ಕಾವ್ಯ ಸಂಗಾತಿ
“ಗಾಂಧಿಯನೇಕೆ ಕೊಂದರು?”
ವಿಜಯಲಕ್ಷ್ಮಿ ಹಂಗರಗಿ

ನಿಜ ಸತ್ಯ ಶಾಂತಿ ಮೂರ್ತಿ
ಅಹಿಂಸೆ ಯಿಂದ ನಡೆದ ಜೀವಿ
ನ್ಯಾಯ ನೀತಿ ನಿನ್ನ ಉಸಿರು
ದೇಶಕ್ಕಾಗಿ ದುಡಿದ ತ್ಯಾಗಮಯಿ ಮಹಾತ್ಮ ಗಾಂಧಿ ನೀನು…
ದೇಶದ ಸ್ವತಂತ್ರಕ್ಕಾಗಿ ಹೋರಾಡಿ
ಶ್ರಮ ಜೀವಿ ಗಾಂಧಿ
ತುಂಡು ಪಂಚೆ ತೊಟ್ಟು
ಬಡವರ ಏಳಿಗೆಗೆ ಬಯಸಿದೆ
ಮಹಾತ್ಮ ಗಾಂಧಿ ನೀನು…
ಅನ್ನ ನೀರು ಬಿಟ್ಟು
ಉಪವಾಸದಿ ಜೀವನ ಸವಸಿ
ನಿನ್ನ ನಿಜ ಸ್ವರೂಪ
ಅರಿಯದ ಭಂಡರ
ಗುಂಡಿಗೆ ಬಲಿಯಾದೆ ನೀನು …
ದೇಶ ವಿಭಜನೆಯಾಗದಂತೆ
ದೇಶದ ಒಗ್ಗಟ್ಟಿಗಾಗಿ
ಮಿಡಿದ ಜೀವಿ ನೀನು
ನಿನ್ನ ಆಶಯ ಅದೇ
ಮಾರಕವಾಗಿ ಹುತಾತ್ಮವಾದಿ …
ಇಂಥ ಗಾಂಧಿಯನ್ನು
ಮೌಢ್ಯ ಜನರ ಗುಂಡೇಟಿಗೆ
ದೇಹ ತ್ಯಜಿಸಿದ ಮಹಾತ್ಮ
ಇಂದಿಗೂ ನಿನ್ನ ಆದರ್ಶ ಜೀವನ
ಪ್ರೇರಕ ಶಕ್ತಿಯಾಗಿ ಹೊರಹೊಮ್ಮುತಿದೆ
ಇಂದು ನಿನ್ನ ಸ್ಮರಣೆ ಮಾಡುವೆವು
ಆದರೂ ಒಂದು ಪ್ರಶ್ನೆ ಕಾಡಿದೆ
ದೇಶದ ಜನತೆಗೆ, ಮುಗ್ಧ ಮಕ್ಕಳಿಗೆ
ಉತ್ತರಿಸಲಾರದ ಪ್ರಶ್ನೆ
ಗಾಂಧಿಯನೇಕೆ ಕೊಂದರು?
ವಿಜಯಲಕ್ಷ್ಮಿ ಹಂಗರಗಿ




