ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಂದೊಂದೇ ಹೆಜ್ಜೆ ಇಟ್ಟು ನಡೆಯುತ್ತಿದ್ದ
ಕಾಲನ ಗಡಿಯಾರ
ಈಗೀಗ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡುತ್ತಿದೆ !
ಮೊನ್ನೆಯಷ್ಟೇ ಕೇಕ್ ಕತ್ತರಿಸಿ ಕೇಕೆ ಹಾಕಿದ ದಿನ
ಹಿಂದೆ ಸರಿದು ಮತ್ತೊಂದು ಎದುರಿಗೆ ಬಂದು ನಿಂತಿದೆ !!

ಬೆನ್ನ ಹಿಂದೆ ಪಾಟಿ ಚೀಲ ಹಾಕಿಕೊಂಡು
ಶಾಲೆಯ ಫಸ್ಟ್ ಬೆಲ್ ಗೆ ಕಾಯುತ್ತಿದ್ದ ದಿನ ಕಳೆದು
ಮನೆಯಂಗಳದಲ್ಲಿ ಸ್ಕೂಲ್ ವ್ಯಾನ್ ಕಾಯುತ್ತಿದೆ !
ಪಾಟಿ-ಪೇಣೆ ಅಟ್ಟಸೇರಿ ಲ್ಯಾಪ್‌ಟಾಪ್ ತೊಡೆಯೇರಿ ಕುಳಿತಿದೆ !!

ಮನೆಯಂಗಳದ ಪುಟ್ಟ ಗಿಡವೀಗ
ಎದೆಯೆತ್ತರ ಬೆಳೆದು ನೆರಳು ನೀಡುತ್ತಿದೆ !
ಹಣ್ಣೆಲೆಗಳ ಕಳಚಿಕೊಂಡ ಮರವೀಗ
ಚಿಗುರೆಲೆಗಳ ಹೊತ್ತು ಹಸಿರಾಗಿ ನಿಂತಿದೆ !!

ಧಾವಂತದ,ದಣಿವರಿಯದ ಬದುಕಲ್ಲಿ
ಹಿಂತಿರುಗಿ ನೋಡಿದರೆ ಹೆಜ್ಜೆ ಗುರುತು ಕಾಣದಾಗಿದೆ !
ಮರಳ ಮೇಲಿನ ಹೆಜ್ಜೆ ಗುರುತು
ಸಾಗರದಲೆಗಳು ಅಳಿಸಿಹಾಕಿವೆ !!

ಹೊಸತು ಹಳತಾಗಿ, ಹಳತು ಕಳೆದ್ಹೋಗಿ
ಕಾಲಚಕ್ರ ಉರುಳುತ್ತಿದೆ
ಮೂಗಿನ ಮೇಲೇರಿದ ಕನ್ನಡಕ ಕಣ್ಣುಗಳಿಗೆ ಬೆಳಕಾಗಿದೆ !
ಕಾಲನ ಗಡಿಯಾರದ ಮುಳ್ಳುಗಳನ್ನು ತಡೆಯುವರಾರು !??


About The Author

Leave a Reply

You cannot copy content of this page

Scroll to Top