ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೇಹ ನಶ್ವರ ಆತ್ಮ ನಿಜದಲಿ ಕೆಡಬಹುದೇ
 ಕಣ್ಣು ಕಟ್ಟು ಕನಸು ಬಟ್ಟೆಯಲಿ ಕಟ್ಟಬಹುದೆ

ಹುಣಿವೆ ಚಂದ್ರನ ಬೆಳಕು ಉಕ್ಕಿದೆ ಸಾಗರ
ಬೆಳದಿಂಗಳ ಬೊಗಸೆಯಲಿ ತುಂಬಬಹುದೇ

ಅರಳಿದ ಹೂ ಮುದದಿ ಮುಡಿಯುತ್ತೇನೆ
ಗಂಧವನು ಬೆರಳಿನಲಿ ಹಿಡಿಯಬಹುದೇ

ತೂಗಾಡುವ ಮರವ ಹಬ್ಬಿ ನಿಂತಿದೆ ಬಳ್ಳಿ
ಗಾಳಿಯನು ತೋಳಿನಲಿ ತಬ್ಬಬಹುದೇ

ಅರುಣಾಳ ಕೊಂದು ಖುಷಿಪಡಬಹುದು
ಅವಳ ಆಸೆಗಳ ಶಸ್ತ್ರದಿ ಕೊಲ್ಲಬಹುದೇ


About The Author

Leave a Reply

You cannot copy content of this page

Scroll to Top