ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ಅವಳ ತನ್ಮಯತೆಗೆ ಸ್ವಲ್ಪವೂ ಭಂಗ ಬಾರದಿರಲಿ ಕಡಲು ಅಷ್ಟೊಂದು ಜೋರಾಗಿ ಮೊರೆಯದಿರಲಿ ಚರಿತ್ರೆಯಲಿ ಕಾಲು ಹೂತು ಕೂತಿದ್ದಾಳೆ ಅವಳು ವಿವಶತೆಯಲ್ಲೂ ಮುಂಗುರುಳು ನಲುಗದೆ ಇರಲಿ ಮಧುಶಾಲೆಯೇಕೆ ಹೀಗೆ ಪಾಳು ಬಿದ್ದಿದೆ ಗೆಳೆಯ ಒಡಲ ತಣಿಸುವ ಮಧುಭಾಂಡ ಬರಿದಾಗದಿರಲಿ ಅದೆಂಥ ಕ್ಷುಬ್ಧತೆಯಲ್ಲಿ ದಾರಿ ಸವೆಸುವೆ ನೀನು ಸೈರಿಸಿ ಪಾಲಿಸುವ ಮಡಿಲು ಮುಕ್ಕಾಗದಿರಲಿ ಎದೆಗುದಿಗೇಕೆ ಬಿಡದೆ ತುಪ್ಪ ಸುರಿಯುವೆ ‘ಜಂಗಮ’ ತಡೆ,ಕಾಪಿಡುವ ರೆಪ್ಪೆ ನಡುವೆ ಬದುಕು ವಿಶ್ರಮಿಸಲಿ ********









