಮುಖ್ಯ ಪಾತ್ರ. ಅರವತ್ನಾಲ್ಕು ಕಲೆಗಳಲ್ಲಿ ಪಾಕಶಾಸ್ತ್ರ ಕೂಡ ಒಂದು ಕಲೆ. ಹೆಣ್ಣುಮಕ್ಕಳು ಅಡುಗೆ ಮನೆಯಲ್ಲಿ ಏನೋ ಮಾಡಿಕೊಂಡಿರುತ್ತಾರೆ ಅಂತ ಉದಾಸೀನ ತಳೆಯುವ ವಿದ್ಯೆ ಇದಲ್ಲವೆಂದು ಈ ಲೇಖನ ಓದಿದ ಮೇಲೆ ಗೊತ್ತಾಗುತ್ತದೆ. ಪುರಾಣದಲ್ಲಿ ಬರುವ ನಳ ಮಹಾರಾಜ, ಭೀಮಸೇನ ಅಡುಗೆಯಲ್ಲಿ ಪ್ರವೀಣರಾಗಿದ್ದರು. ಈ ವಿದ್ಯೆ ಗಂಡಸರಿಗೆ ಒಲಿಯುವದಿಲ್ಲ ಅಂತೆನೂ ಇಲ್ಲ. ಪಾಕಶಾಸ್ತ್ರದಲ್ಲಿ ಏನೂ ಗೊತ್ತಿಲ್ಲದವನ ಹೆಂಡತಿ ಊರಿಗೆ ಹೋದಳು. ಹೋಗುವಾಗ ಎಲ್ಲ ತಿಳಿಸಿಕೊಟ್ಟು. ಹೆಂಡತಿ ಇಲ್ಲದಿದ್ದರೆ ಗಂಡಸು ಉಪವಾಸ ಸಾಯ್ತಾನೇನು ಅನ್ನುವ ಮನೋಭಾವದ ವ್ಯಕ್ತಿ ಅಡುಗೆ ಮಾಡುವಾಗ ಪಡಬಾರದ ಕಷ್ಟ ಎದುರಿಸುವದು ಒಳ್ಳೆಯ ಹಾಸ್ಯಮಯವಾಗಿದೆ. ‘ಹೀಗೆಯೇ ಮಾಡಬೇಕು ಅನ್ನುವ ಕಾಯ್ದೆ ಯಾತಕ್ಕೆ?’ ಈ ಸಂಪ್ರದಾಯ ನಿಷ್ಠಯೇ ನಮ್ಮ ದೇಶ ಮುಂದುವರೆಯದಿರುವುದಕ್ಕೆ ಮುಖ್ಯ ಕಾರಣ ಅನ್ನಿಸಿ ಹೊಸ ಕ್ರಾಂತಿಕಾರಕ ಆಲೋಚನೆಗಳನ್ನು ಅನುಷ್ಠಾನಕ್ಕೆ ತರಲು ಹೊರಟಿದ್ದಾರೆ ನಾಯಕ. ಮೊದಲ ಪ್ರಯತ್ನದಲ್ಲಿಯೇ ಮುಗ್ಗರಿಸುತ್ತಾರೆ. ಹಾಲು ಕಾಯಿಸುವುದು ಎಷ್ಷು ಸರಳ ಮತ್ತು ಸಣ್ಣ ಕೆಲಸ! ಅಂದುಕೊಂಡರೆ….. ಅದು ಉಕ್ಕಿ, ಎಲೆಕ್ಟ್ರಿಕಲ್ ಒಲೆ ಮೇಲೆ ಚೆಲ್ಲಿ, ಒಲೆ ಮತ್ತು ಪಾತ್ರೆ ಸುಟ್ಟು ಕರಕಲಾದಾಗ ಹಾಲು ಒಂದು ಅಪಾಯಕಾರಿ ವಸ್ತು ಅಂತ ನಿರ್ಧರಿಸಲಾಯಿತು. ‘ಹಾಲು ಹೆಂಗಸರನ್ನು ಒಲೆಯ ಬುಡಕ್ಕೆ ಬಂಧಿಸಿರುವ ಮೊದಲ ಸಂಕೋಲೆ’ ಇದರಲ್ಲಿ ಬದಲಾವಣೆ ತರುವ ಕ್ರಾಂತಿಯ ವಿಚಾರ ಇವರದು. ಇನ್ನು ಒಲೆ ರಿಪೇರಿಯಾಗದಿದ್ದರೆ ಶಾರ್ಟಸರ್ಕಿಟ್ ನಿಂದ ಹೆಂಡತಿಗೆ ಬೆಂಕಿ ತಗುಲಿದರೆ ವಧುದಹನದ ಕೇಸಾಗುವುದು ಖಂಡಿತ ಅನ್ನಿಸಿ ಅದರ ಸ್ವಚ್ಚತೆ ಮತ್ತು ರಿಪೇರಿಯಾಗುತ್ತದೆ. ಒಂದು ಹಾಲು ಕಾಯಿಸಲು ಇಷ್ಟಾದರೆ ಅಡುಗೆ ಮಾಡುವುದು ಹೇಗಿರಬೇಡ? ಪ್ರೆಷರ್ ಕುಕರ್ ಗ್ಯಾಸ್ಕೆಟ್ ಮತ್ತು ಸೇಫ್ಟಿವಾಲ್ವ್ ಮಾರುವ ಹುಡುಗಿಗೆ ಕೂಡ ಗೊತ್ತಾಗಿ ಹೋಯಿತು, ಮನೆಯ ಯಜಮಾನಿ ಮನೆಯಲ್ಲಿ ಇಲ್ಲ ಅನ್ನುವುದು. ರಬ್ಬರ್ ಸುಟ್ಟ ವಾಸನೆ ಅನ್ನಕ್ಕೆ ಬಂದು, ಸಾಕಿದ ನಾಯಿ ಆ ಅನ್ನವನ್ನು ತಿನ್ನುವುದು ಬಿಡಿ ಮೂಸಿ ನೋಡಲಿಲ್ಲ. ನಾಯಿಗೆ ಊಟ ಮಾಡಿಸಲೋಸುಗ ಒಣ ಮೀನು ತಂದು ಹುರಿದು ಕೊಟ್ಟರು. ಮೀನಿನ ವಾಸನೆಗೆ ಮನೆಯಲ್ಲ ಇರುವೆಗಳು. ನಾಯಿ ಅನ್ನ ತಿಂತೋ ಇಲ್ಲವೋ ಆದರೆ ಕರೆಂಟ ಇಲ್ಲದಾಗ ಕತ್ತಲಲ್ಲಿ ಸಾರಿನಲ್ಲಿ ಬಿದ್ದ ಇರುವೆಯ ಭಕ್ಷಣೆಯೂ ಇವರಿಂದ ಆಯಿತು. ಇನ್ನು ಇರುವೆ ಕೊಲ್ಲಲು ಸೀಮೆ ಎಣ್ಣೆ ಬೇಕು. ಅದನ್ನು ಕೊಳ್ಳಲು ರೇಶನ್ ಕಾರ್ಡ ಇಲ್ಲ. ಒಟ್ಟಿನಲ್ಲಿ *ಸನ್ಯಾಸಿಯ ಸಂಸಾರ* ಬೆಳಿತಾ ಹೋಯಿತು. ಇದೇನು ಮಹಾವಿದ್ಯೆ ಅನ್ನಿಸಿದ್ದು ಈಗ ಕುತ್ತಿಗೆಗೆ ಬಂತು. ಕೊನೆಗೆ ಡಿಸೇಲ್ ತಂದು ಇರುವೆ ಕೊಲ್ಲುವ ನಿರ್ಧಾರ. ಸೀಮೆ ಎಣ್ಣೆಗಾಗಿ ಹೊರಗೆ ಹೋದಾಗ ಸ್ನೇಹಿನೊಬ್ಬ ಸಿಕ್ಕು ಮತ್ತೋರ್ವನನ್ನು ಪರಿಚಯಿಸುತ್ತಾನೆ. ಆಗುಂತಕ ತನ್ನ ಕೂಸಿಗೆ ಹೆಸರು ಸೂಚಿಸು ಅಂತ ಗಂಟುಬೀಳುತ್ತಾನೆ. ಈ ಭಾಗ ಮುಖ್ಯ ಕಥೆಗೆ ಎಳ್ಳಷ್ಟೂ ಹೊಂದಿಕೆಯಾಗದು. ಅದೇ ಗೆಳೆಯನ ಸಲಹೆಯ ಮೇರೆಗೆ ಒಂದೇ ಸಲಕ್ಕೆ ಎಲ್ಲ ಅಡಿಗೆ ಕುಕರ್ ನಲ್ಲಿ ಮಾಡಬಹುದೆಂದು ಪ್ರಯೋಗಕ್ಕೆ ಅಣಿಯಾಗುತ್ತಾನೆ. ಅಡುಗೆ ಮಾಡುವುದು ಒಂದು ಕಲೆ ಅನ್ನುವ ಹೀರೋಗೆ ಗಣಿತದ ಲೆಕ್ಕಾಚಾರ ತಪ್ಪಿಹೋಯಿತು. ಅದೇ ವೇಳೆಗೆ ಒಬ್ಬ ಉಗ್ರನನ್ನು ಹುಡುಕುತ್ತಾ ಮನೆಯ ಮುಂದೆ ಪೋಲೀಸ್ ಅಧಿಕಾರಿ ಹಾಜರ್. ಕುಕರ್ ಸಿಡಿದ ಶಬ್ದ, ಬಾಂಬ್ ಇಲ್ಲವೆ ಗುಂಡು ಅಂತ ಭಾವಿಸಿ ಪೋಲಿಸ್ ಮನೆಯೊಳಗೆ ಬಂದು ರೆಡ್ ಆಕ್ಸೈಡ್ ನೆಲದ ಮೇಲೆ ಜಾರಿ ಬಿದ್ದ. ಪ್ಯಾಂಟಿಗೆ ಹತ್ತಿದ ಕೆಂಪು ಬಣ್ಣ ಬ್ಲೀಡಿಂಗ್ ಆಗಿ ತೋರಿತು. ಪೋಲಿಸರನ್ನು ಹೊರಗೆ ಹಾಕಲು ಹರಸಾಹಸ ಮಾಡಬೇಕಾಯಿತು. ಇದನ್ನೆಲ್ಲಾ ಓದುತ್ತಿರುವಾಗ ನಗು ನಿಯಂತ್ರಿಸಲು ಆಗುವುದಿಲ್ಲ. ಅಡುಗೆ ಮಾಡುವುದು ಕಲೆ ಅಂತ ಒಬ್ಬ ಪುರುಷನ ಅಭಿಪ್ರಾಯವಿದ್ದರೆ ಅದು ಕರ್ತವ್ಯ, ಅಗತ್ಯತೆ ಅನ್ನುವಳು ಹೆಣ್ಣು. ಬೆಳೆಯುತ್ತಿರುವ ವಿಜ್ಞಾನ ಯುಗದಲ್ಲಿ ಅದು ವಿಜ್ಞಾನವಾಗಿ ಮಾರ್ಪಡುತ್ತಿದೆ. ಏನೇ ಆಗಲಿ ಅಡುಗೆ ಸಾಮಾನ್ಯ ವಿಜ್ಞಾನ, ಎಲ್ಲರಿಗೂ ತಿಳಿದಿರಬೇಕಾದುದು. ಪೇಟೆಯಲ್ಲಿ ತಿನಿಸುಗಳ ಮೇಲೆ ಪ್ರಯೋಗಿಸಿದ ಅದ್ಭುತ ಕಲೆಯನ್ನು ನೋಡಿಯೇ ಕೊಳ್ಳುವವರು ಜಾಸ್ತಿ. ಕಲೆ ಬಾಹ್ಯ ಸೌಂದರ್ಯ, ವಿಜ್ಞಾನ ಆಂತರ್ಯದ ರುಚಿ ಅಂತ ಹೊರಗಿನ ತಿನಿಸುಗಳನ್ನು ಸವಿದವರಿಗೆ ಗೊತ್ತು. ಅದಕ್ಕಾಗಿ ಪಾಕಕ್ರಾಂತಿಗೆ ಜಯವಾಗಲಿ. ಏನೇ ಆಗಲಿ ಪೂರ್ಣಚಂದ್ರ ತೇಜಸ್ವಿಯಂತ ಒಬ್ಬ ಗಂಭೀರ ವಿಜ್ಞಾನಿ ಇಂತಹ ಹಾಸ್ಯಮಯ ಕಥೆ ಬರೆಯುತ್ತಾರೆ ಅನ್ನುವದನ್ನು ನಂಬುವುದು ಕಷ್ಟ. ******************************** ವಿನುತಾ ಹಂಚಿನಮನಿ
‘ಶಾಂತಿ ಮಾನವ’ ಶಾಸ್ತ್ರಿ
ಲೇಖನ ‘ಶಾಂತಿ ಮಾನವ’ ಶಾಸ್ತ್ರಿ ಚವೀಶ್ ಜೈನ್ ಚಪ್ಪರಿಕೆ ಭಾರತ ಎಂಬ ಈ ದೇಶ ಸಾವಿರಾರು ಮಹಾಪುರುಷರನ್ನು ಕಂಡಿದೆ. ಅಂತಹ ಮಹಾನ್ ನಾಯಕರನ್ನೂ ಒಪ್ಪಿಕೊಳ್ಳುವ ಮತ್ತು ತಿರಸ್ಕರಿಸುವ ಎರಡೂ ವರ್ಗಗಳು ಸಾಮಾನ್ಯವಾಗಿ ಸಮಾಜದಲ್ಲಿ ಇರುತ್ತವೆ. ಆದರೆ ಕೆಲವು ವ್ಯಕ್ತಿಗಳಿದ್ದಾರೆ, ಅವರನ್ನು ಎಲ್ಲಾ ವರ್ಗದವರು, ಎಲ್ಲಾ ಜಾತಿ – ಮತದವರು, ಬಲಪಂಥೀಯರು, ಎಡಪಂಥೀಯರು, ಎಲ್ಲಾ ಪಕ್ಷಗಳು ಒಟ್ಟಾರೆ ಸಮಸ್ತ ದೇಶ ಒಪ್ಪಿಕೊಳ್ಳುತ್ತದೆ ಮತ್ತು ಗೌರವಿಸುತ್ತೆ. ಅಂತಹ ಮಹಾತ್ಮರಲ್ಲಿ ಅಗ್ರಪಂಕ್ತಿಯಲ್ಲಿ ನಿಂತುಕೊಳ್ಳುವವರು, ಈ ದೇಶದ ಶಾಂತಿ ಮಾನವ ಲಾಲ್ ಬಹದ್ದೂರ್ ಶಾಸ್ತ್ರಿ. ಅಂತಹ ನಾಯಕರು ಇತಿಹಾಸದ ಎಲ್ಲಾ ಪುಟಗಳಲ್ಲಿ ಆವರಿಸಿಕೊಂಡಿರುವಾಗ, ವಿಪರ್ಯಾಸ ಎಂಬಂತೆ ಶಾಸ್ತ್ರೀಜೀ ಮಾತ್ರ ಇತಿಹಾಸ ಪುಟದಲ್ಲಿ ಮರೆಯಾಗಿದ್ದಾರೆ. ಯಾವ ಇತಿಹಾಸದಲ್ಲೂ ಇಂತಹ ಮೇರು ನಾಯಕನನ್ನು ಅಷ್ಟಾಗಿ ಓದುವುದಿಲ್ಲ. ಆದ್ದರಿಂದ ಈ ಸಂದರ್ಭದಲ್ಲಿ ಶಾಸ್ತ್ರೀಜೀಯವರ ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ. ಇವರು ಹುಟ್ಟಿದ್ದು ಅಕ್ಟೋಬರ್ 2, 1904 ರಂದು ಉತ್ತರ ಪ್ರದೇಶದ ಮೊಘಲ್ ಸರಾಯಿಯಲ್ಲಿ. ಅಂದರೆ ರಾಷ್ಟಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದೆ ಇವರ ಜನ್ಮದಿನ. ಆದರೆ ಸಹಜವಾಗಿ ಅಕ್ಟೋಬರ್ 2 ಅಂದಾಕ್ಷಣ ಗಾಂಧೀಜಿ ಮತ್ತು ಗಾಂಧಿ ಜಯಂತಿ ಮಾತ್ರ ನೆನಪಾಗುತ್ತದೆ ವಿನಃ ಶಾಸ್ತ್ರೀಜೀ ನೆನಪಾಗುವುದಿಲ್ಲ. ಹಾಗಂತ ಗಾಂಧಿ ಜಯಂತಿಯ ನೆಪದಲ್ಲಿ ಶಾಸ್ತ್ರೀಯನ್ನು ಮರೆಯುತ್ತೇವೆ ಅಥವಾ ಗಾಂಧಿ ಹೆಸರಲ್ಲಿ ಶಾಸ್ತ್ರಿ ಮರೆಯಾಗಿದ್ದಾರೆ ಎಂದು ಅರ್ಥವಲ್ಲ. ಬಹುಶಃ ಬೇರೆ ಯಾವುದಾದರೂ ದಿನ ಶಾಸ್ತ್ರೀ ಹುಟ್ಟಿದ್ದರೆ ಅವರ ಜನ್ಮಜಯಂತಿಯೇ ಇರುತ್ತಿರಲಿಲ್ಲವೆನೋ! ಆದರೆ ಈ ದಿನ ಜನಿಸಿದ್ದಕ್ಕೆ ಗಾಂಧಿ ಜೊತೆಗೆ ಇವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸುತ್ತೇವೆ. ಇವರು ಒಂದು ಸಾಮಾನ್ಯ ಬಡ ಕುಟುಂಬದಿಂದ ಬಂದಂತವರು. ಇವರ ತಂದೆ ಶಿಕ್ಷಕರಾಗಿದ್ದರು, ಆದರೆ ಶಾಸ್ತ್ರಿ ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ನಂತರ ಚಿಕ್ಕಪ್ಪನ ಮನೆಯಿಂದ ಶಾಲೆಗೆ ಹೋಗುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರಪ್ರೇಮ ಮೈಗೂಡಿಸಿಕೊಂಡಿದ್ದ ಇವರು 16ನೇ ವಯಸ್ಸಿಗೆ ಶಿಕ್ಷಣ ನಿಲ್ಲಿಸಿ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಭಾಗಿಯಾದರು. ನಂತರ ರಾಷ್ಟ್ರೀಯ ಹೋರಾಟಗಳಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡು, ಹಲವಾರು ಬಾರಿ ಸೆರೆವಾಸ ಅನುಭವಿಸಿದರು. ಸ್ವಾತಂತ್ರ್ಯ ನಂತರ ಉತ್ತರ ಪ್ರದೇಶ ಸರ್ಕಾರದಲ್ಲಿ ಪೋಲೀಸ್ ಖಾತೆಯನ್ನು ವಹಿಸಿಕೊಂಡರು. 