ಪ್ರಶ್ನಿಸು ಪ್ರಶ್ನಿಸುತ್ತಲೇ ಇರು
ಕವಿತೆ ನಾಗರಾಜ ಹರಪನಹಳ್ಳಿ ಮುಗ್ಧತೆ ಸೌಂದರ್ಯವಹಾಗೆಲ್ಲ ಬೀದಿಗಿಡಲಾಗದುಒಲವೇಬೀದಿಯಲ್ಲಿ ಉರಿವ ಕಣ್ಣುಗಳಿವೆ ಹಾದಿ ಬೀದಿಗಳಲ್ಲಿ ಕರೋನಾ ಭಯಅದನ್ನೂ ಮೀರಿದ ಖದೀಮರ ಸಂಚಿದೆಯಿಲ್ಲಿ ;ಸಮಾಜ ಇನ್ನೂ ಬದಲಾಗಿಲ್ಲಬದಲಿಸಲು ಯತ್ನಿಸಿದ ಬುದ್ಧ, ಬಸವ ,ಅಕ್ಕಅಲ್ಲಮ ಸೋತಿದ್ದಾರೆ….ಪುರೋಹಿತಶಾಹಿಯ ಕುತಂತ್ರಕೆ ಆನೆಕಾಲಿನ ಸಂಕೋಲೆಗೆ ಸಿಲುಕಿನೆಲಕೆ ಹತ್ತಿದ ರಕ್ತದ ಕಲೆ ಕಲ್ಯಾಣದ ಬೀದಿ ಬೀದಿಗಳಲಿಮತ್ತೆ ಅರಳಲಿ; ಅವೇ ಕಲ್ಯಾಣದ ಕ್ರಾಂತಿಯ ಹೂಚಿತ್ರಗಳಾಗಲಿ :ಅತ್ತ ಅತ್ತತ್ತ ಒಮ್ಮೆ ಹೊರಳಿ ನೋಡುಯಾವ ಹೆಸರುಗಳ ಇತಿಹಾಸದಲ್ಲಿ ಹೂಳಲಾಗಿದೆಯೋ ಅಲ್ಲಿಂದಲೇ ಕಸುವು ಪಡೆದುಕೊ ಗೆಳತಿ, ಆ ಕನಸುಗಳ ಹಂಚು ಕಲ್ಯಾಣದ ಬೀದಿಗಳಲಿ ,ಹಾದಿಗಳಲಿಅವು ಹಾದಿಬೀದಿಗಳ ಹಾಡಾಗಲಿ ಗೋಮುಖ ವ್ಯಾಘ್ರಗಳುಖೆಡ್ಡತೋಡಿ ಸಹೋದರಿಯರಮೆದುಳಿಗೆ ವಿಷಉಣಿಸಲು ಸಜ್ಜಾದರೆಹೆಣ್ಣಿಂದಲೇ ಹೆಣ್ಣ ಹಣಿಯಲು ಬಲೆ ಎಣೆದರೆ ನಾ ಸುಮ್ಮನೇ ಕುಳಿತಿರಲೇ ? ವಿಷ ಕಂಡು ನಾನು ಮೌನಿಯಾಗಲೇ ??ನೀ ತಿಳಿದವಳು ; ಮರಳಿ ಬಂದಾಳು …ಹುಸಿ ನಕ್ಕು , ಹೂ ನಗೆ ಚೆಲ್ಲಿಯೆಂದು ಅಂದುಕೊಳ್ಳಲೇ ?? ನೀ ಅಲ್ಲಿನ ಆಸೆ ಅಮಿಷ ಪ್ರಶಸ್ತಿಗಳ ಕಾಲಿಂದ ಒದೆಯುವೆ ಎಂಬುದು ಗೊತ್ತು ನನಗೆ ;ಆದರೆ ಲೋಕಾಪಾವಾದವ ಪರಿವಾರ ಹುಟ್ಟಿಸದೇ ಬಿಡದು….ಹೂಮಾಲೆಯ ಹಗ್ಗ ಮಾಡಿ ಉರುಲು ಹಾಕಿಯೇ ಸಿದ್ಧ ಸನಾತನಿಗಳು ,ಅದು ಅವುಗಳ ಜಾಯಮಾನ ನೀ ಅಲ್ಲಿ ಸೌಜನ್ಯವನ್ನೇ ಬಿತ್ತಿದರೂ ಸಂಕೋಲೆ ತಪ್ಪದು ಅಲ್ಲಿ ಆ ಸಂಘ ಸಮೂಹದಲ್ಲಿ ಇರದಿದ್ದರೂ ತಪ್ಪದು ಅಪವಾದ ಖಚಿತ :ಸ್ತ್ರೀ ಕುಲಕೆ ಅವಮಾನಗಳ ಹೊರಿಸಿ ಬಂಧಿಸಿದ ಜಗತ್ತಿದು ಸೀತೆಯನ್ನೇ ಆಗ್ನಿ ಪ್ರವೇಶ ಮಾಡಿಸಿದ ಪರಿವಾರದ ದಂಡಿದುಬೇಡ ಗೆಳತಿಬಂಗಾರದ ಕಿರಣದಿಂದ ನಿನ್ನ ಸುಟ್ಟಾರುಧಿಕ್ಕರಿಸು, ಧಿಕ್ಕರಿಸಿ ಬಾ ಪರಿವಾರವಒಂಟಿಯಾಗಿ ನಿಲ್ಲು, ಬಾಳ ಗೆಲ್ಲು ಪರಿವಾರದ ವಿಷವ ಕಂಡವ ನಾನುಗೌರಿ ಕೊಂದವರ ಜೊತೆ ಎಂಥ ಮಾತು ಗೆಳತಿ??ಬಾ , ಬಂದು ಬಿಡುನೀ ಈ ನೆಲದ ಕಾವ್ಯವಾಗುಪ್ರಶ್ನಿಸು, ಪ್ರಶ್ನಿಸುತ್ತಲೇ ಇರು **********************************
ಪ್ರಶ್ನಿಸು ಪ್ರಶ್ನಿಸುತ್ತಲೇ ಇರು Read Post »









