ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿನ್ನಾಣೆ-ಶಾರು ಕವಿತೆ

ಕಾವ್ಯ ಸಂಗಾತಿ ನಿನ್ನಾಣೆ ಶಾರು ನೆನಪ ಪಾತ್ರೆಯಲಿ ಎಸರು ಕುದಿಯುತಿದೆಕಣ್ಹನಿ ಗಲ್ಲ ತಾಗುವ ಮುನ್ನ ಉಕ್ಕದಂತೆ|ಬೆಸೆದ ಕೈಬೆರಳು ಬಿಸಿಯಾಗಿ ಕರಗುತಿದೆಮೌನವದು‌ ಪದದನಿಲಿ ಮರುಗಿದಂತೆ|| ದಡ ಸಿಗದೆ ದೋಣಿ ನಡುಮಡುವಲಿ ತೊಳಲಿದೆಮುಳುಗದಂತೆ ಮುಂದೆ ಚಲಿಸದಂತೆ|ತೀರದಲಿ ತೀರದಂತಾಡಿದ ಮಾತು ಮೂಕವಾಗಿದೆಕರಗಲರಿಯದೀ ಕಣ್ಹನಿ ಘನಿಕರಿಸಿದಂತೆ || ಅರಿವ ಜಾಗರಣೆಯಲಿ ಪ್ರೀತಿ ವಿರಮಿಸಿದೆಆಳದಗಲದರಿವು ನಿಲುಕದೆ ಪರಿಮಿಸಿದಂತೆ||ನೀಲ ಬಾನ ಚುಕ್ಕಿ ಕಾಡಿದೆ ಎಣಿಕೆಗೆ ಸಿಗದಂತಿದೆಮಡುಗಟ್ಟಿದ ಮೋಡದಲದು ಮರೆಯಾದಂತೆ|| ಶುದ್ಧ ಪಳುಕಿನ ಸ್ನೇಹವಾರಿಧಿ ಕಣ್ತುಳುಕಿಸಿದೆಹರಿವನದಿಯೆದೆಯಲಿ ಕವಲು ಮೂಡಿದಂತೆ|ದೂರ ಪಯಣದ ಹಾದಿ ಬಳಲಿ ಸೋತಿದೆಕಸುವು ಕೊಡುವ ಜೀವ ಕಾಣದಂತೆ|| ಉಪಮೆಯದು ಹಾಲಬೆಳದಿಂಗಳಲಿ ಸೋರಿದೆದನಿಪದದಲಿ ನುಣುಚಿ ಕಂಡು ಕಾಣದಂತೆ|ಏನಿದೇನಿದು ದುಮ್ಮುವ ಭಾವ ಬಿಸಿಲ ಹಣ್ಣಾಗಿದೆತಂಪಿಸಿದರು ತಣಿಯದೆ ಬೇಗೆ ಹೆಚ್ಚಿದಂತೆ||

ನಿನ್ನಾಣೆ-ಶಾರು ಕವಿತೆ Read Post »

You cannot copy content of this page

Scroll to Top