ಬಿಡುಗಡೆ
ಕವಿತೆ ಬಿಡುಗಡೆ ಪ್ರೊ.ರಾಜನಂದಾ ಘಾರ್ಗಿ ಭಾವಗಳ ಬಡತನವಿಲ್ಲವಿಚಾರಗಳ ಕೊರತೆಯಲ್ಲಬರಿ ಅಸಹಾಯಕತೆಪ್ರತಿರೋಧದ ಕೊರತೆ ಎತ್ತಿ ನೀಡುವ ಕೈಗಳಲ್ಲಿಮೌಲ್ಯಗಳ ಸಂಕೋಲೆಎದ್ದುಬರಲು ಕಾಲುಗಳಲ್ಲಿಜವಾಬ್ದಾರಿಗಳ ಬೇಡಿ ಸುತ್ತಲೂ ಮನುಸ್ಮೃತಿಬರೆದ ಲಕ್ಮಣರೇಖೆಜ್ವಾಲೆಗಳಾಗಿ ಉರಿಯುತಕಾಲುಗಳ ಸುಡುತಿದೆ ಎದುರಿನಲಿ ತುಂಡಾದಮಾನವೀಯತೆ ನರಳುತಿದೆಸಾಮಾಜಿಕ ಕಟ್ಟಳೆಗಳಹರಿತ ಖಡ್ಗ ಪ್ರಹಾರಕ್ಕೆ ಸಬಲೀಕರಣದ ಮಂತ್ರಘೋಷಣೆಗಳ ಭಾಷಣಗಳಬುರುಡೆಗಳು ಉರುಳುತ್ತಿವೆಮರಿಚಿಕೆಗಳು ಕೈ ಬೀಸುತ್ತಿವೆ ಎಟುಕಿ ಮಾಯವಾಗುತ್ತಿರುವಬಿಡುಗಡೆಯನರಸುತನಡೆದಿರುವೆ ಬುದ್ದ ಬಸವಣ್ಣರೆಡೆಗೆಗಾಂಧಿಜಿಯ ಸ್ವಾತಂತ್ರದೆಡೆಗೆ.








