ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಿಹಾರದ ಮೊದಲ ಮಹಿಳಾ ಮುಖ್ಯಮಂತ್ರಿ ರಾಬ್ರಿ ದೇವಿ
 (ಅಧಿಕಾರ ಅವಧಿ: ೭ವರ್ಷ ೧೯೦ ದಿನಗಳು)

 
   ರಾಬ್ರಿ ದೇವಿಯವರು ೧ ಜನೆವರಿ ೧೯೫೫ ರಂದು ಬಿಹಾರದ ಗೋಪಾಲ್ಗಂಜ್ ಜಿಲ್ಲೆಯ ಮಿರ್ಗಂಜ್ ಬಳಿಯ ಸಲಾರ್ ಕಲಾನ್ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶಿವಪ್ರಸಾದ್ ಚೌಧರಿ ಮತ್ತು ತಾಯಿ ಮಹರ್ಜಿಯಾ ದೇವಿ. ಇವರ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಸಿಹಿ ತಿಂಡಿಗಳ ಹೆಸರಗಳನ್ನು ಇಟ್ಟಿದ್ದಾರೆ. ಇವರ ಸಹೋದರಿಯರಿಗೆ ಜಲೇಬಿ, ರಸಗುಲ್ಲಾ ಮತ್ತು ಪಾನ ಎಂದು ಹೆಸರುಗಳನ್ನಿಟ್ಟಿದ್ದಾರೆ.

 
      ರಾಬ್ರಿ ದೇವಿಯವರು ತಮ್ಮ ೧೭ನೇ ವಯಸ್ಸಿನಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ವಿವಾಹವಾದರು. ಇವರಿಗೆ ಎರಡು ಗಂಡು ಮಕ್ಕಳು ಮತ್ತು ಏಳು ಜನ ಹೆಣ್ಣು ಮಕ್ಕಳು. ಇವರ ಪತಿ ಲಾಲು ಪ್ರಸಾದ ಯಾದವ್ ಅವರು ಮೇವು ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಆರೋಪದಡಿಯಲ್ಲಿ ಸಿಲುಕಿದ್ದರಿಂದ ರಾಬ್ರಿದೇವಿಯವರು ರಾಜಕೀಯ ಪ್ರವೇಶ ಪಡೆದರು. ಇವರಿಗೆ ಯಾವುದೇ ರಾಜಕೀಯ ಆಸಕ್ತಿ ಮತ್ತು ಅನುಭವವಿಲ್ಲದಿದ್ದರೂ ಕೂಡ, ಆರ್ ಜೆ ಡಿ ಪಕ್ಷದಿಂದ ಜುಲೈ ೨೫ ೧೯೯೭ ರಂದು ಬಿಹಾರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಿಕಾರ ಮಾಡಿದರು. ಇವರು ಎರಡನೆ ಬಾರಿ ೯ ಮಾರ್ಚ ೧೯೯೯ ರಿಂದ ೨೦೦೦ ವರೆಗೆ ಮತ್ತು ಮೂರನೇ ಬಾರಿ ೧೧ ಮಾರ್ಚ್ ೨೦೦೦ ರಿಂದ ೬ ಮಾರ್ಚ್ ೨೦೦೫ವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಿಕರಿಸಿ ಕಾರ್ಯನಿರ್ವಹಿಸಿದರು.  

ಇವರು ರಾಘೋಪುರ ಕ್ಷೇತ್ರದಿಂದ ಬಿಹಾರ ವಿಧಾನಸಭೆಗೆ ಮೂರು ಬಾರಿ ಆಯ್ಕೆಯಾದರು. ಇವರು ೨೦೦೫ ರಿಂದ ೨೦೧೦ರವೆಗೆ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಿದರು. ೨೦೧೨ ರಿಂದ ೨೦೧೮ರ ವರೆಗೆ ಬಿಹಾರದ ವಿಧಾನ ಪರಿಷತ್ತಿನಲ್ಲಿ ಎಂಎಲ್‌ಸಿ ಆಗಿ ಕಾರ್ಯನಿರ್ವಹಿಸಿದರು. ಇವರು ಮೂರನೇ ಅವಧಿಗೆ ಎಂಎಲ್‌ಸಿಯಾಗಿ ೨೦೧೮ ರಿಂದ ಇನ್ನೂವರೆಗೆ ಮುಂದುವರೆದಿದ್ದಾರೆ.


About The Author

Leave a Reply

You cannot copy content of this page

Scroll to Top