ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಬೆಳಗುವ ಸೂರ್ಯ
ಸಂತೋಷ ಸಮೃದ್ಧಿ
ಬಾಳಲ್ಲಿ ತರಲಿ
ಸುಖ ಶಾಂತಿ ಕರುಣಿಸಲಿ
ಸಂಕ್ರಾಂತಿಯ ಸಂಭ್ರಮ ನಿತ್ಯ//

ಸೂರ್ಯದೇವನು
ಉತ್ತರಾಯನ ಪಥ
ಬದಲಿಸುವ ಹಾಗೆ
ನಮ್ಮ ಜೀವನದ
ದಾರಿ ಸಂತೋಷದ
ಪಥದಲ್ಲಿ ಸಾಗಿಸೋಣ ನಿತ್ಯ//

ಉದಯಿಸಲಿ ರವಿ
ಬೆಳಕಿನ ಚಿಲುಮೆಯಂತೆ
ಬಾಳು ಸಮೃದ್ಧಿಯಲಿ
ದುಃಖವನ್ನು ಹಾರಿಬಿಟ್ಟು
ಎಳ್ಳಿನಲ್ಲಿ ಬೆಲ್ಲ ಬೆರತಂತೆ  
ಸಂಬಂಧ ಬೆರೆಸೋಣ ನಿತ್ಯ//

ಮಕರ ಸಂಕ್ರಾಂತಿ
ನಮ್ಮ ನಿಮ್ಮ
ಜೀವನದ ಹೊಸದೊಂದು ಕ್ರಾಂತಿಯನ್ನು ಮೂಡಿಸಲಿ
ದೀಪ ಬೆಳಗಿಸಿ
ಕಷ್ಟಕಾರ್ಪಣ್ಯವ ದೂರ
ಮಾಡಿ ಯಶಸ್ಸಿನ
ಸರಮಾಲೆಯನ್ನೇ ತರಲಿ
ಸಂಕ್ರಾಂತಿ ಸಂಭ್ರಮ ನಿತ್ಯ//


About The Author

1 thought on “ವಿಜಯಲಕ್ಷ್ಮಿ ಹಂಗರಗಿ ಕವಿತೆ,”ಮಕರ ಸಂಕ್ರಾಂತಿ””

  1. ” ಮಕರ ಸಂಕ್ರಾಂತಿಯ “ಯು ನಮ್ಮ ನಿಮ್ಮ ಜೀವನದಲ್ಲಿ ಹೊಸ ಸಂಭ್ರಮ ಮೂಡಲಿ ನಿತ್ಯ ಕವನ ತುಂಬಾ chennaagi ಬರೆದಿದ್ದೀರಿ madam.

Leave a Reply

You cannot copy content of this page

Scroll to Top