ಮರೆಯಲಾಗದ ಗಂಗಜ್ಜಿ
ಅವಳು ಮನೆಗೆ ಬಂದಾಗ ತಾನಾಗಿಯೇ ಕೆಲಸವನ್ನು ಹುಡುಕಿ ಮಾಡುವುದಲ್ಲದೆ. ನಾವು ಹೇಳಿದ ಕೆಲಸವನ್ನೆಲ್ಲ ಮುಗಿಸಿ ಕೊಟ್ಟ ದುಡ್ಡನ್ನು ಪಡೆದು ಊಟವನ್ನು ಮಾಡಿ ನಂತರ ಹೊರಡುತ್ತಿದ್ದಳು. ನಮ್ಮ ಅಕ್ಕ ಸೀತಮ್ಮ ಕೊಡುವ ಊಟವನ್ನುಂಡ ನಂತರ ತೃಪ್ತಿಯ ಮೆಚ್ಚುಗೆಯ ಮಾತು. ಇಷ್ಟೇ ಆಗಿದ್ದರೆ ಅವಳು ನಮ್ಮ ನೆನಪಿನಂಗಳದಲ್ಲಿ ಉಳಿಯುತ್ತಿರಲಿಲ್ಲವೇನೋ









