ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಕನಸು ಶ್ವೇತಾ ಮಂಡ್ಯ ದಿಟ್ಟಿಸುತ ನೀ ನನ್ನ ತುಸುವೇ ಒತ್ತರಿಸಿ ಬಂಧಿಸಿ ಬಾಹುವಿನೊಳು … ನಿನ್ನೊಲವಿನ ಗಾಳಿಯೊಳು ಸುಳಿದಾಡಿದ ಮುಂಗುರಳ ಮೆಲ್ಲನೆ ಸರಿಸಿ…. ರವಾನಿಸಿ ಎನ್ನೆದೆಗೆ ನಿನ್ನೊಲುಮೆ ನಿಂತ ನೆಲವನೆ ಮರೆಸಿ ಹರಸಿ ಅನೂಹ್ಯ ಪ್ರೀತಿ… ಭಾವದ ಮಳೆಯಲಿ ನೆನೆ ನೆನಸಿ ಅವಿಚ್ಛಿನ್ನ ಅನುಭಾವದ ಸಾಂಗತ್ಯ ಕನಸಲಷ್ಟೇ ನಿನ್ನೊಂದಿಗೆ ಒಂದಾಗಿಸಿದೆ. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಕೆ.ಮಹದೇವನಾಯಕ ನವಿರಾಗಿ ಬಾ ಬಾ ನನ್ನುಸಿರ ಬಾರಕ್ಕೆ ಜೀವ ರಸ ತುಂಬಿ ನಗು ನಗುತ ಬಾಡಿರುವ ಹೃದಯಕ್ಕೆ ಭಾವ ತುಂಬು ದಿಕ್ಕುತಪ್ಪದಂತೆ ಮೆಲ್ಲನೆ ನಗುತ ಕಮರಿದ ಕನಸಿಗೆ ನೆನಪುಗಳ ಸೂರು ಮುಗಿಲಗಲ ಬೆಳಕಿನ ಪಥದಂತೆ ಬಾ ಕಲ್ಪನೆಗಳ ಸ್ವಾರ್ಥದ ದುಃಖ ಸವೆಸಿ ಜೊತೆ ಜೊತೆಯಾಗು ನಗುತ ಮಲೆತು ಮರೆಯಾದ ನೊರಜು ನೆನಪ ನೆಲಬಾನಿನಂಚಿನಲಿ ಹೂತುಬಿಡು ಒಡಲಾಳದ ಸಾಗರದ ಅಲೆಯಲ್ಲಿ ತೂಗಿ ಗಗನ ಚುಂಬನದಂತೆ ನಗುತ ಕಾನನದ ಸೊಬಗು ನಿನ್ನ ಸರಸವಿಲ್ಲದೆ ಬೀಕೋ ಎಂದು ಗಾಳಿ ತೂರಿದೆ ಮನದ ಒಲುಮೆ ತೊರೆಯು ಮೊರೆದು ಸರಿ ಸರಿಗೆ ಸರಿದಿದೆ ನಗುತ ಇದು ಇರುಳೋ ಹಗಲೋ ಕಾಡೋ ಬಾನೋ ಭುವಿಯೋ ನಾನರಿಯೇ ನೀ ಬಂದು ಎಚ್ಚರಿಸು ‘ಪ್ರಜ್ಯೋಮ’ನ ಒಳ ಮನಸ ನಗುತ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸ್ಮಿತಾ ರಾಘವೇಂದ್ರ ಬಿಂದುವೊಂದು ಸರಳ ರೇಖೆಯಮುಂದೆ ಸಾಗುತ್ತಿದೆ ಎಂದರೇನರ್ಥ ಲೋಕದೊಳಗೆ ಸಕಲವೂ ಸನ್ಮಾರ್ಗ ನೀಗುತ್ತಿದೆ ಎಂದರೇನರ್ಥ ಲೋಭ,ಮೋಹಾದಿಗಳೊಳಗೆ ಬಂಧಿಯಾಗುವೆವು ಈ ಭವದೊಳಗೆ ಬಾಳಿನರ್ಥವ ಸಾರಿದವನ ತ್ಯಾಗವೇ ಸಂಶಯವಾಗುತ್ತಿದೆ ಎಂದರೇನರ್ಥ ಲೋಕ ಬಿಡಲೂ ಬೇಕು, ಅಳಲೂ ಬೇಕು ಅಂತರಂಗವು ಕದಡಿ,ಅವನೆಲ್ಲಿ ಮುಕ್ತ ಮೆಚ್ಚಿ ಆಡಿದ,ಅಚ್ಚೊತ್ತಿದ ಅಭಿನಯವೇ ಮರೆಯುತ್ತಿದೆ ಎಂದರೇನರ್ಥ. ಒಬ್ಬನೇ ನಿರ್ಗಮಿಸುವಾಗ ಯಾರೂ ಹತ್ತಿರವಿರೆ,ಇಲ್ಲದಿರೆ ಏನು ಅಂತರ? ಮುಗಿಯಲಾರದ್ದು,ಮುಗಿಯಾಬಾರದ್ದು,ಮುಗಿದಂತೆ ತೋರುತ್ತಿದೆ ಎಂದರೇನರ್ಥ ಅಗಲಿಕೆಯ ಸಂಕಟವ ಹೆಚ್ಚಿಸುವುದು ಜೊತೆಯಾದ ಬಂಧ ಏಕಾಂಗಿ ಬಯಲಿನಲಿ ಮರವೊಂದು ರೋದಿಸುತ್ತಿದೆ ಎಂದರೇನರ್ಥ . ದೌರ್ಬಲ್ಯಗಳು ಇಲ್ಲದೆಯೇ ಬದುಕು ಚಲಿಸದ ಪಯಣ “ಸ್ಮಿತ” ಹೃದಯದ ಭಾಷೆ ಅರಿಯಲು ಅಶಕ್ತವಾಗುತ್ತಿದೆ ಎಂದರೇನರ್ಥ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಸುಜಾತ ಲಕ್ಷ್ಮೀಪುರ. ಕತ್ತಲೆ ಗರ್ಭ ಸೀಳಿ ಅರಿವಿನ ಬೆಳಕು ತಂದ ಈ ಭೀಮ ಅಸ್ಪರ್ಶ ಕೊಳಕು ತೊಳೆಯುವ ಜಲವಾಗಿ ಬಂದ ಈ ಭೀಮ ಬಡತನ ಹಸಿವು ನಮ್ಮ‌ನ್ನು ರೂಪಿಸುತ್ತದೆಯಂತೆ ಗುಡಿಸಿಲಿನಿಂದಲೇ ಅಸಮಾನತೆಯಲ್ಲೇ ಮೂಡಿದ ಈ ಭೀಮ ಕೊರೆತೆಯಲ್ಲೆ ಕೊರಗಿ ಕೂತವರು ಏನು ಸಾಧಿಸುವರು ಅಸಮಾನತೆ ವಿಷಗಾಳಿಯಲಿ ಸಮಾನತೆಯ ಉತ್ತಿ ಬೆಳೆದ ಈ ಭೀಮಾ ಜ್ಣಾನವೊಂದೆ‌ ಮುಕ್ತಿಗೆ ಮಾರ್ಗ ವೆಂಬುದು ಸತ್ಯವಲ್ಲವೆ ಅಜ್ಞಾನದ ಆಲಯದಿ ಬೆಳಕಿನ ಬಯಲು ಸುರಿದ ಈ ಭೀಮಾ ನನ್ನ ಜನ ನನ್ನ ನಾಡು ಎನ್ನದವರ ಎದೆ ಬೆಂಗಾಡು ಜನರ ಹಸಿವು ನೋವಿಗೆ ಮಿಡಿದು ದುಡಿದ ಈ ಭೀಮಾ ಪ್ರಜಾಪ್ರಭುತ್ವದ ಜೀವಾಳವೆ ಮತದಾನ ಅಲ್ಲವೇ ಹಕ್ಕು ಬಾಧ್ಯತೆಗಳ‌ನು ಕಾನೂನಿನ ಮೂಲಕವೆ ಕೊಡಿಸಿದ ಈ ಭೀಮಾ ಸರ್ವೋದಯ ಸಮಾನತೆ ಸಾಮಾಜಿಕ ನ್ಯಾಯ ಇದ್ದೆಡೆ ಸ್ವರ್ಗ ಎಲ್ಲರ ಅಭ್ಯದಯಕಾಗಿ ಸಂವಿಧಾನ ರೂಪಿಸಿದ ಈ ಭೀಮಾ ಶಿವೆ,ಬಾಬಾ ಸಾಹೇಬರ ಅಂಬೇಡ್ಕರ್ ಬಗೆಗೆ ಎಷ್ಟು ಹೇಳಿದರೂ ಅಪೂರ್ಣವೆ ದೇಶದ ಜನತೆಗೆ ಬದುಕು ಕೊಟ್ಟ ಭಾರತ ಭಾಗ್ಯವಿದಾತ ಆದ ಈ ಭೀಮ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೌದು ; ನಿನಗಾಗಿ… ನಾಗರಾಜ ಹರಪನಹಳ್ಳಿ ನೀ ಮನೆಯೊಳಗೆ ಹೋದ ಮೇಲೆ ನಾವಾಡಿದ ಮಾತುಗಳನ್ನೇ ನೆನಪಿಸಿಕೊಳ್ಳುತ್ತಿದ್ದೆ…. ಎಷ್ಟೊಂದು ಕನಸುಗಳು.. ನೂರಾರು ಬಯಕೆಗಳು ಸಾವಿರಾರು ರೆಕ್ಕೆ ಕಟ್ಟಿಕೊಂಡು ಹಾಡುವ, ಹಾರುವ ಮನಸುಗಳು ಒಂದೊಂದು ಮಾತಿಗೂ ಸಹಿ ಸವಿ ನೆನಪು ಪ್ರತಿಮಾತು ಒಂದೊಂದು ವರ್ಷ ನಮ್ಮ ಆಯಸ್ಸು ಹೆಚ್ಚಿ ಅದೇ ಕಾಲಕ್ಕೆ ನಾವು ಯುವ ಜೋಡಿಗಳಾಗುವ ಹುಮ್ಮಸ್ಸು … ಬರೆಯುವ ,ಓದುವ ಹೆಬ್ಬಯಕೆ ಜೊತೆಗೊಂದಿಷ್ಟು ಪ್ರೇಮ ಬದುಕಿಗೆ ಉಸಿರಿಗೂ ಈಗ ಕನಸಿನ ಕಾಲ ಬಂಧನವೂ ಬಿಡುಗಡೆಯೂ ಏಕಕಾಲಕ್ಕೆ ಇನ್ನೂ ಕಾಯುವುದೋ ಅನಿವಾರ್ಯ ಸೊಗಸು ಬೆಳಗು ಮಧ್ಯಾಹ್ನ ಅಪರಾಹ್ನ ಇಳಿಸಂಜೆ, ಮುಸ್ಸಂಜೆ ಗೋಧೂಳಿ ಸಮಯಗಳ ಬೆಸೆದ ಬೆಸುಗೆಯ ಪ್ರೇಮ ಇನ್ನೇನು ಈ‌ ಬದುಕಿಗೆ ಮುದ್ದು ; ಬಂದಾಯಿತು ಇನಿ ಇನಿಯ ರೋಮಾಂಚನಕೆ ಹೊಸ‌ ಭಾಷ್ಯ ಬರೆದಾಯಿತು ತೇರಾ ಸಹರಾ ಮಿಲ್ಗಯಾ ಯೇ ಜಿಂದಗಿ ಗಲೇ ಲಗ್ಜಾ ಯೇ ಜಿಂದಗಿ ಗಲೇ ಲಗ್ಝಾ … ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಾಹಿತ್ಯ ಶ್ವೇತಾ ಮಂಡ್ಯ ಸಾಹಿತ್ಯ, ಒಳಿತ ಉಣಿಸಿ ಕೆಡುಕ ಅಳಿಸಿ ಮನವ ಅರಳಿಸಿ ಸರ್ವರ ಹಿತ ಬಯಸುವ ಸಾಹಿತ್ಯ; ಅಂತ:ಕರಣವ ತಟ್ಟಿ ಮಾನವೀಯತೆಯ ಮುಟ್ಟಿ ಕರ್ತವ್ಯಪ್ರಜ್ಞೆಯ ಎಚ್ಚರಿಸಿ ಬದುಕಿನುದ್ದ ದಾರಿದೀಪವಾಗುವ ಸಾಹಿತ್ಯ, ಸರ್ವಜನ ಸರ್ವ ಭಾವಗಳ ಶುದ್ದೀಕರಿಸಿ ಮನುಕುಲದ ಕಲ್ಮಶಗಳ ತೊಳೆಯುವ ಸಾಹಿತ್ಯ; ನಿನ್ನ ಮೆಚ್ಚಿ ನಿನ್ನಪ್ಪಿ ಕೊಂಡವರೆಲ್ಲಾ ನಡೆಯುತ್ತಿದ್ದರೆ ನಿನ್ನಾಶಯದಂತೆಯೇ ಬದುಕುತ್ತಿದ್ದರೆ ತಾವು ಬರೆಯುವಂತೆ…..!!! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಮ್ಮ ಅಂತರಂಗ ವೀಣಾ ರಮೇಶ್ ಮೌನದಲಿ ಅದೆಷ್ಟೋ ಮಾತುಗಳನು ಕಟ್ಟಿ ಹಾಕಿದ್ದೇನೆ ಗೆಳತಿ ಏಕಾಂತದಲ್ಲಿ ಒಂದಷ್ಟು ಪದಗಳಿಗೆ ಮೌನದಲ್ಲೆ ತಿವಿದಿದ್ದೇನೆ ಗೆಳತಿ ಕಣ್ಣುಗಳು ಹೊಳೆಯಾಗಿವೆ ಹರಿದು ಬಿಡಲೆ ದೋಣಿ ನಿನ್ನ ನೆನಪಿನ ಹುಟ್ಟು ಹಾಕಿ ಉಸಿರು ಕಟ್ಟಿದೆ ಪ್ರೀತಿ ಎದೆಯ ಪಂಜರದಲಿ, ಉಸಿರು ಬಿಡಲು ತತ್ವಾರ ಎದೆಯ ಬಡಿತವೊಂದೇ ಉಳಿದಿದೆ ಮೌನ ಪರದೆಯ ಹಿಂದೆ ನಿನ್ನ ತುಂಟ ನಗು ಅಣಕಿಸುತ್ತಿದೆ ಈ ಕತ್ತಲೆಯ ನೀರಸ ಮೌನ ಒಂದಷ್ಟು ನಕ್ಷತ್ರಗಳ ನುಂಗ ಬಾರದೆ ಒಂದು ಸಿಹಿಮುತ್ತು, ಒಂದು ಸಿಹಿ ನಗುವಿಗೆ ಬಾಚಿ ತಬ್ಬಿಕೊಳ್ಳಲು, ನೆನಪಿನ ಕಂಬಳಿ ಯೊಳಗೆ ಬಚ್ಚಿಟ್ಟು ಕೊಳ್ಳಲು ಯಾವ ಅಂತರದ ಗೊಡವೆಯು ಇದು? ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕಾಡಿಗೆಯ ಹೆಜ್ಜೆ ಪೂರ್ಣಿಮಾ ಸುರೇಶ್ ಹುಣ್ಣಿಮೆಯಂತಹ ಹೆಣ್ಣೊಂದು ಶುಕ್ಲ-ಕೃಷ್ಣ ಪಕ್ಷಗಳಲಿ ಹೊರಳಿ ತುಸುತುಸುವೇ ಅರಳಿ ಒಂದಿಷ್ಟು ಬಾಡಿ,ಕರಗಿ ಮತ್ತೆ ಹುಡುಹುಡುಕಿ ಅಮಾವಾಸ್ಯೆಯಂತಹ ಗಂಡನ್ನು ಪ್ರೇಮಿಸಿದಳು! ಕಪ್ಪು- ಎಲ್ಲಿರಿಸುವೆ ಕುಹಕಕೆ ಉತ್ತರಿಸುವಂತೆ ಬಚ್ಚಿಟ್ಟುಕೊಂಡಳು ಕಣ್ಣೊಳಗೆ ಅವನನ್ನು ಕಾಡಿಗೆಯಾಗಿಸಿ! ಅವನೀಗ ಅವಳ ನಗುವಿಗೆ ನೀಲ ಆಗಸವಾಗುತ್ತಾನೆ. ಅವಳ ನೋವಿಗೆ ಕರಿನೀರಾಗಿ ಧುಮುಕಿ ಜಲಪಾತವಾಗುತ್ತಾನೆ ಕಡಲಾಗಿ ಸುಯ್ಲಿಟ್ಟು ಆವಿಯಾಗಿ ಮಳೆಯಾಗಿ ಅವಳ ತೋಯಿಸುತ್ತಾನೆ. ಜಗಕೆ ಕಾಣುವ ಕಣ್ಣಿನ ಬೆಳಕು, ಮೊರೆವ ಕಡಲಲೆಯ ಸುಯ್ಲು ಸುರಿವ ಮಳೆ ಹನಿಗಳು ಅರ್ಥವಾಗುವುದೇ ಇಲ್ಲ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೋನ್ಸಾಯ್. ಶಶಿಕಲಾ ವೀ ಹುಡೇದ. ಈ ಮಣ್ಣ ಕಣಕಣದ ಶಕ್ತಿಯೆಲ್ಲವೂ ನನ್ನ ಒಡಲಾಳದಲಿ ಮೈಮನಗಳಲಿ ವಸಂತನ ಪ್ರೀತಿಯ ಗಾಯದ ಗುರುತುಗಳು ಒನಪಿಲ್ಲದ ವೈಯ್ಯಾರದಲಿ ಒಡ್ಡು ಮುರಿಯುವ ಗಿಡ್ಡ ಮೈ ನೆತ್ತರೆಲ್ಲವೂ ಹರಿತ್ತಾಗಿ ಎಲೆಎಲೆಯೂ ಮಿಂಚು ಚಳಿಗಾಳಿಗೆ ಅದರುವ ಮೈ ನಾನು ಬದುಕಿರುವೆನೆಂಬುದಕೆ ಪುರಾವೆ ಬುಡದಡಿಯಲಿ ತಟ್ಟೆಯಲಿ ನಾಕೇ ನಾಕಿಂಚಿನ ನೆಲವೇ ಸಾಕ್ಷಿ ನಿಡುಸುಯ್ಯುವ ನನ್ನ ಪ್ರತಿ ಉಸುರಿಗೆ ನನ್ನ ಸುತ್ತಲೂ ಹೆಣೆದಿರುವ ನನ್ನದೇ ಬೇರುಗಳು ಶೋಕಿಸುವ ಬಿಳಲುಗಳು ಎಂಟ್ಹತ್ತು ಎಲೆಗಳು ಬೋನ್ಸಾಯ್ ಹೆಸರಲಿ ಕುಬ್ಜ ಬದುಕು ವರುಷಗಳುರುಳಿದರೂ ಬೆಳೆಯಲಾರೆ ಬೀಗಲಾರೆ ತೂಗಲಾರೆ ತೊನೆಯಲಾರೆ ಹೂತು ಹಣ್ಣಾಗಬೇಕೆಂದವಳು ಚಾಚಿ ನೆರಳಾಗಬೇಕೆಂದವಳು ಇಂತು ನಿಂತಿದ್ದೇನೆ ವಾಮನಳಾಗಿ ಸುಡುವ ದೈತ್ಯ ನೆರಳುಗಳ ನಡುವೆ ಇದೆಂಥ ಬದುಕ ಕೊಟ್ಟಿರಿ ನನಗೆ ಓ ನೆತ್ತರು ನೀರಾದವರೆ! ಇನ್ನಿರಲಾರೆ ಕುಲಾವಿ ಕಟ್ಟಿಕೊಂಡು ಸಾವಿನ ಈ ತೊಟ್ಟಿಲಲಿ ಹಸಿರಾದರೂ ಹೊನ್ನಲ್ಲ ನೆರಳಿಲ್ಲ ಗೂಡಿಲ್ಲ ಸರ್ಕಸ್ಸಿನ ಜೋಕರನಂತೆ ನನ್ನ ಮೈಯ ಪೆಟ್ಟುಗಳೆಲ್ಲ ನಿಮ್ಮ ಮೋಜಿನ ಸರಕು ಮೈ ಚಾಚಿ ಮಲಗಲೂ ಮರ್ಜಿ ಕಾಯಬೇಕು ಪುರುಷ ಹುನ್ನಾರಗಳಿಗೆಂದು ಪ್ರಕೃತಿಯೆಷ್ಟು ಬಲಿಯಾಗಬೇಕೊ ಇನ್ನೂ ಓ ನೆತ್ತರು ನೀರಾದವರೆ ಇನ್ನಾದರೂ ಕರಗಿ ಹರಿಯಿರಿ ನಮ್ಮಂತೆ ಉಸುರಿ ಹಸುರಿ ನೆರಳಾಗಲು ಕಲಿಯಿರಿ ನಿಂತ ನೆಲವನು ಯಾರೂ ಕಸಿಯಲಾಗದು ಅದೋ ನೋಡಿ! ಬೀಳುತಿದೆ ನನ್ನ ಬೀಜ ಈ ನೆಲದಲಿ ಬಿದ್ದು ಮೊಳತೇ ತೀರುವುದು ಮುಗಿಲಗಲ ಮಿಗೆಯಗಲ ಇನ್ನು ನಿಮ್ಮ ಕಣ್ಣಿಗೆ ಬೀಳದ ಅಂತರಿಕ್ಷದ ಒಂದು ಚುಕ್ಕೆ ಮಾತ್ರ ನಾನು. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಾರಯ್ಯ ಸಂಭವಿಸು ಮದ್ದೂರು ಮಧುಸೂದನ್ ಕೇಡುಗಾಲಕೆ ನಾಯಿ ಮೊಟ್ಟೆ ಇಕ್ಕಿದೆ ಮೊಟ್ಟೆ ಇಕ್ಕಿದ್ದು ದಿಟವೇ ? ಪ್ರಶ್ನಿಸುವ ಬಾಯಿಗಳಿಗೆ ಈಗಾಗಲೇ ಕರ್ಪ್ಯೂ ಜಾರಿಯಾಗಿದೆ ಹುತ್ತವೇ ಹಾವನ್ನು ನುಂಗುವ ದುರಿತ ಕಾಲವಿದು ಭುಸಗುಡುವ ಬಾಯಿಗೆ ಬಾಂಬಿಕ್ಕುವ ಭಯ ಚಾಲು ಇದೆ ಬಣ್ಣ ಬಣ್ಣದ ಪ್ರಣಾಳಿಕೆಗಳೆಂಬ ಟಿಕಳಿಗಳನ್ನು ಈಗಾಗಲೇ ಕುಂಡಿ ಮೇಲೆ ಅಂಟಿಸಿಯಾಗಿದೆ ಶಬ್ದಕೆ ನಾಚಿಕೆಯಾಗುವಷ್ಟು ಮೈಕಾಸುರ ಅಬ್ಬರಿಸುತ್ತಿದ್ದಾನೆ ಕಾಶ್ಮೀರದೀ ಕನ್ಯಾಕುಮಾರಿವರೆಗೆ ಚಾಲ್ತಿಯಲ್ಲಿದೆ. ಸಗಣಿ ತಿಂದವರ ಭಕ್ತಿಯ ಮಾರಾಟ ಜೋರಿದೆ ಕಾವಿ ಮರೆಯಲಿ ತ್ರಿಶೂಲಗಳಿಗೂ ನಾಚಿಕೆ ಸಂಭವಿಸಿದೆ ಪ್ರಜಾಪ್ರಭುತ್ವದ ಸಿಂಹಾಸನಕೆ ಇನ್ನುಷ್ಟು ಮೊಳೆ ಬಡಿದು ಬಿಗಿ ಮಾಡಲಾಗುತ್ತಿದೆ ಸಿಂಹಾಸನದಡಿಯಲಿ ಸಿಲುಕಿದ ನಿನ್ನ ಕಿರು ಬೆರಳು ಈಚೆ ಬಾರಲಾರದೆ ಒಳಗೊಳಗೆ ಮಿಡುಕುತ್ತಿದೆ ಬಾರಯ್ಯ ಬಾರೋ ಸಂಭವಿಸು ಶುದ್ದೋದನನ ಮೊಮ್ಮಗನೇ.. ಎಂದು.. *******

ಕಾವ್ಯಯಾನ Read Post »

You cannot copy content of this page

Scroll to Top