1951ರಲ್ಲಿ ಲೋಕಸಭೆಗೆ ಆಯ್ಕೆಯಾಗಿ ರೈಲ್ವೆ ಖಾತೆಯನ್ನು ವಹಿಸಿಕೊಂಡರು. ಆದರೆ ಅವರ ಅವಧಿಯಲ್ಲಿ ಆದ ಒಂದು ರೈಲು ಅಪಘಾತಕ್ಕೆ ವೈಯಕ್ತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿದರು. ಹತ್ತಾರು ಹಗರಣ, ಭ್ರಷ್ಟಾಚಾರ ಪ್ರಕರಣಗಳಿದ್ದರು ಅಧಿಕಾರದಲ್ಲೇ ಮುಂದುವರೆಯುವ ಇವತ್ತಿನ ಅನೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಸ್ತ್ರೀಜೀಯವರ ವ್ಯಕ್ತಿತ್ವ ಅರಿಯಬೇಕು. ನಂತರ ಮತ್ತೆ ಕ್ಯಾಬಿನೆಟ್ ಪ್ರವೇಶಿಸಿದ ಇವರು ಸಾರಿಗೆ ಮಂತ್ರಿಯಾಗಿ, ನಂತರ 1961ರಲ್ಲಿ ಗೃಹ ಸಚಿವರಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ನೆಹರು ನಿಧನದ ನಂತರ 1964 ಜೂನ್ 9 ರಂದು ಭಾರತದ 2ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಪ್ರಧಾನಿಯಾಗಿ 17 ತಿಂಗಳ ಅವಧಿಯಲ್ಲಿ ಅವರು ದೇಶಕ್ಕೆ ಮಾಡಿದ ಸೇವೆ ಅಪೂರ್ವವಾದುದು. ಅವರು ಪ್ರಧಾನಿಯಾದಾಗಲು ಕೂಡ ಅವರ ಬಳಿ ಸ್ವಂತ ಕಾರಿರಲಿಲ್ಲ. ನಂತರ ಮನೆಯವರ ಒತ್ತಾಯದ ಮೇರೆಗೆ 12,000 ರೂಪಾಯಿಗಳ ಫಿಯಟ್ ಕಾರೊಂದನ್ನು ಖರೀದಿಸಿದರು. ಆಗ ಅವರ ಬಳಿ ಅಷ್ಟು ಹಣವಿಲ್ಲದ ಕಾರಣ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 5,000 ರೂಪಾಯಿಗಳ ಸಾಲವನ್ನು ಪಡೆದುಕೊಂಡರು. ಶಾಸ್ತ್ರೀ ಸಾವಿನ ನಂತರ ಬ್ಯಾಂಕ್ ಅವರ ಸಾಲವನ್ನು ಮನ್ನಾ ಮಾಡಿತು. ಆದರೆ ಅವರ ಪತ್ನಿ ಲಲಿತಾ ಶಾಸ್ತ್ರಿ ಸಾಲವನ್ನು ಮರುಪಾವತಿಸಿದರು. ಇದು ಈ ದೇಶ ಮತ್ತು ಶಾಸ್ತ್ರೀ ಕುಟುಂಬದ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿ. ನಿಜವಾಗಿಯೂ ಸ್ವಾಭಿಮಾನ ಎಂಬ ಪದಕ್ಕೆ ಅರ್ಥವೇ ಶಾಸ್ತ್ರೀಜೀ. ಸವಾಲುಗಳಿಂದ ಕೂಡಿದ್ದ ಅಂತಹ ಕಠಿಣ ಸಂದರ್ಭದಲ್ಲೂ ದೇಶದ ಗೌರವ ಉಳಿಸಿದ್ದರು. ಸ್ವಾವಲಂಬಿ ರಾಷ್ಟವನ್ನು ಕಟ್ಟುವ ಉದ್ದೇಶ ಅವರದ್ದು. ಇವತ್ತು ನಾವು ‘ಆತ್ಮ ನಿರ್ಭರ ಭಾರತ’ ಎಂದು ಹೇಳುತ್ತಿದ್ದೇವಲ್ಲ, ಈ ಚಿಂತನೆಯನ್ನು ಶಾಸ್ತ್ರೀಜೀ ಆವತ್ತೇ ಮಾಡಿದ್ದರು. ಕೈಗಾರಿಕೆ, ಕೃಷಿ, ಸೈನ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ‘ಕ್ಷೀರ ಕ್ರಾಂತಿ’ ಹೆಸರಿನಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಲಿನ ಉತ್ಪಾದನೆಗೆ ಕಾರಣರಾದರು. ಶಾಸ್ತ್ರೀ ಜೀವನದುದ್ದಕ್ಕೂ ಸರಳತೆ ಎಂಬ ಅಂಶವನ್ನು ಎಲ್ಲೂ ಮರೆಯಲಿಲ್ಲ. ಯಾವತ್ತೂ VVIP ಎಂಬ ಕಾರ್ಡನ್ನು ತೋರಿಸಲಿಲ್ಲ. ಮಗನನ್ನು ಕಾಲೇಜಿಗೆ ಸೇರಿಸುವಾಗ ಎಲ್ಲರಂತೆ ತಾವು ಸಹ ಸರತಿ ಸಾಲಿನಲ್ಲಿ ನಿಂತಿರುತ್ತಿದ್ದರು. ದೇಶದ ಸಾಮಾನ್ಯ ಜನರೊಂದಿಗೆ ಅತಿಸಾಮಾನ್ಯರಾಗಿ ಶಾಸ್ತ್ರೀ ಬದುಕುತ್ತಿದ್ದರು. ಶಾಸ್ತ್ರೀಜೀ ಪ್ರಧಾನಿಯಾದಾಗ ದೇಶದಲ್ಲಿ ನೂರಾರು ಸಮಸ್ಯೆಗಳಿದ್ದವು. ಅದನ್ನು ಅತ್ಯಂತ ಸಮರ್ಥವಾಗಿ ಎದುರಿಸಿದರು. ಒಂದೆಡೆ ಬಡತನ ಮತ್ತೊಂದೆಡೆ ಪಾಕಿಸ್ತಾನದ ಉಪಟಳ. ಪಾಕಿಸ್ತಾನ ಮತ್ತೆ 1965ರಲ್ಲಿ ಭಾರತದ ಮೇಲೆ ಯುದ್ಧ ಸಾರಿತು. ಕಠಿಣ ಪರಿಸ್ಥಿತಿಯಲ್ಲಿ ದೇಶದ ಸೈನಿಕರ ಜೊತೆ ನಿಂತ ಶಾಸ್ತ್ರೀ “ಜೈ ಜವಾನ್, ಜೈ ಕಿಸಾನ್” ಘೋಷಣೆ ಮೊಳಗಿಸಿದರು. ಇದು ಭಾರತೀಯ ಸೈನಿಕರಲ್ಲಿ ಹೊಸ ಉತ್ಸಾಹ ತುಂಬಿತು. ಪಾಕಿಸ್ತಾನದ ದಾಳಿಗೆ ಪ್ರತಿದಾಳಿ ಮಾಡಲು ಭಾರತೀಯ ಸೈನ್ಯಕ್ಕೆ ಎಲ್ಲಾ ರೀತಿಯ ಸ್ವಾತಂತ್ರ್ಯ ಕೊಟ್ಟರು. ಆವಾಗಲೇ ಈ ದೇಶಕ್ಕೆ ಮತ್ತು ಹೊರ ಜಗತ್ತಿಗೆ ಶಾಂತಿ ಮಾನವನ ದಿಟ್ಟತನದ ಅರಿವಾಗಿದ್ದು. ಶಾಂತಿಗೆ ಭಂಗವಾದಾಗ ಶಾಸ್ತ್ರಿ ಸುಮ್ಮನೆ ಕೂರಲಿಲ್ಲ. ಬಹುಶಃ ಶಾಸ್ತ್ರಿ, ‘ಅಹಿಂಸೆ’ ಎಂಬ ಪದದ ಸ್ಪಷ್ಟವಾದ ಅರ್ಥವನ್ನು ಅರಿತಿದ್ದರು. ಅಹಿಂಸೆ ಎಂದರೆ ‘ಹಿಂಸಾ ನ ಕರೋ, ಹಿಂಸಾ ನ ಸಹೋ’ ಅಂದರೆ ಹಿಂಸೆಯನ್ನು ಮಾಡಬಾರದು ಮತ್ತು ಹಿಂಸೆಯನ್ನು ಸಹಿಸಿಕೊಳ್ಳಬಾರದು ಎಂದು. ಭಾರತದ ಈ ಅಹಿಂಸಾ ಸಿದ್ಧಾಂತವನ್ನು ಜಗತ್ತಿಗೆ ತೋರಿಸಿದರು. ಪರಿಣಾಮ ಭಾರತೀಯ ಸೈನ್ಯ ಲಾಹೋರ್ ವರೆಗೂ ನುಗ್ಗಿ ಪಾಕಿಸ್ತಾನಕ್ಕೆ ಉತ್ತರ ನೀಡಿತ್ತು. ಆದರೆ ನಾವು ಈ ಯುದ್ಧದ ಗೆಲುವನ್ನು ಮರೆತೇಬಿಟ್ಟಿದ್ದೇವೆ. ಯುದ್ಧದ ಮಧ್ಯೆ ಅಮೇರಿಕಾ ಭಾರತಕ್ಕೆ ಯುದ್ಧವನ್ನು ನಿಲ್ಲಿಸುವಂತೆ ಒತ್ತಾಯ ಮಾಡಿತು. ಯುದ್ಧ ಮುಂದುವರೆಸಿದರೆ, ಭಾರತಕ್ಕೆ ಗೋಧಿಯ ರಫ್ತನ್ನು ನಿಲ್ಲಿಸುವುದಾಗಿ ಹೇಳಿತು. ಅದರೆ ಶಾಸ್ತ್ರೀ ಅಮೇರಿಕಾದ ಬೆದರಿಕೆಗೆ ಬಗ್ಗಲಿಲ್ಲ. ನಿಮ್ಮ ದೇಶ ಕಳಿಸುವ ಗೋಧಿಯನ್ನು ನಮ್ಮ ದೇಶದಲ್ಲಿ ಪ್ರಾಣಿಗಳು ಮೂಸಿ ನೋಡುವುದಿಲ್ಲ ಎಂದು ಉತ್ತರಿಸಿದರು. ಶಾಸ್ತ್ರಿ ದೇಶಕ್ಕೋಸ್ಕರ ಪ್ರತಿನಿತ್ಯ ತಮ್ಮ ರಾತ್ರಿ ಊಟವನ್ನು ತ್ಯಜಿಸಿದರು. ನಂತರ ದೇಶದ ಜನರಲ್ಲಿ ಪ್ರತಿ ಸೋಮವಾರ ರಾತ್ರಿಯ ಊಟವನ್ನು ತ್ಯಜಿಸುವಂತೆ ಮನವಿ ಮಾಡಿಕೊಂಡರು. ಇದು ‘ಸೋಮವಾರದ ಉಪವಾಸ’ ಎಂದು ಪ್ರಸಿದ್ಧವಾಯಿತು. ದೇಶದ ಜನ ಶಾಸ್ತ್ರೀ ಮಾತಿಗೆ ಸಹಕರಿಸಿದರು. ಭಾರತೀಯ ಸೈನ್ಯ ಲಾಹೋರ್ ಗೆ ನುಗ್ಗುತ್ತಿದ್ದಂತೆ ರಷ್ಯಾದ ನೇತ್ರತ್ವದಲ್ಲಿ, ತಾಷ್ಕೆಂಟ್ ನಲ್ಲಿ ಒಪ್ಪಂದ ಏರ್ಪಡಿಸಲಾಯಿತು. ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಪಾಕ್ ಪ್ರಧಾನಿ ಅಯ್ಯುಬ್ ಖಾನ್ ಒಪ್ಪಂದಕ್ಕೆ ಸಹಿ ಹಾಕಿದರು. ಮೊದಲೇ ತಯಾರಾಗಿದ್ದ ಒಡಂಬಡಿಕೆಗಳನ್ನು ನೋಡಿ ಶಾಸ್ತ್ರೀಜೀ ಸಹಿ ಹಾಕಲು ನಿರಾಕರಿಸಿದರೂ ಕೂಡ, ನಂತರ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಭಾರತೀಯ ಸೈನ್ಯ ಪ್ರಾಣ ಪಣಕ್ಕಿಟ್ಟು ಹೋರಾಡಿ ಗೆದ್ದ ಭಾಗವನ್ನೇ ಬಿಟ್ಟುಕೊಡಬೇಕಾಗಿ ಬಂತು. ಭಾರತೀಯ ಸೈನ್ಯ ಯುದ್ಧವನ್ನು ಗೆದ್ದರೂ ಕೂಡ, ಗೆಲುವನ್ನು ಉಳಿಸಿಕೊಳ್ಳಲಾಗಲಿಲ್ಲ. ಅದೇ ರಾತ್ರಿ, 11 ಜನವರಿ 1966 ರಂದು ತಾಷ್ಕೆಂಟ್ ನಲ್ಲೇ ಲಾಲ್ ಬಹಾದ್ದೂರ್ ಶಾಸ್ತ್ರಿ ಅಸ್ತಂಗತರಾದರು. ಸರ್ಕಾರಿ ಮೂಲಗಳು ಶಾಸ್ತ್ರಿ ಹೃದಯಾಘಾತದಿಂದ ನಿಧನರಾದರು ಎಂದು ಹೇಳಿದವು. ಆದರೆ ದೇಶದ ಜನ ಮತ್ತು ಶಾಸ್ತ್ರಿ ಕುಟುಂಬ ಅದನ್ನು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ನೇತಾಜಿಯಂತೆ ಶಾಸ್ತ್ರೀಜೀಯವರ ಸಾವು ನಿಗೂಢವಾಯಿತು. ಸರ್ಕಾರ ಈ ಕುರಿತಂತೆ ಸರಿಯಾದ ತನಿಖೆ ನಡೆಸಲೇ ಇಲ್ಲ. ಖ್ಯಾತ ಲೇಖಕ ಅನೂಜ್ ಧರ್ ‘YOUR PRIME MINISTER IS DEAD’ ಎಂಬ ತಮ್ಮ ಪುಸ್ತಕದಲ್ಲಿ ಶಾಸ್ತ್ರೀ ಸಾವಿನ ಸಂಶಯಗಳ ಕುರಿತಂತೆ ಅದ್ಭುತವಾಗಿ ವಿಶ್ಲೇಷಣೆ ಮಾಡಿದ್ದಾರೆ. ಒಟ್ಟಾರೆ ದೇಶ ಸತ್ಯವನ್ನು ಅರಿಯಬೇಕಿದೆ. ಶಾಸ್ತ್ರೀಜೀ ಅಂತ್ಯಕ್ಕೆ ನ್ಯಾಯ ಸಿಗಬೇಕಿದೆ. ಆದರೆ ಲಾಲ್ ಬಹದ್ದೂರ್ ಶಾಸ್ತ್ರೀಜೀಯವರ 17 ತಿಂಗಳ ಅಧಿಕಾರ, ಅವರ ವ್ಯಕ್ತಿತ್ವ, ಈ ದೇಶ ಎಂದಿಗೂ ಸ್ಮರಿಸಿಕೊಳ್ಳುವಂತದ್ದು. ************************************
‘ಶಾಂತಿ ಮಾನವ’ ಶಾಸ್ತ್ರಿ Read Post »
ಕನ್ನಡ ಕಂದ
ಮಕ್ಕಳ ಪದ್ಯ ಕನ್ನಡ ಕಂದ ಮಲಿಕಜಾನ ಶೇಖ . ಕನ್ನಡ ನಾಡಿನ ಕಂದನು ನಾನುಕನ್ನಡವನ್ನೆ ಬೆಳಗುವೇನು..ಅ,ಆ,ಇ,ಈ ಎನ್ನುತ್ತಾ ನಾನುಕನ್ನಡವನ್ನೆ ಕಲಿಯುವೇನು. ಸಹ್ಯಾದ್ರಿಯ ಗಿರಿಕಂದರಗಳಕಾವೇರಿ ಕೃಷ್ಣೆ ತುಂಗೆ ತೀರದಲಿಶ್ರೀಗಂಧ ವನ್ಯಸಿರಿ ನಾಡಿನಲಿಸೌಗಂಧ ತುಂಬಿದ ಮಣ್ಣಿನಲಿಎಂದಿಗೂ ನಾನು ಮೆರೆಯುವೇನು.. ಹರಿಹರ ಕೃಷ್ಣರು ಕಟ್ಟಿದಚಾಲೂಕ್ಯ ಕದಂಬರು ಆಳಿದಚೆನ್ನಮ್ಮಾ ಓಬವ್ವಾ ಹೋರಾಡಿದವೀರರು ಧೀರರು ಮೆರೆದಿಹಶೌರ್ಯದ ಇತಿಹಾಸ ಕೇಳುವೇನು.. ಶರಣರು ದಾಸರು ಬದುಕಿದಸೂಫಿ ಸಂತರು ಬೆಳಗಿದಸತ್ಯ ಶಾಂತಿ ನಿತ್ಯ ನೀತಿಐಕ್ಯ ಮಂತ್ರ ಸಾರಿದಪಾವನ ನೆಲಕ್ಕೆ ನಮಿಸುವೇನು. ರನ್ನ ಪಂಪರ ಅಪಾರ ಪಾಂಡಿತ್ಯಕುವೆಂಪು ಬೇಂದ್ರೆಯ ಅಗಾಧ ಜ್ಞಾನದಿಜೆ.ಪಿ ಬಿಚಿ ಗಿರೀಶ ಕಂಬಾರರಭವ್ಯದ ಅಕ್ಷರ ಪಾಠವನುಕೇಳುತ ಓದುತ ನಲಿಯುವೇನು. ಎಲ್ಲೆ ಇರಲಿ ಹೇಗೆ ಇರಲಿಯಾರೆ ಇರಲಿ ಏನೇ ಬರಲಿಕನ್ನಡ ಬಾವುಟ ಹಾರಿಸುವೆಕನ್ನಡ ಡಿಂಡಿಂ ಬಾರಿಸುತಾಕನ್ನಡ ತೇರನು ಎಳೆಯು **************************









