ಕಾವ್ಯ ಸಂಗಾತಿ
ಪ್ರೊ. ರಾಜೇಶ್ವರಿ ಶೀಲವಂತ ಪುಣೆ
ಪ್ರೀತಿ


ನನ್ನ ಪ್ರೀತಿಗಾಗಿ
ಕಾಯಬೇಕಿಲ್ಲ ನೀನು
ಬೂದಿ ಮುಚ್ಚಿದ ಕೆಂಡ
ನಿನ್ನ ನೆನಪಲ್ಲಿ ನಾನು
ಯಾವುದೇ ಅಂತಸ್ತಿಲ್ಲ
ವಯಸ್ಸಿನ ಬಂಧನವಿಲ್ಲ
ಬಡತನ ಸಿರಿತನದ ಅರಿವಿಲ್ಲ
ಉಚ್ಛ ನೀಚ ಭೇದವಿಲ್ಲ
ಇಬ್ಬರ ಮನಗಳ ಬೆಸುಗೆ
ಇದಕ್ಕೆ ಬೇಕಿಲ್ಲ ಒಪ್ಪಿಗೆ
ಅವಿರತ ಭಾವನೆಗಳ ತೃಪ್ತಿಗೆ
ಪರಸ್ಪರ ಕಾತರವೇ ಅಪ್ಪುಗೆ
ಇರುವುದೆಲ್ಲ ಒಲುಮೆ
ಭಾವಗಳ ಚಿಲುಮೆ
ವಾತ್ಸಲ್ಯದ ಆರುಮೆ
ತೋರಿಕೆಗಲ್ಲ ಈ ನಲುಮೆ
ನಿನ್ನಯ ಅವ್ಯಕ್ತ ಪ್ರೀತಿ
ನಿರಂತರ ಆಸರೆಯ ಆಸಕ್ತಿ
ಆಶಿಸುವೆ ನಿನ್ನಿಂದ ನಾನೆಂದು
ಅಂದು ಇಂದೂ ಎಂದೆಂದು .
ಪ್ರೊ. ರಾಜೇಶ್ವರಿ ಶೀಲವಂತ ಪುಣೆ.



