ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಕ್ರಾಂತಿ ಹಬ್ಬದ ಪ್ರತೀಕವಾಗಿದ್ದು  .ಇದು ರೈತನ ಸುಗ್ಗಿ ಹಬ್ಬವಾಗಿದೆ ಅಷ್ಟೇ ಅಲ್ಲದೆ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ ಮತ್ತು ಕುಟುಂಬದ ನಡುವೆ ಬಾಂಧವ್ಯ ಬೆಸುವ ಹಬ್ಬ ವಾಗಿದೆ  .
 ಎಲ್ಲಾ ರಾಜ್ಯಗಳಲ್ಲಿ ಒಂದೊಂದು ಬಗೆಯ ಹೆಸರಿನಿಂದ ಕರೆಯಲಾಗುತ್ತದೆ ಕರ್ನಾಟಕದಲ್ಲಿ ಸಂಕ್ರಾಂತಿ, ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ, ತಮಿಳುನಾಡಿನಲ್ಲಿ ಪೊಂಗಲ್, ಪಂಜಾಬ್ ಮತ್ತು ಹರಿಯಾಣದಲ್ಲಿ ಲೋಹರಿ ಮತ್ತು ಅಸ್ಸಾಂನಲ್ಲಿ ,ಮಘಾ ಎಂದು ಆಚರಿಸಲಾಗುತ್ತದೆ.

ಹೊಸ ಬೆಳೆ ಬಂದ ಸಮಯದಲ್ಲಿ ಆಚರಿಸುವ ಹಬ್ಬ ಇದು ರೈತರ ತಮ್ಮ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸಿ ಅಲಂಕರಿಸುತ್ತಾರೆ ಮತ್ತು ಕೆಲವೆಡೆ ಎತ್ತುಗಳನ್ನು ಸಿಂಗರಿಸಿ ಓಟದ ಸ್ಪರ್ಧೆಯನ್ನು ಕೂಡ ಮಾಡಲಾಗುತ್ತದೆ.
ಸೂರ್ಯದೇವ ,ಬ್ರಹ್ಮ ವಿಷ್ಣು, ಮಹೇಶ್ವರ ಗಣೇಶ ಮತ್ತು ಆದಿಶಕ್ತಿಯನ್ನು ಕೂಡ ಈ ಹಬ್ಬದಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ.

ಹಾಗೂ ಚಿಕ್ಕ ಮಕ್ಕಳಿಗೆ ಆರತಿ ಮಾಡಿ ಶುಭ ಹಾರೈಸಲಾಗುತ್ತದೆ.

ಸಂಕ್ರಾಂತಿ ಕೇವಲ ಧಾರ್ಮಿಕ ಹಬ್ಬವಲ್ಲ ಇದು ಸಂಸ್ಕೃತಿ ಮತ್ತು ಕೃಷಿ ಮತ್ತು ಕುಟುಂಬದ ನಡುವಿನ ಭಾಂಧವ್ಯ ಬೆಳೆಸುವ ಒಂದು ಸಂಭ್ರಮದ ಹಬ್ಬವಾಗಿದೆ .

ಹಾಗೂ ವಿಶೇಷ ಸ್ಥಳದಲ್ಲಿ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುವ ವಿದ್ಯಮಾನಗಳು ಕೂಡ ನಾವು ಕಾಣಬಹುದು.

ಸಾಮಾನ್ಯವಾಗಿ ಈ ದಿನ ಸೂರ್ಯನ ತನ್ನ ಪಥ ಬದಲಿಸಿ ಉತ್ತರಾಯಣಕ್ಕೆ ಚಲಿಸುತ್ತಾನೆ ಎಂದು ನಂಬಲಾಗುತ್ತದೆ ಉತ್ತರಾಯಣಕ್ಕೆ ಎಂದರೆ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸಂಚರಿಸಲು ಪ್ರಾರಂಭಿಸುವ ಪವಿತ್ರ ಕಾಲ ಎಂದು ಕೂಡ ಕರೆಯಲಾಗುತ್ತದೆ.

ಹಿಂದೂ ಸಂಸ್ಕೃತಿಯಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಈ ದಿನದಂದು ಸ್ನಾನ ಮಾಡೋದು ಮತ್ತು ದಾನ ಮಾಡುವುದು ಮುಂತಾದ ಆಚರಣೆಯನ್ನು ಮಾಡುವುದರಿಂದ ಶುಭ ಫಲಿತಾಂಶ ದೊರೆಯುತ್ತವೆ ಎಂದು ನಂಬಿಕೆ ಅಷ್ಟೇ ಅಲ್ಲದೆ ಸಂತೋಷ ಸಮೃದ್ಧಿ ತುಂಬಿದ ಬದುಕು ಸಿಗುತ್ತದೆ.

ಈ ದಿನ ಗಂಗಾ ಸ್ನಾನ ಮಾಡೋದು ಪವಿತ್ರ ಎಂದು ನಂಬಲಾಗಿದೆ ಬೆಳಿಗ್ಗೆ ಬೇಗ ಎನ್ನು ಸ್ನಾನ ಮುಗಿಸಿ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಒಳ್ಳೆಯ ಶುಭ ಫಲವನ್ನು ಕೂಡ ಪಡೆಯಬಹುದು ಎಂಬ ನಂಬಿಕೆ ಇದೆ.

ಸಂಕ್ರಾಂತಿಯಲ್ಲಿ ಎಳ್ಳನ್ನು ಅದೃಷ್ಟ ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ ಉದಾಹರಣೆಗೆ:  ನಿನ್ನ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು ಪೂಜ್ಯರಿಗೆ  ಎಳ್ಳು ದಾನ ಮಾಡುವುದು ಶಿವಮಂದಿರಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದು ಉತ್ತಮ ಎಂದು ಹಿರಿಯರ ಸಂಪ್ರದಾಯ.


About The Author

Leave a Reply

You cannot copy content of this page

Scroll to Top