ಕಾವ್ಯಯಾನ
ಆರೋಪಿ!! ಚೈತ್ರ ಶಿವಯೋಗಿಮಠ ಆರೋಪಿ!! ಕಾಲನ ವಿರುದ್ಧ ಸಿಕ್ಕಾಪಟ್ಟೆ ಆರೋಪಗಳಿವೆ!! ಅವನು ಸರಿಯಿಲ್ಲ, ಕೆಟ್ಟು ಹೋಗಿದ್ದಾನೆ, ಮೋಸ ಮಾಡಿದ್ದಾನೆ… ಹೀಗೇ ಓಡುತ್ತಲೇ ಇದ್ದಾನೆ ಅವ, ಆರೋಪದ ಪಟ್ಟಿಯಿಂದ ತಪ್ಪಿಸಿಕೊಳ್ಳಲು! ಅರೆ, ಯಾರೋ ಮೊಕದ್ದಮೆ ಹೂಡೇ ಬಿಟ್ಟಿದ್ದಾರೆ… ಓಡುತ್ತಿದ್ದಾನೆ ಅಂತ!! ಇದೆಂತ ಸಂಕಷ್ಟ ಬಂದೊದಗಿತು!! ಮತ್ತಷ್ಟು ಗತಿ ಹೆಚ್ಚಿಸಿದ ಓಡುವವನ ಕಾಲ ಅಡಿಯಲ್ಲಿ ಸಿಕ್ಕು ನರಳುತ್ತಿದ್ದಾರೆ ಕೆಲರು ಮತ್ತೊಂದಷ್ಟು ಅವನ ತೆಕ್ಕೆಯಲ್ಲಿನ ಸಂಪತ್ತನ್ನ ಸಿಕ್ಕಷ್ಟು ಬಾಚಿಕೊಳ್ಳಲೆತ್ನಿಸಿದ್ದಾರೆ.. ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ!! ಆದರೆ ಆರೋಪಿಯನ್ನ ಮಾತ್ರ ಇನ್ನೂ ಬಂಧಿಸಲಾಗಿಲ್ಲ! *********************









