“ನನ್ನಾಸೆಗಳು” ಗೀತಾ ಆರ್.
ಕಾವ್ಯ ಸಂಗಾತಿ ಗೀತಾ ಆರ್. “ನನ್ನಾಸೆಗಳು” ನೀ ನನ್ನ ನೆನಪಲ್ಲೇ ಪುನಃ ಪುನಃಉಳಿಯುವಾಸೆ….ನಿನ್ನ ಹಿಂದಿಗಿಂತ ಹೆಚ್ಚು ಹೆಚ್ಚುನಾ ಪ್ರೀತಿಸುವಾಸೆ…ನಿನ್ನ ಹೃದಯದಲ್ಲೇ ಮತ್ತೆ ನಾನೇಬಚ್ಚಿಟ್ಟುಕೊಳ್ಳುವಾಸೆ….ನಿನ್ನ ಮನದಾಳದ ಮಾತುಗಳೆಲ್ಲಾಮತ್ತೊಮ್ಮೆ ಆಲಿಸುವಾಸೆ….ನಿನ್ನ ಆ ನಯನಗಳಲ್ಲಿ ಇನ್ನೊಮ್ಮೆನಾ ಬೆರೆಯುವಾಸೆ….ನಿನ್ನ ಆ ಕುಡಿಮಿಂಚು ನೋಟ ಮತ್ತೆಮತ್ತೆ ನೋಡುವಾಸೆ ….ನಿನ್ನ ಮೌನವಾ ನಾ ಕೊನೆಯದಾಗಿಅರ್ಥೈಸಿಕೊಳ್ಳುವಾಸೆ….ನಮ್ಮಿಬ್ಬರಲ್ಲಿ ಮತ್ತೆಂದೂ ಅಗಲಿಕೆಬಾರದಿರಲೆಂಬಾಸೆ…. ————– ಗೀತಾ ಆರ್.
“ನನ್ನಾಸೆಗಳು” ಗೀತಾ ಆರ್. Read Post »









