ಇವು ಯಾತನೆಯ ದಿನಗಳುರಾಜಕೀಯ ಪರಿಬಾಷೆಯಲ್ಲಿ ಬಣ್ಣಿಸಲಾಗದಂತಹ,ಕವಿತೆಗಳನ್ನಾಗಿಸಲೂ ಸಾದ್ಯವಿರದಂತಹ-ಕತೆಗಳನ್ನಾಗಿಸಲೂ ಸಂಯಮವಿರದಂತಹ ಕಾಲ! ಅದೆಲ್ಲೊ ಆಧಾರ್ ಲಿಂಕ್ ಇರದೆಹಸಿವಿನಿಂದ ಹೆಣ್ಣು ಮಗುವೊಂದು ಸಾಯುತ್ತದೆಅದೆಲ್ಲೋ ಹೆಣ್ಣೊಬ್ಬಳನ್ನುಅತ್ಯಾಚಾರ ಮಾಡಿ ಯೋನಿಗೆ ಸಲಾಕೆ ತೂರಿಸಿ ಕೊಲ್ಲುತ್ತಾರೆಅದೆಲ್ಲೋ ತುಂಬು ಬಸುರಿಯ ಗರ್ಭಸೀಳಿಹುಟ್ಟಬೇಕಿರುವ ಮಗುವ ಕೊಲ್ಲುತ್ತಾರೆ ಹಸಿದವಳೊಬ್ಬಳು ತುಂಡು ರೊಟ್ಟಿಕದ್ದಿದ್ದಕ್ಕೆ ಬೆತ್ತಲು ಮಾಡಿಮೆರವಣಿಗೆಮಾಡುತ್ತಾರೆಅದೆಲ್ಲೊ ಸತ್ತ ದನದ ಚರ್ಮಸುಲಿದ ತಪ್ಪಿಗೆ ದಲಿತ ಯುವಕರನ್ನುಥಳಿಸಲಾಗುತ್ತದೆಅದೆಲ್ಲೋ ಅವರುಗಳನ್ನೆದುರಿಸಿಮಾತಾಡಿದವರನ್ನು ಹತ್ಯೆಗಯ್ಯಲಾಗುತ್ತದೆ ಇವೆಲ್ಲವನ್ನೂ ಅದೆಲ್ಲೋಅಂತಂದುಕೊಂಡುಮೌನಕ್ಕೆ ಮುಗಿಬಿದ್ದ ನನ್ನಷಂಡತನಕ್ಕೆ ಸಾಕ್ಷಿಯಾಗಿಹೊಟ್ಟೆತುಂಬ ಉಂಡು ತೇಗುತ್ತೇನೆ ಗೆಳೆಯರೊಂದಿಗೆ ಹೊಸದೊಂದುವಾದವಿವಾದಕ್ಕಾಗಿ ಹೊಸಆಯುಧಗಳನ್ನು ಅನ್ವೇಷಿಸಲುಮುಂದಾಗುತ್ತೇನೆ,ಸವಕಲಾದ ಅವೇ ಹಳೆಯ ಶಬುದಗಳಮತ್ತೆ ಮಸೆದು ಮಚ್ಚಾಗಿಸಿಹಲ್ಲು ಕಚ್ಚುತ್ತೇನೆದಿನದಂತ್ಯಕ್ಕೆ ಮಾತಿನಮಲ್ಲಯುದ್ದದಲ್ಲಿ ಗೆದ್ದಸಂಭ್ರಮದಲ್ಲಿಪಲ್ಲಂಗದಲ್ಲಿ ಪವಡಿಸುತ್ತೇನೆ ನಾನು ಬದುಕಿರುವುದಕ್ಕೆ ಸಾಕ್ಷಿಯಾಗಿ ಆಗೀಗಕನ್ನಡಿಯೊಳಗೆ ಇಣುಕಿನನ್ನ ಚಹರೆಯ ಇರುವಿಕೆಯ ಬಗ್ಗೆಖಾತರಿ ಪಡಿಸಿಕೊಳ್ಳುತ್ತೇನೆಇದೀಗ ಯಾತನೆಯ ಕಾಲಬರೆದ ಕವಿತೆ ಕತೆಗಳ ಸುಟ್ಟು ಹಾಕಿಅದೇ ಬೆಂಕಿಯಲ್ಲಿಒಳಿತೊಂದನ್ನು ಅರಸುವ ಕಾಲ