ಕಾವ್ಯಯಾನ
ಮೂಖವೇದನೆ ಪ್ಯಾರಿಸುತ ಮತ್ತದೇ ಮಾತು ನನ್ನನ್ನು ಮೂಗನೆಂದೇನಿಸಿದೆ ನಿನ್ನ ಕಾಲಗೆಜ್ಜೆ ಮೌನ ತಾಳಿರುವಾಗ ಪಿಸುಮಾತಿನ ಧ್ವನಿಯು ನನ್ನೆದೆಯ ಇಣುಕದಿರುವಾಗ ಗಾಳಿಯೊಳಗೆ ಪ್ರೀತಿಗಂಧವಿಲ್ಲ ಮಾತಿನ ನಡುವೆ ಪ್ರೇಮ ಸೆಳೆತವಿಲ್ಲ ಕಣ್ಣೋಟದಲ್ಲಿ ಹರಿತಮೋಹವಿಲ್ಲ ಹೂವಿನ ಸುತ್ತ ಮಕರಂಧ ಹೀರುವ ದುಂಬಿಯಂತೆ ಅಲೆಯುತ್ತಿವನನ್ನು ಮತ್ತದೇ ಮಾತು ಮೂಗನಾಗಿಸಿದೆ ಅದೆಲ್ಲವೂ ಇಲ್ಲದ ಮೇಲೆ ಮೂಗನಾಗದೆ ಮಾತಿನಿಂದ ಹೇಗೆ ಸೆಳೆಯಲಿ ನೀ ಉಟ್ಟ ಸೀರೆ ಸೆರಗಿನ ಅಂಚಿನಲ್ಲಿದ್ದ ನನ್ನೆಲ್ಲ ಕನಸುಗಳ ಚಿತ್ತಾರಗಳು ಅವಿತುಕೊಂಡಿವೆ ಮುಸ್ಸಂಜೆಯಲಿ ಮಿಂಚುಹುಳುವಿನಂತೆ ಮಿಂಚುತಿದ್ದ ನಿನ್ನ ಚಲುವೆಲ್ಲ ಸಪ್ಪೆಯಾಗಿದೆ ಈ ಪುಟ್ಟ ಹೃದಯದೊಳಗಿದ್ದ ನಿನ್ನ ಮಧುರದನಿಯ ಹರ್ಷೋಘಾರವೂ ನನ್ನಂತೆ ನಿಶ್ಚಲವಾಗಿದೆ ಇಂದು ಅದೆಲ್ಲವೂ ಸಹಜ ದೂರದಿಂದ ಅಣಿಕಿಸುವಂತೆ ಮಾರ್ಪಟ್ಟಿವೆ ಅಥವಾ… ಮಾರ್ಪಡುವಂತೆ ನೀ ಪ್ರೇರಿಪಿಸಿದೆ…! **********************









