ಕಾವ್ಯಯಾನ
ನದಿ ದಡದಲಿ ನಡೆದಾಡಿದಂತೆ ಶೋಭಾ ನಾಯ್ಕ.ಹಿರೇಕೈ ಕಂಡ್ರಾಜಿ ಕವಿತೆ ಬರಿ ಅಂದರೆ ಕವಿತೆ ಹುಟ್ಟದು ಗೆಳೆಯ ಹುಟ್ಟುವುದು ಕನಸು ಮಾತ್ರ! ಕಿರುಬೆರಳ ನೀ ಹಿಡಿದು ಕಣ್ಮುಂದೇ.. ಬಂದಂತೆ ನದಿ ದಡದ ಮೇಲೆಲ್ಲ ನಡೆದಾಡಿ ಹೋದಂತೆ ಹೋದಲ್ಲಿ ಬಂದಲ್ಲಿ ಹೂ ಅರಳಿ ನಕ್ಕಂತೆ ನಕ್ಷತ್ರವನೇ ಕಿತ್ತು ಕಣ್ಮುಂದೆ ಇಟ್ಟಂತೆ ಅಂಗೈ ಗೆರೆಗಳ ಮೇಲೆ ಕವನಗಳ ಬರೆದಂತೆ ನಯನಗಳು ಒಂದಾಗಿ ಪ್ರೇಮವನೇ ಉಂಡಂತೆ ಅರಬ್ಬಿಯ ಅಲೆಗಳಲಿ ಹೊರಳಾಡಿ ಮಿಂದಂತೆ ದೂರ ತೀರವ ದಾಟಿ ಹೊಸ ಲೋಕ ಕಂಡಂತೆ ಹಾಯಿ ದೋಣಿಯ ಏರಿ ಹಾಡುತ್ತ ಹೋದಂತೆ ಹೊಸ ಹಾದಿಯಲಿ ನಾವು ಹೊಸ ಜನ್ಮ ಪಡೆದಂತೆ….. ಕವಿತೆ ಬರೆ ಎಂದರೆ ಕವಿತೆ ಹುಟ್ಟದು ಗೆಳೆಯ ಹುಟ್ಟುವುದು ಕನಸು ಮಾತ್ರ. *********









